1810271deeksha
Joined ೧೯ ಜೂನ್ ೨೦೧೮
ದೀಕ್ಷ | |
---|---|
ಜನನ
ಬದಲಾಯಿಸಿನನ್ನ ಹೆಸರು ದೀಕ್ಷ.ನಾನು ೮/೨/೨೦೦೦ರಂದು ಬೆಂಗಳೂರಿನ ಜುಪಿಟರ್ ಆಸ್ಪತ್ರೆಯಲ್ಲಿ ಜನಿಸಿದೆ.ನನ್ನ ತಂದೆಯವರದ್ದು ಸ್ವವಂತದ ವ್ಯವಹಾರ ಇದೆ.ತಾಯಿ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ.
ಬಾಲ್ಯ
ಬದಲಾಯಿಸಿನಾನು ಬಾಲ್ಯದಿಂದಲೂ ಕಾಡುಗುಡಿ ಎಂಬ ಊರಲ್ಲಿ ನನ್ನ ತಾಯಿಯ ಮನೆಯಲ್ಲಿ ತುಂಬು ಕುಟುಂಬದಲ್ಲೆ ಬೆಳೆದೆ. ನಾನು ನನ್ನ ತಂದೆ ತಾಯಿ ಹಾಗೂ ನನ್ನ ತಾಯಿಯ ಮನೆಯಲ್ಲೇ ಒಬ್ಬಳೇ ಮಗುವಾಗಿದ್ದರಿಂದ ನನಗೆ ಬಹಳ ಪ್ರೀತಿ ಸಿಕ್ಕಿತು ಹಾಗೂ ಎಲ್ಲರೂ ಬಹಳ ಮುದ್ದು ಮಾಡುತ್ತಿದ್ದರು.ನಾನು ಸಣ್ಣವಳ್ಳಿದ್ದಾಗ ಬಹಳಷ್ಟು ಬಾರಿ ನನ್ನ ಸಮಯವನ್ನು ನನ್ನ ತಾತನೊಂದಿಗೆ ಬಾಬಾ ಆಶ್ರಮಕ್ಕೆ ಹೊಗುತ್ತಾ ಕಳೆಯುತ್ತಿದ್ದೆ.ಆ ಸಮಯ ಬಹಳ ಚೆನ್ನಾಗಿರುತ್ತತ್ತು ಮತ್ತು ರಜೆಯಲ್ಲಿ ನಾನು ಎಲ್ಲಿಯೂ ಹೊಗುತ್ತಿರಲ್ಲಿಲ್ಲ,ಎಲ್ಲರೂ ಒಟ್ಟಗೆಯಿದ್ದ ಕಾರಣ ನಾನು ಮನೆಯಲ್ಲಿಯೇ ಇರುತ್ತಿದ್ದೆ.
ಶಿಕ್ಷಣ
ಬದಲಾಯಿಸಿನಾನು ಮೊದಲು ಓದಲು ಪ್ರಾರಂಭಿಸಿದ್ದು ೨೦೦೩ನೇ ಇಸವಿ , ಪಿ.ವಿ.ಎಸ್ ಎಂಬ ಶಾಲೆಯಲ್ಲಿ.ನಂತರ ನನ್ನ ಐದನೇ ವರ್ಷದಿಂದ ಎಂದರೆ,೨೦೦೫ ಇಸವಿಯಿಂದ ಹತ್ತನೇ ತರಗತಿ, ಎಂದರೆ,೨೦೧೬ ಇಸವಿವರೆಗೆ ಶಾರದ ವಿದ್ಯಾ ಮಂದಿರ ಎಂಬ ಶಾಲೆಯಲ್ಲಿ ಓದಿದೆ.ನಾನು ಶಾಲೆಯಲ್ಲಿ ನನ್ನ ಕಲೆಗಳಿಂದ ನನ್ನನ್ನು ಗುರುತಿಸಿಕೊಂಡ್ಡಿದ್ದೆ.ನಾನು ಶಾಲೆಯಲ್ಲಿ ಸಂಗೀತ, ನೃತ್ಯ ಎಲ್ಲದರಲ್ಲೂ ಇದ್ದೆ.ಓದನಲ್ಲೂ ಮುಂದಿದ್ದೆ.ನಾನು ಯೋಗಾಭ್ಯಾಸವನ್ನೂ ಮಾಡುತ್ತಿದ್ದೆ,ಅದಕ್ಕಾಗಿ ನನಗೆ ಹಲವು ಪ್ರಷಸ್ತಿಗಳೂ ದೊರೆತಿವೆ.ನನ್ನ ಶಾಲೆಯಲ್ಲಿ ನನಗೆ ಒಳ್ಳೆಯ ಧ್ವನಿ ಇದೆ ಎಂದು ಗುರುತಿಸಿದರು,ಹಲವಾರು ಬಾರಿ ನಿರೂಪಣೆಯನ್ನೂ ಮಾಡಿದ್ದೇನೆ.ಇದಲ್ಲದೆ ಹಲವಾರು ಬಾರಿ ಬೀದಿ ನಾಟಕವನ್ನೂ ಮಾಡಿದ್ದೇನೆ.
