ಸದಸ್ಯ:Abel armaan khan/ನನ್ನ ಪ್ರಯೋಗಪುಟ/2
ಔಷಧೀಯ ಸಸ್ಯಶಾಸ್ತ್ರದ ಇತಿಹಾಸ
ಬದಲಾಯಿಸಿಔಷಧೀಯ ಸಸ್ಯಶಾಸ್ತ್ರವನ್ನು ಮೊದಲು ಕಂಡುಹಿಡಿದವರು ಹಿಪ್ಪೊಕ್ರಾಟ್ಸ್.ಶುಂಠಿ ಮತ್ತು ಇತರ ಸಸಿತೈಲಗಳನ್ನು ಬಳಸಿ ದೇಹತಾಪವನ್ನು ಬದಲಾಯಿಸಲಿಕ್ಕೆ ಬಳಸುತ್ತಿದ್ದರು.ಹಿಪ್ಪೊಕ್ರಾಟ್ಸ್ ನಂತರ ಹಲವಾರು ವಿಜ್ಞಾನಿಗಳು ಸಸ್ಯಗಳನ್ನು ಬಳಿಸಲು ಆರಂಭಿಸಿದರು.೧೭೭೫ರಲ್ಲಿ ಡಾಕ್ಟರ್ ವಿಲಿಯಮ್ ವಿಧರಿಂಗ್ ಹೃದಯಾಘಾತದಿಂದ ಬಳಲುತ್ತಿದ್ದ ರೋಗಿಯನ್ನು ಡಿಜಿಟಾಲಿಸ್ ಪುರ್ಪುರಿಯವೆಂಬ ಸಸಿಯ ಭಾಗಗಳನ್ನು ಬಳಸಿ ರೋಗ ನಿವಾರಿಸಿದರು.ಇವತ್ತಿಗೂ ಕೂಡ ಈ ಸೂತ್ರವನ್ನು ಬಳಸಲಾಗುತ್ತದೆ.೧೮೦೩ರಲ್ಲಿ ಮೊರ್‌ಫ಼ೀನ್ ಔಷಧವನ್ನು ಸಸಿಗಳಿಂದ ತಯಾರಿಸಲಾಯಿತು.ಅಬ್ದುಲ್ಲಾ ಬಿನ್ ಅಹಮದ್ ಬಿತಾರ್ ಎಂಬ ಅರಬಿ ಸಸ್ಯವಿಜ್ಞಾನಿ ಸಸ್ಯಗಳು ಮತ್ತು ಸಸ್ಯಗಳ ಔಷಧೀಯ ತತ್ವಗಳ ಬಗ್ಗೆ ಚಿಂತಿಸಿ ಹಲವಾರು ಸೊತ್ರಗಳನ್ನು ಬರೆದಿದ್ದಾರೆ.ಗಲೇನ್‍ಯಂಬ ಚಿಕಿತ್ಸಕ ದೇಹದ ದ್ರವಗಳನ್ನು ಕುರಿತು ಸಂಶೋಧನೆ ನೆಡೆಸುವಾಗ ಕೆಲವು ಸಸ್ಯಔಷಧಗಳನ್ನು ತಯಾರಿಸಿರುವುದನ್ನು ಔಷಧೀಯ ಇತಿಹಾಸದಲ್ಲಿ ಹೇಳಲಾಗಿದೆ. ಈಜಿಪ್ಟ್ ಮತ್ತು ಚೀನಾದ ದೇವಸ್ಥಾನಗಳಲ್ಲಿ,ದೇವಸ್ಥಾನದ ಗೋಡೆಗಳ ಮೇಲೆ ಹಲವಾರು ರೋಗನಿವಾರಕರು ಸಸ್ಯಗಳನ್ನು ಬಳಸುತ್ತಿರುವ ಚಿತ್ರಣಗಳನ್ನು ನೋಡಬಹುದು.
