ಸದಸ್ಯ:2230174harshithas/ನನ್ನ ಪ್ರಯೋಗಪುಟ

ಡಿಸ್ಲೆಕ್ಸಿಯಾ: ಗುಣಲಕ್ಷಣಗಳು ಹಾಗೂ ಅದರ ನಿರ್ವಹಣೆ

ಬದಲಾಯಿಸಿ
 
ಡಿಸ್ಲೆಕ್ಸಿಯಾ

ಡಿಸ್ಲೆಕ್ಸಿಯಾ ಪ್ರಧಾನವಾಗಿ ಮಾತುಗಳ ದೃಶ್ಯಾಂಶನದಲ್ಲಿ ಸಮಸ್ಯೆಗಳನ್ನು ರೂಪಿಸುವ ಒಂದು ಕಾಯಿಲೆ ಎಂದು ಪರಿಗಣಿಸಲ್ಪಟ್ಟಿದೆ. ಇದು ಯುರೋಪಿಯನ್ ಮೂಲದ ಭಾಷೆಗಳಲ್ಲಿರುವ ಧ್ವನಿಗತ ಅಥವಾ 'ಫೊನೆಟಿಕ್' ನಿರ್ಮಾಣಕ್ಕೆ ಸಂಬಂಧಿಸಲ್ಪಟ್ಟಿದೆ. ಉದಾಹರಣೆಗೆ,  ಸಂಪೂರ್ಣ ವಾಕ್ಯಗಳನ್ನು ರಚಿಸುವುದರಲ್ಲಿ ಅಥವಾ ಮಾತನಾಡುವುದರಲ್ಲಿ ಸಮಸ್ಯೆ; 'ರ', 'ಲ', 'ಮ' ಶಬ್ದಗಳನ್ನು ಉಚ್ಚರಿಸಿವುದರಲ್ಲಿ ತೊಂದರೆ; ಒಂದೇ ರೀತಿಯ ಶಬ್ದದ ಪದಗಳನ್ನು ಬಳಕೆ ಮಾಡುವಾಗ ಗೊಂದಲಕ್ಕೆ ಒಳಗಾಗುತ್ತಾರೆ.

ಡಿಸ್ಲೆಕ್ಸಿಯಾದ ಲಕ್ಷಣಗಳನ್ನು ಭಾಷೆಗಳ ಸಂಶೋಧನೆಯ ಮೂಲಕ, ವಿಶೇಷವಾಗಿ  ವರ್ಣಮಾಲೆಯ ಸಂಶೋಧನೆಯ ಮೂಲಕ ಗುರುತಿಸಲಾಗಿದೆ. ಈ ಗುಣಲಕ್ಷಣಗಳು ಹಲವಾರು ಭಾಷೆಗಳ ವರ್ಣಮಾಲೆಯಲ್ಲಿಯೂ  ಕಾಣಿಸಿಕೊಳ್ಳಬಹುದು.

ಡಿಸ್ಲೆಕ್ಸಿಯಾದ ಮೂಲಕಾರಣಗಳನ್ನು ಇನ್ನೂ ಸರಿಯಾಗಿ ವಿವರಿಸಲಾಗಿಲ್ಲ. ಆದರೆ ವಿಜ್ಞಾನಿಗಳು ಡಿಸ್ಲೆಕ್ಸಿಯಾವನ್ನು 'ಧ್ವನಿಗತದ ಸಂಸ್ಕರಣೆಯ ವ್ಯಾಧಿ' ಅಥವಾ 'ಫೋನೊಲೊಜಿಕಲ್ ಪ್ರೊಸೆಸಿಂಗ್ ಡಿಸ್ಆರ್ಡರ್' ಎಂದು ನಂಬುತ್ತಾರೆ.  ಡಿಸ್ಲೆಕ್ಸಿಯಾದಿಂದ ಬಳಲುತ್ತಿರುವವರು ಸರಿಯಾಗಿ ಓದಲಾಗದ ಅಥವಾ ಸರಿಯಾಗಿ ಕೇಳಿಸದ ಪದಗಳನ್ನು ಪ್ರತ್ಯೇಕ ಶಬ್ದಗಳಿಗೆ ಬದಲಾಯಿಸಿ, ಅನಂತರ ಆ ಶಬ್ದವನ್ನು ಆ ಪದಕ್ಕೆ ಸಂಯೋಜಿಸಿ ಪದಗಳನ್ನು ಅರ್ಥಮಾಡಿಕೊಳ್ಳುತ್ತಾರೆ. ಡಿಸ್ಲೆಕ್ಸಿಯಾ ಇರುವ ಒಂದಷ್ಟು ಜನರಲ್ಲಿ ದೃಷ್ಟಿಯ ಕೊರತೆಗಳು ಮತ್ತು 'ಫೊನೀಮ್' ಸಂಸ್ಕರಣೆಯ ಕೊರತೆಗಲುಂಟಾಗುವವು ಎಂದು ಕೆಲವು ವಿಜ್ಞಾನಿಗಳು ನಂಬುತ್ತಾರೆ. ಆದರೆ ಈ ನಂಬಿಕೆ ಎಲ್ಲರದಲ್ಲ. ಡಿಸ್ಲೆಕ್ಸಿಯಾ ಹೊಂದಿರುವ ಜನರು ಅಕ್ಷರಗಳ ರೂಪವನ್ನು ಬದಲಾಯಿಸಿ ನೋಡುತ್ತಾರೆ ಎಂಬುದಕ್ಕೆ ಯಾವುದೇ ಸಾಕ್ಷಿ ಇಲ್ಲ. ಡಿಸ್ಲೆಕ್ಸಿಯಾ ಭಾಷೆಗೆ ಸಂಬಂಧಪಟ್ಟ ಒಂದು ವ್ಯಾಧಿ, ದೃಷ್ಟಿಯ ದೋಷವಲ್ಲ.

ಡಿಸ್ಲೆಕ್ಸಿಯಾ ಇಂದ ಬಳಲುತ್ತಿರುವವರಿಗೆ ನೆನಪಿನ ಶಕ್ತಿಯ ದುರ್ಬಲತೆಯ ಕಾರಣದಿಂದ ಹೊಸ ಪದಗಳನ್ನು ನೆನಪಿಟ್ಟುಕೊಳ್ಳುವುದು ಕಷ್ಟವೆನಿಸುತ್ತದೆ. ವಾಚಕ ಸೂಚನೆಗಳು ಅಥವಾ ಆದೇಶಗಳನ್ನು ನೆನಪಿಟ್ಟುಕೊಳ್ಳುವುದು ಸಹ ಒಂದು ಕಷ್ಟವೆನಿಸಬಹುದು. ಇಂತಹ ಭಾಷೆಯ ರಚನೆಯನ್ನು ಅಭ್ಯಾಸ ಮಾಡದಿದ್ದವರು ಪದಗಳ ಉಚ್ಚಾರಣೆ ಮತ್ತು ಅಕ್ಷರ ಸಂಯೋಜನೆಯ ವಿಷಯದಲ್ಲಿ ಬೇರೆಯವರ ಮೇಲೆ ಅವಲಂಬಿತರಾಗುತ್ತಾರೆ.

