ಸದಸ್ಯ:2240326manojsm/ನನ್ನ ಪ್ರಯೋಗಪುಟ
ಮಲ್ಟಿಪ್ಲೆಕ್ಸರ್
ಬದಲಾಯಿಸಿಎಲೆಕ್ಟ್ರಾನಿಕ್ಸ್ ವಲಯದಲ್ಲಿ, ಮಲ್ಟಿಪ್ಲೆಕ್ಸರ್ (ಮಕ್ಸ್) ಒಂದು ಡೇಟಾ ಆಯ್ಕೆ ಮಾಡು ಸಾಧನವಾಗಿದೆ. ಈ ಸಾಧನವು ಒಳಬರುವ ಅನಲಾಗ್ ಅಥವಾ ಡಿಜಿಟಲ್ ಸಂದೇಶದಲ್ಲಿ ಒಂದನ್ನು ಆಯ್ಕೆ ಮಾಡಿ ಅದನ್ನು ಹೊರಹಾಕುತ್ತದೆ. ಸರಿಯಾದ ಸಂದೇಶವನ್ನು ಆರಿಸಲು ಪ್ರತ್ಯೇಕ ಪಿನ್ಗಳಿವೆ, ಇದನ್ನು ಆರಿಸುವ ಲೈನ್ಸ್ ಅಥವಾ ಸೆಲೆಕ್ಟ್ ಲೈನ್ಸ್ ಎಂದು ಕರೆಯಲಾಗುವುದು. ಈ ಪಿನ್ಗಳಿಗೆ ಡಿಜಿಟಲ್ ಸಂದೇಶ ನೀಡಿ ಆಯ್ಕೆ ಮಾಡಲಾಗುವುದು. ಒಂದು ಮಕ್ಸ್ ನಲ್ಲಿ ೨ ಸಂದೇಶ ಪಡೆಯಲಾಗಬಹುದು, ಇದರಲ್ಲಿ n ಆರಿಸುವ ಲೈನ್ ಗಳು ಮಿಕ್ಕಿದ್ದು ಸಂದೇಶ ನೀಡುವ ಲೈನ್ ಗಳು.
ಮಲ್ಟಿಪ್ಲೆಕ್ಸರ್ (ಮಲ್ಟಿಪ್ಲೆಕ್ಸರ್) ಎಂಬುದು ಹಲವಾರು ಇನ್‌ಪುಟ್ ಸಂದೇಶವನ್ನು ಒಂದೇ ಸಾಧನ ಅಥವಾ ಸಂಪನ್ಮೂಲವನ್ನು ಹಂಚಿಕೊಳ್ಳಲು ಸಹಾಯಮಾಡುತ್ತದೆ . ಅನಾಲಾಗ್-ಟು-ಡಿಜಿಟಲ್ ಪರಿವರ್ತಕ ಮತ್ತು ಸಂವಹನ ಪ್ರಸರಣ ಮಾಧ್ಯಮ ಇದರ ಉದಾಹರಣೆಯಾಗಿವೆ . ಹಲವು ಸಮೀಕರಣಗಳ ಬೂಲಿಯನ್ ಕಾರ್ಯಗಳನ್ನು ಜಾರಿಗೊಳಿಸಲು ಸಹ ಮಲ್ಟಿಪ್ಲೆಕ್ಸರ್‌ಗಳನ್ನು ಬಳಸಬಹುದು.
ಇದಕ್ಕೆ ವಿರುದ್ಧವಾಗಿ, ಡಿಮಲ್ಟಿಪ್ಲೆಕ್ಸರ್ (ಡಿಮಕ್ಸ್) ಎಂಬುದು ಒಂದೇ ಒಂದು ಇನ್‌ಪುಟ್ ಅನ್ನು ತೆಗೆದುಕೊಳ್ಳುವ ಮತ್ತು ಹಲವು ಲೈನ್ ಗಳಿಗೆ ವಿತರಿಸುವ ಸಾಧನವಾಗಿದೆ. ಮಕ್ಸ್ ನ ಆರಿಸುವ ಲೈನ್ ಗಳನ್ನೂ ಡಿಮಕ್ಸ್ ನ ಲೈನ್ ಗಳೊಂದಿಗೆ ಜೋಡಿಸಲಾಗಿದೆ . ಒಂದು ಮಕ್ಸ್ ನ ಗ್ರಾಹಕ ತುದಿಯಲ್ಲಿ ಪೂರಕ ಡಿಮಲ್ಟಿಪ್ಲೆಕ್ಸರ್ ಅನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ.
