ಸದಸ್ಯ:Nayanaj61/WEP 2018-19 dec
ಜೀನ್ ಎಡಿಟಿಂಗ್
ಬದಲಾಯಿಸಿನಮ್ಮ ಜೀವಕೋಶದಲ್ಲಿ ೨೩ ಜೊತೆ ವರ್ಣತಂತುಗಳಿರುತ್ತದೆ. ಇವು ವಿಶಿಷ್ಟ ರಾಸಾಯನಿಕಗಳ ಮಿಶ್ರಣ.ಈ ವರ್ಣತಂತುಗಳಲ್ಲಿ ನಮ್ಮ ದೇಹದ ರಚನೆಯ ಸೂತ್ರ ಅಡಗಿದೆ.ಪ್ರತೀ ಜೀವಿಯ ಜೀವಕೋಶದಲ್ಲೂ ಡಿಎನ್ಎ(ಡಿಯೋಕ್ಸಿರೈಬೋಸ್ ನ್ಯೂಕ್ಲಿಯಿಕ್ ಆಚಿಡ್) ಇರುತ್ತದೆ. ಆ ಡಿಎನ್ಎಗಳ ಜೋಡಣೆಯಲ್ಲಿನ ವಿಭಿನ್ನತೆಯಿಂದಾಗಿಯೇ ಆಯಾ ಜೀವಿಗಳು ಅದರ ಬಣ್ನ, ಆಕಾರ, ಸ್ವಭಾವಗಳನ್ನು ಪಡೆದಿದೆ. ಈ ವರ್ಣತಂತುಗಳಲ್ಲಿ ಜೀವಿಯ ಶರೀರಕ್ಕೆ ಸಂಭಂದಿಸಿದ ಅಗಾದ ಪ್ರಮಾಣದ ಮಾಹಿತಿಯಿರುತ್ತದೆ. ಈ ಮಾಹಿತಿಯು ಅಪ್ಪ ಅಮ್ಮನಿಂದ ಮಕ್ಕಳಿಗೆ ವರ್ಗಾವಣೆಯಾಗುತ್ತಾ ಹೋಗುತ್ತದೆ. ಜಿನೊಮ್ ಎಡಿಟಿಂಗ್ (ಜೀನ್ ಎಡಿಟಿಂಗ್ ಎಂದೂ ಕರೆಯಲಾಗುತ್ತದೆ) ಎಂಬುದು ವಿಜ್ಞಾನಿಗಳಿಗೆ ಜೀವಿಗಳ ಡಿಎನ್ಎ ಬದಲಿಸುವ ಸಾಮರ್ಥ್ಯವನ್ನು ನೀಡುವ ತಂತ್ರಗಳ ಒಂದು ಗುಂಪು. ಈ ತಂತ್ರಜ್ಞಾನಗಳು ಜೀನೋಮ್ನ ನಿರ್ದಿಷ್ಟ ಸ್ಥಳಗಳಲ್ಲಿ ವಂಶವಾಹಿ ವಸ್ತುಗಳನ್ನು ಸೇರಿಸುವುದು, ತೆಗೆದುಹಾಕುವುದು ಅಥವಾ ಬದಲಾಯಿಸುವಿಕೆಯನ್ನು ಅನುಮತಿಸುತ್ತವೆ.
ವಿಧಾನಗಳು:
ಬದಲಾಯಿಸಿಜೀನೋಮ್ಎಡಿಟಿಂಗ್ ಹಲವಾರು ವಿಧಾನಗಳನ್ನು ಅಭಿವೃದ್ಧಿಪಡಿಸಲಾಗಿದೆ.ಇತ್ತೀಚಿಗೆ ಕ್ರಿಸ್ಪರ್ ಕ್ಯಾಸ್ 9 ಎಂದು ಕರೆಯಲ್ಪಡುತ್ತದೆ, ಇದು ಗುಂಪಿನ ನಿಯಮಿತವಾಗಿ ಒಳಸೇರಿಸಿದ ಸಣ್ಣ ಪಾಲಿಂಡ್ರೋಮಿಕ್ ಪುನರಾವರ್ತಿತ ಮತ್ತು ಸಿಆರ್ಎಸ್ಪಿಆರ್ಆರ್-ಸಂಬಂಧಿತ ಪ್ರೊಟೀನ್ 9 ಕ್ಕಿಂತ ಚಿಕ್ಕದಾಗಿದೆ. ಕ್ರಿಸ್ಪರ್ ಕ್ಯಾಸ್ 9 ಸಿಸ್ಟಮ್ ವೈಜ್ಞಾನಿಕ ಸಮುದಾಯದಲ್ಲಿ ಸಾಕಷ್ಟು ಉತ್ಸಾಹವನ್ನು ಸೃಷ್ಟಿಸಿದೆ ಏಕೆಂದರೆ ಇದು ವೇಗವಾಗಿದೆ, ಅಗ್ಗವಾಗಿದೆ, ಹೆಚ್ಚು ನಿಖರವಾದ, ಮತ್ತು ಇತರ ಅಸ್ತಿತ್ವದಲ್ಲಿರುವ ಜಿನೊಮ್ ಎಡಿಟಿಂಗ್ ವಿಧಾನಗಳಿಗಿಂತ ಹೆಚ್ಚು ಸಮರ್ಥವಾಗಿದೆ.[೧]
