1840474shubhashree
ಪರಿಚಯ
ಬದಲಾಯಿಸಿನನ್ನ ಹೆಸರು ಶುಭಶ್ರೀ ಏಸ್. ನಾನು ದಿನಾ೦ಕ ೨೭ ಎಪ್ರಿಲ್ ೨೦೦೦ರ ಗುರುವಾರದ೦ದು ಜನಿಸಿದೆ. ಮೂಲತಃ ಕನಕಪುರದ ಮುರುಕಣಿ ಗ್ರಾಮದವಳಾಗಿದ್ದು,
ಬೆಳದದ್ದು ಬೆ೦ಗಳೂರಿನಲ‍್ಲಿ.
ಇನ್ನು ನ೦ಬಿಕೆಯನ್ನು ಆಧರಿಸಿ ನಡೆಯುವ ನಾನು, ನನ್ನ ಮೇಲಿರುವ ಇತರರ ಮತ್ತು ನನ್ನ ಪ್ರೀತಿಪಾತ್ರರ ನ೦ಬಿಕೆಯನ್ನು ಉಳಿಸಿಕೊ೦ಡು ಸಾಗುತ್ತಿರುವೆ.
ಧಕ್ಷ ಅಧಿಕಾರಿಯಾಗುವ ನನ್ನ ಕನಸಿನೊ೦ದಿಗೆ ಜೇವನದ ಹೆಜ‍್ಜೆಯನಿಡುತ್ತಿರುವೆ.
ಕುಟು೦ಬ
ಬದಲಾಯಿಸಿನನ್ನ ತಂದೆಯ ಹೆಸರು ಸುರೇಶ್ ಡಿ, ತಾಯಿ ಸುಶೀಲ. ನನಗೆ ಒಬ್ಬ ತಮ್ಮನಿದ್ದು ಆತನ ಹೆಸರು ಗುರು ಪ್ರಸಾದ್.
ಮೂಲತಃ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನವರುದು. ತಂದೆ ಹೆಡ್ ಪೋಲಿಸ್ ಕಾನ್ಸ್ಟೇಬಲ್ ಆಗಿ, ಕೆ.ಎಸ್.ಆರ್.ಪಿ, ೯ನೇ ಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ತಾಯಿ ಮನೆಯನ್ನು ನಿಭಾಯಿಸುತ್ತಿರುವರು.
ವಿದ್ಯಾಭ್ಯಾಸ
ಬದಲಾಯಿಸಿಇನ್ನು ನನ್ನ ವಿದ್ಯಾಭ್ಯಾಸದ ಬಗ್ಗೆ ಹೇಳೋದಾದರೆ, ಶಾಲಾ ವ್ಯಾಸಂಗವನ್ನು ಪೋಲಿಸ್ ಪಬ್ಲಿಕ್ ಶಾಲೆ ( ಸಿ ಬಿ ಎಸ್ ಇ ), ಕೋರಮಂಗಲದಲ್ಲಿ ಮುಗಿಸಿದ್ದು, ಪಿ.ಯು ತರಬೇತಿಯನ್ನು ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ಪಡೆದಿರುವೆ. ಈಗ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಬಿ.ಏಸ್.ಸಿ( ಪಿ ಸಿ ಎಂ) ನಲ್ಲಿ ಓದುತ್ತಿದ್ದೇನೆ.
ಹವ್ಯಾಸಗಳು ಮತ್ತು ಸಾಧನೆಗಳು
ಬದಲಾಯಿಸಿನನ್ನ ಅವ್ಯಾಸದ ಬಗ್ಗೆ ಹೇಳೋದಾದರೆ ಪೇಂಟಿಂಗ್, ಸ್ಕೆಚಿಂಗ್, ನೃತ್ಯ, ಅಡುಗೆ ಮಾಡುವುದು, ಸಂಗೀತ ಕೇಳುವುದು ಮುಂತಾದವುಗಳು.ನೃತ್ಯದಲ್ಲಿ ಬಹಳಷ್ಟು ಆಸಕ್ತಿ ಇದ್ದು, ಸುಮಾರು ೫೦ ನೃತ್ಯ ಪ್ರದರ್ಶನಗಳನ್ನು ಕೊಟ್ಟಿರುವೆ. ಭರತನಾಟ್ಯ೦ ನನ್ನ ಆಯ್ಕೆಯಾಗಿದ್ದು ಅದ್ಬುತ ಮುಖಭಾವನೆಯಲ್ಲಿ ಪರಿಣಿತಿ ಹೊಂದಿರುವೆ.ಯಕ್ಷಗಾನ, ಮಹಿಸಾಸುರ ಮರ್ಧಿನಿ, ಅಷ್ಟ ಲಕ್ಷ್ಮಿ, ಪುಷ್ಪಾ೦ಜಲಿ, ಶಿವ ತಾಂಡವ ಮುಂತಾದವುಗಳು ನಾನು ಪ್ರದರ್ಶಿಸಿರುವ ಮುಖ್ಯ ನೃತ್ಯ ಪ್ರಕಾರಗಳು. ಶಾಲೆ ಇಂದ ಇಡಿದು ಕಾಲೇಜಿನ ವರೆಗೂ ಪ್ರತಿಯೊಂದು ತರಗತಿಯ ನಾಯಕತ್ವವನ್ನು ವಹಿಸಿದ್ದು, ಶಾಲಾ ಸಮಯದಲ್ಲಿ ವಾದ್ಯ ತಂಡದ ಕಮಾಂಡರ್ ಆಗಿದ್ದೆ. ಆಗಸ್ಟ್ ೧೫, ಸ್ವಾತಂತ್ರ್ಯ ರಾಜ್ಯೋತ್ಸವದಲ್ಲಿ ಸತತವಾಗಿ ಮೂರು ವರ್ಷ ಪ್ರಥಮ ಸ್ಥಾನವನ್ನು ಗಳಿಸಿದ್ದು ವಿಶೇಷ.
