Aaditya Bhavikatti
ಆದಿತ್ಯ ಭಾವಿಕಟ್ಟಿ ಆದ ನಾನು, ಭಾರತದ ಪಶ್ಚಿಮ ಭಾಗದ ಒಂದು ರಾಜ್ಯವಾದ ಮಹಾರಾಷ್ಟ್ರದ ಮುಂಬೈನಲ್ಲಿ ಕೆಲಸ ಮಾಡುತ್ತಿರುವ ಒಬ್ಬ ವಕೀಲ. ನಾನು ಕರ್ನಾಟಕದ ಬೆಂಗಳೂರುನಲ್ಲಿ ಹುಟ್ಟಿದ ಒಬ್ಬ ಕನ್ನಡದ ಹುಡುಗ. ಕೆಲಸದ ಮೇರೆಗೆ ನವೀ ಮುಂಬೈಗೆ ಬಂದ ನಾನು, ಈಗ ಅಲ್ಲಿಯೇ ನೆಲೆಸಿರುವೆನು. ನನ್ನ ವೃತ್ತಿಗೆ ಅನುಗುಣವಾಗಿ ನನ್ನ ಹವ್ಯಾಸಗಳು ಇವೆ. ನನಗೆ ಐತಿಹಾಸಿಕ ತಾಣಗಳಿಗೆ ಹೋಗುವುದು ಅಲ್ಲಿನ ಜಾಗಗಳು , ಅಲ್ಲಿನ ಪರಿಸರ ಮತ್ತು ಅಲ್ಲಿನ ಐತಿಹಾಸಿಕ ಕಥೆಗಳನ್ನು ತಿಳಿಯುವುದೆಂದರೆ ಎಲ್ಲಿಲ್ಲದ ಆಸಕ್ತಿ. ಭವಿಷ್ಯದ ಬಗ್ಗೆ ನಮ್ಮ ಗಮನ ಮತ್ತು ಆಸಕ್ತಿ ಎಷ್ಟಿದೆಯೋ ಅಷ್ಟೇ ಆಸಕ್ತಿ ನಮ್ಮ ಚರಿತ್ರೆಗೂ ಕೊಡಬೇಕೆನ್ನುವುದು ನನ್ನ ಅನಿಸಿಕೆ. ಚರಿತ್ರೆಯನ್ನು ತಿಳಿಯದೆ ಒಂದು ಜಾಗದ ಅಥವಾ ಒಂದು ವಸ್ತುವಿನ ಬೆಲೆಯನ್ನು ನಿರ್ಧರಮಾಡುವುದು ಹೇಗೆ ಕಷ್ಟವೋ ಹಾಗೆ ನಮ್ಮ ಭವಿಷ್ಯವನ್ನು ನಮ್ಮ ನಾಡಿನ ಚರಿತ್ರೆಗಳು ಸಾರಿ ಹೇಳುತ್ತವೆ. ತಿಳಿದವರು ಹೇಳುವ "ಹಿಸ್ಟರೀ ರಿಪೀಟ್ಸ್ ಇಟ್ಸೆಲ್ಫ್" ಒಂದು ಇಂಗ್ಲೀಶ್ ನಣ್ಣುಡಿಯ ಹಾಗೆ ಚರಿತ್ರೆ ನಮ್ಮ ಇಂದಿನ ಒಂದು ಪ್ರಮುಖ ಅಂಶ.
ಈ ಐತಿಹಾಸಿಕ ತಾಣಗಳು ನಮ್ಮ ನಾಡು ನುಡಿಗಳ ತವರೂರು ಮತ್ತು ಅವುಗಳನ್ನು ತನ್ನ ಮಡಿಲಿನಲ್ಲಿ ಅವಿತಿಟ್ಟುಕೊಂಡಿರಿವ ಜಾಗಗಳು ಅವುಗಳನ್ನು ಭೇಟಿಮಾಡಿ ಅವುಗಳ ಬಗ್ಗೆ ತಿಳಿದಷ್ಟು ನಮ್ಮ ಜೀವನದ ಬೇರುಗಳನ್ನು ನಾವು ಅರಿಯುತ್ತೇವೆ. ಹಾಗಾಗಿ ಐತಿಹಾಸಿಕ ಜಾಗಗಳ ಭೇಟಿ ನನ್ನ ಪ್ರಮುಖ ಹವ್ಯಾಸವಾಗಿದೆ.
ಐತಿಹಾಸಿಕ ಜಾಗಗಳಲ್ಲದೆ ನಮ್ಮ ಸಂಸ್ಕೃತಿ ಕಲೆಗಳನ್ನು ಪರಿಚಯಿಸುವ ಮತ್ತೊಂದು ಆಚರಣೆಯೆಂದರೆ ನಮ್ಮ ಹಬ್ಬ ಹರಿದಿನಗಳು. ಒಂದು ಸ್ಥಳದ ಮಹತ್ವ ಅಲ್ಲಿನ ಸಂಸ್ಕೃತಿಯನ್ನು ಅರಿಯಲು ಅಲ್ಲಿನ ಜನರು ಆಚರಿಸುವ ಹಬ್ಬಗಳು ಮಹತ್ತರ ವಿಷಯಗಳನ್ನು ನೀಡುತ್ತದೆ. ಮತ್ತು ಹಬ್ಬಗಳು ಮುಂದಿನ ಪೀಳಿಗೆಗೆ ಆ ಸ್ಥಳದ ಮಹತ್ವ ಮತ್ತು ಅಲ್ಲಿನ ಚರಿತ್ರೆಯನ್ನು ತಿಳಿಸಿಕೊಡುವಲ್ಲಿ ಎತ್ತಿದ ಕೈ. ನನಗೆ ಜನರು ಆಚರಿಸುವ ವಿವಿಧ ರೀತಿಯಹಬ್ಬಗಳು ಮತ್ತು ಆಚರಣೆಗಳು ಬಹಳ ಆಸಕ್ತಿ ಮೂಡಿಸುತ್ತದೆ. ಜನರನ್ನು ತಿಳಿದುಕೊಳ್ಳಲು ಅವರ ಜೀವನಶೈಲಿ ಅರ್ಥಮಾಡಿಕೊಳ್ಳಲು ಅವರು ಮಾಡುವ ಹಬ್ಬಗಳ ಆಚರಣೆಗಿಂತ ಮತ್ತೊಂದು ಶಿಕ್ಷಕ ಸಿಗಲಾರದು.
