[]=ಡಿ.ಮುನಿರಂಗಪ್=

congress session

ಸಾವಿರದ ಒಂಬೈನೊರ ಮೂವತ್ತೆಂಟು ನವೆಂಬರ್ ಹದಿನಾರು ಬೆಂಗಳೂರಿನ ಗ್ರಾಮದೇವತೆ ಅಣ್ಣಮ್ಮದೇವಿಯ ಗುಡಿಯಲ್ಲಿ ಒಡೆದ ಸೂರುಗಾಯಿ ಚೂರುಗಳನ್ನೆತ್ತಿಕೊಂಡು ಬಂದು ಮೆಜೆಸ್ಟಿಕ್ ಸರ್ಕಲ್‍ನಲ್ಲಿರುವ ಅಶ್ವತ್ಥಕಟ್ಟಿಯಲ್ಲಿ ಕುಳಿತುತಿನ್ನುತ್ತಿದ್ದಾಗ ಗುಬ್ಬಿ ಕಂಪನಿಯ ಸೂಪರ್‍ವೈಸರ್ ಆಗಿದ್ದ ಹುಸೇನ್ ಸಾಹೇಬರು ಬೋರ್ಡುಗಳನ್ನು ಹಿಡಿದು ನಾಟಕದ ಪ್ರಚಾರ ಮಾಡುವ ಕೆಲಸಕ್ಕಾಗಿ ಹುಡುಗರಿಗಾಗಿ ಹುಡುಕಾಡುತ್ತಾ ಬಂದು ಇವರಿಗೆ ಕರೆದುಕೊಂಡು ಹೋದಾಗ ಪ್ರಾರಂಭವಾಯಿತು ಇವರ ರಂಗಭೂಮಿಯ ಸೇವಾ ಜೀವನ ಅಥವಾ ಬಣ್ಣದ ಬದುಕು.ದಿನದ ಕೂಲಿ ಆರು ಆಣ್ಣೆ-ನೈಟ್ ಮಾರ್ಚಿಂಗಿಗೆ ನಾಲ್ಕು ಆಣ್ ಆಗ ಇವರಿಗೆ ದೊರಕುತ್ತಿತ್ತು.ಹೀಗೆ ನಾಲ್ಕು ತಿಂಗಳು ಕಳೆದ ಮೇಲೆ ಸಕಲೇಶಪುರ ಮೊಕ್ಕಾಂ ಮುಕ್ತಾಯದ ಸಮಯದಲ್ಲಿ ಒಂದು ದಿನ ಆಸಿಸ್ಟೆಂಟ್ ಮ್ಯಾನೇಜರ್‍ರಾಗಿದ್ದ ಶ್ತೀ ಸೀತಾರಾಮಯ್ಯನವರು ಇವರ ಪೂರ್ವಾಸರಗಳನ್ನೆಲ್ಲಾ ವಿಚಾರಿಸಿ ದಿನಗೂಲಿಯನ್ನು ತಪ್ಪಿಸಿ ಎರಡು ಹೊತ್ತು ಊಟದ ವ್ಯವಸ್ಥೆ ಮಾಡಿ ಕಂಪೆನಿಯಲ್ಲಿ ಇವರಿಗೆ ಕೆಲಸವನ್ನು ಖಾಯಂ ಮಾಡಿದರು!ಮುಂದೆ ಹೊಳೆನರಸೀಪುರ ಮೊಕ್ಕಾಮಿನಲ್ಲಿ ೧೯೩೯ನೇ ಇಸವಿಯಲ್ಲಿ ಟ್ರಾಲಿ ಕಾಯಕವನ್ನು ಶ್ರದ್ಧೆಯಿಂದ ಮಾಡುತ್ತಿದ್ದ ಇವರನ್ನು ಚೆನ್ನಾಗಿ ಪರೀಕ್ಷಿಸಿ ಇವರ ಕಾಯಕವನ್ನು ಮನವರಿಕೆ ಮಾಡಿಕೊಂಡರು.ಉಗಾದಿ ಹಬ್ಬದ ಖರ್ಚಿಗಾಗಿ ಒಂದು ರೂಪಾಯಿ ಪ್ರಥಮವಾಗಿ ಇವರಿಗೆ ಲಭ್ಯವಾಯಿತು.ಉಳಿದ ಎರಡು ರೂಪಾಯಿಗಳನ್ನು ಕಂಪೆನಿಯಲ್ಲಿದ್ದ ಆನೆಗೆ ಆಕ್ಕಿ ಬೆಲ್ಲ ಕಾಯಿಗಳನ್ನು ತಿನ್ನಿಸುವ ಕೆಲಸವೂ ಇವರ ಪಾಲಿಗೆ ಬಂದಿತು.ಚಾಮರಾಜನಗರ ಮೊಕ್ಕಾಮಿನಲ್ಲಿ ಆಕಸ್ಮಾತ್ ಆನೆ ಸಾಯಲು ಆದನ್ನು ನೋಡಲೆಂದು ಪೂನಾದಿಂದ ಬಂದ ಯಜಮಾನರು ಇವರ ಕೆಲಸ ಕಾರ್ಯಗಳನ್ನು ಕಣ್ಣಾರೆ ಕಂಡರು.ಹುಡುಗ ಚೂಟಿಯಾಗಿದ್ದಾನೆ ಎಂದು ಮನೆಕೆಲಸಕ್ಕೆ ಇರಿಸಿಕೊಂಡರು.