ಆಟದ ವಿಷಯಕ್ಕೆ ಬಂದರೆ ಖೋ-ಖೋ ಮತ್ತು ಚೆಂಡು ಎಸೆತದಲ್ಲಿ ಶಾಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ಅತ್ಯುತ್ತಮ ಆಟಗಾರ್ತಿ ಎಂಬ ಪ್ರಶಸ್ತಿ ಪಡೆದಿದ್ದೆ. ಇವೆಲ್ಲದರ ಜೊತೆಗೆ ಓದಿನಲ್ಲೂ ಆಸಕ್ತಿ ಹೊಂದಿದ್ದ ನನಗೆ, ೧೦ನೇ ತರಗತಿಯಲ್ಲಿ ೧೦/೧೦ ಸಿ.ಜಿ.ಪಿ.ಎ ಅಂಕವನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನವನ್ನು ಪಡೆದೆ. ಪಿ.ಯು ವ್ಯಾಸಂಗದಲ್ಲಿ ಪಿ.ಸಿ.ಎಂ.ಬಿ ವಿಭಾಗವನ್ನು ಆರಿಸಿ, ೧೨ನೇ ತರಗತಿಯಲ್ಲಿ ಶೇಕಡ ೯೧% ತಗೆದು ಉತ್ತೀರ್ಣಗೊoಡಿರುವೆ. ಈಗ ಬಿ.ಎಸ್ ಸಿ (ಪಿ ಸಿ ಎಂ)ವಿಭಾಗದಲ್ಲಿ ಓದುತ್ತಿರುವೆ.
ಇನ್ನು ಚಿತ್ರಕಲೆಯಲ್ಲಿ ಬಹಳಷ್ಟು ಆಸಕ್ತಿ ಇದ್ದು ಬೇರೆ ಬೇರೆ ರೀತಿಯ ಚಿತ್ರ ಬಿಡಿಸುವುದು ಹವ್ಯಾಸ. ಕನ್ನಡ ಕವನಗಳು, ಆಂಗ್ಲ ಭಾಷೆಯಲ್ಲಿ ಶುಭಾಶಯಗಳನ್ನು ಬರೆಯುವುದು ವಿಶೇಷ.
ಇನ್ನು ೨/೯ ಪಡೆಯ ಏನ್ ಸಿ ಸಿ (ಕ್ರೈಸ್ಟ್ )ಯ ಮೂರನೇ ವರ್ಷದ ತಂಡದಲ್ಲಿ ಭಾಗಿಯಾಗಿದ್ದು ಎರಡು ರಾಷ್ಟ್ರೀಯ ಕ್ಯಾಂಪ್ಗಳನ್ನು ಮುಗಿಸಿದ್ದೇನೆ. ಈ ವರುಷ ಸಿ ಸರ್ಟಿಫಿಕೇಟ್ ಪರೀಕ್ಷೆಯನ್ನು ಬರಿಯಲಿದ್ದು ಏನ್ ಸಿ ಸಿ ಇಂದ ಉತ್ತೀರ್ಣಳಾಗಲಿದ್ದೇನೆ.
ಜೀವನದ ಗುರಿ
ಬದಲಾಯಿಸಿಐ ಎ ಎಸ್ ಅಧಿಕಾರಿಯಾಗುವುದು ನನ್ನ ಗುರಿ. ಅಧಿಕಾರದ ಅಸ್ತಿತ್ವದೊ೦ದಿಗೆ ಜನರ ಸೇವೆ ಮಾಡಬೇಕೆ೦ಬುದು ನನ್ನ ಧ್ಯೇಯವಾಗಿದೆ.
ನಂಬಿಕೆಯನ್ನು ಆಧರಿಸಿರುವ ನಾನು, ಗೌರವ ಕೊಟ್ಟು ಗೌರವ ಪಡೆಯುವ,ಸದಾ ನಗು ಮುಖದ, ಶಿಸ್ತು ಸಂಪ್ರದಾಯದ ಸರಳ ಹುಡುಗಿ.ಎ೦ದಿಗೂ ಸ೦ತೋಷದಿ೦ದ ಇದ್ದು ಎಲ್ಲರೊ೦ದಿಗೆ ಆ ಸ೦ತೋಷವನ್ನು ಅ೦ಚಿಕೊ೦ಡು ಸದಾ ಸ್ನೇಹದಿ೦ದ ಇರುವೆ.