ಸಸ್ಯಗಳ ನಿವಾರಣಶಕ್ತಿ
ಬದಲಾಯಿಸಿಔಷಧೀಯ ಸಸ್ಯಶಾಸ್ತ್ರ,ಸಸ್ಯಶಾಸ್ತ್ರದ ಮುಖ್ಯ ಭಾಗವಾಗಿದೆ.ಔಷಧೀಯ ಸಸ್ಯಗಳನ್ನು ಮನೆಯಂಗಳದಲ್ಲಿ ಬೆಳೆಯುವುದನ್ನು ಸಹಜವಾಗಿ ನೋಡಬಹುದು.ನಮಗೆ ಕೆಲವೊಮ್ಮೆ ಔಷಧೀಯ ಸಸ್ಯಗಳ ಪ್ರಭಾವಗಳ ಬಗ್ಗೆ ತಿಳಿಯದೆಯಿರುವುದು ಕೂಡ ಸಹಜ.ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು ಎಂಬಂತಿರುವ ಈ ಸಸ್ಯಗಳು ನಮ್ಮೆಲ್ಲಾ ರೋಗಗಳಿಗೆ ಸಿದ್ಧೌಷಧವಾಗಿರುತ್ತವೆ.ನಮ್ಮ ಪೂರ್ವಜರು ಗಾಯ ಗುಣವಾಗುವುದಕ್ಕೆ ಇಂತಹ ಸಸ್ಯಗಳನ್ನು ಬಳಸುತ್ತಿದ್ದರೆಂದು ಸಸ್ಯವಿಜ್ಞಾನಿಗಳು ಹೇಳುತ್ತಾರೆ.ಸಸ್ಯಗಳಲ್ಲಿ ಎಲೆ,ದಂಟು,ಬೇರುಗಳನ್ನು ಉಪಯೋಗಿಸಬಹುದು.ಆಯುರ್ವೇದವನ್ನು ಸಂರಕ್ಷಿಸುವದಕ್ಕೆ ಔಷಧೀಯ ಸಸ್ಯಶಾಸ್ತ್ರವನ್ನು ತಿಳಿಯುವುದು ಮತ್ತು ಅಭ್ಯಾಸ ಮಾಡುವುದು ಬಹಳ ಮುಖ್ಯ.ಇನ್ನು ಭಾರತದ ಹಲವಾರು ಹಳ್ಳಿಜನರು ತಮ್ಮ ಆರೋಗ್ಯದ ಪ್ರಾಥಮಿಕ ಹಾರೈಕೆಗಾಗಿ ಸ್ಥಳೀಯ ಹಾಗು ಸಾಂಪ್ರದಾಯಿಕ ಮೂಲಪದ್ಧತಿಗಳನ್ನೆ ಉಪಯೋಗಿಸುತ್ತಾರೆ.ಈ ಸಾಂಪ್ರದಾಯಕ ಪದ್ಧತಿಗಳಲ್ಲಿ ಬಳಿಸುವ ಹಲವಾರು ಸಸ್ಯಗಳಲ್ಲಿ ರೋಗಗಳನ್ನು ಗುಣಪಡಿಸುವ ರಾಸಾಯನಿಕ ಗಟಕಗಳು ಕಂಡುಬಂದಿದ್ದು ಅನೇಕರಿಗೆ ಪ್ರಕೃತಿ ಮಾತೆಯ ಆಶೀರ್ವಾದವೇ ಆಗಿದೆ.ಭಾರತದಲ್ಲಿ ೮೦೦೦ಕ್ಕಿಂತ ಹೆಚ್ಚು ಔಷಧೀಯ ಸಸ್ಯಗಳ ವಿಧಗಳನ್ನು ನಾವು ಗುರಿತಿಸಬಹುದು.ಮಾತ್ರೆಗಳನ್ನು ಸೇವಿಸುತ್ತಾ ಜೀವನ ನೆಡೆಸುತ್ತಿರುವರು ಔಷಧೀಯ ಸಸ್ಯಗಳನ್ನು ಸೇವಿಸಿ ಆರೋಗ್ಯಕರ ಜೀವನವನ್ನು ಯಾವುದೆ ಅಡ್ಡ ಪರಿಣಾಮಗಳು ಇಲ್ಲದ್ದಂತೆ ಸುಖವಾಗಿ ನೆಡೆಸುತ್ತಿದ್ದಾರೆ.