ಜ್ಯಾಕ್ ಪ್ಯಾಟ್ರಿಕ್ ಡಾರ್ಸಿ

(ಸದಸ್ಯ:Akashgr/WEP 2018-19 dec ಇಂದ ಪುನರ್ನಿರ್ದೇಶಿತ)

[]

ಜ್ಯಾಕ್ ಡಾರ್ಸಿ

ಜ್ಯಾಕ್ ಪ್ಯಾಟ್ರಿಕ್ ಡಾರ್ಸಿ ನವೆಂಬರ್ ೧೯, ೧೯೭೬ ರಲ್ಲಿ . ಅವರ ರಾಷ್ಟ್ರೀಯತೆ ಅಮೆರಿಕ. ಇವರು ಅಮೆರಿಕಾದ ಕಂಪ್ಯೂಟರ್ ಪ್ರೋಗ್ರಾಮರ್ ಮತ್ತು ಟ್ವಿಟರ್ ನ ಸಹ-ಸಂಸ್ಥಾಪಕ ಮತ್ತು ಸಿಇಓ ಆಗಿದ್ದಾರೆ ಮತ್ತು ಸ್ಕ್ವೇರ್ ಎನ್ನುವ ಮೊಬೈಲ್ ಪಾವತಿ ಕಂಪನಿಯ ಸಿಇಒ ಅಗಿದ್ದಾರೆ. ಡಾರ್ಸಿ ಅಮೆರಿಕದ ವೆಬ್ ಡೆವಲಪರ್, ವಾಣಿಜ್ಯೋದ್ಯಮಿ ಮತ್ತು ಉದ್ಯಮಿಯಾಗಿದ್ದು, ಟ್ವಿಟರ್ ಸೃಷ್ಟಿಕರ್ತ ಎಂದು ವ್ಯಾಪಕವಾಗಿ ಹೆಸರಾಗಿದೆ.[] ಡಾರ್ಸಿ ಮಿಸೌರಿಯ ಸೇಂಟ್ ಲೂಯಿಸ್ ನಲ್ಲ್ಲಿ ಜನಿಸಿದರು. ಇವರು ಮಾರ್ಸಿಯ ಮತ್ತು ಟಿಮ್ ಡಾರ್ಸೆ ಮಗ. ಅವರ ತಂದೆ ಟಿಮ್ ಅವರು ಮಾಸ್ ಸ್ಪೆಕ್ಟ್ರೋಮೀಟರ್ಗಳನ್ನು ಅಭಿವೃದ್ಧಿಪಡಿಸುವ ಕಂಪೆನಿಗಾಗಿ ಕೆಲಸ ಮಾಡಿದರು. ಅವರು ಕ್ಯಾಥೋಲಿಕ್ ಬಿಷಪ್ ಡುಬೋರ್ಗ್ ಹೈಸ್ಕೂಲಿನಲ್ಲಿ ವಿಧ್ಯಾಭ್ಯಾಸ ಮಾಡಿದರು.[]