ರೋಗ ಸೂಚನೆ ಹಾಗೂ ಲಕ್ಷಣಗಳು

ಬದಲಾಯಿಸಿ
 
ಭಾಷೆಯ ವ್ಯವಸ್ಥೆ

ಡಿಸ್ಲೆಕ್ಸಿಯಾದ ರೋಗಲಕ್ಷಣಗಳು ರೋಗದ ತೀವ್ರತೆ ಮತ್ತು ವ್ಯಕ್ತಿಯ ವಯಸ್ಸಿನ ಮೇಲೆ ಆಧಾರಿತವಾಗಿರುತ್ತದೆ. ಇದರ ಆಧಾರಿತವಾಗಿ, ಡಿಸ್ಲೆಕ್ಸಿಯಾ ವಿವಿಧ ರೀತಿಗಳಲ್ಲಿ ಕಾಣಿಸಿಕೊಳ್ಳುತ್ತದೆ.

ಶಾಲೆಗೆ ಹೋಗುವ ಹಂತಕ್ಕಿಂತ ಮೊದಲಿನ ಮಕ್ಕಳು

ಶಾಲೆಗೆ ಹೋಗುವ ಹಂತಕ್ಕಿಂತ ಮೊದಲಿರುವ ಮಕ್ಕಳಲ್ಲಿ ಈ ರೋಗದ ರೋಗ ಲಕ್ಷಣ ಕಂಡಿಹಿಡಿಯುವುದು ಕಷ್ಟಕರವಾದುದು. ಆದರೆ ಕೆಲವು ಡಿಸ್ಲೆಕ್ಸಿಯಾ ಹೊಂದಿರುವ ಮಕ್ಕಳಲ್ಲಿ ಈ ತೊಂದರೆಯು 'ಕಿಂಡರ್ಗಾರ್ಟನ್'ನ ವಯಸ್ಸಿನ ಮೊದಲೇ ಕಾಣುಬರುತ್ತದೆ. ಈ ಹಂತದಲ್ಲಿ ರೋಗಲಕ್ಷಣಗಳನ್ನು ಪ್ರಕಟಪಡಿಸುವ ಮಕ್ಕಳಲ್ಲಿ ಡಿಸ್ಲೆಕ್ಸಿಯಾ ಹೊಂದಿರುವ ಇತರರಿಗಿಂತ ಹೆಚ್ಚಿಗೆ ಅಪಾಯ ಕಂಡುಬರುತ್ತದೆ. ಇವುಗಳಲ್ಲಿನ ಕೆಲವು ರೋಗಲಕ್ಷಣಗಳು ಹೀಗಿವೆ:

  • ಹೊಸ ಶಬ್ಧಗಳನ್ನು ಕಲಿಯುವಿಕೆಯಲ್ಲಿ ನಿಧಾನತೆ
  • ನರ್ಸರಿ ಪ್ರಾಸಪದ್ಯಗಳಲ್ಲಿನ ಪ್ರಾಸ ಶಬ್ಧಗಳ ರೀತಿಯ ಶಬ್ಧಗಳ ಕುರಿತಾದ ತೊಂದರೆ
  • ಪ್ರಮುಖವಾಗಿ ಉಪಯೋಗಿಸುವ ಕೈ ಯಾವುದು ಎಂದು ನಿರ್ಧರಿಸುವುದರಲ್ಲಿ ಹೆಚ್ಚಿನ ಸಮಯ ತೆಗೆದುಕೊಳ್ಳುವುದು
ಎಲಿಮೆಂಟರಿ ಶಾಲೆಗೆ ಮೊದಲಿನ ವಯಸ್ಸಿನ ಮಕ್ಕಳ
  • ವರ್ಣಮಾಲೆಗಳ ಕಲಿಕೆಯಲ್ಲಿ ತೊಂದರೆ
  • ವರ್ಣಗಳು ಹೊರಡಿಸುವ ಶಬ್ಧವನ್ನು ಗ್ರಹಿಸುವಲ್ಲಿ ತೊಂದರೆ (ಶಬ್ಧ ಮತ್ತು ಸಂಜ್ಞೆಯ ಹೊಂದಾಣಿಕೆ)
  • ಪ್ರಾಸಪದಗಳನ್ನು ಗುರುತಿಸುವಲ್ಲಿ ಅಥವಾ ಸೃಷ್ಟಿಸುವಲ್ಲಿ ತೊಂದರೆ ಅಥವಾ ಒಂದು ಶಬ್ದದಲ್ಲಿಯ ಮಾತ್ರಾಗಣಗಳನ್ನು ಲೆಕ್ಕಹಾಕುವಲ್ಲಿ ಸಮಸ್ಯೆ. ಶಬ್ಧಗಳನ್ನು ಪ್ರತ್ಯೇಕ ಧ್ವನಿಯಾಗಿ ಗುರುತಿಸುವುದರಲ್ಲಿ ಸಮಸ್ಯೆ ಅಥವಾ ಬೇರೆ ಶಬ್ಧಗಳನ್ನು ರಚಿಸಲು ಧ್ವನಿಯನ್ನು ವಿವಿಧ ರೀತಿಯಲ್ಲಿ ಸಂಯೋಜಿಸುವುದರಲ್ಲಿನ ಸಮಸ್ಯೆ.
  • ಶಬ್ಧ ಪತ್ತೆಹಚ್ಚುವಲ್ಲಿನ ಅಥವಾ ಹೆಸರಿಸುವುದರಲ್ಲಿಯ ಸಮಸ್ಯೆ
  • ಶಬ್ಧಗಳನ್ನು ವಿಭಾಗಿಸುವುದರಲ್ಲಿಯ ಕಲಿಕೆಯಲ್ಲಿಯ ತೊಂದರೆ
  • ಮೊದಲು/ನಂತರ, ಎಡ/ಬಲ, ಮೇಲೆ/ಕೆಳಗೆ ಈ ರೀತಿಯ ಹಲವಾರು ಶಬ್ಧಗಳ ಕುರಿತಾದ ಗೊಂದಲ.
  • ಒಂದೇ ರೀತಿಯ ಶಬ್ಧಗಳಲ್ಲಿನ ಧ್ವನಿಯನ್ನು ಗುರುತಿಸುವಲ್ಲಿ ಸಮಸ್ಯೆ ಮತ್ತು ಗೊಂದಲ; ಹೆಚ್ಚು ಮಾತ್ರಾಗಣಗಳಿರುವ ಶಬ್ಧಗಳ ಧ್ವನಿಯನ್ನು ಕೂಡಿಸಿಬಿಡುವುದು (ಉದಾಹರಣೆಗೆ "aminal" ಎಂದು animal ಶಬ್ಧವನ್ನೂ, spaghetti ಶಬ್ಧವನ್ನು "bisghetti" ಎಂದೂ ಉಚ್ಚಾರಿಸುವುದು.
ಹಿರಿಯ ಪ್ರಾಥಮಿಕ ಶಾಲೆ ಮಕ್ಕಳು
  • ನಿಧಾನ ಅಥವಾ ತಪ್ಪಾದ ಓದುವಿಕೆ
  • ಅತಿ ಕಳಪೆ ಮಟ್ಟದ ಕಾಗುಣಿತ
  • ವೈಯಕ್ತಿಕ ಶಬ್ಧಗಳ ಜೊತೆಗೆ ಅದರ ಸರಿಯಾದ ಅರ್ಥಗಳಿಗೆ ಸಂಬಂಧಿಸಿದ ತೊಂದರೆ
  • ಸಮಯ ಪ್ರಜ್ಞೆ ಮತ್ತು ಸಮಯ ಹೊಂದಿಸುವ ತೊಂದರೆ
  • ಸಂಘಟನಾ ಕೌಶಲ್ಯದ ತೊಂದರೆ
  • ತಪ್ಪಾಗಿ ಮಾತಾಡುವ ಭಯದಿಂದ ಮಕ್ಕಳು ನಾಚಿಕೆ ಸ್ವಭಾವದವರಾಗುತ್ತಾರೆ ಅಥವಾ
  • ಗ್ರಹಿಸುವ ತ್ವರಿತ ಸೂಚನೆಗಳು ತೊಂದರೆಯು,ಅದೇ ಸಮಯದಲ್ಲಿ ಒಂದು ನಿಯಂತ್ರಣಕ್ಕಿಂತ ಹೆಚ್ಚಾಗಿ ಮುಂದುವರಿಯುತ್ತದೆ ಅಥವಾ ವಿಷಯದ ಸ್ಥಿತಿಯನ್ನು ನೆನಪಿಸಿಕೊಳ್ಳಬೇಕು.
  • ಅಕ್ಷರಗಳ ಅದಲು-ಬದಲು ಮಾಡಿ ಓದುವುದರಲ್ಲಿ ಡಿಸ್ಲೆಕ್ಸಿಯಾಗೆ ಒಳಗಾಗಿರುವಂತಹ ಮಕ್ಕಳ ಲಕ್ಷಣವಾಗಿದೆ. ತಿರುಗುಮುರುಗು ಓದುವಿಕೆಯು ಡಿಸ್ಲೆಕ್ಸಿಯಾಗೆ ಒಳಗಾಗದಿರುವಂತಹ ೬ ವರ್ಷದ ಮಕ್ಕಳು ಮತ್ತು ಹದಿಹರೆಯದವರಿಗೂ ಸಹ ಸಾಮಾನ್ಯವಾಗಿದೆ. ಆದರೆ ಡಿಸ್ಲೆಕ್ಸಿಯಾದ ಜೊತೆಗೆ ತಿರುಗುಮುರುಗುಗಳು ದೃಢವಾಗಿರುತ್ತವೆ.
  • ಡಿಸ್ಲೆಕ್ಸಿಯಾ ಇರುವ ಮಕ್ಕಳು ಅಕ್ಷರಗಳು ಮತ್ತು ಪದಗಳಲ್ಲಿರುವ ಹೋಲಿಕೆಗಳು ಮತ್ತು ವ್ಯತ್ಯಾಸಗಳನ್ನು ಗಮನಿಸಲು(ಮತ್ತು ಸಾಂದರ್ಭಿಕವಾಗಿ ಕೇಳಿಸಿಕೊಳ್ಳಲು) ವಿಫಲರಾಗಬಹುದು, ಬೇರೆ ಬೇರೆ ಪದಗಳಲ್ಲಿರುವ ಸಂಘಟಿತ ಅಕ್ಷರಗಳ ಅಂತರವನ್ನು ಗ್ರಹಿಸದಿರಲೂಬಹುದು,ಮತ್ತು ಅಪರಿಚಿತ ಪದದ ಉಚ್ಛಾರಣೆಯನ್ನು ಉಚ್ಛರಿಸಲು ಅಸಾಧ್ಯವಾಗಬಹುದು. [೧]