ಭಾರತದ ಇತಿಹಾಸದಲ್ಲಿ ನಾವು ಸಂಜೀವಿನಿಯಂಬ ಔಷಧೀಯ ಸಸ್ಯದ ಬಗ್ಗೆ ಕೇಳಬಹುದು. ಭಾರತದಲ್ಲಿ ಸುಮಾರು ೪೬೦೦ ಬುಡಕಟ್ಟು ಜನಾಂಗದವರು ಸುಮಾರು ೭೫೦೦ ಸಸ್ಯಗಳನ್ನು ಮನುಷ್ಯರ ಹಾಗು ಪ್ರಾಣಿಗಳ ಚಿಕಿತ್ಸಾಮೂಲಕಗಳಾಗಿ ಬಳಸುತ್ತಿದಾರೆ.ಕೆಲವು ಸಾಮಾನ್ಯ ಔಷಧೀಯ ಸಸ್ಯಗಳ ಬಗ್ಗೆ ವಿವರಣೆ ನೀಡಬೇಕೆಂದರೆ ಮೊದಲನೆಯದಾಗಿ ಟಿಬೇಟ್‌ನಲ್ಲಿ ಔಷಧೀಗಳ ರಾಜಯಂದು ಕರೆಯುಲ್ಪಡುವ ಅಳಲೆ ಕಾಯಿ,ಇದರಲ್ಲಿರುವ ಔಷಧೀಯ ಗುಣಗಳ ಬಗ್ಗೆ ಭಾರತದ ಇತಿಹಾಸದಲ್ಲು ಒಳ್ಳೆಯ ಸ್ಥಾನವಿದೆ.ಇದನ್ನು ಸರ್ವ ರೋಗ ನಿವಾರಣಿಯಂದು ಕರೆಯುತ್ತಾರೆ.ಹೃದಯದ ಆರೋಗ್ಯಕ್ಕೆ ಪೂರಕವಾದ ಅಂಶಗಳು ಇದರಲ್ಲಿ ಕಂಡುಬಂದಿದೆ.ಅಗ್ರಸ್ಥಾನ ಹೊಂದಿರುವ ಮತ್ತೊಂದು ಸಸ್ಯವೇ ನೆಲ್ಲಿ.ನೆಲ್ಲಿಯನ್ನು ಭಾರತದ ಹಾಗು ಯುನಾನಿ ಚಿಕಿತ್ಸೆಯಲ್ಲಿ ಬಳಸುತ್ತಾರೆ.ದೇಹದ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ರಾಮಬಾನದಂತೆ ನೆಲ್ಲಿಯು ಕೆಲಸ ಮಾಡುತ್ತದೆ.ನೆಲ್ಲಿಯಲ್ಲಿ ವಿಷ್ಣುದೇವರು ವಾಸಿಸುತ್ತಾರೆಂದು ನಂಬಲಾಗುತ್ತದೆ,ಆದುದರಿಂದ ಇದನ್ನು ಪೂಜಿಸುತ್ತಾರೆ.ಮರದ ಬೀಜ,ಬೇರು,ಹೂವು,ತೊಗಟೆಗಳನ್ನು ಉಪಯೋಗಿಸುತ್ತಾರೆ.ಚಮನಪ್ರಾಶದಲ್ಲಿ ಕೊಡ ಬಳಸಲಾಗುತ್ತದೆ.ತಾರೆಯಲ್ಲಿ ಶ್ವಾಸಕೋಶ,ಕಣ್ಣು,ಧ್ವನಿ,ಗಂಟಲು ಹಾಗು ಕೊದಲಿನ ಆರೋಗ್ಯಕ್ಕೆ ಹೆಚ್ಚು ಸಹಕಾರಿಯಾಗಿದೆ.ಆಯುರ್ವೇದದ ತ್ರಿಪಲಚೂರ್ಣದ ಗಟಕಾಂಶಗಳಲ್ಲಿ ತಾರೆಯು ಒಂದು.