1810278ranjini
ರಂಜಿನಿ ಬಿ.ಸಿ |
---|
ಜನನ ಮತು ಬಾಲ್ಯ
ಬದಲಾಯಿಸಿನನ್ನ ಹೆಸರು ರಂಜಿನಿ ಬಿ.ಸಿ ನಾನು ಅಗಸ್ಟ್ ೨೦ ೨೦೦೦ರಲ್ಲಿ ಬೆಂಗಳೂರು ಮಲ್ಲೇಶ್ವರ್ಂನಲ್ಲಿ ಜನಿಸಿದೆನು.ನನ್ನ ತಂದೆಯ ಹೆಸರು ಚಂದ್ರು,ನನ್ನ ತಾಯಿಯ ಹೆಸರು ಗಂಗಾ. ನನ್ನದು ಒಂದು ಪುಟ್ಟ ಕುಟುಂಬ. ಅದರಲ್ಲಿ ನನ್ನ ತಂದೆ,ತಾಯಿ,ತಮ್ಮ ಮತ್ತು ಅಕ್ಕ ಇದ್ದಾರೆ. ನನ್ನ ತಂದೆ ಮತ್ತು ತಾಯಿಯು ಬಹಳ ಕಷ್ಟಪಟ್ಟು ನಮ್ಮಗೆಲ್ಲ ವಿಧ್ಯಾಭ್ಯಾಸವನ್ನು ಕೊಟ್ಟು ನಮ್ಮನ್ನು ಒಳ್ಳೆಯ ನಗಾರಿಕರನ್ನಗಿ ಮಾಡಿದ್ದಾರೆ. ನನ್ನ ಬಾಲ್ಯದ ಕ್ಷಣಗಳು ಬಹಳ ಸುಂದರವಾಗಿತ್ತು.ನಾನು ಬಹಳ ತುಂಟತನವನ್ನು ಮಾಡುತ್ತಿದ್ದೆಯೆಂದು ನನ್ನ ಅಮ್ಮ ಹೇಳಿದ ನೆನಪು
==ಪ್ರಾಥಾಮಿಕ ಶಿಕ್ಷಣ== .
ನಾನು ನನ್ನ ಪ್ರಾಥಾಮಿಕ ಶಿಕ್ಷಣವನ್ನು ಹೆಚ್.ಎಸ್.ಆರ್ ನಲ್ಲಿರುವ ಚಿನ್ಮಯ ವಿದ್ಯಾ ಮಂದಿರ ಎಂಬ ಶಾಲೆಯಲ್ಲಿ ಮುಗಿಸಿದೆನು.ಅಲ್ಲಿ ಶೇ.೮೮.೮೦% ಗಳಿಸಿ ನನ್ನ ಕನಸಿನ ಕಾಲೇಜದ ಕ್ರೈಸ್ಟ್ ನಲ್ಲಿ ಪದವಿಪೂರ್ವ ಶಿಕ್ಷಣವನ್ನು ಮುಗಿಸಿದೆ.ಅಲ್ಲಿ ಒಳ್ಳೆಯ ಅಂಕವನ್ನು ಪಡೆದೆನು,ಅದರಿಂದ ನನ್ನ ಕುಟುಂಬದವರಿಗೆ ಬಹಳ ಸಂತೋಷವಾಗಿತ್ತು.ನಾನು ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಪ್ರಥಮ ಬಿ.ಕಾಂ ಅಧ್ಯಯನ ಮಾಡುತ್ತಿದ್ದೇನೆ. ಬಿ.ಕಾಂ ಮುಗಿಸಿದ ನಂತರ ಎಮ್.ಕಾಂ ಅಧ್ಯಯನವನ್ನು ಮಾಡಬೇಕೆಂದು ನನ್ನ ಕನಸು ಮತ್ತು ಗುರಿಯಾಗಿದೆ. ನಾನು ಶಾಲೆಯಲ್ಲಿ ತುಂಬ ಚೆನ್ನಾಗಿ ಪಾಠವನ್ನು ಕೇಳುತ್ತಿದ್ದೆ ಅದರಿಂದ ನನ್ನನ್ನು ಎಲ್ಲಾ ಶಿಕ್ಷಕರು ಪ್ರಶಂಸುತ್ತಿದ್ದರು. ನನ್ನ ಶಾಲೆಯಲ್ಲಿ ನನಗೆ ತುಂಬಾ ಇಷ್ಟವಾದ ಶಿಕ್ಷಕರು ಎಂದರೆ 'ಸುರೇಶ್ ಸರ್' ಇವರು ನನಗೆ ಕನ್ನಡದ ಶಿಕ್ಷಕರಾಗಿದ್ದರು.