ಶ್ರವಣಶಕ್ತಿ, ಭಾಷಣ ಹಾಗೂ ಭಾಷೆ

ಬದಲಾಯಿಸಿ

ಭಾಷಣ ಅಥವಾ ಶ್ರವಣಶಕ್ತಿಯಲ್ಲಿ ಕಂಡುಬರುವ ಕೊರತೆಗಳು ಹಾಗೂ ಡಿಸ್ಲೆಕ್ಸಿಯಾದಿಂದ ಉಂಟಾಗುವ ಸಮಾನ ರೂಪದ ಲಕ್ಷಣಗಳು ಈ ಕೆಳಗಿನಂತಿವೆ:

 
ಡಿಸ್ಕಾಲ್ಕುಲಿಕ್ ಮಗುವಿನ ಬರಹವನ್ನು ಮರೆಮಾಚುವ ಶಿಕ್ಷಕರ ಅಂಕಗಳನ್ನು ಶ್ರೇಣೀಕರಣಿಸಿರುವ ಅಂಕಗಣಿತದ ವರ್ಕ್‌ಶೀಟ್

೧. ಮೊದಲು/ನಂತರ, ಬಲ/ಎಡ, ಇವುಗಳ ನಡುವೆ ಗೊಂದಲ

೨. ವರ್ಣಮಾಲೆಯನ್ನು ಕಲಿಯುವುದರಲ್ಲಿ ತೊಂದರೆ

೩. ಪದಗಳನ್ನು ನೆನಪಿಸಿಕೊಳ್ಳುವುದು ಅಥವಾ ಹೆಸರಿಸುವುದರಲ್ಲಿ ತೊಂದರೆ

೪. ಪ್ರಾಸಬದ್ಧ ಪದಗಳನ್ನು ಗುರುತಿಸುವುದು ಅಥವಾ ರಚಿಸುವುದು ಅಥವಾ ಪದಗಳಲ್ಲಿ ಉಚ್ಚಾರಾಂಶಗಳನ್ನು ಎಣಿಸುವುದರಲ್ಲಿ ಕಷ್ಟ (ಧ್ವನಿಶಾಸ್ತ್ರದ ಅಥವಾ 'ಫೋನೊಲೊಜಿಕಲ್' ಅರಿವು)

೫. ಪದಗಳ ಶಬ್ದಗಳನ್ನು ಗುರುತಿಸುವಲ್ಲಿ ಮತ್ತು ಕುಶಲತೆಯಿಂದ ನಿರ್ವಹಿಸುವುದರಲ್ಲಿ ತೊಂದರೆ ('ಫೋನೆಮಿಕ್' ಅರಿವು)

೬. ಪದಗಳಲ್ಲಿ ವಿಭಿನ್ನ ಶಬ್ದಗಳನ್ನು ಪ್ರತ್ಯೇಕಿಸಲು ತೊಂದರೆ (ಕೇಳಿಸುವೀಕಯಲ್ಲಿ ತಾರತಮ್ಯ)

೭. ಅಕ್ಷರಗಳ ಶಬ್ದಗಳ ಕಲಿಕೆಯಲ್ಲಿ ತೊಂದರೆ (ವರ್ಣಮಾಲೆಯ ಬರವಣಿಗೆಯ ವ್ಯವಸ್ಥೆಗಳು)

