ಎನ್. ತಿಪ್ಪಣ್ಣ 75*80px|thumb|right|ಎನ್. ತಿಪ್ಪಣ್ಣ

ಬಾಲ್ಯ ಮತ್ತು ವಿಧ್ಯಾಭ್ಯಾಸ

ಬದಲಾಯಿಸಿ

ಎನ್. ತಿಪ್ಫಣ್ಣರವರು ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯ ತುರುವನೂರು ಗ್ರಾಮದಲ್ಲಿ ೨೩ನೇ ನವಂಬರಲ್ಲಿ ಜನಸಿದರು. ಇವರ ತಂದೆಯ ಹೆಸರು ರುದ್ರಣ್ಣ ಮತ್ತು ತಾಯಿಯ ಹೆಸರು ಹಂಪಮ್ಮ. ಇವರ ತಮ್ಮ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣನ ವನ್ನು ತುರುವನೂರಿನ ಸರ್ಕಾರಿ ಶಾಲೆಯಲ್ಲಿ ಮಾಡಿದರು. ಮತ್ತು ತಮ್ಮ ಪ್ರೌಡ ಶಿಕ್ಶಣವನ್ನು ಚಿತ್ರದುರ್ಗದಲ್ಲಿ ಮುಗಿಸಿದರು. ನಂತರದ ವಿಧ್ಯಾಭ್ಯಾಸವನ್ನು ದಾವಣಗೆರೆಯ ಇಂಟರ್ ಮೀಡಿಯಟ್ ಕಾಲೇಜಿನಲ್ಲಿ ಮುಗಿಸಿ. ತಮ್ಮ ಬಿ.ಎ ಪದವಿಯನ್ನು ಮೈಸೂರಿನ ಮಹರಾಜ ಕಾಲೇಜನಲ್ಲಿ ಮುಗಿಸಿ ಎಲ್.ಎಲ್.ಬಿ ಪದವಿಯನ್ನು ಬೆಂಗಳೂರು ನಲ್ಲಿರುವ ಬಿ.ಎಲ್ ಸರ್ಕಾರಿ ಕಾಲೇಜಿನಲ್ಲಿ ಪಡೆದುಕೊಂಡರು. 75*80px|thumb|right|ಎನ್. ತಿಪ್ಪಣ್ಣ ಮತ್ತು ಅವರ ಕರ್ನಾಟಕ ವಿಶ್ವವಿದ್ಯಾಲಯ ಸಂಗಾತಿಯರು ದಾವಣಗೇರೆಯಲ್ಲಿ ಇವರಿಗೆ ಬಹಳ ದಕ್ಶರೂ, ವಿದ್ವಂಸರೂ ಆದ ಉಪನ್ಯಾಸಕರಿದ್ದರು. ತೀ.ನಂ.ಶ್ರೀ, ಎಲ್. ಬಸವರಾಜು, ಡಾ.ಎಸ್. ಶ್ರೀಕಂಟಶಾಸ್ತ್ರಿಗಳು ಮುಂತದವರು ತಿಪಣ್ಣರವರಿಗೆ ಸಮಾಜ ಸೇವೆ ಸಲ್ಲಿಸಲು ಮಾಧರಿಯಾದರು. ಮೈಸೂರಿನ ಮಹರಾಜ ಕಾಲೇಜಿನಲ್ಲಿ ಕುವೆಂಪು, ಎಸ್.ವಿ ಪರಮೇಶ್ವರ, ಎಂ.ವಿ. ಸೀತಾರಾಮಯ್ಯ, ಎಲ್. ಬಸವರಾಜು, ಎಂ.ವಿ. ಕೃಷ್ಣರಾವ, ಪಿ.ಎಲ್. ಡಿಸೋಜ, ಡಾ.ಸಿ.ಆರ್ ರೆಡ್ಡಿ ಮುಂತಾದ ಅದ್ಭುತ ಪ್ರೊಪೆಸರುಗೆಳ್ಳಿದರು. ಬೆಂಗಳೂರಿನಲ್ಲಿ ಓದುವಾಗ ಬಿ. ರಾಚಯ್ಯ, ಡಾ. ಸಿ.ಕೆ ಎನ್.ರಾಜ್, ಡಿ. ಎಂ. ಸಿದ್ದಯ್ಯ ಸಹಪಾಠಿಗಳಾಗಿದ್ದರು.

