ಪರಿಚಯ;

ಮೊದಲನೆಯದಾಗಿ ನಮಸ್ಕಾರ,ನನ್ನ ಹೆಸರು ಅಜಿತ್ ಕುಮಾರ್.ಎಸ್, ನನ್ನ ಸ್ವ೦ತ ಊರು ಹಸಿರು ನಗರ ಎ೦ಬ ಹೇಸರು ವಾಸಿಯಾದ ಬೆಂಗಳೂರು ನಗರ,ಮಹದೇವಪುರ ಕ್ಷೇತ್ರದ ಎ.ನಾರಯಣಪುರ ಎ೦ಬ ಗ್ರಾಮದ್ದಲ್ಲಿ ವಾಸಿಸುತ್ತೇನೆ.ನನ್ನ ತಂದೆಯ ಹೆಸರು ಸುರೇಶ್.ವಿ,ನನ್ನ ತಾಯಿಯ ಹೆಸರು ಆಶಾ.ಎಸ್ ಹಾಗೂ ನನ್ನ ಸಹೋದರಿಯ ಹೆಸರು ಚಿತ್ರ.ಎಸ್.ನಾನು ಹುಟ್ಟಿದ ದಿನಾಂಕ ೦೮/೦೩/೧೯೯೯.

ಹವ್ಯಾಸ;

ನನಗೆ ಇಷ್ಟಾವಾದ ಹವ್ಯಾಸ ಕ್ರಿಕೆಟ್ ಮತ್ತು ಪುಸ್ತಕ ಓದುವುದು.ನಾನು ಚಿತ್ರ ವೀಕ್ಷಿಸಲು, ಸಂಗೀತ ಕೇಳಲು ಇಷ್ಟಪಡುತ್ತೇನೆ.ನಾನು ನನ್ನ ಹತ್ತನೇಯ ತರಗತಿಯವರೆಗೂ ಒಂದೇ ಶಾಲೆಯಲ್ಲಿ ಶಿಕ್ಷಣವನ್ನು ಮುಗಿಸಿದ್ದೇನೆ.

ವಿದ್ಯಾಭ್ಯಾಸ:

ಚಿತ್ರ:ದುರ್ಗಾ ಪ್ರಸದ್.jpg ನನ್ನ ಸ್ನೆಹಿತ
https://commons.wikimedia.org/wiki/File:%E0%B2%8E%E0%B2%A1%E0%B3%8D%E0%B2%B5%E0%B2%BF%E0%B2%A8%E0%B3%8D_%E0%B2%95%E0%B3%8D%E0%B2%B0%E0%B2%BF%E0%B2%B8%E0%B3%8D%E0%B2%9F%E0%B3%8B%E0%B2%AB%E0%B2%B0%E0%B3%8D_%E0%B2%B8%E0%B2%B0%E0%B3%8D.jpg
https://commons.wikimedia.org/wiki/File:%E0%B2%B6%E0%B3%8D%E0%B2%B0%E0%B3%80_%E0%B2%AE%E0%B3%88%E0%B2%A4%E0%B3%8D%E0%B2%B0%E0%B2%BF_%E0%B2%87%E0%B2%82%E0%B2%97%E0%B3%8D%E0%B2%B2%E0%B3%80%E0%B2%B7%E0%B3%8D_%E0%B2%B6%E0%B2%BE%E0%B2%B2%E0%B3%86.jpg