೮. ಪ್ರತ್ಯೇಕ ಶಬ್ದಗಳನ್ನು ಅವುಗಳ ಸರಿಯಾದ ಅರ್ಥಗಳೊಂದಿಗೆ ಸಂಯೋಜಿಸುವಲ್ಲಿ ತೊಂದರೆ

೯. ಸಮಯದ ಸರಿಪಾಲನೆ ಹಾಗೂ ಸಮಯದ ಪರಿಕಲ್ಪನೆಯೊಂದಿಗೆ ಗೊಂದಲ  

೧೦. ಪದಗಳ ಸಂಯೋಜನೆಯಲ್ಲಿ ತೊಂದರೆ

೧೧. ಸಂಸ್ಥೆಯ ಕುಶಲತೆಗಳಲ್ಲಿ ತೊಂದರೆ

ಡಿಸ್ಲೆಕ್ಸಿಕ್ ಮಕ್ಕಳ ಅನೇಕ ಕ್ಲಿನಿಕಲ್ ಅವಲೋಕನ ಮಾದರಿಗಳ ಅಧ್ಯಯನದಿಂದ ಈ ಅಂಶಗಳ ಗುರುತಿಸಲಾಗಿದೆ. ಯು.ಕೆ ಅಲ್ಲಿ, ಥಾಮಸ್ ರಿಚರ್ಡ್ ಮೈಲ್ಸ್ ಎಂಬ ಮನೋವಿಜ್ಞಾನದ ಪ್ರಾಧ್ಯಾಪಕರು ಈ ಕೆಲಸದಲ್ಲಿ ಪ್ರಮುಖರಾಗಿದ್ದರು. ಇವರ ಅವಲೋಕನಗಳು 'ಬ್ಯಾಂಗೋರ್ ಡಿಸ್ಲೆಕ್ಸಿಯಾ ಡಯಾಗ್ನೋಸ್ಟಿಕ್ ಟೆಸ್ಟ್' ಅನ್ನು ಅಭಿವೃದ್ಧಿಪಡಿಸಲು ಕಾರಣವಾಯಿತು.

ಓದುವಿಕೆ ಮತ್ತು ಉಚ್ಚರಿಸುವಿಕೆ

ಬದಲಾಯಿಸಿ

ಓದುವ ಮತ್ತು ಉಚ್ಚರಿಸುವುದರ ವಿಷಯದಲ್ಲಿ, ಈ ಕೆಳಗಿನಂತೆ ಕೆಲವು ಸಾಮಾನ್ಯ ಗುಣಲಕ್ಷಣಗಳು ಸೇರಿವೆ:

  • ಕಾಗುಣಿತ ದೋಷಗಳು - ಅಕ್ಷರ ಮತ್ತದರ ಉಚ್ಚಾರಣೆಯ ನಡುವಿನ ಸಂಬಂಧವನ್ನು ಕಲಿಯಲು ಕಷ್ಟವಾಗುವುದರಿಂದ, ಡಿಸ್ಲೆಕ್ಸಿಯಾ ಇರುವ ವ್ಯಕ್ತಿಗಳು ಪದಗಳನ್ನು ತಪ್ಪಾಗಿ ಬರೆಯುತ್ತಾರೆ ಅಥವಾ ಪದಗಳಿಂದ ಸ್ವರಗಳನ್ನು ಬೇರೆ ಮಾಡುತ್ತಾರೆ.  
  • ಅಕ್ಷರಗಳ ಕ್ರಮ - ಡಿಸ್ಲೆಕ್ಸಿಯಾ ಹೊಂದಿರುವ ಜನರು ಎರಡು ಅಕ್ಷರಗಳ ಕ್ರಮವನ್ನು ಅದಲು-ಬದಲು ಮಾಡಬಹುದು. ವಿಶೇಷವಾಗಿ ಅಂತಿಮ, ತಪ್ಪಾದ ಪದವು ಉದ್ದೇಶಿತ ಪದವನ್ನು ಹೋಲುವಂತಿರುವಾಗ ಹೀಗೆ ಮಾಡುತ್ತಾರೆ.
  • ಅಕ್ಷರಗಳ ಕೂಡಿಸುವಿಕೆ/ ಕಳೆಯುವಿಕೆ: ಡಿಸ್ಲೆಕ್ಸಿಯಾ ಇರುವವರು ಪದಗಳ ಅಕ್ಷರಗಳನ್ನು ಸೇರಿಸಿ, ಕಳೆದು ಅಥವಾ ಪುನರಾವರ್ತಿಸಿ ಗ್ರಹಿಸಬಹುದು. ಇದು ಒಂದೇ ಅಕ್ಷರಗಳನ್ನು ಹೊಂದಿರುವ ಎರಡು ಪದಗಳ ನಡುವೆ ಗೊಂದಲ ಉಂಟುಮಾಡಬಹುದು.
  • ಫೊನೆಟಿಕ್ ಭಾಷೆ-  ಡಿಸ್ಲೆಕ್ಸಿಯಾಯಿಂದ ಬಳಲುತ್ತಿರುವವರು ಸಾಮಾನ್ಯವಾದ ಪದಗಳನ್ನು ತಮ್ಮ 'ಫೊನೆಟಿಕ್' ರೂಪದ್ಲಲಿ ಉಚ್ಚರಿಸುತ್ತಾರೆ. ಇವರಿಗೆ ವಿಶಿಷ್ಟವಾಗಿ ಸಮಾನೋಚ್ಚಾರಣ ಪದಗಳು ಅಥವಾ 'ಹೋಮೋಫೋನ್'ಗಳ ನಡುವೆ ಪ್ರತ್ಯೇಕಿಸಲು ಕಷ್ಟಪಡುತ್ತಾರೆ.
  • ಕೆಲವರು ಒಮ್ಮೊಮ್ಮೆ ಪದಗಳ ಕ್ರಮವನ್ನು ಬದಲಾಯಿಸಿ ಪದಗಳನ್ನು ಓದುತ್ತಾರೆ.

ಬರವಣಿಗೆ ಮತ್ತು ಚಲನತೆಯ ಕೌಶಲ್ಯಗಳು

ಬದಲಾಯಿಸಿ

ಡಿಸ್ಲೆಕ್ಸಿಯಾ ಹೊಂದಿರುವ ಮನುಷ್ಯನಲ್ಲಿ ಬರವಣಿಗೆಯ ತೊಂದರೆಗಳು ಉಂಟಾಗಬಹುದು. ಸಾಮಾನ್ಯರಿಗಿಂತ ನಿಧಾನವಾಗಿ ಬರೆಯುವುದಾಗಲಿ, ಕ್ರಮವಿಲ್ಲದ ಅಕ್ಷರಗಳುಳ್ಳ ಬರವಣಿಗೆ ಅಥವಾ ಮಾರ್ಗಸೂಚಿಕ ಗೆರೆಗಳಿಲ್ಲದ ಕಾಗದದ ಮೇಲೆ ನೇರವಾಗಿ ಬರೆಯಲಾಗದಿರುವುದು, ಇವೆಲ್ಲ ಡಿಸ್ಲೆಕ್ಸಿಯಾದ ಕೆಲವು ಲಕ್ಷಣಗಳು.

ಗಣಿತದ ಸಾಮರ್ಥ್ಯ

ಬದಲಾಯಿಸಿ

ಡಿಸ್ಲೆಕ್ಸಿಯಾ ಮತ್ತು ಡೈಸ್ಕ್ಯಾಲ್ಕ್ಯುಲಿಯ ಎರಡು ಬೇರೆ ಬೇರೆ ಕಲಿಕೆಯ ತೊಂದರೆಗಳು. ಎರಡಕ್ಕೂ ಅವುಗಳದ್ದೇ ಆದ ವಿಭಿನ್ನತೆ ಇದೆ. ಡಿಸ್ಲೆಕ್ಸಿಯಾವನ್ನು ಫೋನೊಲೊಜಿಕಲ್ ಕೊರತೆಯಿಂದ ಗುರುತಿಸಿದರೆ, ಡೈಸ್ಕ್ಯಾಲ್ಕ್ಯುಲಿಯವನ್ನು ಸಂಖ್ಯೆಗಳ ಘಟಕದ ಕೊರತೆಯಿಂದ ಗುರುತಿಸಬಹುದು.

