ನನ್ನ ಹೆಸರು ಸುಹಾಸ್ ಅಂಬೇಕರ್ ಎಂ. ನಾನು ತುಮಕೂರು  ಜಿಲ್ಲೆಯ ಪಾವಗಡ ತಾಲೂಕಿನಿಂದ ಬಂದಿದ್ದೇನೆ. ನಾನು ಫಸ್ಟ್ ಬಿಬಿಎ ಬಿ ಸೆಕ್ಷನ್ ಅಲ್ಲಿ ಓದುತ್ತಿದ್ದೇನೆ. ನಾನು  ಪಿಯುಸಿ  ಕ್ರೈಸ್ಟ್ ಪಿಯು  ಕಾಲೇಜಿನಲ್ಲಿ ಮುಗಿಸಿದೆ. ನನಗೆ ಪಿಯುಸಿಯಲ್ಲಿ ಒಟ್ಟು 91 ಪರ್ಸೆಂಟ್ ತೆಗೆದಿದ್ದೇನೆ  ನನಗೆ ಕನ್ನಡದಲ್ಲಿ 80 ಅಂಕಗಳು ಸಿಕ್ಕಿದೆ ನನ್ನ ಹವ್ಯಾಸಗಳು ಆಟ ಆಡುವುದು  ಮತ್ತು ಹಾಡು ಕೇಳುವುದು ನಾನು ವಾಲಿಬಾಲ್ ಮತ್ತು ಹ್ಯಾಂಡ್ಬಾಲ್ ಆಡುತ್ತೇನೆ. ನಾನು  ನಾನು ಈಗ ಬಿಬಿಎ   ಕ್ರೈಸ್ಟ್ ಅಲ್ಲಿ ಮಾಡುತ್ತಿದ್ದೇನ.

ಕ್ರೈಸ್ಟ್ ಜೀವನ

 
 ನಾನು ಕಳೆದ ಎರಡು ವರ್ಷಗಳಿಂದ ಕ್ರೈಸ್ಟ್ ಅಲ್ಲವಾದ್ದರಿಂದ ನನಗೆ  ಇಲ್ಲಿನ ವಾತಾವರಣ ಬಹಳ ಇಷ್ಟವಾಗಿದೆ, ಮತ್ತು ಇಲ್ಲಿನ ಸೌಲಭ್ಯಗಳು ನನಗೆ ಬಹಳ ಅನುಕೂಲವಾಗಿದೆ. ಏಕೆಂದರೆ  ಕ್ರೈಸ್ಟ್ ಅಲ್ಲಿ ಕ್ಲಾಸ್ ರೂಮ್ ನಲ್ಲಿ ಕುಳಿತು  ಪಾಠ ಕೇಳುವುದ ಅಷ್ಟೇ ಅಲ್ಲದೆ ಬೇರೆ ಚಟುವಟಿಕೆಗಳಲ್ಲಿಯೂ ನಮಗೆ  ಭಾಗವಹಿಸಲು ಅವಕಾಶ ಕೊಡುತ್ತಾರೆ. ಈ ಕಾರಣದಿಂದ ನಾನು ಕ್ರೈಸ್ಟ್ ಅಲ್ಲೇ ಓದುವ ನಿರ್ಧಾರವನ್ನು ಮಾಡಿಕೊಂಡೆ. ಮೊದಲು ನನಗೆ ಕನ್ನಡ ಬಹಳ ಕಷ್ಟವಾಗುತ್ತಿತ್ತು, ಬರೆಯುವುದಕ್ಕೆ ಮತ್ತು ಓದುವುದಕ್ಕೆ. ನನಗೆ ಇದರಲ್ಲಿ ಹಳ್ಳಿಮೇಷ್ಟ್ರು ಬಹಳ  ಸಹಾಯ ಮಾಡಿದರು ಅದಕ್ಕೆ ನಾನು ಎಂಬತ್ತು ಅಂಕಗಳನ್ನು  ತೆಗೆಯಲು ಆಯಿತು. ನಾನು ಬಹಳಷ್ಟು ಕ್ರೀಡೆಗಳಲ್ಲಿ ಪಾಲ್ಗೊಂಡಿದ್ದೇನೆ ಅದಕ್ಕೆ ನನಗೆ ಪ್ರಶಸ್ತಿ  ಕೂಡ ಸಿಕ್ಕಿದೆ. ನಾನು ಬಹಳ ಒಳ್ಳೆಯ ಹೃದಯದವನು, ನಾನು ಬೇರೆಯವರಿಗೆ ಯಾವತ್ತು  ಕೆಟ್ಟದ್ದನ್ನು ಬಯಸುವುದಿಲ್ಲ.  