ನನ್ನ ೧೮ ವರುಷಗಳು



ಕುಟು೦ಬ ಬದಲಾಯಿಸಿ

ನಾನು ತೃಷಾ.ಟಿ.ಬಿ. ಮೂಲತಃ ಕೊಡಗು ಜಲ್ಲೆಯ ವಿರಾಜಪೇಟೆ ತಾಲೂಕಿನ ಕುಂದ ಗ್ರಾಮದವಳಾದ ನನ್ನ ತಂದೆ ಟಿ.ಕೆ.ಭೀಮಯ್ಯ ಹಾಗು ತಾಯಿ ಚರಿತ. ತಂದೆ ಪ್ರಸ್ತುತ ಜೀವ ವಿಮಾ ನಿಗಮದ ಹೊಳೆನರಸೀಪುರ, ಹಾಸನ ಜಿಲ್ಲಾ ಶಾಖೆಯಲ್ಲಿ ಶಾಖಾ ಪ್ರಬಂಧಕರಾಗಿ ಕಾರ್ಯ ನಿರ್ವಹಿಸುತ್ತದ್ದಾರೆ. ತಾಯಿ ಗೃಹಿಣಿ. ನನ್ನ ಬಾಲ್ಯದ ತುಂಟತನವನ್ನು, ಮನಸ್ಸಿನ ವಿಚಾರಗಳನ್ನು ನನ್ನೊಂದಿಗೆ ಹಂಚಿಕೊಂಡದ್ದು ನನ್ನ ಸಹೋದರಿ ದಕ್ಷಾ. ಆಕೆ ಪ್ರಸ್ತುತ ಮಂಗಳೂರಿನ ಮೈಟ್ ನಲ್ಲಿ ಅಂತಿಮ ವರ್ಷದ ಎಂಜಿನಿಯರಿಂಗ್ ಪದವಿಯನ್ನು ಪಡೆಯುತ್ತಿದ್ದಾಳೆ.

ನಮ್ಮದು ಪುಟ್ಟ ಕುಟುಂಬ, ಪರಸ್ಪರ ಪ್ರೇಮಿಸಿ, ಖುಷಿ-ಖುಷಿಯಿಂದ ಬಾಳುವ ಕುಟುಂಬ. ಕಳೆದ ಆರೇಳು ತಿಂಗಳುಗಳಿಂದ ಮನೆಯಲ್ಲಿ ಕೇವಲ ಅಪ್ಪ-ಅಮ್ಮ ವಾಸಿಸುತ್ತಿದ್ದು, ನಾಲ್ಕೂ ಜನ ಜೊತೆ ಸೇರಿದಾಗ ಮುಗಿಲು ಮುಟ್ಟುವ ಸಂತೋಷದ ವಾತಾವರಣ ಸೃಷ್ಠಿಯಾಗುತ್ತದೆ. ನನ್ನ ತಂದೆಯದ್ದು ಪ್ರತೀ ಮೂರು ವರ್ಷಗಳಿಗೊಮ್ಮೆ ವರ್ಗಾವಣೆಗೊಳ್ಳುವ ವೃತ್ತಿಯಾದುದರಿಂದ, ನಾನು ಸಾಕಷ್ಟು ಬಾರಿ ಶಾಲೆಗಳನ್ನು ಬದಲಾಯಿಸಬೇಕಾಯಿತು. ಕ್ರೈಸ್ಟ್ ನನ್ನ ೯ನೇ ಶಿಕ್ಷಣ ಸಂಸ್ಥೆಯಾಗಿದ್ದು, ಈ ಹಿಂದೆ ಗದಗ, ಮೈಸೂರು, ಹಾಸನ, ತುಮಕೂರು,ಮಡಿಕೇರಿ, ಉಡುಪಿ ಗಳಲ್ಲಿ ಶಿಕ್ಷಣ ಪಡೆದಿರುವೆ. ನನ್ನ ಈ ಸಂಚಾರಿ-ಶಿಕ್ಷಣವನ್ನು ಎಂದಿಗೂ ದುರ್ಭಾಗ್ಯವೆಂದು ಪರಿಗಣಿಸಿದವಳು ನಾನಲ್ಲ. ಪ್ರತಿಯೊಂದು ಊರಿನಲ್ಲೂ ವಿಧ-ವಿಧವಾದ, ಸಾಕಷ್ಟು ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದೆ. ಅದರಿಂದ ಯಾವುದೇ ಕ್ರೀಡೆ ಅಥವ ಕೌಶಲ್ಯೆಯಲ್ಲಿ ಪರಿಣತಿ ಹೊಂದಿಲ್ಲವಾದರೂ ಅವುfಳು ನನ್ನ ವ್ಯಕ್ತಿತ್ವದ ವಿಕಸನದಲ್ಲಿ ಬಹಳ ಮಹತ್ವದ ಪಾತ್ರವನ್ನು ವಹಿಸಿವೆ.

