ಬೇಬಲ್ ಬಳಕೆದಾರರ ಮಾಹಿತಿ
kn-N ಈ ಬಳಕೆದಾರರಿಗೆ ಕನ್ನಡ ಭಾಷೆ ಬಗ್ಗೆ ಮೂಲಭಾಷಿಕರ ಜ್ಞಾನವಿದೆ
ml-3 ഈ ഉപയോക്താവിനു മലയാളഭാഷയിൽ ഉന്നതജ്ഞാനം ഉണ്ട്.
en-2 This user has intermediate knowledge of English.
tcy-1 ಈ ಬಳಕೆದಾರೆರ್ಗ್ ತುಳುತ ಬಗ್ಗೆ ಪ್ರಾಥಮಿಕ ಜ್ನಾನ ಉಂಡು.
ಭಾಷೆಯ ಬಳಕೆದಾರರು

ನಮಸ್ತೆ, ಇಂದಿನ ಡಿಜಿಟಲ್‌ ದಿನಗಳಲ್ಲಿ ಕನ್ನಡ ಉಳಿಯಬೇಕಾದರೆ ಕನ್ನಡವು ಕ್ಷಿಪ್ರಗತಿಯಲ್ಲಿ ಸಂಪೂರ್ಣ ಡಿಜಿಟಲೀಕರಣಕ್ಕೆ ಹೊಂದಿಕೊಳ್ಳಬೇಕು. ಕನ್ನಡ ವಿಕಿಪೀಡಿಯವು ಕನ್ನಡದ ಡಿಜಿಟಲೀಕರಣಕ್ಕೆ ತುಂಬಾ ದೊಡ್ಡ ದೇಣಿಗೆ ನೀಡಬಹುದು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ನಾನು ಮೂಲತಃ ಕಾಸರಗೋಡಿನ ಗಡಿನಾಡ ಕನ್ನಡಿಗ. ಆದ್ದರಿಂದ ನನಗೆ ಹಲವಾರು ಕ್ಷೇತ್ರಗಳಲ್ಲಿ ಕೇರಳ ಮತ್ತು‌ ಕರ್ನಾಟಕದ ನಡುವಿನ ವ್ಯತ್ಯಾಸಗಳನ್ನು ಗಮನಿಸುವ ಅವಕಾಶ ಲಭಿಸಿದೆ.ಕರ್ನಾಟಕಕ್ಕೆ ಹೋಲಿಸಿದಾಗ ಕೇರಳದಲ್ಲಿ ಭಾಷಾಪರವಾದ ಸಂಘಟನೆಗಳು ಇಲ್ಲವೆಂದೇ ಹೇಳುವುದು ಉಚಿತ. ಆದರೆ ಕರ್ನಾಟಕದಲ್ಲಿ ಆರು ಕೋಟಿ ಕನ್ನಡಿಗರನ್ನು ಹೊಂದಿದ ಕನ್ನಡ ಭಾಷೆಗಿಂತ ಕೇರಳದ ಮೂರು ಕೋಟಿ ಮಲೆಯಾಳಿಗಳಿರುವ ಮಲೆಯಾಳಂ ಭಾಷೆಯ ಅಸ್ತಿತ್ವ ಧೃಡವಾಗಿದೆ. ಉದಾಹರಣೆಗೆ ನಮ್ಮ ಕನ್ನಡ ವಿಕಿಪೀಡಿಯದಲ್ಲಿರುವುದು ೨೫೦೦೦+ ಲೇಖನಗಳು. ಆದರೆ ಮಲೆಯಾಳಂ ಭಾಷೆಯಲ್ಲಿ ೬೭೦೦೦+ ಲೇಖನಗಳಿವೆ. ಪ್ರಸ್ತುತ ನಾನು ವಿಕಿಪೀಡಿಯ ಸಮುದಾಯದಲ್ಲಿ ಸಣ್ಣಮಟ್ಟದ ಅನುವಾದಕನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಇಂಗ್ಲಿಷ್ ಮತ್ತು ಮಲೆಯಾಳಂ ಭಾಷೆಯಿಂದ ಕನ್ನಡ ಅನುವಾದ ಮಾಡುವುದರಲ್ಲಿ ಕೇಂದ್ರೀಕರಿಸಿದ್ದೇನೆ.