Amith557
[Enter Post Title Here]
ನಮಸ್ಕಾರ,
ನನ್ನ ಹೆಸರು ಅಮಿತ್. ಎಸ . ಜೆ, ತಂದೆ ಜಗನ್ನಾಥ ಗುಪ್ತ, ತಾಯಿ ಶಶಿಕಲಾ , ಹುಟ್ಟಿದ್ದು ಬೆಂಗಳೂರು, ಬೆಳೆದಿದ್ದು ದಕ್ಷಿಣ ಕಾಶಿ ಎಂದೇ ಪ್ರಸಿದ್ಧ ವಾದ ಶಿವಗಂಗೆ ಎಂಬ ಶಿವ ನ ಪುಣ್ಯ ಸ್ಥಳ ದ ತಪ್ಪಲಿನ ಊರು , ಶ್ರೀಗಿರಿಪುರ . ಹಚ್ಚ-ಹಸಿರು, ಕೆರೆ-ಕಟ್ಟೆ, ಸುಮಾರು ೭ ರಿಂದ ೮ ದೇವಸ್ಥಾನ ಗಳು ಇದ್ದು, ಚಿಕ್ಕ-ಚಿಕ್ಕ ಬೆಟ್ಟ-ಗುಡ್ಡ ಗಳಿಂದ ಶ್ರೀಗಿರಿಪುರ ಎಂದು ಹೆಸರು ಬಂತು. ಬೆಂಗಳೂರಿನಿಂದ ಸುಮಾರು ೮೦ ಕಿಲೋಮೀಟರ್ ದೂರದಲ್ಲಿರುವ ಒಂದು ಚಿಕ್ಕ ಊರು ಶ್ರೀಗಿರಿಪುರ. ನಮ್ಮ ಊರಿನಲ್ಲಿ ನಮ್ಮದು ಒಂದು ದಿನಸಿ ಅಂಗಡಿ ಇದೆ. ಮನೆಯಲ್ಲಿ ಅಪ್ಪ, ಅಮ್ಮ , ಅಜ್ಜಿ, ಅಣ್ಣ, ಒಂದು ಪುಟ್ಟ ಬೆಕ್ಕು ಇದೆ.
ನಾನು ನನ್ನ ಅಂಗನವಾಡಿ ಗೆ ನಮ್ಮ ಊರಿನ ಶಾಲೆ ಗೆ ಹೋಗುತಿದ್ದೆ, ನಂತರ ನಮ್ಮ ಊರಿನಿಂದ ೬ ಕಿಲೋಮೀಟರ್ ದೂರದಲ್ಲಿನ ಕುದೂರ್ ಎಂಬ ಊರಿನಲ್ಲಿ ಗುರುಕುಲ ವಿದ್ದ್ಯಾ ಮಂದಿರ ಎಂಬ ಶಾಲೆ ಅಲ್ಲಿ ಸೇರಿದೆ , ಆ ಶಾಲೆ ಅಲ್ಲಿ ಒಂದು ಸವಿಯಾದ ನೆನಪು ಎಂದರೆ ಕೃಷ್ಣ ಜನ್ಮಾಷ್ಟಮಿ , ಪ್ರತಿ ವರ್ಷ ಕೃಷ್ಣ ಹಾಗೆ ಅಲಂಕಾರ ಮಾಡಿಕೊಂಡು ಹೋಗುತ್ತಿದ್ದು . ನಂತರ ನನ್ನ ೫ ನೇ ತರಗತಿ ಗೆ ಅದೇ ಊರಿನ ಮಹಾಂತೇಶ್ವರ ಆಂಗ್ಲ ಮಾಧ್ಯಮ ಶಾಲೆ ಗೆ ಸೇರಿದೆ .
