2230984ShreyasCR
ಚೇರಾ ರಾಜವಂಶವು, ಸಂಗಮ್ ಯುಗದ ರಾಜವಂಶವಾಗಿದೆ. ಅವರು ಪಶ್ಚಿಮ ಕರಾವಳಿಯ ವಿವಿಧ ಪ್ರದೇಶಗಳನ್ನು ಮತ್ತು ದಕ್ಷಿಣ ಭಾರತದಲ್ಲಿ ಪಶ್ಚಿಮ ಘಟ್ಟಗಳನ್ನು ಒಗ್ಗೂಡಿಸಿ, ಆರಂಭಿಕ ಚೇರಾ ಸಾಮ್ರಾಜ್ಯವನ್ನು ರಚಿಸಿದ್ದರು .ಚೇರ ದೇಶವು, ಭೌಗೋಳಿಕವಾಗಿ ವಿಸ್ತಾರವಾದ ಹಿಂದೂ ಮಹಾಸಾಗರದ ಜಾಲಗಳ ಮೂಲಕ, ಕಡಲ ವ್ಯಾಪಾರದಿಂದ ಲಾಭವನ್ನು ಗಳಿಸಲು ಪ್ರಾರಂಭಿಸಿದರು. ಮಸಾಲೆಗಳ ವಿನಿಮಯ ಮಾಡುತ್ತಾ ಇದ್ದ ಈ ರಾಜವಂಶ, ವಿಶೇಷವಾಗಿ ಕರಿಮೆಣಸಿನ ವ್ಯಾಪಾರದಲ್ಲಿ ತೊಡಗಿದ್ದರು,ಮಧ್ಯಪ್ರಾಚ್ಯ ಮತ್ತು ಗ್ರೇಕೊ-ರೋಮನ್ ವ್ಯಾಪಾರಿಗಳೊಂದಿಗೆ ಹಲವಾರು ಮೂಲಗಳಲ್ಲಿ ಈ ವಿಷಯವನ್ನು ದೃಢೀಕರಿಸಲಾಗಿದೆ. ಆರಂಭಿಕ ಐತಿಹಾಸಿಕ ಅವಧಿಯ (ಎರಡನೇ ಶತಮಾನ - ಮೂರನೇ ಶತಮಾನ) ಚೇರರು ಕೇರಳದ ‘ಕುಟ್ಟನಾಡ್’ನಲ್ಲಿ ತಮ್ಮ ಮೂಲ ಕೇಂದ್ರವನ್ನು ಹೊಂದಿದ್ದರು. ಮಲಬಾರ್ ಕರಾವಳಿಯ ದಕ್ಷಿಣದಲ್ಲಿ ಆಲಪ್ಪುಳದ ನಡುವೆ ಉತ್ತರದಲ್ಲಿ ಕಾಸರಗೋಡಿನ ಪ್ರದೇಶವನ್ನು ಆಳುತ್ತಿದ್ದರು . ಕೊಯಮತ್ತೂರಿನ ಸುತ್ತಮುತ್ತಲಿನ ಪ್ರದೇಶವನ್ನು ಚೇರರು ಸಂಗಮ್ ಅವಧಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅವರು ಮಧುರೈನ ಪಾಂಡ್ಯ ರಾಜವಂಶದ ಜೊತೆಗೆ, ಇವರ ಒಡನಾಟವಿತ್ತು. ‘ಚೇರಲಂದೀವು’ ಅಥವಾ ‘ಚೇರನ್ ತೀವು’ ಮತ್ತು ಅದಕ್ಕೆ ಸಂಬಂಧಿಸಿದ ಹೆಸರಾದ "ಚೇರ ರಾಜರ ದ್ವೀಪ", ಎಂಬುದು ಶ್ರೀಲಂಕಾದ ಶಾಸ್ತ್ರೀಯ ತಮಿಳು ಹೆಸರು ಮತ್ತು ವಿಶೇಷ ವಾಗಿ, ಇದರಿಂದ "ಚೇರ" ಪದ ವು ಬೇರೂರಿದೆ.