ಒಂದು ಎಲೆಕ್ಟ್ರಾನಿಕ್ ಮಲ್ಟಿಪ್ಲೆಕ್ಸರ್ ಅನ್ನು ಹಲವು ಇನ್ಪುಟ್ ಮತ್ತು ಒಂದು ಔಟ್ಪುಟ್ ಹೊಂದಿರುವುದಾಗಿ ಪರಿಗಣಿಸಬಹುದು ಮತ್ತು ಡಿಮಲ್ಟಿಪ್ಲೆಕ್ಸರ್ ಅನ್ನು ಹಲವು ಔಟ್ಪುಟ್ ಮತ್ತು ಒಂದು ಇನ್ಪುಟ್ ಹೊಂದಿರುವುದಾಗಿ ಪರಿಗಣಿಸಬಹುದು. ಮಲ್ಟಿಪ್ಲೆಕ್ಸರ್‌ಗಾಗಿ ಚಿತ್ರಾತ್ಮಕ ಚಿಹ್ನೆಯು ಸಮಬಾಹು ತಳಪಟ್ಟವಾಗಿದೆ. ಉದ್ದವಾದ ಸಮಾನಾಂತರ ಬದಿಯು ಇನ್‌ಪುಟ್ ಪಿನ್ ಮತ್ತು ಚಿಕ್ಕದಾದ ಸಮಾನಾಂತರ ಬದಿಯು ಔಟ್ಪುಟ್ ಪಿನ್ ಅನ್ನು ಸೂಚಿಸುತ್ತದೆ.
ಅನ್ವಯಗಳು
ಬದಲಾಯಿಸಿಗಣಕಯಂತ್ರದಲ್ಲಿ, ನಿರ್ದಿಷ್ಟ ಮೂಲದಿಂದ ಡೇಟಾವನ್ನು ಆಯ್ಕೆ ಮಾಡಲು ಮಲ್ಟಿಪ್ಲೆಕ್ಸರ್‌ಗಳನ್ನು ಬಳಸಲಾಗುತ್ತದೆ. ಮೆಮೊರಿ ಚಿಪ್ ಮತ್ತು ಯಂತ್ರಾಂಶ ಪರಿಧಿಯಲ್ಲಿ ಉಪಯೋಗಿಸಲುಪಡುವುದು . ಪ್ರೊಸೆಸರ್ ಬಹು ಡೇಟಾ ಮೂಲಗಳಿಂದ ಡೇಟಾವನ್ನು ಆಯ್ಕೆ ಮಾಡಲು ಅನುಮತಿಸುವಂತೆ ಡೇಟಾ ಮತ್ತು ವಿಳಾಸ ಬಸ್‌ಗಳನ್ನು ನಿಯಂತ್ರಣ ಮಾಡಲು ಗಣಕಯಂತ್ರ ಮಲ್ಟಿಪ್ಲೆಕ್ಸರ್‌ಗಳನ್ನು ಬಳಸುತ್ತದೆ.
ಡಿಜಿಟಲ್ ಸಂವಹನದಲ್ಲಿ, ಮಲ್ಟಿಪ್ಲೆಕ್ಸರ್‌ಗಳು ಒಂದೇ ಚಾನೆಲಿನ ಮೇಲೆ ಬಹು ಸಂಪರ್ಕಗಳನ್ನು ಅನುಮತಿಸುತ್ತವೆ. ಮಲ್ಟಿಪ್ಲೆಕ್ಸರ್ನಿಂದ ಹೊರಬರುವ ಸಂದೇಶವನ್ನು ಡಿಮಲ್ಟಿಪ್ಲೆಕ್ಸರ್ ನ ಇನ್ಪುಟ್ ಗೆ ನೀಡುವ ಮೂಲಕ ಈ ಸಂಪರ್ಕವನ್ನು ಸಾದಿಸಬಹುದು.
