1810165mani
Joined ೧೯ ಜೂನ್ ೨೦೧೮
ಮನಿ ಮೇಘಲಾ
| |
---|---|
Born | 06/02/2000 ಪದ್ಮನಾಭನಗರ, ಬೆಂಗಳೂರು, ಭಾರತ. |
Education | ಬಿಕಾಂಮ್ ಕ್ರೈಸ್ಟ್ ಯುನಿವರ್ಸಿಟಿ. |
Parent(s) | ಮಲ್ಲನ್,ಮುತ್ತು ಲಕ್ಷ್ಮಿ. |
ಎಲ್ಲರಿಗೂ ನನ್ನ ಮುಂಜಾನೆಯ ನಮಸ್ಕಾರ ನನ್ನ ಹೆಸರು ಮನಿ ಮೇಘಲಾ ಎಂ ನನ್ನ ತಂದೆಯ ಹೆಸರು ಮಲ್ಲನ್ ಹಾಗೂ ತಾಯಿಯ ಹೆಸರು ಮುತ್ತು ಲಕ್ಷ್ಮಿ.ನನಗೆ ಹಾಡು ಕೇಳುವುದೆಂದರೆ ತುಂಬಾ ಇಷ್ಟ . ನನಗೆ ಪುಸ್ತಕ ಓದಲು ತುಂಬಾ ಇಷ್ಟ .
ಈಗ ನಾನು BCOM ಓದುತ್ತಿದ್ದೀನಿ ನನ್ನ ಬಾಲ್ಯದ ವಿದ್ಯಾಭ್ಯಾಸ ಬೆಂಗಳೂರಿನಲ್ಲಿ ಮುಗಿಸಿದೆ.ಬೆಂಗಳೂರಿನ ರಾಜಧಾನಿ ಮೊದಲ ಹೆಸರು ಬೆಂದಕಾಳೂರು.ಬೆಂಗಳೂರು ಕರ್ನಾಟಕ ರಾಜ್ಯದ ದೊಡ್ಡ ನಗರ ಮತ್ತು ರಾಜಧಾನಿ . ಬೆಂಗಳೂರು ವಿಶ್ವಾದ್ಯಂತ ಭಾರತ 'ಸಿಲಿಕಾನ್ ವ್ಯಾಲಿ' 'ಕಬ್ಬನ್ ಪಾರ್ಕ್' 'ಲಾಲ್ಬಾಗ್' ಗಳಂತಹ ದೊಡ್ಡ ಉದ್ಯಾನವನಗಳು. ನನ್ನ ಬಾಲ್ಯದ ವಿದ್ಯಾಭ್ಯಾಸ ಮತ್ತು ಪದವಿಪೂರ್ವ ವಿದ್ಯಾಭ್ಯಾಸವನ್ನು "ಮೇರಿ ಇಮ್ಯಾಕ್ಯುಲೇಟ್" ಪ್ರೌಢಶಾಲೆಯಲ್ಲಿ ಮುಗಿಸಿದೆ .ನನ್ನ ಶಾಲೆಯ ಪ್ರಾಂಶುಪಾಲರ ಹೆಸರು ಮರಿಯಾ ಲೈಲಾ .ನನಗೆ ಇಷ್ಟವಾದ ಶಿಕ್ಷಕರು ಸುಮಾ ಮತ್ತು ಬರ್ತಾ .