ಪ್ರಾಚೀನ ಕಾಲದಿಂದ ಆಧುನಿಕ ಕಾಲದ ಆರಂಭದವರೆಗೆ ಚೇರ ಸಾಮ್ರಾಜ್ಯದ ರಾಜ್ಯ ರಚನೆಯ ವ್ಯಾಪ್ತಿ ಮತ್ತು ಸ್ವರೂಪವನ್ನು ಅಥೈ೯ಸಿಕೊಳ್ಳಲು ಕಷ್ಟ ವಾಗಿದೆ. ಆದರೆ ಒಂದೊಂದು ಸೂತ್ರಗಳ ಪ್ರಕಾರ ಪೂರ್ವ-ಪಲ್ಲವ ದಕ್ಷಿಣ ಭಾರತದಲ್ಲಿ ರಾಜಕೀಯ ರಚನೆಯ ವ್ಯಾಪ್ತಿಯು ಇತಿಹಾಸಕಾರರಲ್ಲಿ ಗಣನೀಯ ಚರ್ಚೆಯ ವಿಷಯವಾಗಿತ್ತು. ಮುಂಚಿನ ವಿದ್ವಾಂಸರು ದಕ್ಷಿಣ ಭಾರತದ ರಾಜಯಗಳನ್ನು ಪೂರ್ಣ ಪ್ರಮಾಣದ ರಾಜ್ಯಗಳಾಗಿ ದೃಶ್ಯೀಕರಿಸಿದರೂ, ಇತ್ತೀಚಿನ ಕೆಲವು ಅಧ್ಯಯನಗಳು ರಾಜ್ಯ ರಚನೆಯ ಸಾಧ್ಯತೆಯನ್ನು ತಳ್ಳಿಹಾಕಿವೆ. ಇತಿಹಾಸಕಾರ ರಾಜನ್ ಗುರುಕ್ಕಲ್ ರವರ ಪ್ರಕಾರ, ಪ್ರಾಚೀನ ದಕ್ಷಿಣ ಭಾರತವು ಹಲವಾರು "ಅಸಮಾನವಾಗಿ ವಿಕಸನಗೊಂಡ ಮತ್ತು ರಕ್ತಸಂಬಂಧ ಆಧಾರಿತ ಮರುವಿತರಣಾ ಆರ್ಥಿಕತೆಯ ಮುಖ್ಯಸ್ಥರ" ಸಂಯೋಜನೆಯಾಗಿತ್ತು. ಆರಂಭಿಕ ತಮಿಳು ಕವಿತೆಗಳು ಮತ್ತು ಪುರಾತತ್ತ್ವ ಶಾಸ್ತ್ರದ ಪುರಾವೆಗಳ ಆಧಾರದ ಮೇಲೆ ತೀರ್ಮಾನಗಳನ್ನು ತಲುಪುವುದು ಭಿನ್ನಾಭಿಪ್ರಾಯದ ಮತ್ತೊಂದು ವಿಷಯವಾಗಿದೆ. ಸ್ಥಳೀಯ ಆಡಳಿತಕ್ಕಾಗಿ ದಕ್ಷಿಣ ಭಾರತದ ಹಳ್ಳಿಗಳಲ್ಲಿ ಸಭಾ ಸಂಸ್ಥೆಯು ಮೊದಲ ಐತಿಹಾಸಿಕ ಅವಧಿಯಲ್ಲಿ ಹೊರಹೊಮ್ಮಿತು ಎಂದು ಊಹಿಸಲಾಗಿದೆ.