ಡೇಟಾ ಲಿಂಕ್‌ನ ಗ್ರಾಹಕ ತುದಿಯಲ್ಲಿ ಮೂಲ ವಾಹಿನಿಗಾಗಿ ಏಕೈಕ ಡೇಟಾ ವಾಹಿನಿಯನ್ನು ಮತ್ತೆ ಒಡೆಯಲು ಸಾಮಾನ್ಯವಾಗಿ ಪೂರಕ ಡಿಮಲ್ಟಿಪ್ಲೆಕ್ಸರ್ ಅಗತ್ಯವಿದೆ. ಕೆಲವು ಸಂದರ್ಭಗಳಲ್ಲಿ, ದೂರದ ಗ್ರಾಹಕ ವ್ಯವಸ್ಥೆ ಸರಳವಾದ ಡಿಮಲ್ಟಿಪ್ಲೆಕ್ಸರ್‌ಗಿಂತ ಹೆಚ್ಚಿನ ಕಾರ್ಯವನ್ನು ಹೊಂದಿರಬಹುದು. ತಾಂತ್ರಿಕವಾಗಿ ಡಿಮಲ್ಟಿಪ್ಲೆಕ್ಸಿಂಗ್ ಸಂಭವಿಸಿದರೂ, ಅದನ್ನು ಎಂದಿಗೂ ಪ್ರತ್ಯೇಕವಾಗಿ ಉಪಯೋಗಿಸದಿರಬಹುದು . ಉದಾಹರಣೆಗೆ, ಒಂದು ಮಲ್ಟಿಪ್ಲೆಕ್ಸರ್ ಹಲವಾರು ಐಪಿ ನೆಟ್‌ವರ್ಕ್ ಬಳಕೆದಾರರಿಗೆ ಸೇವೆ ಸಲ್ಲಿಸುವಾಗ ಮತ್ತು ನಂತರ ನೇರವಾಗಿ ರೂಟರ್‌ಗೆ ನೀಡಿದಾಗ ಇದು ಸಂಭವಿಸುತ್ತದೆ. ಅದು ತಕ್ಷಣವೇ ಲಿಂಕ್‌ನ ಸಂಪೂರ್ಣ ವಿಷಯವನ್ನು ರೂಟಿಂಗ್ ಪ್ರೊಸೆಸರ್ ಓದುತ್ತದೆ; ನಂತರ ಮೆಮೊರಿಯಲ್ಲಿ ಡಿಮಲ್ಟಿಪ್ಲೆಕ್ಸಿಂಗ್ ಮಾಡುತ್ತದೆ, ಅಲ್ಲಿಂದ ಅದನ್ನು ನೇರವಾಗಿ ಐಪಿ ವಿಭಾಗಗಳಾಗಿ ಪರಿವರ್ತಿಸಲಾಗುತ್ತದೆ.
ಅನೇಕ ಸಂದರ್ಭಗಳಲ್ಲಿ, ಮಲ್ಟಿಪ್ಲೆಕ್ಸರ್ ಮತ್ತು ಡಿಮಲ್ಟಿಪ್ಲೆಕ್ಸರ್ಗಳನ್ನು ಒಂದೇ ಉಪಕರಣವಾಗಿ ಸಂಯೋಜಿಸಲಾಗುತ್ತದೆ. ಇದನ್ನು ಸರಳವಾಗಿ ಮಲ್ಟಿಪ್ಲೆಕ್ಸರ್ ಎಂದು ಕರೆಯಲಾಗುತ್ತದೆ. ಬಹುತೇಕ ಸಂಪರ್ಕ ವ್ಯವಸ್ಥೆಗಳು ಎರಡೂ ದಿಕ್ಕುಗಳಲ್ಲಿ ಪ್ರಸರಣ ಮಾಡುವುದರಿಂದ, ಕಳಿಸುವ ಲಿಂಕ್‌ನ ಎರಡೂ ತುದಿಗಳಲ್ಲಿ ಎರಡೂ ಸರ್ಕ್ಯೂಟ್ ಅಂಶಗಳು ಅಗತ್ಯವಿದೆ.