ಡಿಸ್ಲೆಕ್ಸಿಯಾದಿಂದ ಬಳಲುತ್ತಿರುವವರು ಗಣಿತದಲ್ಲಿ ಮೇಧಾವಿಗಳಾಗಿದ್ದರೂ ಓದುವುದರಲ್ಲಿ ನಿಪುಣರಾಗಿರುವುದಿಲ್ಲ. ಅವರಿಗೆ ಪದಗಳನ್ನು ಅವುಗಳ ಅರ್ಥವನ್ನು ತಿಳಿದುಕೊಳ್ಳುವುದು ಕಷ್ಟವೆನಿಸಬಹುದು.

ಹೊಂದಾಣಿಕೆಯ ಗುಣಲಕ್ಷಣಗಳು

ಬದಲಾಯಿಸಿ

ಒಂದು ಅಧ್ಯನದ ಪ್ರಕಾರ, ಸಾಧಾರಣ ಮನುಷ್ಯರಿಗಿಂತ ವಾಣಿಜ್ಯೋದ್ಯಮಿಗಳು ಡಿಸ್ಲೆಕ್ಸಿಯಾ ತೊಂದರೆ ಇಂದ ಬಳಲುತ್ತಿರುವ ಸಾಧ್ಯತೆ ಐದು ಪಟ್ಟು ಹೆಚ್ಚು.

ಸಂಶೋಧಕರ ಪ್ರಕಾರ ಯುನೈಟೆಡ್ ಸ್ಟೇಟ್ಸ್ನಲ್ಲಿ ಅಂದಾಜು ಮೂರರಿಂದ - ಹತ್ತು ಪ್ರತಿಶತ್ತು ಶಾಲೆಗೇ ಹೋಗುವ ವಯಸ್ಸಿನ ಮಕ್ಕಳಲ್ಲಿ ಡಿಸ್ಲೆಕ್ಸಿಯಾ ಕಂಡುಬರುತ್ತದೆ. ಕೆಲವರು ಇದನ್ನು ಹದಿನೇಳು ಪ್ರತಿಷತ್ತು ಎಂದು ಹೇಳುತ್ತಾರೆ. ಇತ್ತೀಚಿನ ಅಧ್ಯಯನಗಳ ಪ್ರಕಾರ ಡಿಸ್ಲೆಕ್ಸಿಯಾ ವ್ಯಾಧಿಯು ಚಿಕ್ಕ ಚಿಕ್ಕ ವ್ಯಾಪಾರಗಳ ಮಾಲೀಕರಲ್ಲಿ ಹೆಚ್ಚು ಕಂಡುಬರುತ್ತದೆಯಂತೆ. ಇದು ಶೇಕಡ ೨೦ರಿಂದ ೩೦ತ್ತು ಪ್ರತಿಶತ್ತು ಯು.ಎಸ್.ನ ಜನರಲ್ಲಿ ಕಾಣಬಹುದು. ಬ್ರಿಟಿಷ್ ವಾಣಿಜ್ಯೋದಮಿಗಳಲೂ ಡಿಸ್ಲೆಕ್ಸಿಯಾ ವ್ಯಾಧಿ ಕಂಡುಬರುತ್ತದೆ.

ಯಾವುದೇ ನಿರ್ಧಿಷ್ಟ ಉದ್ದೇಶವಿಲ್ಲದೆ ಆಯ್ಕೆಮಾಡಿದ ಬರಿ ಮಕ್ಕಳ ನ್ನು ಒಳಗೊಂಡಿರುವ ಜನಸಂಖ್ಯೆಯ ಸಾಕ್ಷಿಯ ಪ್ರಕಾರ ಡಿಸ್ಲೆಕ್ಸಿಯಾ ಗಂಡು ಮತ್ತು ಹೆಣ್ಣು ಮಕ್ಕಳ ಮೇಲೆ ಸಮಾನವಾದ ಪರಿಣಾಮ ಬೀರುತ್ತದೆ. ಆದರೆ ಗಂಡು ಮಕ್ಕಳಲ್ಲಿ ಡಿಸ್ಲೆಕ್ಸಿಯಾವನ್ನು ಹೆಚ್ಚಾಗಿ ಗುರುತಿಸಲಾಗುತ್ತದೆ. ಇದು ಅಧ್ಯಯನದ ಮಾದರಿಯಲ್ಲಿ ಬೇಧ-ಭಾವ ಉಂಟು ಮಾಡಿತು. [೨ ]

ಡಿಸ್ಲೆಕ್ಸಿಯಾದ ನಿರ್ವಹಣೆ

ಬದಲಾಯಿಸಿ
 
ವುಡ್ರೋ ವಿಲ್ಸನ್ ಬೆರಳಚ್ಚುಯಂತ್ರ

ವುಡ್ರೋ ವಿಲ್ಸನ್ ಬೆರಳಚ್ಚುಯಂತ್ರದ ಆರಂಭಿಕ ಅಳವಡಿಕೆದಾರರಾಗಿದ್ದರು. ಪತ್ರವ್ಯವಹಾರವನ್ನು ಬರೆಯಲು ಡಿಸ್ಲೆಕ್ಸಿಯಾವನ್ನು ಜಯಿಸಲು ಇದು ಅವರಿಗೆ ಸಹಾಯ ಮಾಡಿದೆ ಎಂದು ನಂಬಲಾಗಿದೆ. ವುಡ್ರೋ ವಿಲ್ಸನ್ ಹೌಸ್ ಮ್ಯೂಸಿಯಂನಲ್ಲಿ ವಿಲ್ಸನ್ ಟೈಪ್ ರೈಟರ್ ಅನ್ನು ತೋರಿಸಲಾಗಿದೆ.

ಡಿಸ್ಲೆಕ್ಸಿಯಾದ ನಿರ್ವಹಣೆ ಅನೇಕ ಅಂಶಗಳ ಮೇಲೆ ಅವಲಂಬಿತವಾಗಿದೆ. ಡಿಸ್ಲೆಕ್ಸಿಯಾ ಹೊಂದಿರುವ ಎಲ್ಲರಿಗೂ ಕೆಲಸ ಮಾಡುವ ಯಾವುದೇ ನಿರ್ದಿಷ್ಟ ತಂತ್ರ ಇದುವರೆಗೂ ಕಂಡುಹಾಕಲಾಗಿಲ್ಲ.

