ಸದಸ್ಯ:AnanthKC
ಕುಟುಂಬ
ಬದಲಾಯಿಸಿಅನಂತ್ ಕುಮಾರ್ ಕೆ.ಸಿ ಎಂಬ ನಾಮಧೇಯವುಳ್ಳ ನಾನು ೦೮-೦೨-೧೯೯೬ ರಲ್ಲಿ ಕೆ.ಎಂ.ಚೌಡಪ್ಪ ದಂಪತಿಯ ಮೊದಲ ಸಂತತಿಯಾಗಿ ಜನಿಸಿದೆನು.ನಾನು ಹುಟ್ಟಿದ್ದೂ ಬೆಳೆದದ್ದೂ ಎಲ್ಲವೂ ಅವಿಭಜಿತ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಎಂಬ ಸಣ್ಣ ಪಟ್ಟಣದಲ್ಲಿ. ನನ್ನ ತಂದೆಯ ಹೆಸರು ಕೆ.ಎಂ ಚೌಡಪ್ಪ ವೃತ್ತಿಯಿಂದ ಅವರು ವಿಜಯಕರ್ನಾಟಕ ದಿನಪತ್ರಿಕೆಯ ಪತ್ರಕರ್ತರಾಗಿದ್ದಾರೆ ಹಾಗೂ ಕೆಲವು ವರ್ಷಗಳಿಂದ ಸಮಾಜಕ್ಕೇನಾದರೂ ಕೊಡುಗೆ ನೀಡಬೇಕೆಂಬ ಧ್ಯೇಯವನ್ನಿಟ್ಟುಕೊಂಡು ಪತಂಜಲಿ ಯೋಗ ಶಿಕ್ಷಣ ಸಮಿತಿ ಶ್ರೀನಿವಾಸಪುರ ಶಾಖೆಯಲ್ಲಿ ಯೋಗ ಶಿಕ್ಷಕರಾಗಿ ಕಾರ್ಯಪ್ರವೃತ್ತರಾಗಿದ್ದಾರೆ,ತಾಯಿ ಎಂ.ಆರ್. ಪ್ರಭಾವತಮ್ಮ ಗೃಹಿಣಿಯಾಗಿ ಹಾಗೂ ಇಬ್ಬರು ಮಕ್ಕಳ ತಾಯಿಯಾಗಿ,ಮನೆಯ ಎಲ್ಲಾ ಜವಾಬ್ದಾರಿಯನ್ನೂ ಸಹ ನಿರ್ವಹಿಸುವಲ್ಲಿ ಯಶಸ್ವಿಯಾಗಿದ್ದಾರೆ.ನನ್ನ ತಂಗಿಯ ಹೆಸರು ಸೌಂದರ್ಯ,ಆಕೆ ದ್ವಿತೀಯ ಪಿ.ಯು.ವಿದ್ಯಾರ್ಥಿನಿಯಾಗಿದ್ದಾಳೆ.
ಶಿಕ್ಷಣ
ಬದಲಾಯಿಸಿಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವೆಲ್ಲವನ್ನೂ ಶ್ರೀನಿವಾಸಪುರ ಪಟ್ಟಣದ ಎಸ್.ಎಫ್.ಎಸ್. ಶಾಲೆಯಲ್ಲಿ ಶೇಖಡ ೯೦ ಪಡೆದು ನಂತರ ಪದವಿಪೂರ್ವ(ಪಿ.ಯು)ಶಿಕ್ಷಣಕ್ಕಾಗಿ ಕೋಲಾರದ ಸಹ್ಯಾದ್ರಿ ಪದವಿಪೂರ್ವ ಕಾಲೇಜು ಸೇರಿ ಅಲ್ಲಿ ಶೇಖಡ ೮೮ ಪಡೆದು ಉತ್ತೀರ್ಣನಾದೆನು.ಈಗ ಉನ್ನತ ಶಿಕ್ಷಣ ಪಡೆಯುವ ಸಲುವಾಗಿ ಕ್ರೈಸ್ಟ್ ವಿಶ್ವವಿದ್ಯಾಲಯವನ್ನು ಸೇರಿ,ಇಲ್ಲಿ ನಾನು ಬಿ.ಎಸ್ಸಿ ಜೀವಶಾಸ್ತ್ರ ವಿಭಾಗದಲ್ಲಿ ಓದುತ್ತಿದ್ದೇನೆ.