ಅನಾಲಾಗ್ ಸರ್ಕ್ಯೂಟ್ ವಿನ್ಯಾಸನದಲ್ಲಿ , ಮಲ್ಟಿಪ್ಲೆಕ್ಸರ್ ಎಂಬುದು ಒಂದು ವಿಶೇಷ ರೀತಿಯ ಅನಾಲಾಗ್ ಸ್ವಿಚ್ ಆಗಿದ್ದು, ಹಲವಾರು ಇನ್‌ಪುಟ್‌ಗಳಿಂದ ಆಯ್ಕೆಮಾಡಿದ ಒಂದು ಸಂದೇಶವನ್ನು ಏಕೈಕ ಔಟ್ಪುಟ್ ಗೆ ಸಂಪರ್ಕಿಸುತ್ತದೆ.
ಡಿಜಿಟಲ್ ಮಲ್ಟಿಪ್ಲೆಕ್ಸರ್
ಬದಲಾಯಿಸಿಡಿಜಿಟಲ್ ಸರ್ಕ್ಯೂಟ್ ವಿನ್ಯಾಸದಲ್ಲಿ , ಆಯ್ಕೆ ತಂತಿಗಳು (ಆರಿಸುವ ಲೈನ್) ಡಿಜಿಟಲ್ ಮೌಲ್ಯ ಹೊಂದಿರುತ್ತವೆ . ೨ ರಿಂದ ೧ ಮಲ್ಟಿಪ್ಲೆಕ್ಸರ್‌ನ ವಿಷಯದಲ್ಲಿ, ಶೂನ್ಯ ಲಾಜಿಕಲ್ ಮೌಲ್ಯವು I0 ಗೆ ಸಂಪರ್ಕ ಕಲ್ಪಿಸುತ್ತದೆ, ಒಂದು ಲಾಜಿಕಲ್ ಮೌಲ್ಯವು I1ಗೆ ಸಂಪರ್ಕ ಕಲ್ಪಿಸುತ್ತದೆ. ದೊಡ್ಡ ಮಲ್ಟಿಪ್ಲೆಕ್ಸರ್‌ಗಳಲ್ಲಿ, ಲಾಗ್ ೨ n ಆಯ್ಕೆ ಪಿನ್‌ಗಳ ಹೊಂದಿರುತ್ತವೆ, ಇಲ್ಲಿ n ಇನ್‌ಪುಟ್ ಸಂದೇಶಗಳ ಸಂಖ್ಯೆ ಅನ್ನು ಸೂಚಿಸುತ್ತದೆ .
ಉದಾಹರಣೆಗೆ, ೯ ರಿಂದ ೧೬ ರವರೆಗೆ ಇನ್‌ಪುಟ್‌ಗಳು ಇನ್ಪುಟ್ ಹೊಂದಿರುವ ಮಲ್ಟಿಪ್ಲೆಕ್ಸರ್ ನಲ್ಲಿ, ಕನಿಷ್ಠ ೪ ಆಯ್ಕೆ ಪಿನ್‌ಗಳನ್ನು ಹೊಂದಿರುತ್ತವೆ ಮತ್ತು ೧೭ ರಿಂದ ೩೨ ರವರೆಗೆ ಇನ್‌ಪುಟ್‌ಗಳು ಹೊಂದಿರುವ ಮಲ್ಟಿಪ್ಲೆಕ್ಸರ್ ನಲ್ಲಿ ಕನಿಷ್ಠ ೫ ಆಯ್ಕೆ ಪಿನ್‌ಗಳನ್ನು ಅಗತ್ಯವಾಗಿರುತ್ತವೆ. ಈ ಆಯ್ಕೆ ಪಿನ್‌ಗಳ ಮೇಲೆ ವ್ಯಕ್ತಪಡಿಸಿದ ಬೈನರಿ ಮೌಲ್ಯವು ಆಯ್ದ ಇನ್‌ಪುಟ್ ಪಿನ್ ಅನ್ನು ನಿರ್ಧರಿಸುತ್ತದೆ.