ಕಾಂಗ್ರೆಸ್ ಚಳವಳಿಯ ಕಾಲ

ಬದಲಾಯಿಸಿ

೧೯೪೨ ಕಾಂಗ್ರೆಸ್ ಚಳವಳಿಯ ಕಾಲ. ನಾಟಕ‍ದ ಕಂಪೆನಿಯಲ್ಲಿದ್ದ ಇವರಿಗೆ ದೇಶ ಹಾಗೂ ನೇತಾರರ ಜಯಘೋಷಣೆಗಳಿಂದ ಸ್ಛೂರ್ತಿಯುಂಟಾಗಿ ಚಳವಳಿಯಲ್ಲಿ ಧುಮುಕಿ,ಸ್ವಾತಂತ್ರ್ಯ ಹೋರಾಟಗಾರನಾಗಿ ಸಕ್ರಿಯ ಪಾತ್ರವಹಿಸಿದರು.ಅದೇ ವೇಳೆಗೆ ಆಲ್ಲಿಗೆ ಭದ್ರಾವತಿಯಿಂದ ಬಂದು ಬಿಡಾರ ಮಾಡ್ಡಿದ್ದ,ಕನ್ನಡ ರಂಗಭೂಮಿಯ ಆತಿರಥ ಮಹಾರಥರಲ್ಲಿ ಒಬ್ಬರೆಂದು ಖ್ಯಾತನಾಮರಾದ ನಟ ಭಯಂಕರ ಎಂ.ಎನ್.ಗಂಗಾಧರರಾಯರು, ಎಂ.ಸುಬ್ಬರಾಯರು, ಎಸ್.ಸಿ.ನರಸಿಂಹಮೂರ್ತಿಗಳ ಸಂಯುಕ್ತ ಮೇಲ್ವಿಚಾರಣೆಯಲ್ಲಿದ್ದ ಶ್ರೀ ವಿಶ್ವೇಶ್ವರ ನಾಟಕ ಮಂಡಲಿಗೆ, ಶ್ರೀ ಮುರಾರಾಚಾರ್‍ರವರ ಮುಖಾಂತರವಾಗಿ ಹನ್ನೆರಡು ರೂಪಾಯಿಗಳ ಸಂಬಳಕ್ಕೆ ಸೇರಿಕೊಂಡೆ. ಆ ಕಂಪೆನಿ ಕುಣಿಗಲ್‍ನಲ್ಲಿ ಹತ್ತು ತಿಂಗಳ ಕಾಲ ನಾಟಕಗಳನ್ನಾಡಿ ಕೊನೆಯುಸಿರನ್ನೆಳೆಯಿತು.ಆಗ ಬೆಂಗಳೂರಿನ ಪೈಲ್ವಾನ್ ಅಣ್ಣಯ್ಯಪ್ಪನವರ ಕಣ್ಣಿಗೆ ಬಿದ್ದೆ.ತುಳಸೀ ತೋಟದಲ್ಲಿದ್ದ ಶ್ರೀ ಧರ್ಮರಾಯ ನಾಟಕ ಸಭಾಕ್ಕೆ ಕಾಲಿರಿಸಿದೆ. ನಾಲ್ಕಾರು ತಿಂಗಳು ಆಲ್ಲಿನ ಅನ್ನದ ಋಣವನ್ನು ತೀರಿಸಿ, ರಂಗಭೂಮಿಯ ಹಿರಿಯ ನಟರಾದ ಎಚ್.ಆರ್. ಶಾಸ್ತ್ರಿಗಳ ಕಂಪನಿಯನ್ನು ಹೊಕ್ಕಿದೆ.