1840469manashwi n
ಪರಿಚಯ
ಬದಲಾಯಿಸಿನನ್ನ ಹೆಸರು ಮನಸ್ವಿ.ಎನ್. ನಾನು ಪ್ರಸ್ತುತವಾಗಿ ಕ್ರೈಸ್ಟ ಯೂನಿವರ್ಸಿಟಿ, ಬೆಂಗಳೂರಿನಲ್ಲಿ ಬಿ.ಎಸ್.ಸಿ ಡಿಗ್ರಿಯನ್ನು ಓದುತ್ತಿರುವೆ.ನಾನು ಬಸ್ತಿ,ಹೊಸೂರಿನಲ್ಲಿ ವಾಸವಿದ್ದೇನೆ.ನನ್ನ ಹುಟ್ಟೂರು ವೈಟ್ ಫೀಲ್ಡ್,ಬೆಂಗಳೂರು. ನನ್ನ ಹುಟ್ಟಿದ ದಿನಾಂಕ ಮೇ ಹನ್ನೊಂದು ಎರಡು ಸಾವಿರ.(೧೧-೦೫-೨೦೦೦).ನಾನು ಬೆಳೆದಿದ್ದು ಎಲ್ಲಾ ಹೊಸೂರಿನಲ್ಲಿ.
ಕುಟುಂಬ
ಬದಲಾಯಿಸಿನನ್ನ ತಂದೆಯ ಹೆಸರು ನಾಗರಾಜು.ಎಮ್.ಬಿ. ನನ್ನ ತಾಯಿಯ ಹೆಸರು ಮಂಜುಳ.ಆರ್.ನನ್ನ ತಂದೆಯ ಹುಟ್ಟೂರು ಮನವಾರನಪಲ್ಲಿ ಮತ್ತು ನನ್ನ ತಾಯಿಯ ಹುಟ್ಟೂರು ಬೆಂಗಳೂರು. ನನ್ನ ತಂದೆ ಒಂದು ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ಅವರು ಐ.ಟಿ ಓದಿದ್ದಾರೆ. ನನ್ನ ತಾಯಿ ಕನ್ನಡದಲ್ಲಿ ಎಂ.ಎ ಪದವಿಯನ್ನು ಪಡೆದಿದ್ದು ಕೆಲವು ವರ್ಷಗಳು ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ಈಗ ಅವರು ಗೃಹಿಣಿಯಾಗಿ ನಮ್ಮ ಮನೆಯ ಬೆಳಕಾಗಿದ್ದಾರೆ.ನಾನು ನನ್ನ ತಂದೆ ತಾಯಿಗೆ ಒಬ್ಬಳೇ ಮಗಳು.ಆದ ಕಾರಣ ನನಗೆ ಕೆಲವು ಬಾರಿ ಏಕಾಂತ ಕಾಡಿದ್ದುಂಟು. ಆದರೂ ನಾನು ನನ್ನ ಗೆಳೆಯರೊಡನೆ ಇರುವ ಕಾಲ ನನ್ನ ಏಕಾಂತವೆಲ್ಲಾ ದೂರವಾಗುತ್ತದೆ.
ಶಿಕ್ಷಣ
ಬದಲಾಯಿಸಿನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ಮಹರಿಷಿ ವಿದ್ಯಾ ಮಂದಿರ ಎಂಬ ಬಹು ವಿಶಾಲವಾದ ಶಾಲೆಯಲ್ಲಿ ಪೂರ್ತಿಗೊಳಿಸಿದೆ. ನಾನು ನನ್ನ ಎಲ್.ಕೆ.ಜಿ ಯಿಂದ ಹನ್ನೆರಡನೆ ತರಗತಿಯವರೆಗೂ ಇದೇ ಶಾಲೆಯಲ್ಲಿ ಓದಿದೆ. ನಾನು ಹತ್ತನೇ ತರಗತಿಯನ್ನು ೧೦ ಸಿ.ಜಿ.ಪಿ.ಎ ಯನ್ನು ಪಡೆದು ಯಶಸ್ವಿಯಾಗಿ ಪೂರ್ತಿಗೊಳಿಸಿದೆ ಮತ್ತು ನಾನು ನನ್ನ ಹನ್ನೆರಡನೆಯ ತರಗತಿಯಲ್ಲಿ ನಾನೂರ ನಲವತ್ತು ನಾಲ್ಕು ಅಂಕಗಳನ್ನು ಪಡೆದಿದೆ.ನಾನು ಪ್ರಸ್ತುತವಾಗಿ ಕ್ರೈಸ್ತ ಯೂನಿವರ್ಸಿಟಿ,ಬೆಂಗಳೂರಿನಲ್ಲಿ ಬಿ.ಎಸ್.ಸಿ ಡಿಗ್ರಿಯನ್ನು ಓದುತ್ತಿರುವೆ.
