1840567vibin
ಪರಿಚಯ
ನನ್ನ ಹೆಸರು ವಿಬಿನ್. ನಾನು ಹಚ್ಚ ಹಸಿರುಗಳಿಂದ ಪ್ರಕೃತಿ ದೇವಿ ಕಂಗೊಳಿಸುವ ಬಯಲು ಸೀಮೆ ಪ್ರದೇಶವಾದ ಶಿವಮೊಗ್ಗ ಜಿಲ್ಲೆಯಿಂದ ಕರ್ನಾಟಕದ ರಾಜಧಾನಿ ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯಕ್ಕೆ ಬಂದು ವಿದ್ಯಾಭ್ಯಾಸವನ್ನ ಮಾಡುತ್ತಿದ್ದೇನೆ. ನಾನು ಕೇರಳದ ವಯನಾಡ್ ಜಿಲ್ಲೆಯಲ್ಲಿ ಹುಟ್ಟಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ನಾಗವಳ್ಳಿ ಎಂಬ ಸುಂದರವಾದ ಊರಿನಲ್ಲಿ ಬೆಳೆದು ಪ್ರಾಥಮಿಕ ಶಿಕ್ಷಣವನ್ನು ಪಡೆದೆನು. ನನ್ನ ಮನೆಯಲ್ಲಿ ನಾವು ಮೂರು ಜನ ಮಕ್ಕಳು. ನನ್ನ ತಂದೆ ಮತ್ತು ತಾಯಿ ನನ್ನನ್ನು ಬಹಳ ಪ್ರೀತಿಯಿಂದ ಮತ್ತು ಬಹಳ ಶ್ರದ್ದೇಯಿಂದ ಬೆಳೆಸಿದರು. ನಾನು ನನ್ನ ತಂದೆ ತಾಯಿಗೆ ಮೂರನೇ ಮಗ. ನಾವು ಕೇರಳದಿಂದ ಇಲ್ಲಿಗೆ ಬಂದು ಕೃಷಿಯನ್ನು ಮಾಡುತ್ತಿದ್ದೇವೆ. ನನ್ನ ತಂದೆ ಒಬ್ಬ ರೈತ.
ವಿದ್ಯಾಭ್ಯಾಸ
ಒಂದರಿಂದ ಐದನೇ ತರಗತಿಯವರೆಗೆ ನಾಗವಳ್ಳಿ ಸರ್ಕಾರಿ ಶಾಲೆಯಲ್ಲಿ ಓದಿದೆನು. ನಂತರ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಗ್ರಾಮದ ಸಂತ ಮೇರಿಸ್ ಶಾಲೆಯಲ್ಲಿ ಹತ್ತನೇ ತರಗತಿವರೆಗೆ ವಿದ್ಯಾಭ್ಯಾಸ ನಡೆಸಿದೆ. ಹತ್ತನೇ ತರಗತಿ ಪರೀಕ್ಷೆ ಮುಗಿದನಂತರ ಸಿ ಎಂ ಐ ಸಂಸ್ಥೆಗೆ ಸೇರಿ ಒಬ್ಬ ಸನ್ಯಾಸಿಯಾಗಬೇಕೆಂದು ಆಸೆ ಹುಟ್ಟಿತು. ನಾನು ಒಬ್ಬ ಪಾದ್ರಿಯಾಗಬೇಕೆಂಬ ಆಸೆ ತಂದೆ ತಾಯರಲ್ಲಿ ಹೇಳಿಕೊಂಡಾಗ ಅವರು ನನ್ನ ಆಸೆಗೆ ಅಡತಡೆಯಾಗದೆ ಅದಕ್ಕೆ ಒಪ್ಪಿಕೊಂಡರು. ನಂತರ ಪಿ ಯು ಸಿ ಯನ್ನು ಮೈಸೂರಿನ ಕ್ರೈಸ್ಟ್ ಕಾಲೇಜಿನಲ್ಲಿ ಮುಗಿಸಿದೆ. ತದನಂತರ ಕೇರಳದ ಕಲ್ಲಿಕೋಟೆಗೆ ಹೋಗಿ ಮುಂದಿನ ಓದನ್ನು ಮುಗಿಸಿದೆ. ೨೦೧೫ ಜೂನ್ ತಿಂಗಳು ಮಹಾರಾಷ್ಟ್ರದ ವಾರ್ಧಾ ಎಂಬ ಸ್ಥಳಕ್ಕೆ ಹೋಗಿ ತತ್ವಶಾಸ್ತ್ರವನ್ನು ಕಲಿತೆನು. ಅಲ್ಲಿ ಸುಮಾರು ಎರಡು ವರ್ಷಗಳ ಕಾಲ ಓದಿದೆನು. ೨೦೧೭ ಮೇ ತಿಂಗಳಲ್ಲಿ ಮೈಸೂರಿಗೆ ವಾಪಸು ಬಂದೆನು. ಅಲ್ಲಿಂದ ಕೊಡಗಿನ ಕುಶಾಲನಗರದಲ್ಲಿ ಒಂದು ವರ್ಷ ಪ್ರಾಯೋಗಿಕ ವಿದ್ಯಾಭ್ಯಾಸವನ್ನು ಮಾಡಿದೆನು. ೨೦೧೮ ಮೇ ತಿಂಗಳಲ್ಲಿ ಬೆಂಗಳೂರಿಗೆ ಬಂದು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಸೇರಿಕೊಂಡೆನು. ನಾನು ಈಗ ಧರ್ಮಾರಂನಲ್ಲಿ ಇದ್ದೇನೆ. ಇಲ್ಲಿ ನಾವು ಸುಮಾರು ಇನ್ನೂರ ಐವತ್ತು ಜನರಿದ್ದೇವೆ. ನಾವೆಲ್ಲರೂ ಹಲವು ರಾಜ್ಯಗಳಿಂದ ಬಂದಿರುವವರು. ನಮ್ಮ ಬದುಕು ಬಹಳ ಸಂತೋಷಪ್ರದವಾಗಿದೆ.