ಆನಂತರ ಕೊಡಿಯಾಲದಲ್ಲಿದ್ದ ಪದ್ಮಾಸಾನಿ-ನಂಜಾಸಾನಿ ಕಮಲಮ್ಮನವರ ಆಡಳಿತದಲ್ಲಿದ್ದ ಕಂಪೆನಿಯನ್ನು ಪ್ರವೇಶಿಸಿದೆ.ಆ ಕಂಪೆನಿಯಲ್ಲಿ ಇವರು ಮಾಡದಿದ್ದ ಕೆಲಸ ಯಾವುದೂ ಬಾಕಿ ಉಳಿಯಲಿಲ್ಲ.ಆಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತಿದ್ದುದು ರಂಗಭೂಮಿಯ ಕಲಾಸೇವೆಯಲ್ಲೋಂದು ವೈಶಿಷ್ವ್ಯ.೧೯೪೩ ಮೈಸೂರಿಗೆ ಆಗಮಿಸಿದ ಸಿ.ಬಿ.ಮಲ್ಲಪ್ಪನವರ ಕಂಪೆನಿಗೆ ಸೇರಿದೆ. ಅಲ್ಲಿಂದ ಮೈಸೂರಿನ ರತ್ನಾವಳಿ ಥಿಯೇಟರಿನಲ್ಲಿ ನಾಟಕವನ್ನಾಡುತ್ತಿದ್ದ ಕಲ್ಚರ್ಡ್ ಕಾಮೆಡಿಯನ್ ಕೆ.ಹಿರಣ್ಣಯ್ಯ ಮಿತ್ರಮಂಡಲಿಗೆ ಮಂಗಳೂರಿನ ಬಾಬು, ಗೋಪಾಲ್‍ರವರ ನೆರವಿನಿಂದ ಸೇರಿದೆ. ಆಲ್ಲಿ ಪ್ರಧಾನ ನಟಿಯಾಗಿದ್ದ ಬಳ್ಳಾರಿ ಲಲಿತಮ್ಮನವರು ಇವರಿಗೆ ಮೇಕಪ್ ಮಾಡಿ, ಸಖಿಯ ಪಾತ್ರಕ್ಕೆ ತಾವೇ ಕರೆದೊಯ್ಯುತ್ತಿದ್ದರು. ಹೀಗೆ ಎಲ್ಲರ ಪ್ರೀತಿಪಾತ್ರನಾಗಿದ್ದ ಇವರನ್ನು ಗುಬ್ಬಿ ವೀರಣ್ಣನವರ ಅಳಿಯಂದಿರಾದ ಎಂ.ಆರ್.ಚನ್ನಪ್ಪನವರು ಮತ್ತೆ ಗುಬ್ಬಿ ಕಂಪೆನಿಗೇ ಕರೆದುಕೊಂಡು ಹೋದರು.ಆಗ ಆಲ್ಲಿ ಹೊಸ ನಾಟಕ ಅಕ್ಕಮಹಾದೇವಿಗಾಗಿ ರಂಗಸಜ್ಜಿಕೆಯ ತಯಾರಿಕೆ ನಡೆದಿತ್ತು.ಜವಾಬ್ದಾರಿ ಇವರ ಮೇಲೆ ಬಿತ್ತು.ಗೆಳೆಯ ಉಪೇಂದ್ರಾಚಾರ್ ಬೆಂಬಲದಿಂದ ಆದನ್ನು ಸಿದ್ಧಗೊಳಿಸಿದೆ.ನಾಟಕ ಯಶಸ್ವಿಯಾಗಿ ಮೇಸ್ತ್ರಿ ಪದವಿ ಇವರಿಗೆ ಖಾಯಂ ಆಯಿತು.