೨ ರಿಂದ ೧ ಮಲ್ಟಿಪ್ಲೆಕ್ಸರ್ ಬೂಲಿಯನ್ ಸಮೀಕರಣದಿಂದ ಸಾದಿಸಬಹುದು , ಅಲ್ಲಿ A ಮತ್ತು B ಎರಡು ಇನ್‌ಪುಟ್‌ಗಳು, S ಆಯ್ಕೆದಾರ ಇನ್‌ಪುಟ್ , ಮತ್ತು Y ಔಟ್ಪುಟ್ ಆಗಿದೆ. ಸಮೀಕರಣವು ,
ಇದರ ಕಾರ್ಯ ಪಟ್ಟಿ (ಟ್ರುಥ್ ಪಟ್ಟಿ):
0 | 0 | 0 | 0 |
0 | 0 | 1 | 0 |
0 | 1 | 0 | 1 |
0 | 1 | 1 | 1 |
1 | 0 | 0 | 0 |
1 | 0 | 1 | 1 |
1 | 1 | 0 | 0 |
1 | 1 | 1 | 1 |
ಅಥವಾ ಸರಳವಾಗಿ
0 | A |
1 | B |
ಡಿಜಿಟಲ್ ತರ್ಕದಲ್ಲಿ ಬೈನರಿ ಮೌಲ್ಯಗಳನ್ನು ಬಳಸುವುದರಿಂದ, ಆಯ್ದ ಇನ್‌ಪುಟ್‌ಗಳ ನಿರ್ದಿಷ್ಟ ಸಂಖ್ಯೆಯನ್ನು ನಿಯಂತ್ರಿಸಲು ಗರಿಷ್ಠವಾಗಿ ೨ನೇಯ ಘಾತವನ್ನು ಬಳಸಲಾಗುತ್ತದೆ, ಉದಾಹರಣೆಗೆ ೪, ೮, ೧೬. ಹೀಗಾಗಿ, ಸಾಮಾನ್ಯ ಗಾತ್ರಗಳಾಗಿವೆ ೪ ರಿಂದ ೧ , ೮ ರಿಂದ ೧ ಮತ್ತು ೧೬ ರಿಂದ ೧ ಸಾಮಾನ್ಯ ಗಾತ್ರಗಳಾಗಿವೆ ಆಗಿವೆ.
ಮಲ್ಟಿಪ್ಲೆಕ್ಸರ್‌ಗಳನ್ನು ಸರಣಿಗೊಳಿಸುವುದು
ಬದಲಾಯಿಸಿದೊಡ್ಡ ಮಲ್ಟಿಪ್ಲೆಕ್ಸರ್‌ಗಳನ್ನು ಚಿಕ್ಕ ಮಲ್ಟಿಪ್ಲೆಕ್ಸರ್‌ಗಳನ್ನು ಸರಣಿಬದ್ಧವಾಗಿ ನಿರ್ಮಿಸಿ ಬಳಸಬಹುದು. ಉದಾಹರಣೆಗೆ, ಎರಡು ೪ ರಿಂದ ೧ ಮಲ್ಟಿಪ್ಲೆಕ್ಸರ್ ಅನ್ನು ಒಂದು ೨ ರಿಂದ ೧ ಮಲ್ಟಿಪ್ಲೆಕ್ಸರ್‌ನೊಂದಿಗೆ ಜೋಡಿಸಿ ಒಂದು ೮ ರಿಂದ ೧ ಮಲ್ಟಿಪ್ಲೆಕ್ಸರ್ ಅನ್ನು ಮಾಡಬಹುದು. ೪ ರಿಂದ ೧ ಆಯ್ಕೆ ಪಿನ್‌ಗಳು ಸಮಾನಾಂತರವಾಗಿ ಬಳಿಸಿದರೆ , ಒಟ್ಟು ೩ ಆಯ್ಕೆ ತಂತಿ ಸಿಗುತ್ತದೆ. ಇದು ೮ ರಿಂದ ೧ ಕ್ಕೆ ಸಮನಾಗಿರುತ್ತದೆ.