ನನ್ನ ಶಾಲೆಯ ಹೆಸರು ಶ್ರೀ ಮೈತ್ರಿ ಇಂಗ್ಲೀಷ್ ಶಾಲೆ.ನಾನು ನನ್ನ ಪ್ರಾಥಮಿಕ,ಮಾಧ್ಯಮಿಕ ಮತ್ತು ಹಿರಿಯಾ ಪ್ರಾಥಮಿಕ ಶಿಕ್ಷಣವನ್ನು ಶ್ರೀ ಮೈತ್ರಿ ಇಂಗ್ಲೀಷ್ ಶಾಲೆಯಲ್ಲಿ ಮುಗಿಸಿದ್ದೆನೆ.ನನ್ನ ಶಾಲೆಯ ಪ್ರಾಂಶುಪಾಲರು ಹೆಸರು ಶ್ರೀಮತಿ ರಾಜಲಕ್ಷ್ಮಿ ಮೇಡಂ.ನಾನು ಎಂಟನೆ ತರಗತಿಯಲ್ಲಿ ನಾನು ರಾಷ್ಟ್ರೀಯ ಮಟ್ಟದ ಸ್ಪರ್ಧೆಯನ್ನು ಗೆದ್ದಿದ್ದೇನೆ ಮತ್ತು ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಹಿರಿಯರಿಗೆ ಗೌರವ ನಿಡಬೇಕ್ಕು ಎ೦ದು ನಮ್ಮ ಪ್ರಾಂಶುಪಾಲರು ಹೇಳುವರು.ನನ್ನ ಶಾಲೆಯಲ್ಲಿ ಶಿಕ್ಷಣಕಿ೦ತ್ತ ವಿದ್ಯಾರ್ಥಿಗಳಿಗೆ ಒಳ್ಳೆಯ ಬುದ್ಧಿಯನ್ನು ಹೇಳಿಕೊಡುತ್ತಿದರು.ಹತ್ತನೇ ತರಗತಿಯಲ್ಲಿ ಶೇಕಡ ನೂರಕ್ಕೆ ಎಪ್ಪತ್ತುರಷ್ಟು ಅ೦ಕಗಳು ಗಳಿಸಿದೆ.ಅನಂತರ ನನ್ನ ಪ್ರಥಮ ಹಾಗೂ ದ್ವಿತೀಯ ದರ್ಜೆಯನ್ನು ನ್ಯೂ ಹಾರಿಜಾನ್ ಪಿಯು ಕಾಲೇಜಿನಲ್ಲಿ ಓದಿದೆ.ನನ್ನ ಕಾಲೇಜಿನ ಪ್ರಾಂಶುಪಾಲರು ಹೆಸರು ಎಡ್ವಿನ್ ಕ್ರಿಸ್ಟೋಫರ್ ಸರ್. ನನ್ನ ಪ್ರಾಥಮಿಕ ಶಾಲೆಗಿಂತ ಪಿಯು ಕಾಲೇಜಿನಲ್ಲಿ ಸ್ನೇಹಿತರೊಂದಿಗೆ ತುಂಬಾ ಖುಷಿಪಟ್ಟೆ,ತುಂಬಾ ಒಳ್ಳೆಯ ಸ್ನೇಹಿತರು ಪರಿಚಯವಾದರೂ.ಶಿಕ್ಷಕರು ಸಹ ಶಿಕ್ಷಣದೊ೦ದಿಗೆ ಚೆನ್ನಾಗಿದ್ದರು.ನಾನು ಆ ಕಾಲೇಜಿನಲ್ಲಿ ಬಹಳ ಚೆನ್ನಾಗಿ ಓದುತ್ತಿದೆ.ನನಗೆ ಹಲವಾರು ಗೆಳೆಯರು ಹಾಗೂ ಗೆಳೆತಿಯರು ಪರಿಚಯವಾದರು ಮತ್ತು ಕಾಲೇಜಿನಲ್ಲಿ ಹಲವಾರು ಕ್ರೀಡೆಗಳಲ್ಲಿ ನಾನು ಭಾಗವಹಿಸುತ್ತಿದೆ. ನನ್ನ ಆತ್ಮಿಯಾ ಸ್ನೇಹಿತರ ಹೆಸರು ರಾಕ್ಷೀತ್ ಹಾಗೂ ವಿಗ್ನೇಶ್.ಶಿಕ್ಷಕರು ಸಹ ವಿದ್ಯಾರ್ಥಿಗಳನ್ನು ಅವರು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುತಿರುವವರೆಗು ಹೇಳಿಕೂಡುತ್ತಿದ್ದರು.ನಾನು ಕಾಲೇಜು ಬಿಡುವಾಗ ತುಂಬಾ ಬೇಸರಪಟ್ಟೆ.ನಾನು ದ್ವಿತೀಯ ಪಿಯುಸಿಯಲ್ಲಿ ಶೇಕಡ ನೂರಕ್ಕೆ ತೊಂಬತ್ತರಷ್ಟು ಆಂಕಗಳು ಗಳಿಸಿದೆ.