• ಮುಖ್ಯಪುಟ
  • ಹೀಗೇ ಒಂದು ಪುಟ
  • ಹತ್ತಿರದ
  • ಲಾಗ್ ಇನ್
  • ವ್ಯವಸ್ಥೆಗಳು
  • ದೇಣಿಗೆ
  • ಕನ್ನಡ ವಿಕಿಪೀಡಿಯ ಬಗ್ಗೆ
  • ಹಕ್ಕು ನಿರಾಕರಣೆಗಳು
ವಿಕಿಪೀಡಿಯ

Akshar Dhulappanavar

Joined ೧೨ ಆಗಸ್ಟ್ ೨೦೧೫
  • ಬಳಕೆದಾರರ ಪುಟ
  • ಚರ್ಚೆ
  • ವೀಕ್ಷಿಸಿ
  • ಇತಿಹಾಸವನ್ನು ನೋಡಿ
  • Contributions
  • ಸಂಪಾದಿಸಿ
    • Languages
    • ಇಲ್ಲಿಗೆ ಯಾವ ಸಂಪರ್ಕ ಕೂಡುತ್ತದೆ
    • ದಾಖಲೆಗಳು
    • ಬಳಕೆದಾರರ ಗುಂಪುಗಳನ್ನು ವೀಕ್ಷಿಸಿ
    • ಸ್ಥಿರ ಕೊಂಡಿ
    • ಪುಟದ ಮಾಹಿತಿ
    • Edit full page
    • ಕ್ಯೂಆರ್ ಚಿತ್ರ ಇಳಿಸಿಕೊಳ್ಳಿ.

ಅಕ್ಷರ್ ಧೂಳಪ್ಪನವರ್ ಆದ ನಾನು, ಭಾರತದ ಪಶ್ಚಿಮ ಭಾಗದ ಒಂದು ರಾಜ್ಯವಾದ ಮಹಾರಾಷ್ಟ್ರದ ಮುಂಬೈನಲ್ಲಿ ಕೆಲಸ ಮಾಡುತ್ತಿರುವ ಒಬ್ಬ ಅಕೌಂಟೆಂಟ್. ನಾನು ಕರ್ನಾಟಕದಲ್ಲಿ ಹುಟ್ಟಿದ ಒಬ್ಬ ಕನ್ನಡದ ಹುಡುಗ. ಕೆಲಸದ ಮೇರೆಗೆ ನವೀ ಮುಂಬೈಗೆ ಬಂದ ನಾನು, ಈಗ ಅಲ್ಲಿಯೇ ನೆಲೆಸಿರುವೆನು. ೩೦ ವರ್ಷ ವಯಸ್ಸಿನ ಒಬ್ಬ ಸುಸಂಸ್ಕೃತ , ಕುಟುಂಬ ಪ್ರೇಮಿ ಹುಡುಗ. ನನಗೆ ಅಂದ ಚೆಂದದ ಬಗ್ಗೆ ಎಲ್ಲಿಲ್ಲದ ಆಸಕ್ತಿ . ಈಗಿನ ಕಾಲಕ್ಕೆ ತಕ್ಕಂತೆ ನಡೆ ನುಡಿ ಮತ್ತು ಫ್ಯಾಶನ್ ಬಗ್ಗೆ ಅರಿತುಕೊಳ್ಳುವುದು ಒಂದು ಹವ್ಯಾಸ . ಕಾಲಕ್ಕೆ ತಕ್ಕಂತೆ ನಾವು ಬದಲಾಗಬೇಕು ಮತ್ತು ನಮ್ಮ ಜೀವನ ಶೈಲಿಯನ್ನು ಅದಕ್ಕೆ ತಕ್ಕಂತೆ ಅಳವಡಿಸಿಕೊಳ್ಳುವುದು ಒಂದು ನಿರಂತರವಾಗಿ ನಡೆಯುವ ಕೆಲಸ ಮತ್ತು ಈಗಿನ ಫ್ಯಾಶನ್ ಲೋಕದ ಬಗ್ಗೆ ಅರಿತು ನಡೆಯುವುದು ನನಗೆ ಬಹಳ ಪ್ರಿಯಾ.

ನನಗೆ ನನ್ನ ಕುಟುಂಬವೆಂದರೆ ಎಲ್ಲಿಲ್ಲದ ಅಕ್ಕರೆ ಮತ್ತು ಮಕ್ಕಳೆಂದರೆ , ಅವರನ್ನು ಮುದ್ದು ಮಾಡದೆ ಇರುವುದಾದರೂ ಹೇಗೆ ಅನ್ನುವ ಮನಸ್ಸಿನವನು. ನಾನು ನನ್ನ ಬಿಡುವಿನ ವೇಳೆಯನ್ನು ಮಕ್ಕಳು ಮತ್ತು ಮನೆಯವರ ಜೊತೆ ಕಾಲಕಳೆಯಲು ಬಹಳವಾಗಿ ಇಚ್ಚಿಸುತ್ತೇನೆ. ನಾನು ನನ್ನ ಬಿಡುವಿನ ವೇಳೆಯಲ್ಲಿ ಬೇರೆ ಬೇರೆ ಸ್ಥಳಗಳಿಗೆ ಮಕ್ಕಳೊಡನೆ ಮತ್ತು ಮನೆಯವರ ಜೊತೆ ಹೋಗಲು ಇಷ್ಟಪಡುತ್ತೇನೆ. ಮಕ್ಕಳ ಹೂವಿನ ಮನಸ್ಸನ್ನು ಮತ್ತಷು ಹತ್ತಿರದಿಂದ ಅನುಭವಿಸುವ ಆಶಯ ಹೊಂದಿರುವವನಾಗಿದ್ದೇನೆ.