ಇವರು ನಮಗೆ ತುಂಬಾ ಮಾರ್ಗದರ್ಶನ ನೀಡಿ ನಮ್ಮನ್ನು ಒಳ್ಳೆಯ ವ್ಯಕ್ತಿಯನ್ನಾಗಿ ರೂಪಿಸಲು ಬಹುವಾಗಿ ಶ್ರಮಿಸಿದ್ದಾರೆ.ಮತ್ತು 'ಸತ್ಯವ್ವ' ಇವರು ನನಗೆ ಹಿಂದಿ ವಿಷಯವನ್ನು ಹೇಳಿ ಕೊಡುತ್ತಿದ್ದರು.ಇವರು ಸಹ ನನ್ನ ಮೆಚ್ಚಿನ ಶಿಕ್ಷಕಿ ಹಾಗೆ 'ಶ್ರೀದೇವಿ ಟೀಚರ್, ಮಂಜುಳ ಟೀಚರ್, ಮಲ್ಲಣ್ಣ ಸರ್, ಇವರೆಲ್ಲರನ್ನು ಮರೆಯಲು ಸಾಧ್ಯವಿಲ್ಲ. ನಾನು ನನ್ನ ಶಾಲೆಯಲ್ಲಿ ಕನ್ನಡದ ಕೆಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ರಾಜ್ಯ ಮಟ್ಟದಲ್ಲಿ ಪ್ರಶಸ್ತಿಯನ್ನು ಪಡೆದಿದ್ದೆನೆ. ನನ್ನ ಶಾಲಾ ದಿನವು ಬಹಳ ಸುದಂರವಾಗಿತ್ತು ಮತ್ತು ನನ್ನ ಶಾಲೆಯ ಬಗ್ಗೆ ನೆನೆದರೆ ನನ್ನ ಮುಖದಲ್ಲಿ ಮುಗುಳುನಗೆ ಮೂಡತದೆ.
ಮುಂದಿನ ಶಿಕ್ಷಣ
ಬದಲಾಯಿಸಿಅನಂತರ ನನ್ನ ಪಿ.ಯು.ಸಿ ಯನ್ನು ನನ್ನ ನೆಚ್ಚಿನ ಕಾಲೇಜಾದ ಕ್ರೈಸ್ಟ್ ನಲ್ಲಿ ಬಹಳ ಸುಂದರವಾದ ನೆನಪುಗಳನ್ನು ಹೊಂದಿದ್ದೆನೆ. ನನಗೆ ಕ್ರೈಸ್ಟ್ ಕಾಲೇಜಿನಲ್ಲಿ ವ್ಯಾಸಂಗ ಮಾಡಬೇಕೆಂಬ ದೊಡ್ಡ ಕನಸಿತ್ತು, ಆ ಕನಸು ನನಸಾದದ್ದು ೨೦೧೬ರ ಜೂನ್ ನಲ್ಲಿ.ಆ ದಿನ ನನಗೆ ಎಷ್ಟು ಸಂತೋಷವಾಗಿತ್ತು ಎಂದರೆ ಅದನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಆ ದಿನ ನನ್ನ ದೊಡ್ಡ ಕನಸು ನನಸಾದ ದಿನ,ಅಂದು ಮನೆಯಲ್ಲಿ ಎಲ್ಲರು ತುಂಬಾ ಸಂತೋಷದಿಂದ ಇದ್ದರು. ನನ್ನ ಕಾಲೇಜಿನ ಬಗ್ಗೆ ಬಹಳಷ್ಟು ಕೂತುಹಲವಿತ್ತು, ಆ ಮೊದಲನೇ ದಿನವಂತು,ಮರೆಯಲು ಸಾಧ್ಯವಿಲ್ಲ.ಆ ದಿನವು ನನ್ನ ಮನಸ್ಸಿನಲ್ಲಿ ಆದ ತಳಮಳ, ಸಂತೋಷ ಆ ಭಾವನೆಯನ್ನು ವ್ಯಕ್ತಪಡಿಸಲು ಪದಗಳು ಸಾಲುವುದಿಲ್ಲ.ನನ್ನ ಕಾಲೇಜಿನಲ್ಲಿ ನಾನು ಹಲವಾರು ಕಾರ್ಯಕ್ರಮದಲ್ಲಿ ಭಾಗವಯಿಸಿದ್ದೇನೆ.ನಾನು ಕಳೆದ ಮುಧುರ ಕ್ಷಣಗಳಲ್ಲಿ, ಕಾಲೇಜಿನ ದಿನಗಳು ಕೊಡ ಒಂದು. ನನಗೆ ಸಿಕಂತ ಬೆಲೆ ಬಾಳುವ ಮುತ್ತುರತ್ನಗಳು ಯಾರೆಂದರೆ ನನ್ನ ಸ್ನೇಹಿತರಾದ ಬ್ಯುಲ,ಗೌರಿ,ಸಂಜನ,ಗೋಪಿಕ, ವಿನುತಾ,ಇನ್ನು ಹಲವರು,ಇವರು ನನ್ನ ಕಾಲೇಜಿನ ದಿನವನ್ನು ಮತ್ತಷ್ಟು ಸುಂದರಗೋಳಿಸಿದರು, ಈ ನನ್ನ ಸ್ನೇಹಿತರು ನನ್ನ ಮನದಲ್ಲಿ ಸದಾ ಕಾಲ ಇರುತ್ತಾರೆ, ಹಾಗೆ ಮುಂದುವರೆದರೆ ನನ್ನ ದ್ವಿತಿಯ ಪಿ.ಯು.ಸಿ ಪರೀಕ್ಷೆಗಳು,ಬಹಳ ಸುಲಭವಾಗಿದ್ದವು ಮತ್ತು ನನಗೆ ಪರೀಕ್ಷೆಗಳು,ಬಹಳ ಸುಲಭವಾಗಿದ್ದವು ಮತ್ತು ನನಗೆ ಪರೀಕ್ಷೆಯಲ್ಲಿ ಉತ್ತಮ ಅಂಕ ದೊರೆಯಿತು.
ಆಸಕ್ತಿಯ ವಿಚಾರಗಳು
ಬದಲಾಯಿಸಿನನ್ನ ಆಸಕ್ತಿಗಳೆಂದರೆ, ಸಣ್ಣ ಸಣ್ಣ ಒಳಾಂಗಣ ಆಟಗಳನ್ನು ಆಡುತ್ತಾ ನನ್ನ ಬಿಡುವಿನ ಸಮಯವನ್ನು ಕಳೆಯುವುದು,ಚಲನಚಿತ್ರಗಳನ್ನು ನೋಡುವುದು,ಹಾಡುಗಳನ್ನು ಅಲಿಸುತ್ತ ಸುಮ್ಮನೆ ಹಾಗೇ ಮಲಗುವುದು. ನಾನ್ನು ನನ್ನ ಪದವಿಪುರ್ವ ಶಿಕ್ಷಣವನ್ನು ಮಾಡುವಾಗ ನನ್ನನ್ನು ಬಹಳ ಸ್ಪರ್ಧೆಯಲ್ಲಿ ಅಳವಡಿಸಿಕೊಂಡ್ಡಿದ್ದೆನು.ಕೆಲವು ಸ್ಪರ್ಧೆಯಲ್ಲಿ ನನಗೆ ಪ್ರಶಸ್ತಿಗಳು ದೋರಕಿದೆ. ನನಗೆ ಕನ್ನಡ ಮತ್ತು ಹಣಕಾಸು ಲೆಕ್ಕಪತ್ರವು ಬಹಳ ಆಸಕ್ತಿಯ ವಿಷಯಗಳು. ಕನ್ನಡದಲ್ಲಿ ನಾನು ಸ್ವಯಂ ಸೇವಕಿಯಾಗಿ ಬಹಳ ಕರ್ಯಾಕ್ರಮಗಲ್ಲಿ ನನ್ನನ್ನು ಆಳವಡಿಸಿ ಕೊಂಡಿದ್ದೆನು, ಮತ್ತು ಅದರಲ್ಲಿ ನನಗೆ ಕೆಲವು ಪ್ರಶಸ್ತಿಯು ಲಭಿಸಿದೆ. ನಾನು ಚಿಕ್ಕವಯಸ್ಸಿನಿಂದಲು ಚರ್ಚೆ ಮಾಡುವುದು ಮತ್ತು ಹಲವಾರು ಕಾರ್ಯಕ್ರಮದಲ್ಲಿ ಭಾಗವಹಿಸುವುದೆಂದರೆ ನನಗೆ ಬಹಳ ಕೂತುಹಲ ಮತ್ತು ಇವುಗಳು ನನ್ನ ಆಸಕ್ತಿ ವಿಷಯಗಳು.