ಮಲ್ಟಿಪ್ಲೆಕ್ಸರ್ ಐಸಿಗಳ ಪಟ್ಟಿ
ಬದಲಾಯಿಸಿಐಸಿ ಸಂಖ್ಯೆ | ಕಾರ್ಯ | ಔಟ್ಪುಟ್ |
---|---|---|
೭೪x೧೫೭ | ಚತುರ್ ೨ ರಿಂದ ೧ ಮಕ್ಸ್ | ಒಂದೇ ರೀತಿಯ ಇನ್ಪುಟ್ ಹಾಗು ಔಟ್ಪುಟ್ |
೭೪x೧೫೮ | ಚತುರ್ ೨ ರಿಂದ ೧ ಮಕ್ಸ್ | ಇನ್ಪುಟ್ಗೆ ಪೂರಕವಾದ ಔಟ್ಪುಟ್ |
೭೪x೧೫೩ | ದ್ವಿ ೪ ರಿಂದ ೧ ಮಕ್ಸ್ | ಒಂದೇ ರೀತಿಯ ಇನ್ಪುಟ್ ಹಾಗು ಔಟ್ಪುಟ್ |
೭೪x೩೫೨ | ದ್ವಿ ೪ ರಿಂದ ೧ ಮಕ್ಸ್ | ಇನ್ಪುಟ್ಗೆ ಪೂರಕವಾದ ಔಟ್ಪುಟ್ |
೭೪x೧೫೧A | ೮ ರಿಂದ ೧ ಮಕ್ಸ್ | ಎರಡು ರೀತಿಯ ಔಟ್ಪುಟ್ ಲಭ್ಯವಿದೆ |
೭೪x೧೫೧ | ೮ ರಿಂದ ೧ ಮಕ್ಸ್ | ಇನ್ಪುಟ್ಗೆ ಪೂರಕವಾದ ಔಟ್ಪುಟ್ |
೭೪x೧೫೦ | ೧೬ ರಿಂದ ೧ ಮಕ್ಸ್ | ಇನ್ಪುಟ್ಗೆ ಪೂರಕವಾದ ಔಟ್ಪುಟ್ |
ಡಿಜಿಟಲ್ ಡಿಮಲ್ಟಿಪ್ಲೆಕ್ಸರ್
ಬದಲಾಯಿಸಿಡೆಮಲ್ಟಿಪ್ಲೆಕ್ಸರ್ಗಳು ಒಂದು ಡೇಟಾ ಇನ್‌ಪುಟ್ ತಂತಿ, ಹಲವಾರು ಆಯ್ಕೆ ಇನ್‌ಪುಟ್, ಮತ್ತು ಹಲವಾರು ಔಟ್ಪುಟ್ ತಂತಿ ಇರುತ್ತವೆ. ಆಯ್ಕೆ ಇನ್‌ಪುಟ್‌ಗಳ ಮೌಲ್ಯಗಳನ್ನು ಅವಲಂಬಿಸಿ ಅವು ಡೇಟಾ ಇನ್‌ಪುಟ್ ಅನ್ನು ಒಂದು ಹೊರಹೋಗುವ ತಂತಿಗೆ ಸಂದೇಶ ಕಳಸಬಹುದು.