ಕೆಲವು ಬೋಧನೆಯ ವಿಧಾನಗಳು ಓದುವ ಕಲೆಗೆ ನಿರ್ವಹಿಸಲಾಗಿದೆ. ಇನ್ನು ಕೆಲವು ವಿಧಾನಗಳು ಗ್ರಹಿಕೆ ಮತ್ತು ಸಾಹಿತ್ಯವನ್ನು ಉದ್ಧಾರ ಮಾಡುವುದರ ಮೇಲೆ ಗಮನವಹಿಸುತ್ತವೆ. ಈ ತಂತ್ರಗಳ ಜೊತೆಗೆ ಮೂಲಭೂತ ಕೌಶಲ್ಯಗಳನ್ನು ಪರಿಹರಿಸಲು ಕೆಲವು ತಂತ್ರಗಳನ್ನು ಸಂಯೋಜಿಸಲಾಗಿದೆ.  ಅನೇಕ ಶೈಕ್ಷಣಿಕ ಕ್ಷೇತ್ರಗಳು ಬಹುಸಂವೇದನಾಶೀಲವಾಗಿ ವಿನ್ಯಾಸಗೊಂಡಿವೆ. ಸೂಚನೆಗಳು ದೃಶ್ಯ, ಶ್ರವಣೇಂದ್ರಿಯ ಮತ್ತು ಕೈನೆಸ್ಥೆಟಿಕ್ ಅಥವಾ ಸ್ಪರ್ಶ ಮಾಧ್ಯಮ ಅಥವಾ ಅಂಶಗಳನ್ನು ಒಳಗೊಂಡಿರುತ್ತದೆ. ಸಾಮಾನ್ಯವಾಗಿ ಈ ಮಾದರಿಯ ಸೂಚನೆಗಳು ಡಿಸ್ಲೆಕ್ಸಿಯಾ ಹೊಂದಿರುವವರಿಗೆ ಹೆಚ್ಚು ಪರಿಣಾಮಕಾರಿ ಎಂದು ನಂಬಲಾಗಿದೆ.

ಡಿಸ್ಲೆಕ್ಸಿಯಾ ಹೊಂದಿರುವ ವಿದ್ಯಾರ್ಥಿಗಳಿಗೆ ಹಲವಾರು ವಿಶೇಷ ಶಿಕ್ಷಣ ವಿಧಾನಗಳನ್ನು ಕಂಡುಹಾಕಲಾಗಿದೆ.  ಇತ್ತೀಚಿನ ಆವಿಷ್ಕಾರಗಳ ಭಾಗವಾಗ ಡಿಸ್ಲೆಕ್ಸಿಯಾ ಹೊಂದಿರುವ ವಿದ್ಯಾರ್ಥಿಗಳಿಗೆ ಹಲವಾರು ವಿಶೇಷವಾದ ತಂತ್ರಜ್ಞಾನವನ್ನು ಉಪಯೋಗಿಸಿ ವಿಶಿಷ್ಟ ಕಂಪ್ಯೂಟರ್ ಸಾಫ್ಟ್ವೇರ್ಗಳನ್ನು ನವೀನಗೊಳಿಸಲಾಗಿದೆ.  

ಡಿಸ್ಲೆಕ್ಸಿಯಾದಿಂದ ಉಂಟಾಗುವ ಅಭಿವೃದ್ಧಿ ಮತ್ತು ಕಲಿಕೆಯ ಅಸಮರ್ಥತೆಗಳಿಗೆ ಪರಿಹಾರಗಳನ್ನು ನಿರೂಪಿಸುವ ಒಂದು ಮುಖ್ಯವಾದ ಅಂಶವು ಪರ್ಯಾಯ ಚಿಕಿತ್ಸೆಗಳ ಕ್ಷೇತ್ರವಾಗಿದೆ. ಇದು ಒಂದು ವಿವಾದಾತ್ಮಕವಾದ ಚಿಕಿತ್ಸೆಯ ದಾರಿಯ ರೂಪವನ್ನು ಪಡೆದಿದೆ. ಈ ಚಿಕಿತ್ಸೆಯ  ಕ್ಷೇತ್ರದಲ್ಲಿ ಪೌಷ್ಟಿಕಾಂಶದ ಪೂರಕಗಳು, ವಿಶೇಷ ಆಹಾರಗಳು, ಹೋಮಿಯೋಪತಿ, ಮತ್ತು ಆಸ್ಟಿಯೋಪತಿ/ಚಿರೋಪ್ರಾಕ್ಟಿಕ್ ಮ್ಯಾನಿಪ್ಯುಲೇಷನ್ ಸೇರಿವೆ.

ಶೈಕ್ಷಣಿಕ ಪರಿಹಾರಗಳು

ಬದಲಾಯಿಸಿ

ಡಿಸ್ಲೆಕ್ಸಿಯಾ ವ್ಯಾಧಿಯನ್ನು ಅದರ ಆರಂಭಿಕ ಹಂತಗಳಲ್ಲಿ ಗುರುತಿಸುವುದು ಬಹಳ ಅವಶ್ಯಕ. ಆರಂಭದಲ್ಲಿಯೇ ಗುರುತಿಸಿ, ಚಿಕಿತ್ಸೆಯನ್ನು ಪ್ರಾರಂಭಿಸುವುದರಿಂದ ಡಿಸ್ಲೆಕ್ಸಿಯಾದಿಂದ ನರಳುತ್ತಿರುವವರ ಶೈಕ್ಷಣಿಕ ಮತ್ತು ವಯಕ್ತಿಕ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಸಹಾಯ ಮಾಡುತ್ತದೆ. ಸೂಕ್ತವಾದ ಪರಿಹಾರಗಳ ಸೂಚನೆಯು ರಚನಾತ್ಮಕ ಅಕ್ಷರ ಜ್ಞಾನಕ್ಕೆ ಹೀಗೆ ದಾರಿಯಾಗಿದೆ:

  • ಧ್ವನಿಶಾಸ್ತ್ರ - ಮಾತನಾಡುವ ಪದದಲ್ಲಿ ಧ್ವನಿ ರಚನೆಯ ಅಧ್ಯಯನವಾಗಿದೆ. ಈ ಕೌಶಲ್ಯಗಳಲ್ಲಿ ಪ್ರಾಸಬದ್ಧತೆ, ಮಾತನಾಡುವ ವಾಕ್ಯದಲ್ಲಿ ಪದಗಳನ್ನು ಎಣಿಸುವುದು ಮತ್ತು ಸ್ಪೈಕ್ ಪದಗಳಲ್ಲಿ ಚಪ್ಪಾಳೆಗಳನ್ನು ಚಪ್ಪಾಳೆ ಮಾಡುವುದು ಸೇರಿದೆ. ಪದಗಳನ್ನು ಅವುಗಳ ಸಂಯುಕ್ತ ಧ್ವನಿಗಳು, ಫೋನೆಮ್‌ಗಳಾಗಿ ವರ್ಗೀಕರಿಸುವ ಸಾಮಥ್ಯವಾಗಿದೆ.
  • ಧ್ವನಿ ಮತ್ತು ಚಿಹ್ನೆಯ ಕೂಡಿಕೆ -  ಒಮ್ಮೆ ಭಾಷೆಯ ಫೋನೇಮ್ ಗಳ ಬಗ್ಗೆ ತಿಳಿದುಕೊಂಡ ಮೇಲೆ ಕಲಿಯುವವರು ಫೋನೆಮ್‌ಗಳನ್ನು ಚಿಹ್ನೆಗಳ (ಮುದ್ರಿತ ಅಕ್ಷರಗಳು) ಜೊತೆ ಕೂಡಿಸಬೇಕು. ಈ ಕಲೆಯನ್ನು ಎರಡು ದಿಕ್ಕುಗಳಲ್ಲಿ ಕಲಿಸಬೇಕು: ದೃಶ್ಯದಿಂದ ಶ್ರವಣೇಂದ್ರಿಯಕ್ಕೆ (ಓದುವಿಕೆ) ಹಾಗೂ ಶ್ರವಣೇಂದ್ರಿಯದಿಂದ ದೃಶ್ಯಕ್ಕೆ (ಕಾಗುಣಿತ).
  • ವಾಕ್ಯ ರಚನೆ- ವಾಕ್ಯ ರಚನೆ ಅಥವಾ 'ಸಿಂಟ್ಯಾಕ್ಸ್' ವಾಕ್ಯಗಳಲ್ಲಿನ ಪದಗಳ ಅನುಕ್ರಮ ಮತ್ತು ಕ್ರಿಯೆಯನ್ನು ನಿರ್ದೇಶಿಸುವ ತತ್ವಗಳ ಪರಿಕಲ್ಪನೆಯಾಗಿದೆ.
  • ಶಬ್ದಾರ್ಥಶಾಸ್ತ್ರ- ಶಬ್ದಾರ್ಥಶಾಸ್ತ್ರ ಅಥವಾ 'ಸೆಮ್ಯಾಂಟಿಕ್ಸ್' ಭಾಷೆಯ ಅರ್ಥವನ್ನು ಕೇಂದ್ರೀಕರಿಸುವ ಅಂಶವಾಗಿದೆ.  
  • ಸಂಚಿತ ಭಾಷೆ - ಬೋಧನೆಯ ಹಂತಗಳು ಹಿಂದಿನ ಪರಿಕಲ್ಪನೆಗಳ ಮೇಲೆ ಆಧಾರಿತವಾಗಿರುತ್ತವೆ.
  • ಸ್ಪಷ್ಟವಾದ ಸೂಚನೆ - ವಿದ್ಯಾರ್ಥಿ-ಶಿಕ್ಷಕರ ಪರಸ್ಪರ ಕ್ರಿಯೆಗಳೊಂದಿಗೆ ಎಲ್ಲಾ ಪರಿಕಲ್ಪನೆಗಳ ಉದ್ದೇಶಪೂರ್ವಕ ಬೋಧನೆಯ ವಿಧಾನವು ಅಗತ್ಯವಾಗಿದೆ.