ಬ್ಯಾಕ್ಟೀರಿಯಾದ ಜೀನೋಮ್ ಎಡಿಟಿಂಗ್:
ಬದಲಾಯಿಸಿಬ್ಯಾಕ್ಟೀರಿಯಾದಲ್ಲಿ ಸ್ವಾಭಾವಿಕವಾಗಿ ಸಂಭವಿಸುವ ಜೀನೋಮ್ ಎಡಿಟಿಂಗ್ ಸಿಸ್ಟಮ್ನಿಂದ ಕ್ರಿಸ್ಪರ್ ಕ್ಯಾಸ್ 9 ಅನ್ನು ಅಳವಡಿಸಲಾಯಿತು.ಆಕ್ರಮಣಕಾರಿ ವೈರಸ್ಗಳಿಂದ ಡಿಎನ್ಎಯ ತುಣುಕುಗಳನ್ನು ಬ್ಯಾಕ್ಟೀರಿಯಾ ಸೆರೆಹಿಡಿಯುತ್ತದೆ ಮತ್ತು ಕ್ರಿಸ್ಪರ್ ರಚನೆಗಳು ಎಂದು ಕರೆಯಲ್ಪಡುವ ಡಿಎನ್ಎ ಭಾಗಗಳನ್ನು ರಚಿಸಲು ಅವುಗಳನ್ನು ಬಳಸಿಕೊಳ್ಳುತ್ತವೆ. ಸಿಆರ್ಐಎಸ್ಪಿಆರ್ ರಚನೆಗಳು ಬ್ಯಾಕ್ಟೀರಿಯಾವು ವೈರಸ್ಗಳನ್ನು "ನೆನಪಿನಲ್ಲಿಟ್ಟುಕೊಳ್ಳಲು" ಅನುಮತಿಸುತ್ತವೆ (ಅಥವಾ ನಿಕಟವಾಗಿ ಸಂಬಂಧಪಟ್ಟವುಗಳು). ವೈರಸ್ಗಳು ಮತ್ತೊಮ್ಮೆ ದಾಳಿ ಮಾಡಿದರೆ, ಬ್ಯಾಕ್ಟೀರಿಯಾವು ಸಿಆರ್ಐಎಸ್ಪಿಆರ್ ರಚನೆಯಿಂದ ಆರ್ಎನ್ಎ ಭಾಗಗಳನ್ನು ವೈರಸ್ಗಳ ಡಿಎನ್ಎ ಅನ್ನು ಗುರಿಯಾಗಿಸುತ್ತದೆ.ನಂತರ ಬ್ಯಾಕ್ಟೀರಿಯಾವು ಕ್ಯಾಸ್ಪೋ ಅಥವಾ ಡಿಎನ್ಎ ಅನ್ನು ಕತ್ತರಿಸಲು ಇದೇ ರೀತಿಯ ಕಿಣ್ವವನ್ನು ಬಳಸುತ್ತದೆ, ಅದು ವೈರಸ್ ಅನ್ನು ಅಶಕ್ತಗೊಳಿಸುತ್ತದೆ.[೨]
ಜೀನ್ ಸಂಪಾದಿತ ಶಿಶುಗಳು:
ಬದಲಾಯಿಸಿಮಾನವನ ವರ್ಣತಂತುಗಳಲ್ಲಿ ಮಾರ್ಪಾಟು ಮಾಡುವುದೇ ಡಿಎನ್ಎ ಎಡಿಟಿಂಗ್.ಮಕ್ಕಳಿಲ್ಲದವರಿಗೆ ಪ್ರಯೋಗಾಲಯದಲ್ಲಿ ಗಂಡನ ವೀರ್ಯಾಣು ಹಾಗೂ ಪತ್ನಿಯ ಅಂಡಾಣುವನ್ನು ಸೇರಿಸಿ, ಅದನ್ನು ಮಹಿಳೆಯ ಗರ್ಭಕೋಶದೊಳಗೆ ಇರಿಸುವ ಇದೆ. ಇದನ್ನು ಪ್ರನಾಳ ಶಿಶು ತಂತ್ರಜ್ಞಾನ(ಐವಿಎಫ಼್) ಎನ್ನುತಾರೆ. ಹೀಗೆ ವೀರ್ಯಾಣು ಮತ್ತು ಅಂಡಾಣುವನ್ನು ಸೇರಿಸುವ ಮುನ್ನ ಅವುಗಳಲ್ಲಿರುವ ಜೀವಕೋಶದಿಂದ ಡಿಎನ್ ಎಯನ್ನು ತೆಗೆದು, ಅದರಲ್ಲಿ ನಿರ್ದಿಷ್ಟ ಭಾಗವನ್ನು ಹಾಗೇ ಇರಿಸಿ ಭ್ರೂಣವನ್ನು ಬೆಳೆಸಬಹುದು.