ಸಾಮಾನ್ಯ-ಉದ್ದೇಶದ ತರ್ಕ ವಿನ್ಯಾಸವನ್ನು ವಿನ್ಯಾಸಗೊಳಿಸಲು ಡಿಮಲ್ಟಿಪ್ಲೆಕ್ಸರರ್‌ಗಳು ಕೆಲವೊಮ್ಮೆ ಅನುಕೂಲಕರವಾಗಿರುತ್ತವೆ, ಏಕೆಂದರೆ ಡಿಮಲ್ಟಿಪ್ಲೆಕ್ಸರ್‌ನ ಇನ್‌ಪುಟ್ ನಿರಂತರವಾಗಿ ನಿಜವಾಗಿದ್ದರೆ ಡಿಮಲ್ಟಿಪ್ಲೆಕ್ಸರ್ ಬೈನರಿ ಡಿಕೋಡರ್ ಆಗಿ ಕಾರ್ಯನಿರ್ವಹಿಸುತ್ತದೆ. ಹಾಗೆಂದರೆ ಸರಿಯಾದ ಔಟಪುಟಗಳನ್ನು ತರ್ಕಬದ್ಧ ಅಥವಾದ (ತರ್ಕಬದ್ಧ 'ಆರ್') ಮೂಲಕ ವಿನ್ಯಾಸ ಮಾಡಿದರೆ ಆಯ್ಕೆ ಬಿಟಿನ್ನ ಯಾವುದೇ ಕಾರ್ಯವನ್ನು ನಿರ್ವಹಿಸಬಹುದು.
೨ ರಿಂದ ೧ ಡಿಮಲ್ಟಿಪ್ಲೆಕ್ಸರ್ ಬೂಲಿಯನ್ ಸಮೀಕರಣದಿಂದ ಸಾದಿಸಬಹುದು , ಅಲ್ಲಿ A ಮತ್ತು B ಎರಡು ಔಟಪುಟಗಳು ಮತ್ತು S ಆಯ್ಕೆದಾರ ಇನ್‌ಪುಟ್. ಸಮೀಕರಣವು,
ಡಿಮಲ್ಟಿಪ್ಲೆಕ್ಸರ್ ಐಸಿಗಳ ಪಟ್ಟಿ
ಬದಲಾಯಿಸಿಐಸಿ ಸಂಖ್ಯೆ | ಕಾರ್ಯ | ಔಟ್ಪುಟ್ |
---|---|---|
೭೪x೧೩೯ | ದ್ವಿ ೧:೪ ಡಿಮಕ್ಸ್ | ಇನ್ಪುಟ್ಗೆ ಪೂರಕವಾದ ಔಟ್ಪುಟ್ |
೭೪x೧೫೬ | ದ್ವಿ ೧:೪ ಡಿಮಕ್ಸ್ | ಒಂದೇ ರೀತಿಯ ಇನ್ಪುಟ್ ಹಾಗು ಔಟ್ಪುಟ್ |
೭೪x೧೩೮ | ೧:೮ ಡಿಮಕ್ಸ್ | ಇನ್ಪುಟ್ಗೆ ಪೂರಕವಾದ ಔಟ್ಪುಟ್ |
೭೪x೨೩೮ | ೧:೮ ಡಿಮಕ್ಸ್ | |
೭೪x೧೫೪ | ೧:೧೬ ಡಿಮಕ್ಸ್ | ಇನ್ಪುಟ್ಗೆ ಪೂರಕವಾದ ಔಟ್ಪುಟ್ |
೭೪x೧೫೯ | ೧:೧೬ ಡಿಮಕ್ಸ್ | ಒಂದೇ ರೀತಿಯ ಇನ್ಪುಟ್ ಹಾಗು ಔಟ್ಪುಟ್ |
ದ್ವಿ-ದಿಕ್ಕಿನ ಮಲ್ಟಿಪ್ಲೆಕ್ಸರ್
ಬದಲಾಯಿಸಿದ್ವಿ-ದಿಕ್ಕಿನ ಮಲ್ಟಿಪ್ಲೆಕ್ಸರ್‌ಗಳನ್ನು ಆಯ್ಕೆ ಪಿನ್ಗಳಿಂದ ನಿಯಂತ್ರಿಸಲ್ಪಡುವ ನಿಯಂತ್ರಕ ಸ್ವಿಚ್‌ಗಳನ್ನು ಸ೦ಚಾರಣೆ ಬಾಗಿಲನ್ನು ಬಳಸಿ ನಿರ್ಮಿಸಲಾಗುತ್ತದೆ. ಇದು ಇನ್‌ಪುಟ್ ಮತ್ತು ಔಟ್ಪುಟ್ ಪಾತ್ರಗಳನ್ನು ಪರಸ್ಪರ ಬದಲಾಯಿಸಲು ಅನುಮತಿಸುತ್ತದೆ. ಇದರಿಂದಾಗಿ ದ್ವಿ-ದಿಕ್ಕಿನ ಮಲ್ಟಿಪ್ಲೆಕ್ಸರ್ ಡಿಮಲ್ಟಿಪ್ಲೆಕ್ಸರ್ ಆಗಿಯೂ ಮತ್ತು ಮಲ್ಟಿಪ್ಲೆಕ್ಸರ್ ಆಗಿಯೂ ಕಾರ್ಯನಿರ್ವಹಿಸಬಹುದು.