ಕ್ರೈಸ್ಟ್ ಯುನಿವರ್ಸಿಟಿ
ಬದಲಾಯಿಸಿಇದರ ಸಲುವಾಗಿ ನನ್ನ ಮುಂದಿನ ಶಿಕ್ಷಣವನ್ನು ಮುಂದುವರೆಸಲು ಅರ್ಜಿ ಸಲ್ಲಿಸಿದ್ದೆ,ಆ ಅರ್ಜಿಯು ಒಪ್ಪಿಗೆಯಾದ ದಿನವೆ ನಾನು ಕ್ರೈಸ್ಟ್ ನಲ್ಲಿ ಸೇರಿದೆ.ಆ ಮೊದಲ ದಿನವು ನನಗೆ ತುಂಬ ಪಾಠಗಳನೆಂದರೆ 'ನಾವು ನಮ್ಮ ಜೀವನದಲ್ಲಿ ಏನಾದರು ಪಡ್ಯಬೇಕಾದರೆ ಅದಕ್ಕೋಂದು ನಿರ್ಧಿಷ್ಠವಾದ ಸಮಯ ಬರಬೇಕು, ಆ ಸಮಯ ಬರುವ ವರೆಗು ನಾವು ತಾಳ್ಮೆಯಿಂದ ವರ್ತಿಸಬೇಕು' ತಾಳ್ಮೆ ಎನ್ನುವುದು ಪ್ರತಿಯೊಬ್ಬ ಮನುಷ್ಯನಿಗು ಅತ್ಯವಶ್ಯಕ. ಇದು ನಾನು ತಿಳಿದ ಪಾಠ. ಅನಂತರ ನನಗೆ ಕಾಲೇಜಿನ ಪ್ರತಿಯೊಂದು ನಿಯಮವು ಬಹಳ ಚೆನ್ನಾಗಿ ತಿಳಿದಿತ್ತು ಏಕೆಂದರೆ ನಾನು ಪಿ.ಯು.ಸಿ ಆ ಕಾಲೇಜಿನಲ್ಲೆ ಮುಗಿಸಿದ್ದೆ,ಆಗಾಗಿ ನನಗೆ ಆ ಕಾಲೇಜಿನ ವಾತವರಣಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯವು ಅಗತ್ಯವರಲಿಲ್ಲ.ಆದುದರಿಂದ ನಾನು ಕಾಲೇಜಿಗೆ ಬಹಳ ಶ್ರದ್ದೆ, ವಿನಯತೆ, ಮತ್ತು ನಿಷ್ಠೆಯಿಂದ ವಿದ್ಯೆಯನ್ನು ಕಲಿಯುತ್ತಿದ್ದೆನೆ. ನಾನು ಪ್ರಸ್ತುತ ೨ ಬಿ.ಕಾಂ ಬಿ ನಲ್ಲಿ ವ್ಯಸಂಗ ಮಾಡುತ್ತಿದ್ದೆನೆ, ನನಗೆ ಬಿ.ಕಾಂ ಡಿಗ್ರಿ ತೆಗೆದುಕೊಂಡಿರುವುದಕ್ಕೆ ಬಹಳ ಸಂತೋಷವಿದೆ ಮತ್ತು ಮನಸ್ಸಿನಲ್ಲಿ ಸಮಾಧಾನವಿದೆ. ಆಗಾಗಿ ನನಗೆ ಒಳ್ಳೆ ಸ್ನೇಹಿತರು ದೊರೆತ್ತಿದ್ದಾರೆ,ಅದರಲ್ಲೂ ನನ್ನನ್ನು ಅರ್ಥ ಮಾಡಿಕೊಳ್ಳುವ ಮತ್ತು ನನ್ನಂತೆ ಇರುವ ಅಪೂರ್ವ ದೊರೆತ್ತಿದ್ದಾಳೆ.ಆಗಾಗಿ ಬಹಳ ಸಂತೋಷದಿಂದ ಇದ್ದೆನೆ. ಗುರಿಯ ವಿಷಯಕ್ಕೆ ಬಂದರೆ ನಾನು ಬಿ.ಕಾಂ ಮುಗಿಸಿ ಎರಡು ವರ್ಷಗಳ ಕಾಲ ಒಂದು ಒಳ್ಳೆಯ ಕಂಪನಿಯಲ್ಲಿ ಕೆಲಸ ಮಾಡಿ ಅದರ ಅನುಭವವನ್ನು ಪಡೆದು ಮತ್ತೆ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಎಮ್.ಕಾಂ ಮಾಡಬೇಕೆಂಬ ಮಾಹಾದಾಸೆ ಇದೆ. ಎಮ್.ಕಾಂ ಮುಗಿಸಿದ ನಂತರ ನಾನು ಒಂದು ಒಳ್ಳೆಯ ಶಿಕ್ಷಕಿಯಾಗಬೇಕೆಂಬುದು ನನ್ನ ಗುರಿ ಮತ್ತು ಕನಸಗಿದೆ.