ನಮಗೆ ಬಹಳ ಘಟನೆಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟರು . ನಮ್ಮ ಶಾಲೆಯಲ್ಲಿ ವಿವಿಧ ಕಾರ್ಯಕ್ರಮದಲ್ಲಿ ಅವಕಾಶಗಳನ್ನು ನೀಡಿದ್ದರು . ಅದೇ ರೀತಿಯಲ್ಲಿ ಓದು ಬರಹದಲ್ಲಿಯೂ ಕಟ್ಟುನಿಟ್ಟಾಗಿದ್ದರೂ .ನಮ್ಮ ಶಾಲೆ ಕ್ರಿಸ್ಮಸ್ ಹಬ್ಬವನ್ನು ಮಿಂಚಿನ ಮೇಣದ ಬತ್ತಿ ಹಚ್ಚಿ ಆಚರಿಸುತ್ತೇವೆ. ೩ ತಿಂಗಳಿಗಿಂತ ಮುಂಚೆ ಉತ್ಪನ್ನಗಳನ್ನು ಒಂದೊಂದು ತರಗತಿಯವರಿಗೆ ವಿವಿಧವಾದ ವಸ್ತುಗಳನ್ನು ತರಲು ಹೇಳುತ್ತಾರೆ .ಅವರು ನಮ್ಮ ಬಳಿ ಹಣಗಳನ್ನು ತೆಗೆದುಕೊಳ್ಳುವುದಿಲ್ಲ. ತಂದೆ ತಾಯಿ ಇಲ್ಲದ ಮಕ್ಕಳನ್ನು ಕರೆದು ಊಟವನ್ನು ಬಡಿಸಿ ನಂತರ ವಸ್ತುಗಳನ್ನು ಕೊಟ್ಟು ಅವರನ್ನು ನಮ್ಮಲ್ಲಿ ಆದ ಸಂತೋಷವನ್ನು ಅವರ ಮುಖದಲ್ಲಿ ನೋಡುತ್ತೇವೆ . ನನ್ನ ಹತ್ತನೇ ತರಗತಿಯನ್ನು ಮುಗಿಸುವ ಸಮಯದಲ್ಲಿ ತುಂಬಾ ಸಂತೋಷವಾಗಿದೆ .ಆದರೆ ನನಗೆ ದುಃಖ ವಾದ ಕಾರಣ ಏಕೆಂದರೆ ಸ್ನೇಹಿತರಿಂದ ನಾನು ದೂರವಾಗಿದ್ದೆ .ಹತ್ತನೇ ತರಗತಿಯಲ್ಲಿ ನನ್ನ ತಂದೆ ತಾಯಿ ಓದಿನಲ್ಲಿ ಸಾಂದ್ರತೆ ಯಾಗಿರು ಹೇಳಿದ್ದರು .ಆದರೆ ನಾನು ಗಂಭೀರತೆ ತೋರಿಸಲಿಲ್ಲ. ಪರೀಕ್ಷಾ ಕೊನೆಯ ಸಮಯದಲ್ಲಿ ಓದೋಣ ಎಂದು ನೆನೆದುಕೊಂಡೇ ಆದರೆ ನಾನು ಅಸಡ್ಡೆಯಾಗಿ ಬಿಟ್ಟೆ .ಆದರೂ ಇನ್ನೂ ಸ್ವಲ್ಪ ಶ್ರಮವನ್ನು ಮೊದಲಿಂದಲೇ ಹಾಕಿದ್ದರೆ ಉತ್ತಮ ಮಟ್ಟವನ್ನು ತೆಗೆದಿರಬಹುದು. ನನ್ನ ಹತ್ತನೇ ತರಗತಿಯ ಬಹಳಷ್ಟು ನೆನಪುಗಳನ್ನು ಬರುತ್ತವೆ .