ಆಸಕ್ತಿಗಳು
ಬದಲಾಯಿಸಿಆರೋಗ್ಯ ಚೆನ್ನಾಗಿರಲೆಂಬ ಕಾರಣಕ್ಕೆ ನಮ್ಮ ತಂದೆಯವರು ನನಗೆ ಹಾಗೂ ನನ್ನ ಸಹೋದರಿಗೆ ಬಾಲ್ಯದಿಂದಲೂ ಯೋಗ ಹೇಳಿಕೊಟ್ಟಿದುದರ ಪರಿಣಾಮವಾಗಿ ಇಂದು ನಾನು ಅದರಲ್ಲಿ ಪ್ರಾವೀಣ್ಯತೆಯನ್ನು ಪಡೆದುಕೊಳ್ಳಲು ಇಚ್ಛಿಸುತ್ತಿದ್ದೇನೆ.ನನ್ನ ಬಾಲ್ಯದಿಂದಲೂ ಆಟಕ್ಕಿಂತ ಪಾಠಕ್ಕೇ ಹೆಚ್ಚು ಒತ್ತು ನೀಡಿದವನು ನಾನಾದ್ದರಿಂದ ನಾನು ಹೆಚ್ಚಾಗಿ ಯಾವುದೇ ಕ್ರೀಡಾ ಹಬ್ಬಗಳಲ್ಲೂ ಪಾಲ್ಗೊಳ್ಳದಿದ್ದರೂ; ಉಲ್ಲಾಸದಿಂದಿರಲು ಕೆಲವು ಹೊರಾಂಗಣ ಆಟಗಳನ್ನು ಕಲಿತೆನು.ಎಂದಿಗೂ ನನ್ನ ಸ್ಫೂರ್ತಿಯ ಚಿಲುಮೆ ನನ್ನ ತಂದೆಯವರೇ ಎಂದು ನಾನು ಹೆಮ್ಮೆಯಿಂದ ಹೇಳಬಯಸುತ್ತೇನೆ,ಏಕೆಂದರೆ ಅವರು ಬೆಳೆದು ಬಂದ ರೀತಿ ಇಂದು ನನಗೆ ದಾರಿದೀಪವೆನ್ನಬಹುದು.ನಾನು ನನ್ನ ದೇಶದ ಸೇನೆ ಸೇರಬೇಕೆಂಬ ಮಹದಾಸೆಯೊಂದಿಗೆ ಅದರ ಒಂದು ಭಾಗವಾದ ವಾಯುಸೇನೆಗೆ ಅರ್ಜಿ ಸಲ್ಲಿಸಿದ ಕೆಲ ದಿನಗಳ ನಂತರ ನನಗೆ ಸಂದರ್ಶನಕ್ಕಾಗಿ ಕರೆ ಬಂತು;ಅದಕ್ಕಾಗಿ ನಾನು ಕೊಯಿಮತ್ತೂರಿಗೆ ಹೋದೆನು,ಅಲ್ಲಿನ ಸಂದರ್ಶನ ಐದು ದಿನಗಳ ಕಾಲದ್ದಾದ್ದರಿಂದ ಆಲ್ಲಿ ಉಳಿದುಕೊಳ್ಳುವ ಎಲ್ಲಾ ವ್ಯವಸ್ಥೆಯನ್ನೂ ಅವರೇ ಮಾಡಿದ್ದರು.ಆದರೆ ಅದರಲ್ಲಿ ನಾನು ಯಶಸ್ವಿಯಾಗಲು ವಿಫಲನಾದೆನು.ಆದ್ದರಿಂದ ಈಗ ವನ್ಯಜೀವಿ ಸಂರಕ್ಷಕನಾಗುವ ಗುರಿಯನ್ನಿಟ್ಟುಕೊಂಡು ನನ್ನ ಪದವಿ ಶಿಕ್ಷಣವನ್ನು ಜೀವಶಾಸ್ತ್ರ ವಿಭಾಗದಲ್ಲಿ ಮಾಡುತ್ತಿದ್ದೇನೆ.ನನ್ನ ಜೀವನದ ಪರಮಧ್ಯೇಯಗಳೆಂದರೆ ನನ್ನ ತಾಯಿಯ ಹೆಸರಿನಲ್ಲಿ ಅನಾಥಾಶ್ರಮ ಹಾಗೂ ವೃದ್ದಾಶ್ರಮವನ್ನು ಕಟ್ಟಿಸುವುದಾಗಿವೆ;ಇದನ್ನು ಮಾಡಿ ಸಮಾಜಕ್ಕೆ ನನ್ನಿಂದಾದ ಕೊಡುಗೆಯನ್ನು ಕೊಡಬಯಸುತ್ತೇನೆ
This user is a member of WikiProject Education in India |