ವೃತ್ತಿ

ಬದಲಾಯಿಸಿ

"ರಾಜಭಕ್ತಿ" ನಾಟಕದ ಪುನರಾರಂಭದ ವೇಳೆಗೆ ಲಭಿಸಿದ ಮೇಸ್ತ್ರಿ ಕೆಲಸದಿಂದ ಅಂದಿನಿಂದ ಇವರನ್ನು "ಮೇಸ್ತ್ರೀ" ಎಂದೇ ಸಂಭೋದಿಸುವಂತಾಗಿದೆ.ವೃತ್ತಿರಂಗಭೂಮಿಯ ಕಲಾಪ್ರೌಢಿಮೆಯ ತಪೋಸಾಧನೆಯಲ್ಲಿ ಹಂತಹಂತವಾಗಿ ಮೇಲೇರಿಸಿದ ದೈವ, ಇವರಿಗೆ ಅನುಗ್ರಹಿಸಿದ ಅಳಿಸಲಾಗದ ಪದವಿ-ಪ್ರಶಸ್ತಿ-ಮೇಸ್ತ್ರಿ-ಇದು ಜೀವನದ ಸಾರ್ಥಕ್ಯದ ಮಹತ್ಸಾಧನೆಯ ಸಿದ್ಧಿ ಸತ್ಛಲ.ಆಗ ಕಂಪೆನಿಯ ವ್ಯವಸ್ಥಾಪಕ ವರ್ಗದಲ್ಲಿದ್ದ ನಾಟ್ಯ ಕಲಾವಿದಾರದ ಎಂ.ಸಿ.ಮಹಾದೇವಸ್ವಾಮಿಯವರು ಇವರು ಅಳವಡಿಸಿದ ರಂಗಸಜ್ಜಿಕೆಯ ವೈಖರಿಯನ್ನು ನೋಡಿ ತಲೆದೂಗಿದರು.ಗುಬ್ಬಿವೀರಣ್ಣನವರು ಇವರಿಗೆ ಟೀ ಪಾರ್ಟಿಯಿತ್ತು ಗೌರವಿಸಿದರು.ಎಷ್ಷು ಉತ್ತಮವಾಗಿ ಕೆಲಸ ಮಾಡಿದರೂ, ಯಜಮಾನರಿಂದ 'ಸರಿ' ಎನ್ನಿಸಿಕೊಳ್ಳುವುದೇ ದುಸ್ತರವಾಗಿರುವಾಗ ಶಹಭಾಸ್‍ಗಿರಿ ಪಡೆದು ಅವರಿಂದ ಆದರಿಸಲ್ಪಡುವುದಕ್ಕಿಂತ ಹೆಚ್ಚಿನದು ಇನ್ನೇನಿದೆ ಆಶ್ರಿತರಾದ ನೌಕರರಿಗೆ.೧೯೪೮ರಲ್ಲಿ ಗುಬ್ಬಿ ಕಂಪೆನಿಯ ವಜ್ರಮಹೋತ್ಸವದ ಆಂಗವಾಗಿ "ರಾಜಾಗೋಪೀಚಂದ್" ಸಿದ್ಧವಾಯಿತು.ಈ ನಾಟಕಕ್ಕೂ ರಂಗಸಜ್ಜಿಕೆಯ ತಯಾರಿಕೆ,ದೃಶ್ಯಜೋಡಣೆಯ ಹೊಣೆಗಾರಿಕೆ ಅವರದೇ ಆಯಿತು.