ವ್ರತ್ತಿ ಮತ್ತು ಸಾಧನೆ

ಬದಲಾಯಿಸಿ

ವಕೀಲ ವ್ರುತ್ತಿಯನ್ನು ಬಳ್ಳಾರಿಯಲ್ಲಿ ಪ್ರಾರಂಭಿಸಿದರು. ೧೦ ವಷರ್ಗಳ ಕಾಲ ಪ್ರಾಸಿಕ್ಯೂಟರ್ ಆಗಿದ್ದರು. ನಂತರ ಸರ್ಕಾರಿ ಫ್ಲೀಡರ್ ಕೂಡ ಆಗಿದ್ದರು. ಪ್ರಾಸಿಕ್ಯೂಟರ್ ಆಗಿದ್ದಾಗ ಶ್ರೀ. ಆರ್.ಜಿ ದೇಸಾಯಿಯವರು ಸೆಷೆನ್ಸ್ ನ್ಯಾಯದೀಶರಾಗಿದ್ದರು. ಅವರಿಗೆ ವೈಟ್ ಗ್ಲೊವಸ್(ಬಿಳಿಯ ಕೈಗವಸ್ತುಗಳು) ಸಮರ್ಪಿಸುವ ಗೌರವಕೈ ಪಾತ್ರರಾದರು.೧೯೮೨ ರಲ್ಲಿ ತಿಪ್ಪಣ್ಣನವರು ಬಾರ್ ಕೌನ್ಸಿಲ್ ಅಧ್ಯಕ್ಶರಾದರು. ವಕೀಲರ ಕಲ್ಯಾಣ ನಿಧಿಯನ್ನು ಸ್ಥಾಪಿಸಿದರು. ಸಮಜಾದ ದುರ್ಬಲ ವರ್ಗದವರಿಗೆ ಉಚಿತ ಕಾನೂನು ನೆರವಿಗೆ ಸಂಬಂಧಿಸಿದಂತೆ ನಿಯಮಾವಳಿಗಳನ್ನು ರಚಿಸಿದರು. ಎನ್. ತಿಪಣ್ಣನವರು ಕೇಂದ್ರ ವಾರ್ತಾ ಇಲಾಖೆಯ ಎಫ಼್.ಸಿ.ಎ.ಟ್ (ಫ಼ಿಲ್ಮ್ ಸೆನ್ಸರ್ ಅಪ್ಪಲ್ಲಟ ಟ್ರೈಬುನಲ್) ಸಧಸ್ಯನಾಗಿ ಸೇವೆ ಸಲ್ಲಿಸಿದರು. ಅಮೃತಸರದ ಸುವರ್ಣ ಮಂದಿರದ ಮೇಲೆನಡೆದ 'ಆಪರೇಶನ್ ಬ್ಲೂಸ್ಟಾರ್' ದಾಳಿಯನ್ನಾದರಿಸಿದ ಪಂಜಾಬ್ ವೀಡಿಯೋ ಚಿತ್ರದಬಗ್ಗೆ ಬರೆದ ತಿರ್ಮಾನ ಸುಪ್ರೀಮ್ ಕೋರ್ಟ್ ನ್ಯಾಯಧೀಶರ ಪ್ರಶಂಸೆಗೆ ಪಾತ್ರವಾಯಿತು. ನಂತರ ಬಳ್ಳಾರಿಯಲ್ಲಿರುವ ವೀರಶೈವ ಸಂಘದ ಕಾರ್ಯದರ್ಶಿಯಾಗಿ ಹಲವಾರು ಶಾಲಾ ಕಾಲೇಜುಗಳನ್ನು ಸ್ಥಾಪಿಸಿದರು. ಬಳ್ಳಾರಿ, ಹೊಸಪೇಟೆ, ಹರಪ್ಪನಳ್ಳಿ, ಹಡಗಲಿ, ಕೊಟ್ಟೂರು, ಬಳ್ಳಾರಿಯಲ್ಲಿ ಮಹಿಳಾ ಕಾಲೇಜು,ಲಾ ಕಾಲೇಜು,ಇಂಜಿನಿಯರಿಂಗ್ ಕಾಲೇಜು,ಮೆಡಿಕಲ್ ಕಾಲೇಜು, ಅನೇಕ ವಸತಿ ನೆಲಯಗಳನ್ನು ಸ್ಥಾಪಿಸುವಲ್ಲಿ ಶ್ರಮಿಸಿದರು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ೧೨ ವರ್ಷಗಳ ಕಾಲ ಸಿಂಡಿಕೇಟಿನ ಮೆಂಬರ್ ಆಗಿ ಕಾರ್ಯ ನಿರ್ವಹಿಸಿದರು ಆಗ ಕಾಮನ್ ವೆಲ್ತ್ ವಿಶ್ವವಿದ್ಯಾಲಯಗಳ ಸಮ್ಮೇಳನಕ್ಕೇ ಇಂಗ್ಲೆಂಡ್, ರೋಮ್, ಫ್ರಾನ್ಸ್, ಜರ್ಮನಿ, ಸ್ವಿತ್ಜರ್ ಲ್ಯಾಂಡ್ ಮತ್ತು ಇತರ ಯುರೋಪ್ನ ದೇಶಗಳಿಗೆ ಹೋಗಿ ಬಂದರು. 75*80px|thumb|left|ಗ್ರಾಂಡ್ ಲಾಡ್ಜ್ ಆಫ್ ಇಂಡಿಯಾದವರ ೪೦ ವರ್ಷಗಳ ಸೇವೆಗೆ ಎನ್. ತಿಪ್ಪಣ್ಣರವರಿಗೆ ನೀಡಿದ ಪದಕ ಪ್ರದಾನ