ನನಗೆ ತುಂಬಾ ಇಷ್ಟುವಾದ ಶಿಕ್ಷಕಿಯ ಹೆಸರು ಹರ್ಷ ಮೇಡಂ,ಅವರು ವಿದ್ಯಾರ್ಥಿಗಳಿಗೆ ಅರ್ಥಶಾಸ್ತ್ರ ವಿಷಯಗಳನ್ನು ಹೇಳಿಕೊಡುತ್ತಿದ್ದರು.ಅವರು ತುಂಬಾ ಚನ್ನಾಗಿ ಪಾಠವನ್ನು ಹೇಳಿಕೊಡುತ್ತಾರೇ.ನಾನು ಬೇಸಿಗೆ ರಜೆಯಲ್ಲಿ ಚನ್ನಪಟ್ಟಣನಲ್ಲಿರುವ ನನ್ನ ದೊಡ್ಡಮ್ಮ ಮನೆಗೆ ಹೋಗಿದೆ. ನನ್ನ ಎರಡನೇ ವರ್ಷದ ನಂತರ ನಾನು ಅನೇಕ ಕಾಲೇಜುಗಳಲ್ಲಿ ಪದವಿ ಮಾಡಲು ಅರ್ಜಿ ಹಾಕಿದ್ದೆ,ಎಲ್ಲಾ ಕಾಲೇಜಿನಲ್ಲಿ ಸಿಕ್ಕಿತ್ತು.ನಾನು ಕ್ರೈಸ್ಟ್ ಯೂನಿವರ್ಸಿಟಿಗೆ ಮೊದಲು ಅರ್ಜಿ ಹಾಕಿದ್ದೆ ಮತ್ತು ನನಗೆ ಆ ಕಾಲೇಜಿನಲ್ಲಿಯೂ ಸಿಕ್ಕಿತ್ತು.ನನ್ನ ಆಸೆ ಕ್ರೈಸ್ಟ್ ಯೂನಿವರ್ಸಿಟಿ ಕಾಲೇಜಿನಲ್ಲಿ ಸೇರಬೇಕೆ೦ದು ಮತ್ತು ಅದ್ದರಲ್ಲಿ ಓದಬೇಕು.ನನ್ನ ತ೦ದೆ-ತಾಯಿಗೆ ಮತ್ತು ನನ್ನ ಸ್ನೇಹಿತರಿಗೂ ತು೦ಬ ಸಂತೋಷವಾಯಿತ್ತು.ನಾನು ಕ್ರೈಸ್ಟ್ ಯೂನಿವರ್ಸಿಟಿ ಕಾಲೇಜಿನಲ್ಲಿ ಸೇರಿದು ಖುಷಿ ಆಯಿತ್ತು ಹಾಗೂ ನನ್ನ ಹಳೆಯ ಶಿಕ್ಷಕರನ್ನು ಮತ್ತು ನನ್ನ ಸ್ನೇಹಿತರನ್ನು ಬಿಟ್ಟು ಹೋಗುವುದ್ದಕ್ಕೆ ಬೆಸರವಾಯಿತ್ತು.ನನಗೆ ಇಷ್ಟಾವಾದ ವಿಷಯ ವ್ಯವಹಾರ ಸಂಸ್ಥೆ ನಿರ್ವಹಣೆ ಮತ್ತು ಕನ್ನಡ.ನನಗೆ ಹೊಸ ಕಾಲೇಜಿನಲ್ಲಿ ಹಲವಾರು ಸ್ನೇಹಿತರಾಗ್ಗಿದ್ದಾರೆ.ನನ್ನ ಆತ್ಮಿಯಾ ಸ್ನೇಹಿತನ ಹೇಸರು ಕಿರಣ್ ಮತ್ತು ದುರ್ಗಾ ಪ್ರಸದ್.ನಾನು ಕಾಲೇಜಿಗೆ ಹೋಗಿದ ಮೊದಲೆನೆಯ ದಿನ ತು೦ಬಾ ಭಯವಾಯಿತು,ಎಕೆ೦ದರೆ ನನ್ನಗೆ ಯಾರೂ ಪರಿಚಯ ಇರಲ್ಲಿಲಾ.ಆದರೆ ಸೇರಿದ ಕೆಲವು ದಿನಗಳ ನ೦ತರ ನಾನು ಮಾತನಾಡುವ ಕೌಶಲ್ಯಗಳು ಕಳಿತುಕೊ೦ಡೆ ಹಾಗೂ ನನಗೆ ಕಾಲೇಜಿಗೆ ಬರುವುದಕ್ಕೆ ತು೦ಬಾ ಆಸ್ಕ್ತಿಯಿದೆ.ಅದರೆ ಕಾಲೇಜಿನಲ್ಲಿ ಕನ್ನಡ ಭಾಷೆ ಮಾತನಾಡುವುದ್ದಕ್ಕೆ ಹಿಂದೆ-ಮುಂದೆ ನೋಡುವರು ಇದ್ದರಿ೦ದ ನನಗೆ ಬೇಸರವಾಗುತ್ತದೆ.ಈ ರೀತಿಯಲ್ಲಿ ನನ್ನ ಪರಿಚಯವನ್ನು ಮುಗಿಸುತ್ತಿದ್ದೇನೆ.

ವ೦ದನೆಗಳು