ತರಗತಿಯಳ್ಳಿ ವಸತಿಯ ವಿಧಾನಗಳು

ಬದಲಾಯಿಸಿ

ಡಿಸ್ಲೆಕ್ಸಿಯಾಕ್ಕೆ ಯಾವುದೇ ಖಚಿತ ಅಥವಾ ತುರ್ತು ಚಿಕಿತ್ಸೆಗಳು ಇಲ್ಲ. ಆದರೆ ತರಗತಿಯಲ್ಲಿ ಡಿಸ್ಲೆಕ್ಸಿಯಾ ಹೊಂದಿರುವ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಹಲವು ತಂತ್ರಗಳನ್ನು ಬಳಸಬಹುದಾಗಿದೆ. ಇವುಗಳು ಕೆಳಗಿನ ಈ ಕೆಲವು ಮಾದರಿಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತವೆ:

  • ವಾಚಕ ಪರೀಕ್ಷೆಗಳು
  • ಸಮಯದ ಒತ್ತಡ ಇಲ್ಲದೆ ಪರೀಕ್ಷೆಗಳನ್ನು ನಡೆಸುವುದು
  • ಆಡಿಯೋಬುಕ್ಗಳ ರೂಪದಲ್ಲಿ ಪಾಠಗಳ್ಳನ್ನು ಭೋಧಿಸುವುದು
  • ಕಾಗುಣಿತ ಪರೀಕ್ಷೆಗಳನ್ನು ಕಡಿಮೆ ಮಾಡುವುದು ಅಥವಾ, ಸಾಧ್ಯವಿದ್ದರೆ,  ನಿವಾರಿಸುವುದು
  • ಜೋರಾಗಿ ಓದುವ ಅಗತ್ಯವನ್ನು ಪುನಃಸ್ಥಾಪಿಸುವುದು
  • ನಿಯೋಜನೆಗಳ ಬಗ್ಗೆ ಪ್ರಾಧ್ಯಾಪಕರ ವಿವರಣೆಗಳನ್ನು ಧ್ವನಿಗ್ರಹಣದ ಯಂತ್ರಗಳನ್ನು ಬಳಸಿ ದಾಖಲಿಸುವುದು
  • ನಿಯೋಜನೆಗಳ ಮೇಲಿರುವ ಪ್ರಾಮುಖ್ಯತೆಯನ್ನು ಕಡಿಮೆಗೊಳಿಸುವುದು
  • ಕಾಗುಣಿತ ಅಥವಾ ಕೈಬರಹದ ಬದಲು ವಿಷಯದ ಮೇಲೆ ವಿದ್ಯಾರ್ಥಿಯನ್ನು ವಿವೇಚಿಸುವುದು
  • ಪ್ರಭಂದ ಮಾದರಿಯ ಪರೀಕ್ಷೆ ಅಥವಾ ನಿಯೋಜನೆಗಳನ್ನು ಕಡಿಮೆ ಮಾಡುವುದು
  • ಪ್ರೇರಣೆಯನ್ನು ಹೆಚ್ಚಿಸಲು, ವಿದ್ಯಾರ್ಥಿಯು ಬಲವಾದ ಆಸಕ್ತಿಯನ್ನು ಹೊಂದಿರುವ ಕ್ಷೇತ್ರಗಳಲ್ಲಿ ಕಾರ್ಯಯೋಜನೆಗಳನ್ನು ಉದಾಹರಣೆಗೆ, ಕ್ರೀಡಾ ಕಥೆಗಳು ಅಥವಾ ರಾಕ್ ಸಂಗೀತಗಾರರ ಜೀವನಚರಿತ್ರೆಗಳ ರೂಪದಲ್ಲಿ ನೀಡುವುದು.
  • ಫಾಂಟ್ ಗಾತ್ರ ಹಾಗೂ ಸಾಲಿನ ಅಂತರ (೧.೫) ಹೆಚ್ಚಿಸುವುದು ಮತ್ತು ಸ್ಪಷ್ಟವಾದ ಫಾಂಟ್ ಸೇರಿದಂತೆ ಸೂಕ್ತವಾದ ವಿನ್ಯಾಸವನ್ನು ಬಳಸುವುದು ಉತ್ತಮ. ಸಾಮಾನ್ಯವಾಗಿ, ಸಾನ್ಸ್-ಸೆರಿಫ್ ಫಾಂಟ್‌ಗಳನ್ನು ಶಿಫಾರಸು ಮಾಡಲಾಗುತ್ತದೆ.
  • ಕೆಲವು ಡಿಸ್ಲೆಕ್ಸಿಯಾದಿಂದ ಬಳಲುತ್ತಿರುವವರು ಕಾಗದದ ಬಣ್ಣಕ್ಕೆ ಸಂವೇದನಾಶೀಲರಾಗಿರುತ್ತಾರೆ. ಇವರಿಗೆ ಆಫ್-ವೈಟ್, ಬಾಡಿದ ಹಸಿರು ಅಥವಾ ಬಾಡಿದ ನೇರಳೆ ಬಣ್ಣಗಳ ಕಾಗದಗಳಿನಿಂದ ಓದುವುದು ಸುಲಭವೆನಿಸಬಹುದು.
  • ಡಿಸ್ಲೆಕ್ಸಿಯಾ ಹೊಂದಿರುವ ವ್ಯಕ್ತಿಗಳಿಗೆ ಓದಲು ಕಲಿಯಲು ವ್ಯಕ್ತಿಕ  ಸೂಚನೆಗಳನ್ನು ನೀಡುವಲ್ಲಿ ಪ್ರವೀಣರಾದ ಶಿಕ್ಷಕರ ಅಗತ್ಯವಿದೆ.