ರಾಜಕಿಯದಲ್ಲಿ ತಿಪ್ಪಣ್ಣ

ಬದಲಾಯಿಸಿ

ಬಳ್ಳಾರಿಮೈಸೂರುದೋ ಇಲ್ಲವೆ ಆಂಧ್ರ ಪ್ರದೇಶಿಂದ ಎಂಬ ಗಲಾಟೆ ನಡೆಯುತಿತ್ತು ಆಗ ರಾಜ್ಯ ಪುನರ್ವಿಂಗಡಣಾ ಆಯೋಗದ ವರದಿ ಬಗ್ಗೆ ಊರಿನಲ್ಲಿ ಬಿಸಿ ಬಿಸಿ ಚರ್ಚೆ. ಬಳ್ಳಾರಿಯಲ್ಲಿ ಪ್ರಕ್ಶಬ್ದ ವಾತವರಣಯಾಯಿತು. ಅಂದಿನ ಬಳ್ಳಾರಿ ಕನ್ನಡ ಸೇನಾನಿಗಳ ಸಭೇ ನಡೆಸುತ್ತಿದರು. ರಾಜಕೀಯ ಮುಖಂಡರ ಪರಿಚಯವಾಯಿಯಿತು. ಆಗ ವಿಧಾನಸಭ ಚುನಾವಾಣೆಯಲ್ಲಿ ಸೋಲನ್ನು ಅನುಭವಿಸಿದರು. ನಂತರ ವಿಧಾನ ಪರಿಷತ್ತುಗೆ ಆಯ್ಕೆಯಾಗಿ ೧೨ ವರ್ಷ ಸೇವೆ ಸಲ್ಲಿಸಿದರು. ಪರಿಷತ್ತಿನ ಲೆಕ್ಕಾಪತ್ರ ಸಮಿತಿ, ಕಂದಾಯ ಉಪ ಸಮಿತಿ ಅಧ್ಯಾಕ್ಷರಾಗಿ, ಅರಣ್ಯ ಮತ್ತು ಪರಿಸರ ಸಮಿತಿ ಮುಂತಾದ ಹಲವಾರು ಸಮಿತಿಗಳ ಅಧ್ಯಾಕ್ಶನಾಗಿ ಕೆಲಸಮಾಡಿದರು. ವಿಧಾನ ಪರಿಷತ್ತಿನಲ್ಲಿ ವಿರೋಧ ಪಕ್ಷದ ಉಪನಾಯಕರಾಗಿಯೂ ಕನ್ನಡ ವಿಶ್ವವಿದ್ಯಾಲಯ ಹಂಪಿ ಸಿಂಡಿಕೇಟ್ ಸದಸ್ಯಾರಾಗಿ ಸೇವೆ ಸಲ್ಲಿಸಿದ್ದಾರೆ. 75*80px|thumb|ಶ್ರೀಮತಿ ಇಂದಿರ ಗಾಂಧಿಯವರ ಜತೆಗೆ ಎನ್. ತಿಪ್ಪಣ್ಣ