ವೃತ್ತಿಜೀವನ

ಬದಲಾಯಿಸಿ

ಅವರು ಹದಿನಾಲ್ಕು ವಯಸ್ಸಿನಲ್ಲಿ ಫ್ಯಾಷನ್ ರೂಪದರ್ಶಿ ಆಗಿದ್ದರು. ನ್ಯೂಯಾರ್ಕ್ ವಿಶ್ವವಿದ್ಯಾನಿಲಯಕ್ಕೆ ವರ್ಗಾವಣೆ ಆಗುವ ಮೊದಲು ಡಾರ್ಸಿ ಮಿಸ್ಸೌರಿ-ರೋಲ ವಿಶ್ವವಿದ್ಯಾನಿಲಯದಲ್ಲಿ ಎರಡು ವರ್ಷ ಸೇವೆ ಸಲ್ಲಿಸಿದ್ದಾರೆ, ಅವರು ನ್ಯೂಯಾರ್ಕ್ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡುವಾಗ ಟ್ವಿಟರ್ ಅನ್ನು ಅಭಿವೃದ್ಧಿ ಪಡಿಸುವ ಕೆಲಸ ಶುರು ಮಾಡಿದರು. ಪ್ರೋಗ್ರಾಮರ್ ಆಗಿ ಕೆಲಸ ಮಾಡುವಾಗ ಡಾರ್ಸಿ ಕ್ಯಾಲಿಫೋರ್ನಿಯಾಗೆ ತೆರಳಿದರು. ೨೦೦೦ನೇ ಇಸವಿಯಲ್ಲಿ, ಡಾರ್ಸಿ ಅವರು ಓಕ್ಲ್ಯಾಂಡ್ ನಲ್ಲಿ ಅಂತರ್ಜಾಲದ ಮೂಲಕ ಕೊರಿಯರ್ ಗಳನ್ನು ಕಳಿಸುವ, ಟ್ಯಾಕ್ಸಿ ಮತ್ತು ತುರ್ತು ಸೇವೆಗಳನ್ನು ಮಾಡಲು ಕಂಪನಿಯನ್ನು ಪ್ರಾರಂಭಿಸಿದರು. ಈ ಸಮಯದಲ್ಲಿ ಅವರ ಇತರ ಯೋಜನೆಗಳು ಮತ್ತು ಆಲೋಚನೆಗಳಲ್ಲಿ ವೈದ್ಯಕೀಯ ಸಾಧನಗಳ ಜಾಲಗಳು ಸೇರಿವೆ.[] ವಿಲಿಯಮ್ಸ್, ಸ್ಟೋನ್ ಮತ್ತು ನೋಹ್ ಗ್ಲಾಸ್ ಅವರು ಜೊತೆಗೂಡಿ ಶುರು ಮಾಡಿದ ಕಂಪನಿ ಯನ್ನು ನಂತರ ಟ್ವಿಟರ್ ಆಗಿ ಬದಲಾಯಿಸಿದರು. ಜೊತೆಗೆ ಟ್ವಿಟರ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಗಿ ಡಾರ್ಸಿ ಅವರನ್ನು ಆಯ್ಕೆ ಮಾಡಲಾಯಿತು. ಯೋಗ ಮತ್ತು ಫ್ಯಾಷನ್ ವಿನ್ಯಾಸ ಹಾಗು ಇತರ ಅನ್ವೇಷಣೆಗಳಲ್ಲಿ ಆನಂದವನ್ನು ಅನುಭವಿಸಲು ಆತ ತನ್ನ ಸ್ಥಾನವನ್ನು ಕಳೆದುಕೊಂಡನೆಂದು ವರದಿಯಾಗಿದೆ. ಈ ಸೇವೆ ಜನಪ್ರಿಯತೆ ಗಳಿಸಲು ಪ್ರಾರಂಭವಾದಂತೆ, ಡಾರ್ಸಿ ಅಪ್ಲಿಕೇಶನ್ ಸುಧಾರಣೆಯನ್ನು ಉನ್ನತ ಆದ್ಯತೆಯಾಗಿ ಆಯ್ಕೆ ಮಾಡಿಕೊಂಡರು. ಕಂಪೆನಿಯು ಸರಳತೆ, ನಿರ್ಬಂಧ ಮತ್ತು ಕುಶಲತೆ ಎಂದು ಹೇಳುವ ಮೂಲಕ ತನ್ನ ಮೂರು ಮಾರ್ಗದರ್ಶಿ ಸೂತ್ರಗಳನ್ನು ಅವನು ವರ್ಣಿಸುತ್ತಾನೆ.

[]