ಏಡ್ಸ್ ರೋಗಕ್ಕೆ ಜಗತ್ತಿನಲ್ಲಿ ಔಷಧವಿಲ್ಲ. ಹೀಗಾಗಿ ಚೀನಾ ವಿಜ್ಞಾನಿ ಏಡ್ಸ್ ಬಾರದಂತೆ ಕ್ರಿಸ್ಪರ್ ಎಂಬ ತಂತ್ರಜ್ಞಾನ ಬಳಸಿ ಡಿಎನ್ಎ ಎಡಿಟ್ ಮಾಡಿದ್ದನೆ. ಇದೇ ತಂತ್ರಜ್ಞಾನ ಬಳಸಿ ೨೦೧೭ರಲ್ಲಿ ಅಮೇರಿಕದ ಒರೆಗಾನ್ ಹೆಲ್ತ್ ಅಂಡ್ ಸೈನ್ಸ್ ಯುನಿವರ್ಸಿಟಿಯಲ್ಲಿ ೧೦೦ಕ್ಕೂ ಹೆಚ್ಚು ಮಾನವ ಭ್ರೂಣಗಳನ್ನು ಡಿಎನ್ಎ ಎಡಿಟ್ ಮಾಡಲಾಗಿತ್ತು. ಇದು ಪ್ರಯೋಗಾಲಯಕ್ಕೆ ಸೀಮಿತವಾದ ಪ್ರಯೋಗವಾಗಿತ್ತು.ಚೀನಾ ವಿಜ್ಞಾನಿಯು(ಹಿ ಜೈಂಕುಯಿ) ಏಡ್ಸ್ ಸೋಂಕು ಮನುಷ್ಯನಿಗೆ ಅಂಟಿಕೊಳ್ಳಲು ಸಹಕರಿಸುವ ಡಿಎನ್ಎಯ ಭಾಗವನ್ನು ಕತ್ತರಿಸಿ ತೆಗೆದಿದ್ದ. ಸತತ ೯ ತಿಂಗಳಿನಿಂದ ಆತ ಈ ಕೆಲಸದಲ್ಲಿ ತೊಡಗಿಕೊಂದಿದ್ದ.
ವಿವಾದಗಳು:
ಬದಲಾಯಿಸಿಮನುಷ್ಯನ ಡಿಎನ್ಎ ಎಡಿಟ್ ಮಾಡುವುದನ್ನು ಜಗತ್ತಿನ ವೈದ್ಯಲೋಕ ಇನ್ನೂ ಒಪ್ಪಿಕೊಂಡಿಲ್ಲ. ಇದನ್ನು ಪ್ರಯೋಗಾಲಯದ ಮಟ್ಟಿಗೆ ಮಾತ್ರ ಸೀಮಿತಗೊಳಿಸಬೇಕು, ಯಾವುದೇಕಾರಣಕ್ಕೂ ಮನುಷ್ಯರಲ್ಲಿ ಗರ್ಭದಾರಣೆಯವರೆಗೆ ತರಬಾರದೆಂದು ಅಮೇರಿಕಾ ಸೇರಿದಂತೆ ಈ ಕ್ಷೇತ್ರದಲ್ಲಿ ಕೆಲಸ ಮಾಡುವ ಎಲ್ಲಾ ದೇಶದ ವಿಜ್ಞಾನಿಗಳು ಕಳೆದ ವರ್ಷ ಸಮಾವೇಶವೊಂದರಲ್ಲಿ ನಿರ್ಧರಿಸಿದ್ದಾರೆ. ಭವಿಶ್ಯದಲ್ಲಿ, ಡಿಎನ್ಎ ಯ ಯಾವ ಭಾಗವನ್ನಾದರೂ ಕತ್ತರಿಸಿ ತೆಗೆದು ಮಕ್ಕಳನ್ನು ಹುಟ್ಟಿಸಲು ಸಾಧ್ಯವಿದೆ. ಮೂಗೇ ಇಲ್ಲದಿದ್ದರೂ ಉಸಿರಾಡಬಲ್ಲ ಮಗು, ಹೀಗೆ ಪ್ರಕೃತಿಗೆ ವಿರುದ್ಧವಾದ ಅನೇಕ ಸಂಗತಿಗಳು ನಡೆಯವ ಸಾಧ್ಯತೆಗಳಿವೆ. ಹೀಗಾಗಿ, ಭ್ರೂಣಗಳ ವಿಶಯದ ಹೊರತಾಗಿ,ಮಾರಣಾಂತಿಕ ರೋಗಗಳನ್ನು ಅಳಿಸಿಹಾಕಲು ಆಯಾ ರೋಗಕ್ಕೆ ಕಾರಣವಾಗುವ ವರ್ಣತಂತುವಿನ ಭಾಗವನ್ನು ಕತ್ತರಿಸಿ ಹಾಕುವ ಮಟ್ಟಿಗೆ ಜೀನ್ ಎಡಿಟಿಂಗ್ ಮಾಡಲು ಒಪ್ಪಿಗೆ ನೀಡಬೇಕು ಎಂಬ ಅಭಿಪ್ರಾಯ ಇದೆ.