ಎಲ್ಲರ ಬಳಿ ಬಹಳ ಬೇಗ ಹೊಂದಿಕೊಳ್ಳುವ ಗುಣ ನನ್ನದು. ನಾನು ಮುಂದೆ  ದೊಡ್ಡ ಬಿಸಿನೆಸ್ ಮ್ಯಾನ್ ಆಗ್ಬೇಕು ಎಂದು ಬಯಸುತ್ತೇನೆ. ಆ ಗುರಿ ಮುಟ್ಟುವುದಕ್ಕೆ ಈ ಸಂಸ್ಥೆ ನನಗೆ  ಸಹಾಯ ಮಾಡುತ್ತದೆ ಎಂದು ಬಯಸುತ್ತೇನೆ. ನನಗೆ ಹಾಡು ಕೇಳುವುದೆಂದರೆ ಬಹಳ ಇಷ್ಟ, ನಾನು ಹಿಂದಿ ಕನ್ನಡ ಇಂಗ್ಲಿಷ್ ಎಲ್ಲಾತರದ ಹಾಡುಗಳನ್ನು ಕೇಳುತ್ತೇನೆ. ನಾನು ಡ್ಯಾನ್ಸ್ ಕೂಡ ಮಾಡುತ್ತೇನೆ. ನಾನು ದಡಕ್ ಡ್ಯಾನ್ಸ್  ಟೀಮ್ಗೆ ಆಡಿಶನ್ ಕೊಟ್ಟಿದ್ದೇನೆ. ನಿನಗೆ ಈ ಕಾಲೇಜಿನ ವಾತಾವರಣ ಬಾಳ ಇಷ್ಟ ಕಾಲೇಜಿನ ತುಂಬಾ ಮರಗಿಡಗಳನ್ನು ಕಂಡು ಬಹಳ ಸಂತೋಷವಾಗುತ್ತದೆ ಮತ್ತು ಈ ಕಾಲೇಜಿನ ಸ್ವಚ್ಛತೆಯನ್ನು  ಮೆಚ್ಚುತ್ತೇನೆ. ಈ ಕಾಲೇಜಿನಿಂದ ಕಲಿಯುವುದು ಬಹಳಷ್ಟು ಇದೆ ಬರಿ  ಓದುವುದರಲ್ಲಿ ಬಹಳ ಒಳ್ಳೆಯ ಗುಣಗಳನ್ನು ಕಲಿಯಬಹುದು.ಆದರೆ ಇಲ್ಲಿನ ಶಿಸ್ತು  ನನಗೆ ಕಠಿಣ  ವೆನಿಸುತ್ತದೆ. ನನಗೆ ಹೊಸ ಬಗೆಬಗೆಯ ಆಹಾರವನ್ನು ಸವಿಯಲು ಇಷ್ಟ. ಹೊಸ  ಆಹಾರ ಜೊತೆಗೆ ಬೇರೆಬೇರೆ ಸಂಸ್ಕೃತಿ ಸಂಪ್ರದಾಯ ತಿಳಿಯಲು ಇಷ್ಟಪಡುತ್ತೇನೆ. ನಮ್ಮ  ತರಗತಿಯಲ್ಲಿ ಬಹಳಷ್ಟು ಜನ ಬೇರೆ ಬೇರೆ ರಾಜ್ಯ, ಬೇರೆ ಬೇರೆ ದೇಶದಿಂದ ಬಂದಿದ್ದಾರೆ. ಅವರ ಜೊತೆ ಹೊಂದುಕೊಂಡು  ಅವರ ಗುಣ, ಕಲೆ, ನಡವಳಿಕೆ, ಅವರ ಆಚಾರ-ವಿಚಾರವನ್ನು ತಿಳಿದುಕೊಳ್ಳಲು ನನಗೆ ಬಹಳ ಕುತೂಹಲ. ನಾನು ಕೊನೆಗೆ ಈ ಕಾಲೇಜಿನಿಂದ  ವಿದ್ಯೆ ಅಷ್ಟೇ ಅಲ್ಲದೆ ಒಳ್ಳೆಯ ಗುಣಗಳನ್ನು  ಕಲೆತು ಮತ್ತು ಒಳ್ಳೆಯ ದಾರಿಯಲ್ಲಿ ಹೋಗುವ ಪ್ರಯತ್ನ ಮಾಡುತ್ತೇನೆ. ನನಗೆ ಇಂಥ ಒಳ್ಳೆಯ  ಸಂಸ್ಥೆಯಲ್ಲಿ  ಹೋಗುತ್ತಿರುವುದರ ಬಗ್ಗೆ ನನಗೆ  ಬಹಳ  ಗೌರವವಿದೆ

ಕ್ರೈಸ್ಟ್ ಕಪ್

 ಕಳೆದ ವಾರ ನಡೆದ ವಾಲಿಬಾಲ್ ಕ್ರೈಸ್ಟ್  ಟೂರ್ನಮೆಂಟ್ ಅಲ್ಲಿ ಎರಡನೇ ಸ್ಥಾನ  ಗಳಿಸಿದ್ದೇವೆ. ಇದರಿಂದ ನಮಗೆ ಬಹಳ ಬಹಳ ಸಂತೋಷವಾಗಿದೆ. ಇದು ಇಲ್ಲಿಯವರೆಗೂ ಎಂದು ಆಗಿರದ ಸಾಧನೆ ಆಗಿದೆ. ನಾವು ಇನ್ನೂ ಕಷ್ಟಪಟ್ಟು ಮೊದಲೇ ಸ್ಥಾನ  ಗಳಿಸಲು  ಪ್ರಯತ್ನಿಸುತ್ತಿದ್ದೇವೆ. ನಮಗೆ ಪರೀಕ್ಷೆ  ಹತ್ತಿರ ಬರುತ್ತಿರುವುದರಿಂದ  ಹೆಚ್ಚು ಸಮಯ ಓದುವುದರಲ್ಲಿ  ಕೊಡುತ್ತಿದ್ದೇನೆ. ನಾನು ಎಲ್ಲಾ ವಿಷಯದಲ್ಲೂ ಕನಿಷ್ಠ 80 ಪರ್ಸೆಂಟ್ ತೆಗೆಯಲು ಪ್ರಯತ್ನಿಸುತ್ತಿದ್ದೇನೆ.  ಕಳೆದ ಪರೀಕ್ಷೆಯಲ್ಲಿ  ಕನ್ನಡದಲ್ಲಿ ಬಹಳ ಕಮ್ಮಿ ತೆಗೆದಿದ್ದರಿಂದ  ಈ ಸರಿ ಒಳ್ಳೆ ಅಂಕಗಳನ್ನು ತೆಗೆಯಲು  ಕಷ್ಟ ಪಡುತ್ತಿದ್ದೇನೆ. ಕನ್ನಡದಲ್ಲಿ ನನಗೆ ಇಷ್ಟು ಕಮ್ಮಿ ಯಾವತ್ತು ಸಿಕ್ಕಿರಲಿಲ್ಲ. ಅದಕ್ಕೆ  ಕನ್ನಡ ಕ್ಲಾಸಿನಲ್ಲಿ ಬಹಳ ಗಮನ ಇಟ್ಟು ಕೇಳಿಕೊಳ್ಳುತ್ತಿದ್ದೇನೆ.  ಕನ್ನಡದಲ್ಲಿ ನನ್ನ ಅಂಕಗಳನ್ನು ನೋಡಿ ನನಗೆ ಬಹಳ ಬೇಸರವಾಗಿದೆ. ಪ್ರತಿದಿನ ಕನ್ನಡಕ್ಕಾಗಿ ನಾನು ಸ್ವಲ್ಪ ಸಮಯವನ್ನು ಹೇಳುತ್ತಿದ್ದೇನೆ. ಹೀಗೆ ನಾನು ಕನ್ನಡದಲ್ಲಿ ಹೆಚ್ಚು ಅಂಕಗಳನ್ನು ಗಳಿಸಲು ಪ್ರಯತ್ನಿಸುತ್ತಿದ್ದೇನೆ.