ನನ್ನ ಹನ್ನೊಂದನೆಯ ತರಗತಿಯನ್ನು ಆರ್ ವಿ ಕಾಲೇಜಿನಲ್ಲಿ ಮುಗಿಸಿದೆ .ನಂತರ ಹನ್ನೆರಡನೆಯ ತರಗತಿಯನ್ನು ಅದೇ ಕಾಲೇಜಿನಲ್ಲಿ ಮುಂದುವರಿಸಿದೆ ಎರಡು ವರ್ಷಗಳನ್ನು ಮುಗಿಸಿದ್ದರೂ ನನಗೆ ತುಂಬಾ ಸಂತೋಷವಾಗಿತ್ತು. ಹನ್ನೆರಡನೇ ತರಗತಿ ಭವಿಷ್ಯ ಎಂದು ತಂದೆ ತಾಯಿಯೂ ಹೇಳಿದ್ದರೂ.ಅದರಿಂದ ನಾನು ತುಂಬಾ ಪ್ರಯತ್ನ ಪಟ್ಟು ಓದಿದ್ದೆ ಅದಕ್ಕೆ ತಕ್ಕ ಫಲವೂ ಸಿಕ್ಕಿದೆ. ಕಷ್ಟಪಟ್ಟು ಓದಿ ಸಿಕ್ಕುವ ಫಲವನ್ನು ನೋಡುವಾಗ ತುಂಬಾ ಆನಂದವಾಗಿತ್ತು .ಇದನ್ನು ನನ್ನ ಒಡಹುಟ್ಟಿದವರಿಗೆ ಓದುವ ಆಸಕ್ತಿಯನ್ನು ತುಂಬಿದೆ .ನಾನು ಪದವಿ ಕಾಲೇಜನ್ನು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಮುಂದುವರಿಸುತ್ತಿದ್ದೇನೆ .ನಾನು ಮೊದಲನೆಯ ದಿನ ಕಾಲೇಜಿಗೆ ಹೋಗುವಾಗ ಭಯವಾಗಿತ್ತು .ಯಾಕೆಂದರೆ ನನ್ನ ಓದಿಗೂ ಮತ್ತು ಬೇರೆಯವರ ಓದಿಗೂ ತುಂಬಾ ವ್ಯತ್ಯಾಸವಾಗಿತ್ತು. ಆದರೆ ನಾನು ಕಾಲೇಜಿಗೆ ಹೋದ ನಂತರ ತಿಳಿಯಿತು ಎಲ್ಲ ಮಕ್ಕಳನ್ನು ಒಂದೇ ರೀತಿಯಾಗಿ ನೋಡುತ್ತಾರೆ ಅವರು ವಿಭಿನ್ನ ವ್ಯಕ್ತಿಯ ಬಳಕೆಯಲ್ಲಿ ನನ್ನನ್ನು ನೋಡುತ್ತಿರಲಿಲ್ಲ . ಹಿಂದಿನ ಕಾಲೇಜಿನಲ್ಲಿ ಕೊನೆಯ ಸಮಯದಲ್ಲಿ ಓದಿದರೂ ನಾನು ಉತ್ತೀರ್ಣ ವಾಗುತ್ತಿದೆ. ಆದರೆ ನಮ್ಮ ಕಾಲೇಜಿನಲ್ಲಿ ಪ್ರಾರಂಭ ಹಂತದಿಂದ ಓದಿದರೆ ಮಾತ್ರ ಉತ್ತೀರ್ಣ ವಾಗುತ್ತವೆ .ನನಗೆ ಓದಲು ಕಷ್ಟವಾಗಿತ್ತು .ನನಗೆ ಈ ಕಾಲೇಜಿನಲ್ಲಿ ತುಂಬಾ ಇಷ್ಟವಾದ ವಿಷಯ ಏನೆಂದರೆ ೆ ನಾನು ವಾಣಿಜ್ಯ ವಿದ್ಯಾರ್ಥಿಯಾದರೂ ಬೇರೆ ಶಿಕ್ಷಣ ವಿಷಯದಲ್ಲಿ ಒಳಗೊಳ್ಳುವಿಕೆಯನ್ನು ಹೇಳಿಕೊಡುತ್ತಾರೆ .ನನ್ನ ಓದು ಇದೇ ವಿಶ್ವವಿದ್ಯಾಲಯದಲ್ಲಿ ಮುಂದುವರಿಸಲು ಇಷ್ಟಪಡುತ್ತಿದ್ದೇನೆ.