ಹಾಗೆ ೫ ನೇ ತರಗತಿ ಅಲ್ಲೆ ಇದ್ದಾಗ ನಾನು ಹಾಗು ನಮ್ಮ ಅಣ್ಣ ಇಬ್ಬರು ಕರಾಟೆ ಕಲಿಯಲು ಹೋಗುತಿದ್ದೆವು. ಬೆಳಗಿನ ಜಾವಾ ೫:೩೦ ಗೆ ನಮ್ಮ ಊರಿನಿಂದ ಕುದುರಿಗೆ ಹೋಗುತಿದ್ದೆವು , ಕೇವಲ ೩ ವರ್ಷಕ್ಕೆ ೧೦ ಬೆಲ್ಟ್ ಗಳನ್ನೂ ಮುಗಿಸಿ ಬ್ಲಾಕ್ ಬೆಲ್ಟ್ ಪಡೆದೆವು. ಹಾಗೆ ಸಾಕಷ್ಟು ಪಂದ್ಯಾವಳಿಯಲ್ಲಿ ಭಾಗವಹಿಸಿ , ಸಾಕಷ್ಟು ಬಹುಮಾನಗಳನ್ನು ಪಡೆದಿದ್ದೀವಿ.
ಒಮ್ಮೆ ಅಂತಾರಾಷ್ಟ್ರೀಯ ಕರಾಟೆ ಪಂದ್ಯಾವಳಿ ಗೆ ಭಾಗವಹಿಸಲು ಚಿತ್ರದುರ್ಗದಲ್ಲಿ ೩ ದಿನಗಳ ಕಾಲ ಇದ್ದೆವು, ಹಾಗೆ ಮೈಸೂರ್ , ಬೆಂಗಳೂರು, ಮಂಡ್ಯ ಊರುಗಳಲ್ಲಿ ನಡೆದ ಪಂದ್ಯಾವಳಿಗಲ್ಲಿ ಭಾಗವಹಿಸಿದ್ದೆ. ಹಾಗೆ ನಾವು ಕರಾಟೆ ಟ್ರೆಕ್ಕಿಂಗ್ ಎಂದು ಸಿದ್ದರ ಬೆಟ್ಟ ತುಮಕೂರ್ ಜಿಲ್ಲೆಯಲ್ಲಿ ಇರುವ ಬೆಟ್ಟಕ್ಕೆ , ಶಿವಗಂಗೆ ಬೆಟ್ಟ, ಸವನದುರ್ಗ್ ಬೆಟ್ಟ, ಚಿತ್ರದುರ್ಗ್ ಕೋಟೆ ಹೀಗೆ ತರಬೇತಿಗೆ ಎಂದು ಹೋಗುತಿದ್ದೆವು. ನಮ್ಮ ಪೂರ್ಣ ನಂಬಿಕೆ ನಮ್ಮ ಗುರುಗಳು ರಮೇಶ್ ಗೌಡ. ನನ್ನ ಸ್ಫೂರ್ತಿ " ಬ್ರೂಸ್ ಲೀ " ಬ್ರೂಸ್ ಲೀ ಪ್ರಸಿದ್ಧ ಕದನ ಕಲಾವಿದೆ, ಚಿತ್ರ ತಾರೆ ಮತ್ತು ಸಾಂಸ್ಕೃತಿಕ ಐಕಾನ್ ಆದರೆ ಅವರ ತತ್ತ್ವಶಾಸ್ತ್ರವು ಪ್ರಪಂಚದಾದ್ಯಂತ ಬೆಂಕಿಯನ್ನು ಸೆಳೆದಿದೆ.