ನಾನು ಪದವಿ ಪೂರ್ವ ಶಿಕ್ಷಣವನ್ನು ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ೩೦೧೮ರಲ್ಲಿ ಮುಗಿಸಿದೆ.ಮನೆಯ ಮತ್ತು ಕಾಲೇಜಿನ ನಡುವಿನ ಅಂತರ ಬಹಳ ಇದ್ದ ಕಾರಣ,ನನ್ನ ಯಾವ ಕಲೆಗಳನ್ನೂ ತೋರಿಸಲು ಸಾಧ್ಯವಾಗಲಿಲ್ಲ.ಒಂದೆರಡು ಬಾರಿ ಕನ್ನಡ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆಯಷ್ಟೆ.ಪ್ರಸ್ತುತವಾಗಿ ಪದವಿ ಶಿಕ್ಷಣವನ್ನು ಕ್ರೈಸ್ಟ್ ಯುನಿವರ್ಸಿಟಿ ಕಾಲೇಜಿನಲ್ಲಿ ಮಾಡುತ್ತಿದ್ದೇನೆ.ಮೊದಲ ವರ್ಷದ ಆರು ತಿಂಗಳು ಚೆನ್ನಾಗಿತ್ತು, ಆದರೆ, ಕೆಲವು ಹೆಚ್ಚುವರಿ ಶಿಕ್ಷಣದಿಂದಾಗಿ ಮನೆಗೆ ತಡವಾಗಿ ಹೋಗುತ್ತಿದ್ದೆ.ಆದರೂ, ಓದು, ಸಮಯ,ಎಲ್ಲವನ್ನೂ ಸಮತೋಲನ ಮಾಡಲು ಕಲಿತೆ.
ಆಸಕ್ತಿ ಕ್ಷೇತ್ರ
ಬದಲಾಯಿಸಿನನಗೆ ಶಾಸ್ತ್ರೀಯ ಸಂಗೀತ ಹಾಗೂ ನೃತ್ಯ ಕಲಿಯಲು ಬಹಳ ಇಷ್ಟ. ಕಾರಣಾಂತರಗಳಿಂದ ಕಲಿಯಲು ಆಗಿರಲ್ಲಿಲ್ಲ. ಅದನ್ನು ನಾನು ನನ್ನ ಮುಂದಿನ ಜೀವನದಲ್ಲಿ ಕಲಿಯಲು ಇಚ್ಛಿಸುತ್ತೇನೆ , ಹಾಗೂ ಅದನ್ನು ನಾನು ಸಾಧಿಸುತ್ತೇನೆಂಬ ಆತ್ಮವಿಶ್ವಾಸ ನನಗೆ ಬಲವಾಗಿದೆ. ನಾನು ನನ್ನ ಬಾಲ್ಯವನ್ನು ತಿರುಗಿ ನೋಡಿದರೆ, ಮತ್ತೆ ಶಾಲೆಗೆ ಹೋಗಬೇಕು, ಮತ್ತೆ ತಾತನೊಂದಿಗೆ ಆಶ್ರಮಕ್ಕೆ ಹೋಗಬೇಕು ಎಂದು ಅನ್ನಿಸುತ್ತದೆ. ಆದರೆ, ಸಮಯ ಕಳೆದಿದೆ, ನೆನಪುಗಳು ಮಾತ್ರ ಉಳಿದಿವೆ.ನೆನೆದರೆ ಖುಷಿಯಾಗುತ್ತದೆ,ಹಾಗು ಸುದೀಪರವರ ಸವಿ ಸವಿ ನೆನಪು ಸಾವಿರ ನೆನಪು ಹಾಡು ನೆನೆದು ಮುಂದೆ ಸಾಗುತ್ತೇನೆ.