ವಿದ್ಯಾಭ್ಯಾಸ ಬದಲಾಯಿಸಿ

ನನಗೆ ಶಾಲೆಯ ಕೊನೆಯ ನಾಲ್ಕೈದು ಸಾಲುಗಳು ಜೀವನದಲ್ಲಿ ಬಹಳ ಮಹತ್ವದ ಪಾತ್ರವನ್ನು ವಹಿಸಿದವು. ಮಡಿಕೇರಿಯಲ್ಲಿದ್ದಾಗ ಎಂದಿಗೂ ನಾನು ಪುಸ್ತಕದ ಕಡೆಗೆ ಗಮನ ಹರಿಸಿದವಳೇ ಅಲ್ಲ. ಬಾಸ್ಕೆಟ್ ಬಾಲ್, ಎನ್.ಸಿ.ಸಿ., ವಿಜ್ಞಾನ ಸಮಾವೇಶ ಅವೂ-ಇವೂ ಎಂದು ದಿನ ಪೂರ್ತಿ ಹೊರಗಡೆಯೇ ಓಡಾಡಿಕೊಂಡು ಇರುತ್ತಿದ್ದೆ. ಅಂಕಪಟ್ಟಿಯಲ್ಲಿ ಅಂಕಗಳು ಇಳಿಮುಖಗೊಂಡರೂ, ಜೀವನ ಪಾಠ ಕಲಿಯುತ್ತಿರುವೆನೆಂಬ ಸಂತೃಪ್ತಿ ನನ್ನಲ್ಲಿತ್ತು. ಬಾಸ್ಕೆಟ್ ಬಾಲ್ ಜಿಲ್ಲಾ ಪಂದ್ಯಾವಳಿಗಳಲ್ಲಿ, ಎನ.ಸಿ.ಸಿ. ಕ್ಯಾಂಪ್ ಗಳಲ್ಲಿ, ರಾಜ್ಯ ಮಟ್ಟದ ವಿಜ್ಞಾನ ಸಮಾವೇಶಗಳಲ್ಲಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಪಾಲ್ಗೊಂಡಿದ್ದ ನನಗೆ ಸಾಕಷ್ಟು ಜನ ಪರಿಚಯವಾಗುತ್ತಿತ್ತು. ಅವುಗಳಿಂದ ಸಮಾಜ ಎಂದರೇನು, ಸಾಮಾಜಿಕ ಜೀವನ ಎಂದರೇನು ಎಂಬುದನ್ನು ಅರಿತುಕೊಂಡೆ.

ಶಿರೋಲೇಖ ಅನುಭವ ಬದಲಾಯಿಸಿ

ನಂತರ, ಒಂಬತ್ತನೇ ತರಗತಿಯಿಂದ ಹತ್ತನೇ ತರಗತಿಗೆ ಏರುವಾಗ, ನನ್ನ ತಂದೆಗೆ ಉತ್ತಮ ಶಿಕ್ಷಣಕ್ಕೆಂದೇ ಹೆಸರುವಾಸಿಯಾದ ಉಡುಪಿಗೆ ವರ್ಗಾವಣೆಗೊಂಡಿತು. ನಾನು ಶಿಕ್ಷಣದ ಅತಿ ಅಮೂಲ್ಯ ವರ್ಷವಾದ ಹತ್ತನೇ ತರಗತಿಗೆ ಶಾಲೆ ಬದಲಾಯಿಸಿದ ಕಾರಣದಿಂದ ಆ ಒಂದು ಸಾಲು ನನಗೆ ಯಾವುದೇ ಚಟುವಟಿಗಳಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆಯಲಿಲ್ಲ. ಆದರೆ ಆ ಶಾಲೆಯು ನನ್ನಲ್ಲಿನ ದೃಢಶಕ್ತಿಯನ್ನು ಹೊರತಂದು, ಅಂತಿಮ ಪರೀಕ್ಷೆಯನ್ನು ಅತ್ಯದ್ಭುತವಾಗಿ ಎದುರಿಸಿ ಅತಿ ಹೆಚ್ಚು ಅಂಕಗಳನ್ನು ಗಳಿಸುವಂತೆ ಮಾಡಿತು. ನಂತರದ ಪ್ರಥಮ ಹಾಗು ದ್ವತೀಯ ಪಿಯು ನನಗೆ ಯಾವುದೇ ಒತ್ತಡವಿಲ್ಲದೆ ಕಳೆದುಹೋದವು. ಉಡುಪಿಯಲ್ಲಿ ನಾನಾ ತೇರ್ಗಡೆ ಪರೀಕ್ಷೆಗಳಿಗೆ ಅತ್ಯತ್ತಮ ತರಬೇತಿ ನೀಡುವ ಪ್ರತಿಷ್ಠ ಸಂಸ್ಥೆಯಾದ ವಿದ್ಯೋದಯ ವಿದ್ಯಾ ಸಂಸ್ಥೆಯನ್ನು ನಾನು ಆಯ್ದುಕೊಂಡೆ. ಅಲ್ಲಿನ ಮುಖ್ಯೋಪಾಧ್ಯಾಯರು, ಪ್ರಾಧ್ಯಾಪಕರುಗಳೇ ನನ್ನ ಇಂದಿನ ನಿರ್ಧಾರಕ್ಕೆ ಸ್ಪೂರ್ತಿ. ಅವರೆಲ್ಲರ ವೃತ್ತಿಪರ ಪ್ರೇಮ, ಕಾರ್ಯನಿಷ್ಠೆಗೆ ಮನಸೋತ ನಾನು ಶುದ್ಧ ವಿಜ್ಙಾನದಲ್ಲಿಯೇ ಮುಂದಿನ ಶಿಕ್ಷಣ ಪಡೆಯಬೇಕು ಎಂಬ ನಿರ್ಧಾರವನ್ನು ಕೈಗೊಂಡೆ. ಈ ನಿರ್ಧಾಕ್ಕೆ ಮುಂದೆ ಎಂದೂ ಪಶ್ಚಾತಾಪ ಪಡೆಯುವುದಿಲ್ಲ ಎಂಬ ವಿಶ್ವಾಸ ನನ್ನಲ್ಲಿದೆ.