ಇತ್ತೀಚಿನ ಬೆಳವಣಿಗೆಗಳು

ಬದಲಾಯಿಸಿ

ಪಠ್ಯವನ್ನು ಡಿಸ್ಲೆಕ್ಸಿಕ್ ಜನರಿಗಾಗಿ ಸರಳೀಕರಿಸಲಾಗಿದೆ. ಇದು ಜನರಿಗೆ ಸಾಲುಗಳನ್ನು ಹೆಚ್ಚು ನಿರರ್ಗಳವಾಗಿ ಅನುಸರಿಸಿಕೊಂಡು ಹೋಗಲು, ಎಂದರೆ, ಒಂದು ಸಾಲಿನಿಂದ ಇನ್ನೊಂದು ಸಾಲಿಗೆ ಹೋಗಲು ಸಹಾಯ ಮಾಡುತ್ತದೆ. ಪಠ್ಯದಲ್ಲಿ ಸಾಲುಗಳಿಗೆ 'ಸೈನ್-ಪೋಸ್ಟ್'ಗಳನ್ನು ಸೇರಿಸುವುದರಿಂದ ಹೀಗೆ ಮಾಡಬಹುದು.  

ಡಿಸ್ಲೆಕ್ಸಿಯಾ ಇರುವವರಿಗೆ ಆಕರ್ಷಕವಾಗಿ ಪಠ್ಯಪುಸ್ತಕಗಳನ್ನು ಕಲಿಸುವ ಮಾರ್ಗವಾಗಿ ಶಿಕ್ಷಕರು ಆಡಿಯೊಬುಕ್‌ಗಳನ್ನು ಬಳಸುತ್ತಿದ್ದಾರೆ. 'ಲಿಸನಿಂಗ್ ಬುಕ್ಸ್' ಎಂಬ ದತ್ತಿ ಯು. ಕೆ ನ ದೊಡ್ಡ ದತ್ತಿಗಳಲ್ಲಿ ಒಂದಾಗಿದೆ.  ಇದು ಸದಸ್ಯರಿಗೆ ಇಂಟರ್ನೆಟ್ ಮೂಲಕ 'ಸ್ಟ್ರೀಮಿಂಗ್' ಸೇವೆಯನ್ನು ನೀಡುತ್ತದೆ.  'ರೀಡ್ ಹೌ ಯು ವಾನ್ಟ್' ಎಂಬ ಒಂದು ಆಸ್ಟ್ರೇಲಿಯನ್ ಕಂಪನಿ ಎಲ್ಲಾ ಪ್ರಕಟಿತ ಪುಸ್ತಕಗಳನ್ನು ಆಡಿಯೋಬುಕ್ ರೂಪದಲ್ಲಿ ಲಭ್ಯವಾಗುವಂತೆ ಮಾಡಲು ಕೆಲಸ ಮಾಡುತ್ತಿದೆ. ಯುನೈಟೆಡ್ ಸ್ಟೇಟ್ಸ್‌ನಲ್ಲಿ, ಲಾಭರಹಿತ ಸಂಸ್ಥೆಯಾದ 'ಲರ್ನಿಂಗ್ ಆಲಿ' ಮಾನವ-ನಿರೂಪಣೆಯ ಆಡಿಯೊ ಪಠ್ಯಪುಸ್ತಕಗಳ ವಿಶ್ವದ ಅತಿದೊಡ್ಡ ಗ್ರಂಥಾಲಯವನ್ನು ನೀಡುತ್ತಿದೆ. ಇಡೀ ರೀತಿಯಾದ ಎರಡನೇ ಸಂಸ್ಥೆ, 'ಬುಕ್‌ಶೇರ್', ಸಂಶ್ಲೇಷಿತ ಓದುವಿಕೆಯ (ಸಿಂಥೆಟಿಕ್-ರೀಡ್) ಆಡಿಯೊಬುಕ್‌ಗಳ ವ್ಯಾಪಕ ಆಯ್ಕೆಯನ್ನು ನೀಡುತ್ತಿದೆ. ಡಿಸ್ಲೆಕ್ಸಿಯಾ ಹೊಂದಿರುವ ವ್ಯಕ್ತಿಗಳಿಗೆ ಈ ಆಡಿಯೊಬುಕ್‌ಗಳು ಉತ್ತಮವಾದ ಪರಿಹಾರ ಎಂದು ಹೇಳಬಹುದು.

ಡಿಸ್ಲೆಕ್ಸಿಯಾ ಹೊಂದಿರುವ ವ್ಯಕ್ತಿಗಳು ತಮ್ಮ ಕೊರತೆಯ ಪ್ರದೇಶಗಳಲ್ಲಿ ಕೌಶಲ್ಯಗಳನ್ನು ತಿದ್ದು ಉತ್ತಮಗೊಳಿಸಿಕೊಳ್ಳಲು ಹೆಚ್ಚಿನ ಅಭ್ಯಾಸದ ಅಗತ್ಯವಿರುತ್ತದೆ. ಸಾಮಾನ್ಯವಾಗಿ, ಸಹಜ ಸ್ಥಿತಿಯ ಮಕ್ಕಳಿಗೆ ೩೦ ರಿಂದ ೬೦ ಘಂಟೆಗಳ ತರಬೇತಿಯ ಅಗತ್ಯವಿರುತದೆ. ಆದರೆ, ಡಿಸ್ಲೆಕ್ಸಿಯಾ ಹೊಂದಿರುವ ಮಕ್ಕಳಿಗೆ ೮೦ ರಿಂದ ೧೦೦ ಘಂಟೆಗಳವರೆಗೆ ತರಬೇತಿ ನೀಡಬೇಕು ಎಂದು ಸಂಶೋಧಕರು ನಂಬುತ್ತಾರೆ. ಈ ಮಕ್ಕಳಿಗೆ ಇಂಟರ್ವೆನ್ಷನ್ ಅನ್ನು ಮುಂಚಿತವಾಗಿಯೇ ಪ್ರಾರಂಭಿಸಿದರೆ, ಈ ಸಮಯ ಇನ್ನು ಕಡಿಮೆಯಾಗಬಹುದು. ಆರಂಭಿಕ ಓದುವ ತೊಂದರೆಗಳನ್ನು ಹೊಂದಿರುವ ಸುಮಾರು ೨೦ ಪ್ರತಿಶತದಷ್ಟು ದೊಡ್ಡವರು ಮಾತ್ರ ಪ್ರೌಢಾವಸ್ಥೆಯಲ್ಲಿ ನಿರರ್ಗಳವಾಗಿ ಓದುವ ಕೌಶಲ್ಯವನ್ನು ಪಡೆದುಕೊಂಡಿದ್ದಾರೆ. [೩]

ಉಲ್ಲೇಖಗಳು

ಬದಲಾಯಿಸಿ
  1. https://en.wikipedia.org/wiki/Dyslexia
  2. https://en.wikipedia.org/wiki/Characteristics_of_dyslexia
  3. https://en.wikipedia.org/wiki/Management_of_dyslexia