1840361Kedar
ಎಂದಿಗೂ ನಾವು ನಮ್ಮ ಬಗ್ಗೆಯೇ ಹೆಚ್ಚು ಮಾತಾಡಬಾರದು ಇತರರು ಮಾತಾಡಬೇಕು ಆ ಸಾಧನೆ ಮಾತಾಡಬೇಕು ಆ ಕಾರಣಕ್ಕಾಗಿಯೇ ನಾನು ನನ್ನ ಬಗ್ಗೆ ಬರೆಯಲು ಇಚ್ಚಿಸುವುದಿಲ್ಲ ಆದರೆ ಅಂಕಗಳಿಗಾಗಿ ಬರೆಯಬೇಕಾದ ಸಂದರ್ಭ ಈದಿಗ ಬಂದಿದೆ .
ಹುಟ್ಟು:
ಬದಲಾಯಿಸಿನಮಸ್ಕಾರ , ನಾನು ಹುಟ್ಟಿದ ಊರು ಕರ್ನಾಟಕದ ಎರಡನೇ ರಾಜಧಾನಿ , ಸಂಗೊಳ್ಳಿ ರಾಯಣ್ಣ ಹುಟ್ಟಿದ ಪವಿತ್ರ ಭೂಮಿ ,ಅದೆ ನಮ್ಮ ಬೆಳಗಾವಿ.ನನ್ನ ಪೂರ್ಣ ಹೆಸರು ಕೇದಾರ ವಸಂತ ಗೋಡ್ಸೆ ನಾನು ಒಬ್ಬ ದೇಶಕ್ಕಾಗಿ ಬದುಕನ್ನು ಸಂಪರ್ಪಿಸಿದ ನಾಥುರಾಮ್ ಗೋಡ್ಸೆ ರವರ ವಂಶಸ್ಥ ಎಂಬುದಕ್ಕೆ ನನಗೆ ಸದಾ ಹೆಮ್ಮೆಯ ವಿಷಯ .
ನನ್ನ ತಂದೆಯ ಹೆಸರು ವಸಂತ ಗೋಡ್ಸೆ ಹಾಗೂ ತಾಯಿ ವೀಣಾ ಗೋಡ್ಸೆ .ತಂದೆ ಲೆಕ್ಕ ಪರಿಶೋಧಕರ ಮೊದಲನೆ ಪರೀಕ್ಷೆ ಮುಗಿಸಿದ್ದಾರೆ ಇದಿಗ ಒಂದು ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ ಹಾಗೂ ತಾಯಿ ಮನೆಕೆಲಸ ಮಾಡುತ್ತಾ ಅಡಿಗೆಯ ಕೆಲಸವನ್ನು ಮಾಡುತ್ತಾರೆ .ಹಗ
ಶಿಕ್ಷಣ:
ಬದಲಾಯಿಸಿಇನ್ನು ನನ್ನ ಶಿಕ್ಷಣದ ಬಗ್ಗೆ ಹೇಳಬೇಕಂದರೆ ನಾನು ೨ ನೇ ತರಗತಿಯ ವರೆಗೆ ನವೋದಯ ಶಿಕ್ಷಣ ಸಂಸ್ಥೆ, ಬೆಳಗಾವಿಯಲ್ಲಿ ಕಲಿತು ಅದರ ನಂತರ ಬೆಂಗಳೂರು ಕಡೆಗೆ ಹೆಜ್ಜೆಯಿಟ್ಟು ೩ರಿಂದ ೧೦ನೇ ತರಗತಿಯ ವರೆಗೆ ಶ್ರೀ ಅಯ್ಯಪ್ಪನ್ ಶಿಕ್ಷಣ ಸಂಸ್ಥೆಯಲ್ಲಿ ಮುಗಿಸಿದೆ ಶೇಕಡಾ ೯೦.೧೩ ಅಂಕ ತೆಗೆದು ಮುಂದೆ ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಮುಗಿಸಿ ಅನಂತರ ಮುಂದಿನ ವ್ಯಾಸಂಗಕ್ಕೆ ಕ್ರೈಸ್ಟ್ ವಿಶ್ವವಿದ್ಯಾಲಯ ದಲ್ಲಿ ಬಿಎಸ್ಸಿ ಓದುತ್ತಿರುವೆ
ಇನ್ನು ನನ್ನ ಆಸಕ್ತಿಯ ವಿಷಯಗಳೆಂದರೆ, ಚರ್ಚೆ, ರಸಪ್ರಶ್ನೆ,ರಾಜಕೀಯ , ಕಾನೂನು, ಭೌತಶಾಸ್ತ್ರ ,
ಹವ್ಯಾಸ , ಸಾಧನೆ :
ಬದಲಾಯಿಸಿನಾನು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ದಲ್ಲಿ ಬೌದ್ಧಿಕ ಪ್ರಮುಖನಾಗಿ ಜವಾಬ್ದಾರಿ ನಿಭಾಯಿಸುತ್ತಾ ಅದರ ತತ್ವ ಆದರ್ಶ ಪ್ರೆರಿಪಿತನಾಗಿ ನಮ್ಮ ದೇಶ ವಿಶ್ವಗುರುವಾಗಿ ಮಾಡುವ ಗುರಿಗೆ ಸೇವೆ ಸಲ್ಲಿಸುತ್ತಿರುವೆ "ಎಂದಿಗೂ ಮನುಷ್ಯ ಹೆಚ್ಚು ಮಾತನಾಡಬಾರದು ಅವರ ಕೇಲಸ ಮಾತನಾಡಬೇಕೆಂಬ ಮಾತಿದೆ " ಆ ಕಾರಣವೇ ನಮ್ಮ ಸಂಘದಲ್ಲಿ ಕೆಲಸಕ್ಕೆ ಹೆಚ್ಚಿನ ಮಹತ್ವ .