ಪದವಿ ಪೂರ್ವದ ಆ ಎರಡು ವರ್ಷಗಳಲ್ಲಿ ನಾನು ಯಾವುದು ನನ್ನ ಲೋಟದ ಚಹವಲ್ಲವೆಂದು ಭಾವೆಸಿದ್ದೆನೊ, ಅಂತಹ ಚಟುವಟಿಕೆಗಳಲ್ಲಿಯೇ ಭಾಗವಹಿಸಿದೆ. ವರ್ಷದ ಕೊನೆಯಲ್ಲಿ ನಾನು ನರ್ತಿಸಿಯೂಬಲ್ಲೆ, ಚದುರಂಗ ಆಡಲೂಬಲ್ಲೆ, ಉತ್ತಮ ಪ್ರಬಂಧಗಳನ್ನು ಬರಯಲೂಬಲ್ಲೆ ಎಂದು ಅರಿತುಕೊಂಡೆ. ನಮ್ಮ ಬೀಳ್ಕೊಡುಗೆ ಸಮಾರಂಭದಂದು ಭಾಷಣ ಮಾಡುವ ಅವಕಾಶ ನನ್ನ ಪಾಲಿಗೆ ದೊರಕ್ಕಿದ್ದು, ನನ್ನ ಸ್ನೇಹಿತರ, ಸಹಪಾಠಿಗಳ ಕಣ್ಣುಗಳಿಂದ ನೀರು ಹರಿಯುವಂತಹ ಭಾಷಣ ಮಾಡಬೇಕೆಂಬ ಬಯಕೆಯಿಂದ ಪೂರ್ಣ ತಯಾರಿಕೆಯೊಂದಿಗೆ ವೇದಿಕೆ ಏರಿದ ನಾನು, ಭಾಷಣ ಮಾಡುತ್ತಾ ಎರಡು ವರ್ಷಗಳ ಆಟ-ಪಾಠದ ಸುಮದುರ ಪಯಣವನ್ನು ನೆನೆಯುತ್ತಾ ನಾನೇ ಗದ್ಗದಿತಳಾದೆ. ಆ ಕಣ್ಣೀರು ನನಗೆ ಸಂತೋಷ-ಸಂತೃಪ್ತಿಯ ಸಂಕೇತವಾಗಿತ್ತು. ಆ ಎರಡು ಸಾಲುಗಳು ನನಗೆ ಎರಡು ಕೋಟಿ ಪಾಠ, ಎರಡು ಲಕ್ಷ ನೆನಪುಗಳನ್ನು ನೀಡಿದವು.

ಪ್ರಸ್ತುತ ಬದಲಾಯಿಸಿ

ಇಂದು ನಾನು ಮನೆಯಿಂದ ದೂರದ ಹಾಸ್ಟೆಲ್ ನಲ್ಲಿ ಇದ್ದುಕೊಂಡು ಶಿಕ್ಷಣ ಪಡೆಯುತ್ತಿರಲು ನನ್ನ ಎಲ್ಲಾ ಶಿಕ್ಷಣ ಸಂಸ್ಥೆಗಳು, ಅಲ್ಲಿನ ಭೋದಕರು, ಅವರ ಭೋದನೆಗಳೇ ಕಾರಣ. ಎಂದಿಗೂ ಮನೆಯನ್ನು ನೆನೆದು ಕಣ್ಣೀರು ಹರಿಸಿದವಳು ನಾನಲ್ಲ. ಈ ಧೈರ್ಯವನ್ನು ನನ್ನಲ್ಲಿ ತುಂಬಿದ್ದು ನನ್ನ ಬಾಲ್ಯ ಜೀವನ. ಬಾಲ್ಯದ ಆಟ-ಪಾಠಗಳು. ಆ ಪೋಷಣೆಗೆ ನಾನು ಎಂದಿಗೂ, ಎಂದೆಂದಿಗೂ ನನ್ನ ತಂದೆ-ತಾಯಿ-ಅಕ್ಕ, ಇವರಿಗೆ ಋಣಿಯಾಗಿರುತ್ತೇನೆ.

ಇದು ನನ್ನ ಬರಹ.

ನನ್ನ ಇಲ್ಲಿಯವರೆಗಿನ ಜೀವನದ ಬರಹ.