ಶಾಲೆಯ ನೆನಪುಗಳು ಎನ್ನದಿಗೂ ಮರೆಯಲಾಗುವುದಿಲ್ಲ . ಸ್ನೇಹಿತರು, ಕಿತ್ತಾಟ, ಜಗಳ, ಚಾಡಿ ಮಾತು, ಟೀಚರ್ಸ್, ಪಿ ಟಿ ಟೀಚರ್, ಮಾಸ್ ಪಿ ಟಿ, ವೈಟ್ ಯುನಿಫಾರ್ಮ್, ಕಲರ್ ಡ್ರೆಸ್, ಸ್ಕೂಲ್ ವ್ಯಾನ್, ಲಾಂಗ್ ಬೆಲ್, ಕಿರುಚಾಟ, ಕುಂಟೆ ಬಿಲ್ಲೆ, ಜೂಟಾಟ, ಹುಡುಗಿಯರ ಜಡೇ , ಗಣೇಶ ಹಬ್ಬ, ಶಾಲೆಯಲ್ಲಿ ಗಣೇಶ ಇಡುವುದು ಏನಂದರೆ ಎಲ್ ಇಲ್ಲದ ಸಂಭ್ರಮ , ಎರಡು ಬಾರಿ ಪ್ರಸಾದ, ಗಣೇಶ ನ ವಿಸ್ಸರ್ಜನೆ ಸಂದರ್ಭ, ತಮಟೆ ಶಬ್ದ , ಹೋಳಿ, ಪರೀಕ್ಷೆಗಳು, ಸ್ಕೂಲ್ ಡೇ , ಒಂದು ತಿಂಗಳ ಮುಂನ್ಸ್ ಇಂದಲೇ ಡಾನ್ಸ್ ಗೆ ತಯಾರಿ, ನಾನು ಪ್ರತಿ ವರ್ಷ ಸ್ಕೂಲ್ ಡೇ ಕಾರ್ಯ ಕ್ಕೆ ಕರಾಟೆ ಡೆಮೋ ನೆಡುತ್ತಿದ್ದೆ. ಹಾಗೆ ೭ ನೇ ತರಗತಿಯಲ್ಲಿ ನಮ್ಮ ಶಾಲೆ ಆ ವಾಲಿ ಬಾಲ್ ತಂಡ ದ ನಾಯಕ ಆಗಿದ್ದು, ಶಾಟ್ ಪುಟ್ ನಲ್ಲಿ ಪ್ರಶಸ್ತಿ ಪಡೆದಿದ್ದೆ, ನಂತರ ಅಬಾಕಸ್ ಶಾಲೆ ಗು ಶನಿವಾರ ಹಾಗು ಭಾನುವಾರ ಹೋಗುತಿದ್ದೆ, ಒಮ್ಮೆ ಬೆಂಗಳೂರಿನಲ್ಲಿ ನಡೆದಿದ್ದ ಅಬಾಕಸ್ ಸಂಕಲನದಲ್ಲಿ ೩ನೆ ಸ್ಥಾನ ಪಡೆದಿದ್ದೆ.
ಶಾಲೆಯಲ್ಲಿ ಮತ್ತೊಂದು ಕುತೂಹಲ ದ ಸಂದರ್ಭವೇನೆಂದರೆ " ಪ್ರತಿಭಾ ಕಾರಂಜಿ" , ತುಂಬಾ ಕುತೂಹಲದಿಂದ ಕೆಲವು ಕಾರ್ಯಕ್ರಮಗಳು ಭಾಗವಹಿಸುತ್ತಿದ್ದೆ. ನಾನು ೩ ನೇ ತರಗತಿ ಅಲ್ಲಿ ಚಿತ್ರಕಲೆ ಸ್ಪರ್ಧೆ ಅಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದೆ.ನಂತರ ೭ ನೇ ತರಗತಿ ಇಂದ ಸತತವಾಗಿ ' ಸ್ಥಳದಲ್ಲೇ ವಿಜ್ಞಾನ ಮಾದರಿ ತಯಾರಿಕೆ ' ಸ್ಪರ್ಧೆ ಅಲ್ಲಿ ೧೦ ನೇ ತರಗತಿ ವರೆಗೂ ಪ್ರಥಮ ಸ್ಥಾನ ಪಡೆದಿದ್ದೆ. ೧೦ ನೇ ತರಗತಿ ಅಲ್ಲಿ ಹೋಬಳಿ ಮಟ್ಟ, ತಾಲೂಕು ಮಟ್ಟ, ಜಿಲ್ಲಾ ಮಟ್ಟ ಗೆದ್ದು ರಾಜ್ಯ ಮಟ್ಟಕೆ ಆಯ್ಕೆ ಆಗಿದ್ದೆ. ಬುಲೆಟ್ ಟ್ರೈನ್ ನ ಒಂದು ಸಿದ್ದಂತ , ಮ್ಯಾಗ್ನೆಟ್ಗಳನ್ನೂ ಬಳಸಿ ಮಾಡಿದ್ದೆ. ೨೦೧೫ ರಲ್ಲಿ ರಾಜ್ಯ ಮಟ್ಟದ 'ಪ್ರತಿಭಾ ಕಾರಂಜಿ' ಮಂಡ್ಯ ಜಿಲ್ಲೆ ಯಾ ಆದಿಚುಂಚುನಗಿರಿ ಶಿಕ್ಷಣ ಸಂಸ್ಥೆ ಅಲ್ಲಿ ದಿನಾಂಕ ೦೬-೧೨-೨೦೧೪ ರನ್ನದು ನಡೆದಿತ್ತು. ಈ ಸಂದರ್ಭದಲ್ಲಿ "ಅಬ್ದುಲ್ ಕಲಾಂ " ರವರು ಸ್ಫೂರ್ತಿ ಆಗಿದ್ದರು, ನಮ್ಮ ಅಣ್ಣ ಅವರನ್ನು ಒಮ್ಮೆ ಭೇಟಿ ಆಗಿದ್ದ. ನನಗೆ ಖಗೋಳಶಾಸ್ತ್ರ ಎಂದರೆ ತುಂಬಾ ಆಸಕ್ತ್ ಇತ್ತು.
ನಾನು ಹತ್ತನೇ ತರಗತಿಯಲ್ಲಿ ಇದ್ದಾಗ ಗಾಂಧಿ ಜಯಂತಿ ಗೆ , ಈಡಿ ನಮ್ಮ ಉರಿ ನಲ್ಲಿ ಸ್ವಚ್ಛ ಭಾರತ ಅಭಿಯಾನ ದ ಬಗ್ಗೆ ಅರಿವು ಮೂಡಿಸಿದ್ದೀವಿ. ಶಿಕ್ಷಕರ ದಿನಾಚರಣೆ ಗೆ ಎಲ್ಲ ಶಿಕ್ಷಕರಿಗೆ ಆಟ ಅಡಿಸ್ಸಿದು ನೆನ್ನಪು, ಕನ್ನಡ ರಾಜ್ಯೋತ್ಸವ ಸಂಭ್ರಮಕ್ಕೆ ನೃತ್ಯ ಮಾಡಿದ್ದೂ, ಮಕ್ಕಳ ದಿನಾಚರಣೆ ಗೆ ನೆಹರು ಅವರನ್ನು ನೆನಸಿಕೊಂಡು ಕಾರ್ಯಕ್ರಮ ಮಾಡಿದ್ದೂ ಎಲ್ಲ ಈಗ ಒಂದು ಸವಿ ನೆನಪುಗಳು ಆಗಿ ನಮ್ಮ ಮನದಲ್ಲಿ ಉಳಿದಿದೆ.