ನಾನು ಈದಿಗ ಸಾಮಾಜಿಕ ವಿಷಯಗಳ ಬಗ್ಗೆ ಆಸಕ್ತಿ ಉಂಟಾಗಿ ಪ್ರತಿಯೊಂದು ವಿಷಯವನ್ನು ವಿಷ್ಲಿಸಿಸುತ್ತ ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ನ ಸದಸ್ಯನಾಗಿ ವಿದ್ಯಾರ್ಥಿ ಹೋರಾಟಗಳಲ್ಲಿ ಭಾಗವಹಿಸುತ್ತಿರುವೆನು .
ಮನದ ಮಾತು:
ಬದಲಾಯಿಸಿಇನ್ನು ನನಗೆ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಸಿದ್ದಾಂತಗಳು ನನ್ನ ಮನದ ಮೇಲೆ ಅಗಾಧ ವಾದ ಪರಿಣಾಮ ಬಿರಿದೆ ಎನ್ನಬಹುದು ಆದರೆ ಇಂದಿನ ಸಮಾಜದಲ್ಲಿ ಕೇವಲ ಸಿದ್ದಾಂತಗಳು ಮಾತಿಗಷ್ಟೆ ,ಪುಸ್ತಕಕ್ಕಷ್ಟೆ ನಡೆದುಕೊಳ್ಳುವದಕ್ಕಲ ಎಂಬತಾಗಿದೆ
ನನಗೆ ಜೀವನವನ್ನು ಎಲ್ಲರಂತೆ ಅಲ್ಲದೆ ಅಸಾಮಾನ್ಯ ರೀತಿಯಲ್ಲಿ ಬದುಕಲು ಇಚ್ಛೆಸುವೆ ,ಅಂದರೆ ಪ್ರತಿಯೊಂದು ವಿಷಯವನ್ನು ವಿಷ್ಲಿಸಿಸದೆ ಎಂದಿಗೂ ಒಪ್ಪಿಕೊಳ್ಳುವುದಿಲ್ಲ
ಇನ್ನೂ ನಾನು ಚಿಕ್ಕ ವಯಸ್ಸಿನಿಂದಲು ವೇದಮಂತ್ರ ಕಲಿಯುತ್ತಿದ್ದೆನೆ , ಮನೆಯಲ್ಲಿ ಆರ್ಥಿಕವಾಗಿ ಅಷ್ಟು ಸದೃಢವಲ್ಲ ದಿದ್ದರು ತಂದೆ ಹಾಗು ತಾಯಿ ನಾನಗಾಗಿ, ನನ್ನ ಓದಿಗಾಗಿ ತುಂಬ ಕಷ್ಟ ಪಡುತ್ತಿದ್ದಾರೆ
ತಂದೆ ಅವ್ರಿಗೆ ಯಾವಾಗ್ಲೂ ಅನಾರೋಗ್ಯದ ಪರಿಸ್ಥಿತಿ
ಈ ಕಾರಣಕ್ಕಾಗಿ ನಾನು ಕೂಡ ದೇವಸ್ಥಾನಕ್ಕೆ, ಪೂಜೆಗೆ ಹೋಗಿ ಹಣ ಗಳಿಸುತ್ತೆನೆ
ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರಿಯಸಿ, ಅದರಂತೆ ನಾನು ಎಂದಿಗೂ ಜನ್ಮ ಕೊಟ್ಟ ತಂದೆ -ತಾಯಿಗೆ ಹಾಗೂ ಬದುಕು ಕೊಟ್ಟ ದೇಶಕ್ಕೆ ಸದಾ ಸೇವೆಗೆ ಸಿದ್ದರಾಗಿರಬೇಕು.
ಒಟ್ಟಾರೆಯಾಗಿ ನಾನು ನನ್ನ ಸಾಧನೆ ಹೇಳಲು ಇನ್ನು ಸಾಧಕನಾಗಿಲ್ಲ ,
ಈ ಸಮಾಜದಲ್ಲಿ ಎನಾದರೂ ಮಾಡುತ್ತೆನೆ ,ದೇಶಕ್ಕಾಗಿ ಬದುಕುತ್ತೆನೆ ಎಂದರೆ ಮೊದಲು
ದೇಶ ನನಗೇನು ಮಾಡಿದೆ ಎಂಬವುದಕ್ಕಿಂತ ದೇಶಕ್ಕಾಗಿ ನಾನೇನು ಮಾಡಿದೆ ಎಂಬುದನ್ನು ಅರಿತು ಮುನ್ನಡೆಯಬೇಕು.
ವಂದೇ ಮಾತರಂ