ಹವ್ಯಾಸ
ನಾನು ಶಾಲೆಯಲ್ಲಿ ಓದುತ್ತಿರುವಾಗ ತುಂಬಾ ಗೆಳೆಯರನ್ನು ಸಂಪಾದಿಸಿದೆ. ನನ್ನ ಗೆಳೆಯರೇ ನನಗೆ ನನ್ನ ಎಲ್ಲ ಪ್ರಯತ್ನದಲ್ಲೂ ಬೆಂಬಲವನ್ನು ನೀಡುತ್ತಿದ್ದರು. ನನಗೆ ಈಗ ಸಿಕ್ಕಿರುವ ಗೆಳೆಯರು ನಿಜಕ್ಕೂ ಒಂದು ಅನುಗ್ರಹವೆಂದು ತಿಳಿಯುತ್ತೇನೆ. ಏಕೆಂದರೆ ಅವರು ನನಗೆ ಎಲ್ಲಾ ವಿದದಲ್ಲೂ ಸಹಾಯ ಮಾಡುತ್ತಾರೆ. ನನ್ನ ಶಿಕ್ಷಕರು ನನ್ನ ಬದುಕಿನ ಹಾದಿಯನ್ನು ತೋರಿಸಿಕೊಟ್ಟರು. ನಾನು ಈಗ ಏನಾಗಿದ್ದೇನೋ ಅದು ದೇವರ ಕೃಪೆ ಮತ್ತು ತುಂಬಾ ಒಳ್ಳೆಯ ಮನುಷ್ಯರ ಪ್ರೀತಿ ಹಾಗು ಕರುಣೆಯ ಫಲ. ಚಿಕ್ಕಂದಿನಿಂದಲೂ ಇತರರಿಗೆ ಒಳಿತನ್ನು ಮಾಡಬೇಕೆಂಬ ಆಸೆಯನ್ನು ಬೆಳೆಸಿಕೊಂಡು ಬಂದೆನು. ಶಾಲೆಯಲ್ಲಿ ಚಿತ್ರಕಲಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದುಕೊಳ್ಳುತ್ತಿದ್ದೆ. ಹಾಗೆಯೇ ಆಟೋಟ ಸ್ಪರ್ಧೆಯಲ್ಲಿ ಬಹಳಷ್ಟು ಬಹುಮಾನಗಳನ್ನು ಗಳಿಸಿದ್ದೇನೆ. ಪ್ರೌಢ ಶಾಲೆಯಲ್ಲಿ ಓದುತ್ತಿರುವಾಗ ವಾಲಿಬಾಲ್ ಅಟ್ಟದಲ್ಲಿ ಆಸಕ್ತಿ ಹುಟ್ಟಿ ಅದನ್ನು ಕಲಿತುಕೊಂಡು ಶಾಲಾ ತಂಡದಲ್ಲಿ ಸೇರಿಕೊಂಡೆ. ಈಗಲೂ ನಾನು ಆಟೋಟ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ನನಗೆ ಸಂಗೀತವೆಂದರೆ ಬಹಳ ಪ್ರಿಯ. ಹಾಡುಗಳನ್ನು ಕೇಳುವುದಕ್ಕೆ ಇಷ್ಟಪಡುತ್ತೇನೆ. ನಾನು ಎಂದೂ ಕನ್ನಡ ಮಣ್ಣಿನ ಬಗ್ಗೆ ಹೆಮ್ಮೆಪಡುವ ವ್ಯಕ್ತಿ. ಅದಕ್ಕಾಗಿಯೇ ನಾನು ಮೈಸೂರು ಪ್ರಾಂತ್ಯವನ್ನು ಆಯ್ದುಕೊಂಡಿರುವುದು. ಭವಿಷ್ಯದಲ್ಲಿ ನಾನು ಸಮಾಜ ಸೇವೆಯನು ಮಾಡಲೆಂದಿದ್ದೇನೆ. ಈ ಜೀವನ ಇತರರಿಗಾಗಿ ನಾನು ಮುಡಿಪಾಗಿಡದ್ದಿದ್ದರೆ ನನ್ನ ಜೀವನ ವ್ಯರ್ಥ. ಏಕೆಂದರೆ ನಾನು ಇಷ್ಟರಮಟ್ಟಿಗೆ ಬೆಳೆದಿದ್ದೇನೆ ಎಂದರೆ ಅದು ಇತರರ ಬೆವರಿನ ಮತ್ತು ಪ್ರೀತಿಯ ಫಲ. ಬಡವರಿಗೆ ಉಪಕಾರ ಮಾಡುವುದರಲ್ಲಿ ನಾನು ಬಹಳಷ್ಟು ಸಂತೋಷಪಡುತ್ತೇನೆ. ಈ ನಾಡಿಗಾಗಿ ಮತ್ತು ಜನರಿಗಾಗಿ ಸೇವೆ ಮಾಡುವುದೇ ನನ್ನ ಗುರಿ.