ಹವ್ಯಾಸಗಳು
ಬದಲಾಯಿಸಿನಾನು ಶಾಸ್ತ್ರೀಯ ಸಂಗೀತವನ್ನು ಕಲಿತಿರುವ. ನಾನು ಸಂಗೀತದಲ್ಲಿ ಶಾಲೆಯಲ್ಲಿ ಓದುವಾಗ ಪ್ರಶಸ್ತಿಗಳನ್ನು ಪಡೆದಿದ್ದೆ. ನನಗೆ ಅಡುಗೆ ಮಾಡಲು ಬಹಳ ಇಷ್ಟ. ನನಗೆ ಚಿತ್ರ ಬಿಡಿಸಲು ಬಹಳ ಅಚ್ಚುಮೆಚ್ಚು.ಅದರಲ್ಲಿಯೂ ನಾನು ಪ್ರಶಸ್ತಿಗಳನ್ನು ಪಡೆದಿದ್ದೇನೆ.
ಇತರೆ ಇಷ್ಟಗಳು
ಬದಲಾಯಿಸಿನನಗೆ ಬಸವಣ್ಣ ನವರ ವಚನಗಳು ಬಹಳ ಅಚ್ಚುಮೆಚ್ಚು. ಅದರಲ್ಲಿ ಅವರು ಸಾರಿರುವ ನೀತಿಗಳು ನಾವು ಹೇಗೆ ಎಲ್ಲರನ್ನು ಸಮಾನತೆಯಿಂದ ನೋಡಬೇಕೆಂದು ಬಹಳ ಸೊಗಸಾಗಿ ತಿಳಿಸಿದ್ದಾರೆ. ನನಗೆ ಅಂತಹ ಒಳ್ಳೆಯ ನೀತಿಗಳು, ಮೌಲ್ಯಗಳನ್ನು ಸಾರುವ ವಚನಗಳು, ಕಥೆಗಳು ಎಂದರೆ ಬಹಳ ಇಷ್ಟ.ನನ್ನ ಬಾಲ್ಯ ಬಹಳ ಸುಂದರವಾಗಿತ್ತು. ನಾನು ಬಹಳ ಸಂತೋಷವಾಗಿದ್ದೆ.ನನಗೆ ಕಪ್ಪು ಬಣ್ಣ ಎಂದರೆ ಬಹಳ ಪ್ರಿಯ. . ನನಗೆ ಹಿರಿಯರೆಂದರೆ ಬಹಳ ಗೌರವ. ನಾನು ನನ್ನ ಗುರಿಯನ್ನು ಖಚಿತವಾಗಿ ಸಾಧಿಸುತ್ತಿಯೇ ತೀರುತ್ತೇನೆ ಎಂಬ ಅಪಾರ ನಂಬಿಕೆ ಮತ್ತು ಧ್ಯೇಯ ನನ್ನಲಿದೆ. ಯಾವುದೇ ತೊಂದರೆಗಳು, ಅಡೆ ತಡೆಗಳು ಬಂದರೂ ನಾನು ಎಂದಿಗೂ ನನ್ನ ಕನಸನ್ನು ಬಿಟ್ಟು ಕೊಡುವುದಿಲ್ಲ. ಮತ್ತು ನನಗೆ ದೇವರೆಂದರೆ ಬಹಳ ಭಕ್ತಿ. ನಾನು ನಮ್ಮ ಎಲ್ಲರಿಗಿಂತ ಒಂದು ಅಪಾರವಾದ ಶಕ್ತಿ ಇದೆ. ಅದುವೇ ನಮ್ಮನ್ನು ಎಲ್ಲಾ ಕಾಪಾಡುತ್ತಿದೆ ಎಂಬ ನಂಬಿಕೆ ಇದೆ. ಇನ್ನೂ ನನಗೆ ಚಿಕ್ಕ ಚಿಕ್ಕ ಮಕ್ಕಳೊಡನೆ ಆಟವಾಡಲು ಬಹಳ ಇಷ್ಟ. ರಂಗೋಲಿ, ಮೆಹಂದಿ ಮುಂತಾದವುಗಳಲ್ಲಿಯೂ ಬಹಳ ಆಸಕ್ತಿ. ನನಗಿರುವ ಮತ್ತೊಂದು ಘಾಡವಾದ ನಂಬಿಕೆಯೆಂದರೆ ಹೆಣ್ಣು ಮಕ್ಕಳು ಏನನ್ನು ಬೇಕಾದರೂ ಸಾಧಿಸಬಹುದು. ನಾನು ಇದುವವರೆಗೂ ಸತ್ಯ ಕರ್ಮಗಳ ಹಾದಿಯಲ್ಲೇ ನಡೆಯಲು ಪ್ರಯತ್ನಿಸುತ್ತೇನೆ. ಏನೇ ಬಂದರೂ ಯಾವತ್ತೂ ಸುಳ್ಳು ಹಾದಿಯನ್ನು ಹಿಡಿಯದ ನನ್ನ ಜೀವನವನ್ನು ನಡೆಸಲು ಆದಷ್ಟು ಮನಸಾ ವಾಚಾ ಕರ್ಮದಿಂದ ಪ್ರಯತ್ನಿಸುತ್ತೇನೆ.