ಇಷ್ಟಲ್ಲದೆ ನನ್ನ ಹವ್ಯಾಸಗಳಪಟ್ಟಿ ಇಲ್ಲೆ ನಿಲ್ಲುವುದಿಲ್ಲ ನಾನು ಊಟದ ಪ್ರೇಮಿ . ನನಗೆ ರುಚಿಕಟ್ಟಾದ ಬಗೆ ಬಗೆಯ ತಿನಿಸು ತಿಂಡಿಗಳನ್ನು ಸವಿಯಲು ಬಹಳ ಆಸೆ. ಮತ್ತು ನಾನು ನನಗೆ ಆದಾಗಲೆಲ್ಲ ಬೇರೆ ಬೇರೆ ರೀತಿಯ ತಿಂಡಿ ತಿನಿಸುಗಳ ರುಚಿ ನೋಡುತ್ತಿರುತ್ತೇನೆ. ಮತ್ತು ನಾನು ಹೋಗುವ ಜಾಗಗಳಲ್ಲಿ ಮತ್ತು ನಾನು ಪಾಲ್ಗೊಳ್ಳುವ ಹಬ್ಬಗಳಲ್ಲಿ ವಿವಿಧ ರೀತಿಯ ತಿನಿಸುಗಳನ್ನು ಸವಿಯತ್ತೇನೆ. ಇದು ನನ್ನ ನಾಲಿಗೆಯ ರುಚಿಯನ್ನಷ್ಟೆ ಅಲ್ಲದೆ ಆ ಸ್ಥಳದ ಮತ್ತು ಹಬ್ಬದ ವಿಶೇಷತೆಗಳನ್ನು ಹೇಳುತ್ತದೆ.
ನಾನು ಒಬ್ಬ ಪ್ರಕೃತಿ ಪ್ರೇಮಿ . ಸ್ವಚಂದವಾಗಿ ಸೊಂಪಾಗಿಇರುವ ಮತ್ತು ಸುಂದರ ಸುಮನೋಹರವಾಗಿಯೂ ಇರುವ ನಮ್ಮ ನಿಸರ್ಗವನ್ನು ಅನುಭವಿಸಲು ಸದಾ ಸಿದ್ಧನಿರುತ್ತೇನೆ. ನಿಸರ್ಗಕ್ಕೂ ನಮಗೂ ಅವಿನಾಭಾವ ಸಂಬಂದವಿದ್ದಂತೆ ನನಗೂ ಅದರ ಮೇಲಿನ ಆಸಕ್ತಿಅಷ್ಟೇ ಅವಿನಾಭವಾದದ್ದು. ಅದು ಕೊಡುವ ಮುದವನ್ನು ಪದಗಳಲ್ಲಿ ವರ್ಣಿಸುವಿದು ಕಷ್ಟಾಸಾಧ್ಯ.
ಅಂತೆಯೇ ಇಷ್ಟೆಲ್ಲದರ ಜೊತೆಗೆ ಇಂದಿನ ವೇಗದ ಜಗತ್ತಿನ ಒಂದು ಪ್ರಮುಖ ಅಂಶವಾದ ಇಂಟರ್ನೆಟ್ ನಲ್ಲಿ ವಿಷಯ ಕಲೆಹಾಕುವ ಮತ್ತು ಅಂತರಜಾಲ ತಾಣಗಳನ್ನು ವೀಕ್ಷಿಸುವುದೆಂದರೆ (ಬ್ರೌಸಿಂಗ್) ನನಗೆ ಬಹಳ ಇಷ್ಟ. ಇದ್ದಲ್ಲಿಯೇ ಜಗತ್ತನು ಸುತ್ತಿಬರಬಹುದು ಮತ್ತು ನಮ್ಮ ಜ್ಞಾರ್ಜನೆಗೆ ಬಹಳ ಮುಕ್ಯವಾದದ್ದು.
ಇಷ್ಟೆಲ್ಳವುಗಳನ್ನು ನಾನೊಬ್ಬನೇ ತಿಳಿದುಕೊಳ್ಳುವುದು ಸರಿ ಅಲ್ಲ ಆದ್ದರಿಂದ ಮತ್ತೊಬ್ಬರಿಗೆ ಉಪ್ಯುಕ್ತವು ಹಾಗೂ ವಿಷಯಸೂಚಿಯಾಗಿಯೂ ಇರಬೇಕೆಂದು ನಾನು ನನ್ನ ಬ್ಲೋಗ್ ನಲ್ಲಿ ನನ್ನ ಅನುಭವ ಮತ್ತು ಅನಿಸಿಕೆಗಳನ್ನು ಹಂಚಿಕೊಳ್ಳಲೀಚ್ಚಿಸುತ್ತೇನೆ .