ಹೀಗಾಗಿ ಜನರ ದೃಷ್ಷಿ ಇವರ ಮೇಲೆ ಬೀಳುವಂತಾಗಿ ಆಂಧಃಕಾರಮಯವಾಗಿದ್ದ ಇವರ ಜೀವನದಲ್ಲಿ ದೀಪಾವಳಿಯ ಬೆಳಕು ಬೀಳಲಾರಂಭವಾಯಿತು.ಇವರಿಗೆ ಹಿಂದೀ ರಂಗಭೂಮಿಯ ನಟ ಪೃಥ್ವೀರಾಜ್ ಕಪೂರರ ಕಂಪೆನಿಯಲ್ಲಿ ನೌಕರಿ ಮಾಡುವ ಉತ್ಕಟೀಚ್ಛೆ ಉಂಟಾಯಿತು.ಬೆಳಗಾಂವಿಗೆ ಹೋದೆ.ಅವರು ಇವರ ಅನುಭವದ ಆರ್ಹತಾಪತ್ರ ಕೇಳಿದ್ದರಿಂದ,ಗೆಳೆಯ ಸಂಜೀವರಾಯರ ಒತ್ತಾಸೆಯಿಂದ ಗೋಕಾಕ ಶ್ರೀ ಶಾರದ ಸಂಗೀತ ನಾಟಕ ಮಂಡಲಿಯನ್ನು ಸೇರಿದೆ.ಇಲ್ಲಿಯೂ ಸಮಾಧಾನವಾಗದೆ,ಆತ್ಮೀಯ ಅಭಿಮಾನಿ ಬಿ.ಎಸ್.ರಾಜುರವರ ಸಹಕಾರದಿಂದ ಹಿಂದಿರುಗಿ ಬಂದು ಸುಬ್ಬಯ್ಯನಾಯ್ಡುರವರಲ್ಲಿ ಸರ್ಟಿಫಿಕೇಟ್ ಕೇಳಿದೆ.೧೯೫೩ರಲ್ಲಿ ಇವರದೇ ಆದ ಕಂಪೆನಿಯನ್ನು ಪ್ರಾರಂಭಿಸಬೇಕೆಂದು ನಿರ್ಧರಿದಿದೆ.ಮೈಸೂರು ಥಿಯೇಟ್ರಿಕಲ್ ಕಂಪೆನಿಯ ಲಾಂಛನದಲ್ಲಿ ನಾಟಕಗಳನ್ನು ಪ್ರದರ್ಶಿಸುತ್ತಿದ್ದು ಕಲಕ್ಷನ್ ದೃಷ್ಷಿಯಿಂದ ಉತ್ತಮವಾಗಿದ್ದರೂ,ನಾಟಕ ಕಂಪನಿಯ ಆಂತರಿಕ ರಾಜಕೀಯ ಆರಿವು ಇವರಲ್ಲಿ ಕೊರತೆಯಾಗಿದ್ದುದರಿಂದ ಆಂದೋಳನವನ್ನು ಅಡಗಿಸಲಾರದೆ ತಾತ್ಕಾಲಿಕವಾಗಿ ಕಂಪೆನಿ ನಿಲ್ಲಿಸಿದೆ.೧೯೫೭ರಲ್ಲಿ ಮಾಸ್ಟರ್ ಹಿರಣ್ಣಯ್ಯ ಬಿ.ಎನ್.