ಮಕ್ಕಳ ಮುದ್ದು ಮನಸ್ಸನ್ನು ನೋಡಿ ಖುಷಿಪಡುವ ನಾನು ಒಬ್ಬ ಪ್ರಕೃತಿ ಪ್ರೇಮಿ ಕೂಡ ಹೌದು . ಸ್ವಚಂದವಾಗಿ ಸೊಂಪಾಗಿ ಇರುವ ಮತ್ತು ಸುಂದರ ಸುಮನೋಹರವಾಗಿಯೂ ಇರುವ ನಮ್ಮ ನಿಸರ್ಗವನ್ನು ಅನುಭವಿಸಲು ಸದಾ ಸಿದ್ಧನಿರುತ್ತೇನೆ. ನಿಸರ್ಗಕ್ಕೂ ನಮಗೂ ಅವಿನಾಭಾವ ಸಂಬಂದವಿದ್ದಂತೆ ನನಗೂ ಅದರ ಮೇಲಿನ ಆಸಕ್ತಿಅಷ್ಟೇ ಅವಿನಾಭವಾದದ್ದು. ಅದು ಕೊಡುವ ಮುದವನ್ನು ಪದಗಳಲ್ಲಿ ವರ್ಣಿಸುವಿದು ಕಷ್ಟಾಸಾಧ್ಯ.

ಇಷ್ಟಲ್ಲದೆ ನನ್ನ ಹವ್ಯಾಸಗಳಪಟ್ಟಿ ಇಲ್ಲೆ ನಿಲ್ಲುವುದಿಲ್ಲ ನಾನು ಊಟದ ಪ್ರೇಮಿ . ನನಗೆ ರುಚಿಕಟ್ಟಾದ ಬಗೆ ಬಗೆಯ ತಿನಿಸು ತಿಂಡಿಗಳನ್ನು ಸವಿಯಲು ಬಹಳ ಆಸೆ. ಮತ್ತು ನಾನು ನನಗೆ ಆದಾಗಲೆಲ್ಲ ಬೇರೆ ಬೇರೆ ರೀತಿಯ ತಿಂಡಿ ತಿನಿಸುಗಳ ರುಚಿ ನೋಡುತ್ತಿರುತ್ತೇನೆ. ಮತ್ತು ನಾನು ಹೋಗುವ ಜಾಗಗಳಲ್ಲಿ ಮತ್ತು ನಾನು ಪಾಲ್ಗೊಳ್ಳುವ ಕುಟುಂಬದ ಹಬ್ಬಗಳಲ್ಲಿ ವಿವಿಧ ರೀತಿಯ ತಿನಿಸುಗಳನ್ನು ಸವಿಯತ್ತೇನೆ. ಇದು ನನ್ನ ನಾಲಿಗೆಯ ರುಚಿಯನ್ನಷ್ಟೆ ಅಲ್ಲದೆ ಆ ಸ್ಥಳದ ಮತ್ತು ಹಬ್ಬದ ವಿಶೇಷತೆಗಳನ್ನು ಹೇಳುತ್ತದೆ. ನನಗೆ ವಿವಿಧ ರೀತಿಯ ತಿನಿಸುಗಳನ್ನು ರುಚಿನೋಡಿ ವಿವಿಧ ಆಹಾರ ಪದ್ದತಿಗಳ ಬಗ್ಗೆ ತಿಳಿಯುವುದರಲ್ಲೂ ಆಸಕ್ತಿ ಹೊಂದಿದ್ದೇನೆ.

ವಿಕಿಪೀಡಿಯ ಪುಟಗಳು

ಬದಲಾಯಿಸಿ
  • ಡೇರ್ಮಾ ರೋಲರ್
  • ಬೊಟುಲಿನಮ್ ಟಾಕ್ಸಿನ್
"https://kn.wikipedia.org/w/index.php?title=ಸದಸ್ಯ:Akshar_Dhulappanavar&oldid=611471" ಇಂದ ಪಡೆಯಲ್ಪಟ್ಟಿದೆ
Last edited on ೧೩ ಅಕ್ಟೋಬರ್ ೨೦೧೫, at ೧೪:೦೦

Languages

      This page is not available in other languages.

      ವಿಕಿಪೀಡಿಯ
      • ಈ ಪುಟವನ್ನು ೧೩ ಅಕ್ಟೋಬರ್ ೨೦೧೫, ೧೪:೦೦ ರಂದು ಕೊನೆಯಾಗಿ ಸಂಪಾದಿಸಲಾಯಿತು.
      • ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ.
      • ಖಾಸಗಿ ಮಾಹಿತಿಯ ಬಗ್ಗೆ ನಿಲುವು
      • ಕನ್ನಡ ವಿಕಿಪೀಡಿಯ ಬಗ್ಗೆ
      • ಹಕ್ಕು ನಿರಾಕರಣೆಗಳು
      • Code of Conduct
      • ಡೆವೆಲಪರ್‌ಗಳು
      • ಅಂಕಿ ಅಂಶಗಳು
      • ಕುಕಿ ಹೇಳಿಕೆ
      • ಬಳಕೆಯ ನಿಬಂಧನೆಗಳು
      • ಡೆಸ್ಕ್‌ಟಾಪ್