.ಕ್ರಾಸುಲೇಸಿಯನ್ ಆಸಿಡ್ ಮೆಟಾಬಾಲಿಜಂ

ಕ್ರಾಸುಲೇಸಿಯನ್ ಆಸಿಡ್ ಮೆಟಾಬಾಲಿಜಂ ಇದೊಂದು ಕಾರ್ಬನ್ ಫಿಕ್ಸೇಷನ್ ಮಾರ್ಗವೂ ಆಗಿದೆ, ಇದನ್ನು ಸಿ.ಎ.ಎಂ ದ್ಯುತಿಸಂಶ್ಲೇಷಣೆಗೆ ಎಂದೂ ಕರೆಯುತ್ತಾರೆ.

ಇದು ಹಗಲಿನಲ್ಲಿ ದ್ಯುತಿಸಂಶ್ಲೇಷಣೆಗೆ ಸಸ್ಯವನ್ನು ಅನುಮತಿಸುತ್ತದೆ, ಆದರೆ ರಾತ್ರಿಯಲ್ಲಿ ಮಾತ್ರ ಅನಿಲಗಳನ್ನು ವಿನಿಮಯ ಮಾಡಿಕೊಳ್ಳುತ್ತದೆ. ಎಲೆಗಳಲ್ಲಿರುವ ಸ್ಟೊಮಾಟಾವು ಟ್ರಾನ್ಸಪಿರೇಶನ ಎನ್ನು ಕಡಿಮೆ ಮಾಡಲು ಹಗಲಿನಲ್ಲಿ ಮುಚ್ಚಿರುತ್ತದೆ, ಆದರೆ ಕಾರ್ಬನ್ ಡೈಆಕ್ಸೈಡ್ ಅನ್ನು ಸಂಗ್ರಹಿಸಲು ಮತ್ತು ಮಿಸೊಫಿಲ್ ಕೋಶಗಳಿಗೆ ಹರಡಲು ಅವು ರಾತ್ರಿಯಲ್ಲಿ ತೆರೆದುಕೊಳ್ಳುತ್ತವೆ. ಸಿ.ಒ2 ಯನ್ನು ರಾತ್ರಿಯಲ್ಲಿ ನಿರ್ವಾತಗಳಲ್ಲಿ ನಾಲ್ಕು-ಕಾರ್ಬನ್ ಮ್ಯಾಲಿಕ್ ಆಮ್ಲವಾಗಿ ಸಂಗ್ರಹಿಸಲಾಗುತ್ತದೆ ಮತ್ತು ನಂತರ ಹಗಲಿನ ವೇಳೆಯಲ್ಲಿ ಮ್ಯಾಲೇಟ್ ಆಗಿ ಪರಿಪರ್ತಿಸಿ ಕ್ಲೋರೊಪ್ಲಾಸ್ಟಗಳಿಗೆ ಸಾಗಿಸಲಾಗುತ್ತದೆ. ಅಲ್ಲಿ ಅದನ್ನು ಮತ್ತೆ ಸಿ.ಒ2 ಆಗಿ ಪರಿವರ್ತಿಸಲಾಗುತ್ತದೆ, ನಂತರ ಇದನ್ನು ದ್ಯುತಿಸಂಶ್ಲೇಷಣೆಯ ಸಮಯದಲ್ಲಿ ಬಳಸಲಾಗುತ್ತದೆ.


ಚಕ್ರದ ಎರಡು ಭಾಗಗಳ

ರಾತ್ರಿವೇಳೆ:

ರಾತ್ರಿಯ ಸಮಯದಲ್ಲಿ, ಸಿ.ಎ.ಎಂ ಹೊಂದಿರುವ ಸಸ್ಯವು ಸಿ.ಒ2 ಅನ್ನು ಸ್ಟೊಮಾಟಾ ಮೂಲಕ ಪ್ರವೇಶಿಸಿ ಪಿ.ಈ.ಪಿ ಯ ಸಹಾಯದಿಂದ ಆಮ್ಲಗಳಾಗಿ ಸ್ಥಿರಗೊಳ್ಳುತ್ತದೆ. ಆಮ್ಲಗಳನ್ನು ನಂತರದ ಬಳಕೆಗಾಗಿ ನಿರ್ವಾತಗಳಲ್ಲಿ ಸಂಗ್ರಹಿಸಲಾಗುತ್ತದೆ, ಯಾಕೆಂದರೆ ಕ್ಯಾಲ್ವಿನ್ ಚಕ್ರವು ಎ.ಟಿ.ಪಿ ಮತ್ತು ಎನ್.ಎ.ಡಿ.ಪಿ.ಹೆಚ್ ಇಲ್ಲದೆ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ, ಇವುಗಳು ಬೆಳಕಿನ-ಅವಲಂಬಿತ ಕ್ರಿಯೆಗಳ ಉತ್ಪನ್ನಗಳಾಗಿ ಹಾಗೂ ಈ ಕ್ರಿಯೆಗಳು ರಾತ್ರಿವೇಳೆ ನಡೆಯುವುದಿಲ್ಲ.

ಹಗಲುವೇಳೆ:

ಹಗಲಿನಲ್ಲಿ, ನೀರನ್ನು ಸಂರಕ್ಷಿಸಲು ಸ್ಟೊಮಾಟಾವನ್ನು ಮುಚ್ಚಲಾಗುತ್ತದೆ ಮತ್ತು ಸಿ.ಒ2 ಸಂಗ್ರಹವಾಗಿರುವ ಆಮ್ಲಗಳನ್ನು ನಿರ್ವಾತಗಳಿಂದ ಮೆಸೊಫಿಲ್ ಕೋಶಗಳಿಗೆ  ಬಿಡುಗಡೆಯಾಗುತ್ತವೆ. ಕ್ಲೋರೊಪ್ಲಾಸ್ಟಗಳ ಸ್ಟ್ರೋಮಾದಲ್ಲಿರುವ ಕಿಣ್ವವು ಸಿ.ಒ2 ಅನ್ನು ಬಿಡುಗಡೆ ಮಾಡುವಂತೆ ಮಾಡುತ್ತವೆ. ಈಗ ಬಿಡುಗಡೆಯಾದ ಸಿ.ಒ2 ಕ್ಯಾಲ್ವಿನ್ ಚಕ್ರಕ್ಕೆ ಪ್ರವೇಶಿಸುತ್ತದೆ ಇದರಿಂದಾಗಿ ದ್ಯುತಿಸಂಶ್ಲೇಷಣೆ ಪೂರ್ಣಗೊಳ್ಳುತ್ತದೆ.