ಚಿನ್ನಪ್ಪ ಮತ್ತು ಇತರ ಹಿತೈಷಿ ಕಲಾವಿದರ ಸಹಕಾರ ಬೆಂಬಲದೊಂದಿಗೆ ಬಳ್ಳಾರಿ ಲಲಿತಮ್ಮನವರು ಸ್ಥಾಪಿಸಿದ ಕಂಪನಿ ಸೇರಿದೆ. ಅ ಕಂಪೆನಿ ಅರಸೀಕೆರೆ ಮೊಕ್ಕಾಮಿನಲ್ಲಿರುವಾಗ ಎಂ.ಆರ್.ಪಾರ್ಥಸಾರಥಿ,ಮುಸರಿಕೃಷ್ಣಮೂರ್ತಿ, ಮಾಸ್ಟರ್ ಹಿರಣ್ಣಯ್ಯ ಮತ್ತು ಇವರು ಕೂಡಿ ಸ್ವಂತ ಕಂಪೆನಿಯನ್ನು ಮಾಡುವ ಆಶೆಯ ಬೀಜಾಂ ಕುರವಾಯಿತು,ಅದು ಮೊಳಕೆಯೊಡೆದು ಸಸಿಯಾಗಲು ತಡವಾಗಲಿಲ್ಲ.ನಾಲ್ಕಾರು ಜನರ ಪಾಲುದಾರಿಕೆಯ ಸ್ವತ್ತಾಗಿ ಪ್ರಾರಂಭವಾಗಬೇಕಾಗಿದ್ದ ಮಾಸ್ಟರ್ ಹಿರಣ್ಣಯ್ಯ ಮಿತ್ರರ ಮಂಡಲಿ ಬೇಗ ಒಡೆದು ಹೋಳಾಗದಿರಲೆಂಬ ಮುಂದಾಲೋಚನೆಯಿಂದ ಇವರು ಮತ್ತು ಮಾಸ್ಟರ್ ಇಬ್ಬರೇ ಕೂಡಿ ಕಂಪೆನಿಯನ್ನು ಪ್ರಾರಂಭಿಸಿದೆವು. ೧೬-೨-೧೯೫೯ ಚಿತ್ರದುರ್ಗದ ಜಯಣ್ಣ ಮತ್ತು ಚನ್ನಪ್ಪ ಸಹೋದರರ ಸಹಾಯದಿಂದ ಆಗ ಇವರಲ್ಲಿದ್ದ ಕೇವಲ ೧೨೪೫ ರೂಪಾಯಿಗಳ ಬಂಡವಾಳ ಹೂಡಿಕೆಯಲ್ಲಿ ಹಿರಣ್ಣಯ್ಯ ಮಿತ್ರಮಂಡಲಿ ಉದಯವಾಯಿತು.ದೇವದಾಸಿ ನಾಟಕವನ್ನು ಪ್ರಥಮವಾಗಿ ಪ್ರಾರಂಭಿಸಿದೆವು.ಆಗ ಕಂಪೆನಿಯ ಆಡಳಿತವನ್ನು ಸ್ವತ್ಃಮಾಸ್ಟರ ಅವರೇ ನೋಡಿಕೊಳ್ಳುತ್ತಿದ್ದರು.ಆರ್ಥಿಕವಾಗಿ ಎಡವುತ್ತಾ, ಕುಂಟುತ್ತಾ ನಡೆದಿದ್ದ ಕಂಪೆನಿ ಸಾಗರದ ಮೊಕ್ಕಾಮಿನಲ್ಲಿ ಚೇತರಿಸಿಕೊಂಡಿತು.