ಯೋಜನೆಗಳು

ಬದಲಾಯಿಸಿ

ಡಾರ್ಸೆ ಡಿಸೆಂಬರ್ ೨೪, ೨೦೧೩ ರಂದು ದಿ ವಾಲ್ಟ್ ಡಿಸ್ನಿ ಕಂಪೆನಿಯ ನಿರ್ದೇಶಕರ ಮಂಡಳಿಯ ಹೊಸ ಸದಸ್ಯರಾದರು. ಮಾಧ್ಯಮದವರು ಡಾರ್ಸಿಯನ್ನು ಪ್ರತಿಭಾವಂತ ಉದ್ಯಮಿ ಎಂದು ಉಲ್ಲೇಖಿಸಿದರು ಮತ್ತು ಅವರ ಅನುಭವವನ್ನು ಕಾರ್ಯತಂತ್ರದ ಆದ್ಯತೆಗಳಿಗೆ ಜೋಡಿಸಲಾಗಿದೆ ಎಂದು ವಿವರಿಸಿದರು. ೨೦೧೮ ರ ಜನವರಿ ಯಲ್ಲಿ , ಡಾರ್ಸಿ ಡಿಸ್ನಿಯ ಮಾರ್ಚ್ ವಾರ್ಷಿಕ ಸಭೆಯಲ್ಲಿ ಮರು ಚುನಾವಣೆಯಲ್ಲಿ ನಿಲ್ಲುವುದಿಲ್ಲ ಎಂದು ವರದಿಯಾಗಿತ್ತು. ಮಾಜಿ ಟ್ವಿಟ್ಟರ್ ಸಿಇಒ ಡಿಕ್ ಕಾಸ್ಟೊಲೊ ಡಾರ್ಸಿ ಅವರನ್ನು ಶಾಂತ, ಚಿಂತನಶೀಲ ನಾಯಕ ಎಂದು ಬಣ್ಣಿಸಿದ್ದಾರೆ. ೨೦೧೨ರಲ್ಲಿ ನಡೆದ ೫ನೇ ವಾರ್ಷಿಕ ಕ್ರಂಚಿಸ್ ಪ್ರಶಸ್ತಿ ಕಾರ್ಯಕ್ರಮ ದಲ್ಲಿ ಡಾರ್ಸಿ ಅವರಿಗೆ ವರ್ಷದ ಸ್ಥಾಪಕ ಗೌರವ ನೀಡಲಾಯಿತು. ೨೦೧೮ ರಲ್ಲಿ ಡೋರ್ಸಿಯವರಿಗೆ ಸಿಇಓ ವರ್ಲ್ದ್ ನಿಯತಕಾಲಿಕೆಯ "ವಿಶ್ವದ ಅತ್ಯುತ್ತಮ ಸಿಇಓಗಳ" ಪಟ್ಟಿಯಲ್ಲಿ ಸ್ಥಾನ ದೊರೆಯಿತು.[] ೨೦೧೫ರಲ್ಲಿ, ಡಾರ್ಸಿ ತನ್ನ ಟ್ವಿಟರ್ ಷೇರುಗಳಲ್ಲಿ ಮೂರನೇ ಒಂದು ಭಾಗವನ್ನು ನೌಕರರಿಗೆ ನೀಡಿದರು. ಅವರು ವಿಶ್ವದ ಅತ್ಯಂತ ಪ್ರಸಿದ್ಧ ಉದ್ಯಮಿಗಳಲ್ಲಿ ಒಬ್ಬರು. ಪ್ರಸ್ತುತ ಅವರು ಸ್ಯಾನ್ ಫ್ರಾನ್ಸಿಸ್ಕೋ ಕ್ಯಾಲಿಫೋರ್ನಿಯಾದಲ್ಲಿ ವಾಸಿಸುತ್ತಿದ್ದಾರೆ. ಅವರು ಪ್ರತಿ ಬೆಳಿಗ್ಗೆ ಕೆಲಸ ಮಾಡಲು ಐದು ಮೈಲು ನಡೆದು, ಅದನ್ನು ಉತ್ತಮ ಸಮಯ ಎಂದು ಕರೆಯುತ್ತಾರೆ..ಅವರು ಕೆಂಡ್ರಿಕ್ ಲ್ಯಾಮರ್ ಅವರ ಸಂಗೀತದ ಅಭಿಮಾನಿ[].

ಉಲ್ಲೇಖಗಳು

ಬದಲಾಯಿಸಿ
  1. "Jack Dorsey | American Web developer and entrepreneur". Encyclopedia Britannica (in ಇಂಗ್ಲಿಷ್). Retrieved 20 February 2020.
  2. "Board of directors | About". web.archive.org. 14 October 2016. Archived from the original on 14 ಅಕ್ಟೋಬರ್ 2016. Retrieved 20 February 2020.{{cite web}}: CS1 maint: bot: original URL status unknown (link)
  3. "About Square". Square. Retrieved 20 February 2020.
  4. Spangler, Todd; Spangler, Todd (11 April 2018). "Twitter CEO Jack Dorsey Declines Compensation in 2017 for Third Straight Year". Variety (in ಇಂಗ್ಲಿಷ್). Retrieved 20 February 2020.
  5. Strange, Adario (20 April 2007). "Flickr Document Reveals Origin Of Twitter". Wired. Retrieved 20 February 2020.
  6. lbrown@post-dispatch.com > 314-340-8127, LISA BROWN •. "Taste of St. Louis first major event to use Square". stltoday.com (in ಇಂಗ್ಲಿಷ್). Retrieved 20 February 2020.{{cite web}}: CS1 maint: numeric names: authors list (link)
  7. "Square opens new headquarters in San Francisco, announces plans for expanded offices in New York and Kitchener-Waterloo". web.archive.org. 13 April 2014. Archived from the original on 13 ಏಪ್ರಿಲ್ 2014. Retrieved 20 February 2020.{{cite web}}: CS1 maint: bot: original URL status unknown (link)


[]

  1. https://en.wikipedia.org/wiki/Jack_Dorsey