ಸಾಮಾನ್ಯವಾಗಿ, ಆರಂಭಿಕ ತಮಿಳು ಪಠ್ಯಗಳು ದಕ್ಷಿಣ ಭಾರತದ ಸಾಂಸ್ಕೃತಿಕ ಸಂಪ್ರದಾಯ ಮತ್ತು ಉತ್ತರ ಭಾರತೀಯ ಸಾಂಸ್ಕೃತಿಕ ಸಂಪ್ರದಾಯದ ಅಂಶಗಳನ್ನು ಪ್ರತಿಬಿಂಬಿಸುತ್ತವೆ, ಇವು ಈಗ ದಕ್ಷಿಣ ಭಾರತದೊಂದಿಗೆ ಸಂಪರ್ಕದಲ್ಲಿತ್ತು. ಹೆಚ್ಚಿನ ಚೇರ ಜನಸಂಖ್ಯೆಯು ಗ್ರಾಮೀಣ ದ್ರಾವಿಡ ಧರ್ಮಗಳನ್ನು ಅನುಸರಿಸುತ್ತಿದವು ಎಂಬ ವಿಷಯ ಇನ್ನೂ ಚಚೆ೯ಯಲ್ಲಿದೆ. ಧಾರ್ಮಿಕ ಆಚರಣೆಯು, ಮುಖ್ಯವಾಗಿ ವಿವಿಧ ದೇವರುಗಳಿಗೆ ಬಲಿಗಳನ್ನು ಕೊಡುವುದನ್ನು, ಅದರಲ್ಲೂ ಮುರುಗನ್ (ಸುಬ್ರಹ್ಮಣ್ಯ ಸ್ವಾಮಿ) ಗೆ ಬಲಿ ಅರ್ಪಿಸುವ ಉದಾಹರಣೆಯನ್ನು ಕಾಣಬಹುದು. ಚೇರ ಸೀಮೆಯಲ್ಲಿ ವೃಕ್ಷ ಪೂಜೆ ಮತ್ತು ಪಿತೃಗಳ ಆರಾಧನೆಯೊಂದಿಗೆ ಅಗಲಿದ ಯೋಧರ ಆರಾಧನೆಯು ಸಹ ಒಂದು ಸಾಮಾನ್ಯ ಅಭ್ಯಾಸವಾಗಿತ್ತು. ಯುದ್ಧ ದೇವತೆ ಕೊರ್ರವಾಯಿಯನ್ನು ಮಾಂಸದಿಂದ ಮಾಡಿದ ವಿಸ್ತಾರವಾದ ನೈವೇದ್ಯಗಳೊಂದಿಗೆ ಪ್ರತಿಷ್ಠಾಪಿಸುತಿದ್ದರು. ಕೊಟ್ಟವ್ವ (ಕೊಟ್ರವೈ) ಇಂದಿನ ದುರ್ಗಾ ದೇವಿಯ ರೂಪದಲ್ಲಿ ಸಂಯೋಜಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಚೇರ ದೇಶದಲ್ಲಿ ಮುಖ್ಯವಾಗಿ ವಲಸಿಗರು, ಜೈನ ಧರ್ಮ, ಬೌದ್ಧಧರ್ಮ ಮತ್ತು ಬ್ರಾಹ್ಮಣ ಧರ್ಮವನ್ನು ಅನುಸರಿಸಿದರು. ಯಹೂದಿಗಳು ಮತ್ತು ಕ್ರಿಶ್ಚಿಯನ್ನರ ಜನಸಂಖ್ಯೆಯು ಕೇರಳದಲ್ಲಿ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ. ಚೇರ ದೇಶದಲ್ಲಿ ಸ್ತ್ರೀ ಯರು ಉನ್ನತವಾದ ಸ್ಥಾನವನ್ನು ಹೊಂದಿರುವ ವಿಷಯವು ಒಂದು ಗಮನಾರ್ಹ ವಿಚಾರ. ಕೃಷಿ ಮತ್ತು ಪಶುಪಾಲನೆ, ಜನರ ಪ್ರಮುಖ ಉದ್ಯೋಗವಾಗಿತ್ತು. ಕೊಯ್ಲು, ಒಕ್ಕಲು ಮತ್ತು ಒಣಗಿಸುವಿಕೆಯಂತಹ ವಿವಿಧ ಕೃಷಿ ಉದ್ಯೋಗಗಳನ್ನು ಆರಂಭಿಕ ತಮಿಳು ಪಠ್ಯಗಳಲ್ಲಿ ವಿವರಿಸಲಾಗಿದೆ. ಕವಿಗಳು ಮತ್ತು ಸಂಗೀತಗಾರರಿಗೆ ಸಮಾಜದಲ್ಲಿ ಹೆಚ್ಚಿನ ಗೌರವವನ್ನು ನೀಡಲಾಗಿತ್ತು. ಪುರಾತನ ಆಸ್ಥಾನದ ತಮಿಳು ಕವಿಗಳಿಗೆ ನೀಡಲಾದ ಪ್ರೋತ್ಸಾಹದ ಬಗ್ಗೆ ಉಲ್ಲೇಖಿಸಲಾಗಿದೆ. ವೃತ್ತಿಪರ ಕವಿಗಳು ಮತ್ತು ಕವಯಿ ಯತ್ರಿ ಗಳು ತಮ್ಮ ರಚನೆಗಳಿಗೆ ಬಹುಮಾನಗಳನ್ನು ಪಡೆಯುತ್ತಿದ್ದರು.