ವೀರಶೈವ ಮಹಾಸಭೆಯ ಶಿಲ್ಪಿ

ಬದಲಾಯಿಸಿ

ಈಗ ಅಖಿಲ ಭಾರತ ವೀರಶೈವ ಮಹಾಸಭದ ಉಪಧ್ಯಾಕ್ಶರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವೀರಶೈವ ಸಂಘದ ಕಾರ್ಯದರ್ಶಿಯಾದಾಗ ಕೇವಲ ನಾಲ್ಕೇ ವಿದ್ಯಾಸಂಸ್ಥೆಗಳ್ಳಿದವು. ಮುನಿರಾಬಾದ್ ನಲ್ಲಿ ಒಂದು ಹೈ ಸ್ಕೊಲು, ಹೊಸಪೇಟೆಯಲ್ಲಿ ವಿಜಯನಗರ ಕಾಲೇಜು ಅರಂಭವಾಯಿಯಿತ್ತು. ಉದ್ಘಾಟನೆಗೆ ಅಂದಿನ ಉಪರಾಷ್ತ್ರಪತಿ ಶ್ರೀ. ಝಾಕಿರ್ ಹುಸೇನ್ ಮತ್ತು ಅಧ್ಯಕ್ಷತೆಗೆ ಶಿಕ್ಶಣ ಸಚಿವ ಎಸ್.ರ್ ಕಂಠಿಯರವರು ವಹಿಸಿ ಕೊಂಡಿದ್ದರು. ಕೊಟ್ಟುರು ನಲ್ಲಿ ಕೊಟ್ಟುರೇಶ್ವರ ಕಾಲೇಜನ್ನು ಉದ್ಘಾಟಿಸಿದರು. ಹಗರಿ ಬೊಮ್ಮನ ತಾಲೂಕಿನ ತಂಬ್ರಹಳ್ಳಿಯಲ್ಲಿ ಸ್ಕೂಲನ್ನು ಪ್ರಾರಂಸಿಧರು. ಹೂವಿನ ಹಡಗಲಿಯಲ್ಲಿ ರಾಜ್ಯಪಾಲ ಧರ್ಮವೀರ ಅವರಿಂದ ಗಂಗಾವತಿ ಭಾಗ್ಯಮ್ ರೂರಲ್ ಕಾಲೇಜ್ ಪ್ರಾರಂಭಿಸಿದರು. ಕರ್ನಾಟಕ ವಿಶ್ವ ವಿಧ್ಯಾಲಯದ ಉಪಕುಲಪತಿ ಡಾ! ಎ.ಎಸ್ ಅಡಿಕೆಯವರು ಅಧ್ಯಕ್ಷತೆ ವಹಿಸಿದ್ದರು. ಬಳ್ಳಾರಿಯಲೂ ಕೊಟ್ಟೊರು ಸ್ವಾಮಿ ಶಿಕ್ಶಣ ಮಹಾವಿದ್ಯಾಲಯ ಪ್ರಾರಭ ಮಾಡಿದರು. ಕರ್ನಾಟಕ ವಿಶ್ವವಿಧ್ಯಾಲಯವು ಕಾನೂನು ಕಾಲೇಜುಗಳ ಸ್ಥಾಪನೆಗೆ ಸಂಭಂದಿಸಿದಂತೆ ಒಂದು "ಲೊಕಲ್ ಇನ್ಸಟಿಟ್ಯುಟ್ ಕಮಿಟ್ಟಿ ಆಫ಼್ ಲಾ ಕಾಲೇಜಸ್" ಏಂಬ ಸಮಿತಿಗೆ ಅಧ್ಯಕ್ಶರಾಗಿದ್ದಾಗ ಸಿರ್ಸಿ, ರಾಯಚೂರು, ಬೀದರ್, ಬಾಗಲ್ ಕೋಟೆ ಮತ್ತು ಅನೇಕ ಕಡೆ ಕಾನೂನು ಕಾಲೇಜುಗಳನ್ನು ಸ್ಠಾಪಿಸಲು ಅನುಮತಿ ಕೊಟ್ಟರು. ಬಳ್ಳಾರಿಯಲ್ಲಿ ವುಂಕಿ ಸಣ್ಣರುದ್ರಪ್ಪ ಕಾನೂನು ಕಾಲೇಜನ್ನು ಪ್ರಾರಂಭಿಸಿದರು. ಅದರಲ್ಲಿ ಗೌರವ ಉಪನ್ಯಾಸಾಕರಾಗಿ ಪಾಟಮಾಡಿದರು. ಶ್ರೀಮತಿ ಅಲ್ಲಂ ಸುಮಂಗಳಮ್ಮ ಸ್ಮಾರಿಕ ಮಹಿಳಾ ಕಾಲೇಜನ್ನು ಬಳ್ಳಾರಿಯಲ್ಲಿ ಸ್ಥಾಪಿಸಿದರು. ವಿದ್ಯಾರ್ಥಿನಿಯರಿಗಾಗಿ ಹಾಸ್ಟೆಲನ್ನು ಸ್ಠಾಪಿಸಿದರು. ಬಳ್ಳಾರಿಯಲ್ಲಿ ಇಂಜಿನಿಯರಿಂಗ್ ಕಾಲೇಜನ್ನು ಸ್ಠಾಪಿಸಿದರು. ಎಂ.ಬಿ.ಏ ಕೋರ್ಸ್, ಪಾಲಿಟೆಕ್ನಿಕ್ ಹೊಸಪೇಟೆಯಲ್ಲಿ ಪ್ರೌಡರಾಯ ಇಂಜಿನಿಯರಿಂಗ್ ಕಾಲೇಜು ಪ್ರಾರಂಭವಾದವು.