ಬೂಲಿಯನ್ ಲಾಜಿಕ ಕಾರ್ಯಗಳನ್ನು ನಿರ್ವಹಿಸಲು ಮಲ್ಟಿಪ್ಲೆಕ್ಸರ್
ಬದಲಾಯಿಸಿಬೂಲಿಯನ್ ಲಾಜಿಕ ಕಾರ್ಯಗಳನ್ನು ನಿರ್ವಹಿಸಲು ಮಲ್ಟಿಪ್ಲೆಕ್ಸರ್‌ಗಳನ್ನು ಬಳಸಬಹುದು. 'n' ಚರಾಂಶಗಳನ್ನು ಹೊಂದಿರುವ ಯಾವುದೇ ಬೂಲಿಯನ್ ಲಾಜಿಕ ಕಾರ್ಯವನ್ನು 'n' ಆಯ್ಕೆ ಪಿನ್‌ಗಳನ್ನು ಹೊಂದಿರುವ ಮಲ್ಟಿಪ್ಲೆಕ್ಸರ್‌ನೊಂದಿಗೆ ಅನುಷ್ಠಾನಗೊಳಿಸಬಹುದು. ಚರಾಂಶಗಳನ್ನು ಆಯ್ಕೆ ಪಿನ್‌ಗಳಿಗೆ ಸಂಪರ್ಕಿಸಲಾಗುತ್ತದೆ, ಮತ್ತು ಆಯ್ಕೆ ಪಿನ್‌ಗಳ ಪ್ರತಿಯೊಂದು ಸಂಯೋಜನೆಗೆ ನಿರೀಕ್ಷಿತ ೦ ಅಥವಾ ೧ ಫಲಿತಾಂಶವನ್ನು ಅನುಗುಣವಾದ ಡೇಟಾ ಇನ್‌ಪುಟ್‌ಗೆ ಸಂಪರ್ಕಿಸಲಾಗುತ್ತದೆ. ಒಂದು ಚರಾಂಶ (ಉದಾಹರಣೆಗೆ, D) ಪೂರಕವಾಗಿಯೂ ಲಭ್ಯವಿದ್ದರೆ, 'n-೧' ಆಯ್ಕೆ ಪಿನ್‌ಗಳನ್ನು ಹೊಂದಿರುವ ಮಲ್ಟಿಪ್ಲೆಕ್ಸರ್ ಸಾಕು. ಈ ಸಂದರ್ಭದಲ್ಲಿ, ಆಯ್ಕೆ ಪಿನ್‌ಗಳ ಪ್ರತಿಯೊಂದು ಸಂಯೋಜನೆಗೂ ನಿರೀಕ್ಷಿತ ಫಲಿತಾಂಶವನ್ನು ಪಡೆಯಲು ೦ ,೧ , ಮೂಲ ಚರಾಂಶ D, ಅಥವಾ ಪೂರಕ ಚರಾಂಶ ~D ಗೆ ಡೇಟಾ ಇನ್‌ಪುಟ್‌ಗಳನ್ನು ಸಂಪರ್ಕಿಸಲಾಗುತ್ತದೆ.