ಚೇರ ಪೆರುಮಾಳ್-
ತಮಿಳುನಾಡಿನಲ್ಲಿ ಪಲ್ಲವ ಮತ್ತು ಪಾಂಡ್ಯ ದೊರೆಗಳು ಸ್ಥಾಪಿಸಿದ್ದರೆ, ೯ನೇ ಶತಮಾನದಲ್ಲಿ, ಚೇರ ಪೆರುಮಾಳ್ "ರಿಂದ ರಾಜ್ಯದ ಸ್ಥಾಪನೆಯಾಯಿತು ವಿಷ್ಣು ಭಕ್ತರಾದ ವಿದ್ವಾನ್, ಸಂತ ಕುಲಶೇಖರ ಮತ್ತು ನಾಯನಾರ್ ಸಂತ, ಚೆರ್ಮನ್ ಪೆರುಮಾಳ್ ರನ್ನು ಆರಂಭಿಕ ಪೆರುಮಾಲ್‌ಗಳೊಂದಿಗೆ ಗುರುತಿಸುತ್ತಾರೆ.
ಚೋಳರು ಮತ್ತು ಚೇರರು-
ಕೊಂಗು ದೇಶವನ್ನು ಚೋಳರು (ಶ್ರೀಕಂಠ ಅಥವಾ ಆದಿತ್ಯ ಚೋಳರಿಂದ) ೯ನೇ ಶತಮಾನದ ಕೊನೆಯ ವರ್ಷಗಳಲ್ಲಿ ವಶಪಡಿಸಿಕೊಂಡರು (ಈ ಅಭಿಯಾನವು ಬಹುಶಃ ಆದಿತ್ಯ I ಮತ್ತು ಪರಾಂತಕ ವೀರ ನಾರಾಯಣ ನಡುವಿನ ಯುದ್ಧಗಳನ್ನು ಒಳಗೊಂಡಿತ್ತು). ಶ್ರೀಪುರಂಬಿಯಂನ "ಮಹಾ ಯುದ್ಧ"ದಲ್ಲಿ ಪಾಂಡ್ಯರು ಅಂತಿಮವಾಗಿ ಸೋಲಿಸಲ್ಪಟ್ಟರು.೯೧೦ಯಲ್ಲಿ ಚೋಳ ರಾಜ ಪರಾಂತಕನಿಂದ ಪಾಂಡ್ಯರನ್ನು ಸೋಲಿಸಲಾಯಿತು (ಮಧುರೈ ಪತನದ ನಂತರ ಕೊಂಗು ಚೇರರು ಆಳಿದ ಕೊಂಗು ಚೇರ ದೇಶದ ಬಗ್ಗೆ ಮಾಹಿತಿ ಇಲ್ಲ). ಪರಾಂತಕ ಚೋಳನಿಂದ ಸೋಲಿಸಲ್ಪಟ್ಟ ಪಾಂಡ್ಯ ರಾಜ ರಾಜಸಿಂಹ II, ಕೇರಳ ಅಥವಾ ಚೇರ ದೇಶದಲ್ಲಿ (ಸುಮಾರು ೯೨೦ CE) ಆಶ್ರಯವನ್ನು ಕಂಡುಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಸುಂದರ ಚೋಳನು ಕೇರಳದ, ಅಂದರೆ, ಚೇರ ರಾಜಕುಮಾರಿಯನ್ನು ವಿವಾಹವಾಗಿದ್ದನು ಎಂದು ತಿಳಿದಿದೆ. ಕೊಂಗು ಚೇರ ದೇಶವನ್ನು (ಮತ್ತು ಚೇರ ಪೆರುಮಾಳ್ ರಾಜ್ಯ) ಚೋಳರು ವಶಪಡಿಸಿಕೊಂಡರು. ಅಮರ ಭುಜಂಗ ದೇವ, ರಾಜರಾಜ ಚೋಳನಿಂದ ಪಾಂಡ್ಯ ಅಥವಾ ಚೇರ ರಾಜಕುಮಾರನನ್ನು ಸೋಲಿಸಿದರು ಎಂದು ಉಲ್ಲೇಖಿಸಲಾಗಿದೆ.