ಡಿಸೆಂಬರ್ ತಿಂಗಳಿನಲ್ಲಿ ೪ ದಿನದ ಪ್ರವಾಸ ಇಂದಿಗೂ ನೆನಪಿಸುಕೊಳ್ಳುತೇವಿ . ಬಸ್ ನಲ್ಲಿ ನೃತ್ಯ , ಫೈರ್ ಕ್ಯಾಂಪ್, ಆ ಕ್ಷಣಗಳನ್ನು ಮರೆಯಲು ಸದ್ಧ್ಯವಿಲ್ಲ . ನಂತರ ಹೊಸ ವರ್ಷದ ಸಂಭ್ರಮ, ನಮಗೆ ಹೂಗಾದಿ ಹಬ್ಬ ಹೊಸ ವರ್ಷದ ಸಂಕೇತವಾಗಿದ್ದರು , ಜನವರಿ ೧ ನೇ ತಾರೀಕು ಕೇಕು ತತ್ತರಿಸುವುದು ಒಂತರ ಕುತೂಹಲ. 'ಸ್ಕೂಲ್ ಡೇ ' ಇಡೀ ವರ್ಷದ ಮುಖ್ಯ ಕಾರ್ಯಕ್ರಮ , ೧೦ ನೇ ತರಗತಿ ಯ 'ಸ್ಕೂಲ್ ಡೇ' ಕಾರ್ಯಕ್ರಮಕ್ಕೆ ನಿರೂಪಣೆ ನಾನೆ ಮಾಡಿದ್ದೆ , ಹಾಗೆ ಒಂದು ಕರಾಟೆ ಡೆಮೋ ಕೂಡ ನೆಡೆದ್ದೆವು , ನೃತ್ಯ ಕೂಡ ಮಾಡಿದೆವ್ವು.
ಪಬ್ಲಿಕ್ ಪರೀಕ್ಷೆ ಹತ್ತಿರ ಬರುವ ಹಾಗೆ ಭಯ ಹೆಚ್ಚಿತು , ಶಾಲೆ ಅಲ್ಲೇ ನಮ್ಮ ಶಿಕ್ಷಕರ ಬಳಿ ಅಲ್ಲೇ ಇರುತ್ತಿದ್ದೆವು. ತುಂಬಾ ದುಖ್ಖದ ಕ್ಷಣ ಬೀಳ್ಕೊಡುಗೆ ಸಮಾರಂಭ , ಪರೀಕ್ಷೆ ಮುಗಿಯಿತು .
ರಜೆ ದಿನಗಳು ಕಳೆದಿದ್ದೆ ನೆನಪಿಲ್ಲದಂತೆ ನಾವು ಕಾಲೇಜು ಹುಡುಗರು. ಪ್ರಥಮ ಪಿ ಯು ಸಿ ನಾನು ಹಾಸ್ಟೆಲ್ ನಲ್ಲಿ ಇದ್ದೆ, ಹೊಸ ಜಾಗ, ಮನೆ ಇಂದ ದೂರ ಇದ್ದ ಮೊದಲ ಕ್ಷಣಗಳು , ಹೊಸ ಅನುಭವ , ಆಟ , ಪಾಠ , ಪ್ರವಾಸ , ಹೊಸ ಪಾಠ ಕಲಿತೆ . ಚೇತನ್ ಭಗತ್ ಅವರು ಬರದಿದ್ದ ೭ ಉ ಪುಸ್ತಕಗಳನ್ನೂ ಓದಿ ಮುಗೆಸಿದೆ, ಹಾಗೆ ಅಮಿಶ್ ಅವರು ಬರೆದಿದಂತಹ ' ಶಿವಾಸ್ ಟ್ರಿಯೊಲೊಜಿ ' ೩ ಪುಸ್ತಕ ಹಾಗೆ ಹಲವು ಪುಸ್ತಕ ಗಳನ್ನೂ ಓದಿದೆ. ದ್ವಿತೀಯ ಪಿ ಯು ಸಿ ಗೆ , ಬೆಂಗಳೂರಿನ ಜೈನ ಕಾಲೇಜು ಗೆ ಸಿರಿದೆ, ಸಿಟಿ ಬದುಕಿನ ಅರಿವಾಯಿತು . ಮನೆಗೆ ಸ್ವಲ್ಪ ದೂರವಾದೆ.
ಈಗ "ಕ್ರೈಸ್ಟ್" ಏ ಜೀವನ.