ಕುಟುಂಬ ಮತ್ತು ಪ್ರಶಸ್ತಿಯ ಕುರಿತ್ತು

ಬದಲಾಯಿಸಿ

೧೯೬೦ ರಲ್ಲಿ ಇವರ ತಂದೆಯವರು ಸೀರಿಯಸ್ಸಾಗಿ ಆಸ್ಪತ್ರೆಗೆ ಅಡ್ಮಿಟ್ ಆಗಿರುವರೆಂದು ಸುದ್ದಿ ಬಂದಿತು.ಇವರು ಮತ್ತು ಅಣ್ಣಾ ಅವರು ಉಡುಪಿಯಿಂದ ಬೆಂಗಳೂರಿಗೆ ಬಂದು ವಿಕ್ಟೋರಿಯಾ ಆಸ್ಪತ್ರೆಗೆ ಧಾವಿಸಿದೆವು.ದೈವಯೋಗ ಸಂಯೋಗದಂತೆ ಅನಿರೀಕ್ಷಿತವಾಗಿ ಆಗ ಅಲ್ಲಿಗೆ ಬಂದ ಕಡಿದಾಳ್ ಮಂಜಪ್ಪ ಮತ್ತು ಎಂ.ಸಿ.ಮಹಾದೇವಸ್ವಾಮಿಯವರೆದುರು ಇವರ ತಂದೆ ತಮ್ಮ ಅಳಲನ್ನು ತೋಡಿ ಕೊಂಡು ದುಃಖಿಸಿದಾಗ ಹತ್ತಿರವೇ ಇದ್ದ ಅಣ್ಣಾ ಅವರು,ನಿಮ್ಮ ಮಗ ಇವರಿಗೆ ಪಾರ್ಟನರ್ ಎಂದು ಭರವಸೆಯಿತ್ತು ಧೈರ್ಯ ಹೇಳಿದರು.ಅದರಂತೆ ಮೂರು ತಿಂಗಳಲ್ಲಿ ಅಣ್ಣಾ ಅವರು ಮುಂದೆ ನಿಂತು ಇವರನ್ನು ಸಂಸಾರಿಯನ್ನಾಗಿ ಮಾಡಿದರು.ಅಣ್ಣಾ ಅವರು ಮತ್ತು ಅವರ ಪತ್ನಿಯವರಾದ ಶ್ರೀಮತಿ ಶಾಂತಮ್ಮನವರು ಇವರಿಗೆ ಹಿರಿಯಕ್ಕನಾಗಿ ನಿಂತು ವಧುವಿನ ಆಯ್ಕೆ ಮಾಡಿ,ವಿವಾಹಕಾರ್ಯ ಮುಗಿಯುವವರೆಗೆ ಮುಂದಾಗಿ ಓಡಾಡಿದರು.ಇವರ ಆಜೀವ ಸರ್ಯಂತ ಇದನ್ನು ಮರೆಯಲಾರೆ.೧೫-೮-೧೯೬೮ ರಲ್ಲಿ ನಟನ ಕಲಾ ಸಂಘದವರು ಸನ್ಮಾನ ಸಮಾರಂಭವೊಂದನ್ನೇ ರ್ಸಡಿಸಿ ಮುಖ್ಯಮಂತ್ರಿಗಳಾಗಿದ್ದ ಶ್ರೀ ಕೆಂಗಲ್ ಹನುಮಂತಯ್ಯನವರ ಅಮೃತ ಹಸ್ತದಿಂದ ಇದರಿಗೆ "ರಂಗಶಿಲ್ಪಿ" ಎಂಬ ಪ್ರಶಸ್ತಿಯನ್ನಿತ್ತು ಗೌರವಿಸಿದರು

ಉಲ್ಲೇಖಗಳು

ಬದಲಾಯಿಸಿ

[]=ಡಿ.ಮುನಿರಂಗಪ್= .https://www.google.co.in/search?q=1942+congress+session+at+bangalore+munni+rangappa&espv=2&biw=1366&bih=643&source=lnms&sa=X&ved=0ahUKEwiIvYvooPjOAhVFQ48KHQtAAasQ_AUIBygA&dpr=1#q=1942+congress+session

http://www.thehindu.com/todays-paper/tp-national/tp-karnataka/the-role-of-mysore-in-the-freedom-movement/article2358288.ece

https://commons.wikimedia.org/wiki/File:Mohandas Gandhi was driven to Gowalia Tank Maidan, 1942.jpg

  1. ಕರ್ನಾಟಕದ ರಂಗ ಕಲಾವಿದರು. ಸೀತಾರಾಮ್ಯಯ.
  2. ಕರ್ನಾಟಕದ ರಂಗ ಕಲಾವಿದರು. ಸೀತಾರಾಮ್ಯಯ.