ನಮಸ್ಕಾರಗಳು,


this is my picture

ನನ್ನ ಹೆಸರು  ದಿವ್ಯಾ. ನಾನು ಹುಟ್ಟಿದ್ದು ೨೫.೦೩.೨೦೦೧ರಂದು ಮಾಲೂರು  ತಾಲ್ಲೂಕಿನ  ಕೊಂಡಶಟ್ಟನಹಳ್ಳಿಯಲ್ಲಿ , ಆದರೆ  ಬೆಳೆದಿದ್ದೆಲ್ಲ ಬೆಂಗಳೂರಿನಲ್ಲಿಯೇ. ನಾನು ಚಿಕ್ಕವಳಿದ್ದಾಗ ತುಂಬಾ  ಆಟವಾಡುತ್ತಿದ್ದೆ. ತಿಂಡಿ-ತಿನಿಸು ಎಂದರೆ ನನಗೆ ತುಂಬಾ ಅಚ್ಚು-ಮೆಚ್ಚು . ಆದ್ದರಿಂದ ನನ್ನ ಅಜ್ಜ-ಅಜ್ಜಿ ಯಾವಾಗ ಊರಿನಿಂದ ಬಂದರು ಸಹ ನನಗೆ ತಿಂಡಿಯನ್ನು ತೆಗೆದುಕೊಂಡು ಬರುತ್ತಿದ್ದರು.

ಕುಟುಂಬ

ಬದಲಾಯಿಸಿ

ನನ್ನ ತಂದೆ ನಾಗರಾಜ್ ಮತ್ತು ತಾಯಿ  ಶಶಿಕಲಾ. ನನ್ನ ತಂದೆ ವ್ಯಾಪಾರ ಮಾಡುತ್ತಿದ್ದಾರೆ ಹಾಗು ನನ್ನ ತಾಯಿ ಗೃಹಿಣಿಯಾಗಿದ್ದಾರೆ. ನನಗೆ ಒಬ್ಬ ಅಕ್ಕ ಇದ್ದಾಳೆ. ಅವಳ ಹೆಸರು ಅರ್ಚನಾ. ಅವಳು ಬಿ.ಕಾಂ ಮಾಡುತ್ತಿದ್ದಾಳೆ. ನಾವಿಬ್ಬರು ಬಹಳ ಜಗಳ ಮಾಡುತ್ತೇವೆ. ನನ್ನ ತಾಯಿಯ ಅಡುಗೆ ಬಹಳ ರುಚಿಯಾಗಿರುತ್ತದೆ.

ಶಿಕ್ಷಣ

ಬದಲಾಯಿಸಿ

ನನ್ನನ್ನು ಕನ್ನಡ ಜ್ಯೋತಿ ಶಾಲೆಗೆ ಸೇರಿಸಿದರು .ಅಲ್ಲಿ ನಾನು ಎಲ್. ಕೆ. ಜಿ ಯಿಂದ ೧೦ನೇ ತರಗತಿಯವರೆಗು ಓದಿ ಮುಗಿಸಿದೆ. ಶಾಲೆಯಲ್ಲಿ ನಾನು ಹಲವು ಕ್ರೀಡೆ ಮತ್ತು ಡ್ಯಾನ್ಸ್ ಪ್ರೋಗ್ರಾಮ್ ಗಳಲ್ಲಿ ನನ್ನನ್ನು ನಾನೇ ತೊಡಗಿಸಿಕೊಂಡಿದ್ದೆ, ಹಲವರು ಶಾಲೆಯಲ್ಲಿ ನನ್ನ ಸ್ನೇಹಿತರಾಗಿದ್ದರು. ಶಾಲೆಯಲ್ಲಿ ಗುರುಗಳು ನನ್ನನ್ನು 'ಪಿಂಕಿ-ಪಿಂಕಿ' ಎಂದು ಕರೆಯುತ್ತಿದ್ದರು.ನನಗೆ ಹಿಂದಿ ಮತ್ತು ಸಮಾಜ-ವಿಜ್ಞಾನ ಎಂದರೆ ಬಹಳ ಇಷ್ಟ.ಆದರೆ ಕನ್ನಡ, ಶಾಲೆಯಿಂದಲೂ ಸಹ ಓದಲು ಮತ್ತು ಬರೆಯಲು ಕೊಂಚ ಕಷ್ಟವಾಗಿತ್ತು. ನಾನು ಹತ್ತನೇ ತರಗತಿ ಪರೀಕ್ಷೆಯನ್ನು ಬರೆದು ಮುಗಿಸಿದೆ. ಫಲಿತಾಂಶ ಬಂದಾಗ, ನಾನು ೮೦% ತೆಗೆದಿದ್ದೆ ಎಂದು ಎಲ್ಲರಿಗೂ ನಮ್ಮ ಅಮ್ಮ ಬಾದುಶವನ್ನು ಮಾಡಿ ಹಂಚಿದ್ದರು. ನಂತರ ಕಾಲೇಜಿನಲ್ಲಿ ಯಾವ ಕೋರ್ಸ್ ತೆಗೆದುಕೊಳ್ಳಬೇಕು ಎಂಬುದು, ಒಂದು ದೊಡ್ಡ ತಲೆನೋವಾಗಿತ್ತು. ಹಲವರು ವಿಜ್ಞಾನ  ತೆಗೆದುಕೋ ಮತ್ತು ಇನ್ನಷ್ಟು ಜನ ವಾಣಿಜ್ಯ ತೆಗೆದುಕೋ ಎಂದರು. ಹಲವು ಕಾಲೇಜಿಗೆ ಅರ್ಜಿಯನ್ನು ಸಲ್ಲಿಸಿದೆವು. ನಂತರ ಎನ್.ಎಂ.ಕೆ.ಅರ್.ವಿ ಪಿಯು ಕಾಲೇಜಿನಲ್ಲಿ ಸೇರಿದೆ.ಎಲ್ಲಾ ಶಿಕ್ಷಕರು ನನಗೆ ಅಚ್ಚು-ಮೆಚ್ಚು, ಅವರು ನಮ್ಮ  ಸ್ನೇಹಿತರಂತೆ ಇದ್ದರು.ನನಗೆ ಗಣಿತ ಶಿಕ್ಷಕಿ ಆಗಲು ತುಂಬ ಇಷ್ಟ ,ಆದ್ದರಿಂದ ನಾನು ಕ್ರೈಸ್ಟ್ ಕಾಲೇಜಿನಲ್ಲಿ ಈಗ ಬಿ.ಎಸ್.ಸಿ (ಪಿ.ಸಿ.ಎಂ) ಕೋರ್ಸ್ ಮಾಡುತ್ತಿದ್ದೇನೆ .

ಹವ್ಯಾಸಗಳು

ಬದಲಾಯಿಸಿ

ನನಗೆ ಸಣ್ಣ ಕಥೆಗಳನ್ನು ಓದಳು ಬಹಳ ಇಷ್ಟ. ನಾನು ಕರಕಲೆಗಳನ್ನು ಮಾಡುತ್ತೇನೆ.ನನಗೆ ಹಾಡುಗಳನ್ನು ಕೇಳಲು ಹಾಗು ನೃತ್ಯಗಳನ್ನು ನೋಡಲು ಇಷ್ಟ.

ಧನ್ಯವಾದಗಳು.