೪೫೦೦ ವರ್ಷಗಳ ಹಿಂದೆಯೇ ಬೇವನ್ನು ಔಷಧೀಯಾಗಿ ಉಪಯೋಗಿಸಿರುವುದನ್ನು ನಾವು ಕಾಣಬಹುದು.ಹರಪ್ಪನ ಕಾಲದಲ್ಲಿ ಕೊಡ ಬೇವನ್ನು ಬಳಸುತ್ತಿದ್ದರು.ಪುರಾಣಗಲಲ್ಲಿ ಶೇಕಡ ೧೦೦ ಉಲ್ಲೇಖಗಳಿವೆಯಂದು ಹೇಳಲಾಗುತ್ತದೆ.ಬೇವಿನ ಹಣ್ಣು,ಎಲೆ,ಬೇರು,ಎಣ್ಣೆ,ಬೀಜಗಳನ್ನು ಭಾರತೀಯ ವೈಧ್ಯಪ್ರಕಾರಗಳಲ್ಲಿ ಉಪಯೋಗಿಸುತ್ತಾರೆ.ಸಾಬುನುಗಳನ್ನು ತಯಾರುಮಾಡಬೇಕಾದರೆ ಬೇವು ಮುಖ್ಯವಾದ ಸಸ್ಯವಾಗಿದೆ.ರೋಗಾಣುಗಳನ್ನು ನಾಶಪಡಿಸುವ ಗುಣಗಳನ್ನು ಹೊಂದಿದೆ.ಅಶೋಕ ವೃಕ್ಷವನ್ನು ಅದರ ಸೌಂದರ್ಯಕ್ಕಗಿ ಹಲವಾರು ಪ್ರದೇಶಗಳಲ್ಲಿ,ಪ್ರಸಿದ್ಧ ಉದ್ಯಾನಗಳಲ್ಲಿ ಹಾಗು ಅರಮನೆಗಳಲ್ಲಿ ನೋಡಬಹುದು.ಸ್ತ್ರೀಸಂಭಂದಿತ ರಕ್ತಸ್ರಾವವನ್ನು ತಡೆಯಲು ಇದನ್ನು ಬಳಸುತ್ತರೆ.ತುಂಬೆಯನ್ನು ಕೆಮ್ಮು,ಕಫಾ ಹಾಗು ಶೀತಗಳನ್ನು ಹೋಗಳಾಡಿಸುವ ಶಕ್ತೀವಿರುವುದನ್ನು ನಾವು ಕಾಣಬಹೋಹುದು.ದಾಸವಾಳದ ಬೇರುಗಳನ್ನು ಕೆಮ್ಮು,ಕೂದಲು ಉದರುವಿಕೆ,ಕೂದಲು ಬೆಳ್ಳಗಾಗುವುದು ಹಾಗು ಮುಂತಾದ ಹಲವಾರು ಸಮಸ್ಯೆಗಳಿಗೆ ಚಿಕಿತ್ಸೆಯಾಗಿ ಬಳಸುತ್ತಾರೆ.ಕೇಶಮರ್ದನಗಳಲ್ಲಿ ದಾಸವಾಳವನ್ನು ಹೆಚ್ಚಾಗಿ ಬಳಸುತ್ತಾರೆ.ಅಮೃತಬಳ್ಳಿಯನ್ನು ರಸಾಯನ ಸಸ್ಯವೆಂದು ವರ್ಗಿಕರಿಸಲಾಗಿದೆ.ಆಯುಷ್ಯವೃದ್ಧಿಗಾಗಿ ಅಮೃತಬಳ್ಳಿಯ ಎಲೆಗಳನ್ನು ಸೇವಿಸುತ್ತಾರೆ.ರಕ್ತಹೀನತೆ,ಅತಿಸಾರ ಬೇದಿ,ಹುಣ್ಣು ರೋಗಗಳನ್ನು ನಿವಾರಿಸುವ ಸಾಮರ್ಥ್ಯವನ್ನು ಅಮೃತಬಳ್ಳಿ ಹೊಂದಿದೆ.ಸ್ವರ್ಗದಿಂದ ಇಳಿದುಬಂದಿರುವ ದೇವಬಳ್ಳಿಯಂದು ಕರೆಯುತ್ತಾರೆ.