ತಿಪ್ಪಣ್ಣ ಎಂಬ ಬಹುಮುಖಿ ವ್ಯಕ್ತಿತ್ವ

ಬದಲಾಯಿಸಿ

85*105px|thumb|right|ತಿಪ್ಪಣ್ಣನವರ ಸುವರ್ಣ ಮಹೋತ್ಸವದಲ್ಲಿ ತಿಪ್ಪಣ್ಣ ಮತ್ತು ಅವರ ಪತ್ನಿ ತಿಪ್ಪಣ್ಣನವರ ಕಾರ್ಯ ಕ್ಷೇತ್ರಗಳು ಹಲವಾರು ವಕೀಲ, ಶಿಕ್ಷಣ, ರಾಜಕೀಯ ಸಾಮಾಜಿಕ ಸಂಘ ಸಂಸ್ಥೆಗಳು ಇತ್ಯಾದಿ. ಆ ಕ್ಷೇತ್ರಗಳಲ್ಲಿ ಅವರ ಸಾಧನೆ ಅಪಾರ. ಅವರು ಸುಪ್ರಸಿದ್ಧ ವಕೀಲರು, ವಿದ್ಯಾಸಂಸ್ಥೆಯನ್ನು ಬೆಳಸಿ ಅದಕ್ಕೆ ಪ್ರತಿಷ್ಠಿತ ಸ್ಥಾನ ತಂದುಕೊಟ್ಟರು. ವಿಶ್ವವಿದ್ಯಾಲಯವೊಂದರ ಆತ್ಮ ಸಾಕ್ಷಿಯಾಗಿದರು. ತಿಪ್ಪಣ್ಣನವರಿನ ಸುವರ್ಣ ಮಹೋತ್ಸವ(೫೦) ಹಾಗೂ ೭೭ನೇ ಹುಟ್ಟು ಹಬ್ಬದ ಸಮಾರಂಭದಲ್ಲಿ ಗೆಳೆಯರು ಮತ್ತು ಹಿತೈಶಿಗಳ ಶುಭಹಾರೈಕೆಯೊಂದಿಗೆ ಸಮಾರಂಭ ಜರಗಿತ್ತು ಅದರಲ್ಲಿ ಡಾ. ಮಲ್ಲಿಕಾರ್ಜುನ್ ಮನ್ಸುರು, ಆರ್.ಸಿ. ಹಿರೇಮಠ್, ಡಾ. ಎಂ.ಎಂ ಕಲಬುರ್ಗಿ, ಜಸ್ಟೀಸ್ ಶ್ರೀಧರ್ ರಾವ್, ಜಸ್ಟೀಸ್ ಮಂಜುಳ ಚಲ್ಲುರ್, ದೇವೆ ಗೌಡ, ಎಂ. ಪಿ ಪ್ರಕಾಶ್, ಸಿಧ್ದಾರಾಮಯ್ಯ ಮುಂತಾದವರು ಬಂದಿದ್ದರು ಮತ್ತು ಅಮೃತ ಶ್ರೀ ಎನ್ನುವ ತಿಪ್ಪಣ್ಣನವರ ಅಭಿನಂದನ ಗ್ರಂಥ ಬಿಡುಗಡೆಯಾಯಿತು.

ಉಲ್ಲೇಕಗಳು

ಬದಲಾಯಿಸಿ

[] [] [] [] [] []

  1. http://mib.nic.in/fcat/
  2. http://www.thehindu.com/2004/11/22/stories/2004112208950400.htm
  3. http://www.thehindu.com/news/cities/bangalore/veerashaiva-mahasabha-backs-umesh/article8027453.ece
  4. http://www.thehindu.com/2005/09/23/stories/2005092309800400.htm
  5. ಅಮ್ರುತ ಶ್ರೀ
  6. ಸುಮನ