ತುಳಸಿಯಲ್ಲಿ ಹಲವು ವಿಧಗಳಿದ್ದರು,ಕೃಷ್ಣ ತುಳಸಿ ಹಾಗು ಶ್ರೀತುಳಸಿ ಸಾಮನ್ಯವಾಗಿ ಕಾಣುವಂತಹ ತುಳಸಿಗಿಡಗಳಾಗಿವೆ.ಮಲೇರಿಯಾದಿಂದ ಬಳಲುವ ಬಸಿರಾದ ಹೆಂಗಸರಿಗೆ ತುಳಸಿಯನ್ನು ನೀಡುತ್ತಾರೆ.ಲೋಳೆಸರವನ್ನು ಉಪಶಮನಕ್ಕೆ ಹಾಗು ಶಾರರಿಕ ಸಂಬಂಧಿತ ಹಲವಾರು ರೋಗಗಳ ನಿವಾರಣೆಗಾಗಿ ಬಳಸುತ್ತಾರೆ. ಶತಾವರಿಯನ್ನು ನರರೋಗಗಳ ಚಿಕಿತ್ಸೆಗಳಲ್ಲಿ ಉಪಯೋಗಿಸುತಾರೆ.ಮಧುನಾಶಿನಿಯನ್ನು ಮಧುಮೇಹದ ಚಿಕಿತ್ಸೆಗಾಗಿ ಉಪಯೋಗಿಸುತ್ತಾರೆ.ಪುದಿನವನ್ನು ಗಂಟಲು ಕೆರೆತ,ಕೆಮ್ಮು,ನೆಗಡಿ,ತಲೆನೋವು ಹಾಗು ಅಡುಗೆಗಳಲ್ಲಿ ಸುವಾಸನೆಯನ್ನು ಕೊಡುವುದಕ್ಕೆ ಬಳಸುತ್ತಾರೆ.
ಸಾಮಾಜಿಕ ಪ್ರಾಮುಖ್ಯತೆ
ಬದಲಾಯಿಸಿಔಷಧೀಯ ಸಸ್ಯಶಾಸ್ತ್ರದಿಂದಾಗಿ ಆಸ್ಪತ್ರೆಯ ಖರ್ಚು ನೀಡವುದಕ್ಕೆ ಸಾಧ್ಯವಾಗದವೆರೆಲ್ಲಾ ತಮ್ಮ ರೋಗಗಳನ್ನು ಗುನಪಡಿಸಬಹುದೆಂದು ಭಾವಿಸಿ ಈ ಸಸ್ಯಗಳನ್ನೇ ತಮ್ಮ ಜೇವನದ ಆಶಾಕಿರಣದಂತೆ ರೂಢಿಸಿಕೊಂಡಿದ್ದಾರೆಯಂದು ಹೇಳಬಹುದು.ಮನೆಯಲ್ಲಿಯೇ ಹಲವಾರು ಸಸ್ಯಗಳನ್ನು ಬೆಳಸಬಹುದು.ಸಸ್ಯಗಳ ಬಳಿಕೆಗಾಗಿ ಹಲವಾರು ಔಷಧೀಯ ಸಸ್ಯಶಾಸ್ತ್ರದ ಪುಸ್ತಕಗಳನ್ನು ಅನ್ವಯಿಸಬಹುದು.ಸಸ್ಯಗಳು ಸಹಜವಾಗಿ ಎಲ್ಲಾ ಕಡೆಯೂ ಬೆಳೆಯುತ್ತವೆ.ಇವುಗಳನ್ನು ಬಳಸಿ ಹಲವಾರು ರೋಗಗಳನ್ನು ತಡೆಯಬಹುದು.ಕಾಯಿಲೆಯನ್ನು ಪತ್ತೆಹಚ್ಚಿದ ತಕ್ಷಣವೇ ಸಸ್ಯಗಳನ್ನು ಬಳಸಿ ರೋಗಗಳನ್ನು ನಿವಾರಿಸಬಹುದು.ಉದ್ಯೋಗ ಅವಕಾಶಗಳು ಹೆಚ್ಚುತ್ತವೆ.ದೇಶದ ಆರ್ಥಿಕಸ್ಥಿತಿಯಲ್ಲಿ ಹಣದುಬ್ಬರವನ್ನು ಕಾಣಬಹುದು.