1810160inbag
Joined ೧೯ ಜೂನ್ ೨೦೧೮
ಬಾಲ್ಯ: ನನ್ನ ಹೆಸರು ಇನ್ಬ . ನಾನು ಫೆಬ್ರೆರೀ ೧ ೨೦೦೦ ರಂದು ಇಂದಿರಾನಗರಿನ ಚಿನ್ಮಯ ಆಸ್ಪತ್ತ್ರೆಯಲ್ಲಿ ಜನಿಸಿದೆ . ನನ್ನ ತಂದೆಯ ಹೆಸರು ಗುಣಶೇಖರ್ ಹಾಗು ತಾಯಿಯ ಹೆಸರು ಕವಿತಾ . ನನ್ನ ಪೋಷಕರಿಗೆ ನಾನೇ ಮೊದಲ ಮಗು . ನನಗೆ ಒಂದು ತಮ್ಮ ಹಾಗೂ ಒಂದು ತಂಗಿ ಇದ್ಧಾರೆ . ನನ್ನ ತಮ್ಮ ಯುಗೇಂದ್ರ ೯ನೇ ತರಗತಿ ಓದುತ್ತಿದ್ದಾನೆ ಹಾಗು ನನ್ನ ತಂಗಿ ತೋವಿಕ ೨ನೇ ತರಗತಿ ಓದುತ್ತಿದ್ದಾಳೆ. ನಾವು ಬೆಂಗಳೂರಿನ ಈಜಿಪುರದಲ್ಲಿ ವಾಸ ಮಾಡುತ್ತಿದ್ಧೇವೆ.
ವಿದ್ಯಬ್ಯಾಸ (ಶಾಲೆ): ನಾನು ಓದಿದ್ದ ಮೊದಲನೆಯ ಶಾಲೆಯ ಹೆಸರು ಎಂ . ಆರ್ . ಕಿಂಡರ್ಗಾರ್ಡೆನ್ . ನಂತರ ನಾನು ಸೆಂಟ್ ಹೆನ್ರಿಟಾಸ್ ಶಾಲೆಯಲ್ಲಿ ಓದಿದೆ. ಆ ಶಾಲೆಗೆ ಹೋಗಲು ನನಗೆ ಸ್ವಲ್ಪವೂ ಇಷ್ಟವಿರಲಿಲ್ಲ . ಪ್ರತಿದಿನ ಭಯದಿಂದಲೇ ಮನೆಯಿಂದ ಹೋರಡುತ್ತಿದ್ದೆ . ನನ್ನ ಭಯವನ್ನು ನೋಡಿ ನನ್ನ ಪೋಷಕರು ನನ್ನನು ಬೇರೆ ಶಾಲೆಗೆ ಹಾಕಿದರು . ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಕೊರಮಂಗಲದಲ್ಲಿರುವ ಲಾರೆನ್ಸ್ ಪ್ರೌಢ ಶಾಲೆಯಲ್ಲಿ ಓದಿದೆ . ನನಗೆ ಈ ಶಾಲೆ ಬಹಳ ಇಷ್ಟವಾಯಿತು . ಪ್ರತಿದಿನ ಶಾಲೆಗೆ ಬಹಳ ಸಂತಸದಿಂದ ಹೋಗುತ್ತಿದ್ದೆ . ಶಾಲೆಯಲ್ಲಿ ನಡೆದ ಎಲ್ಲಾ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದೆ . ನನಗೆ ಭಾಷಣ ಸ್ಪರ್ಧೆ ಎಂದರೆ ಬಹಳ ಪ್ರೀತಿ . ನನ್ನ ಇಡೀ ಲಾರೆನ್ಸ್ ಶಾಲೆಯ ಜೀವನವನ್ನು ಸಂತೋಷದಿಂದ ಕಳೆದೆ . ಕ್ರೀಡಗಳಲ್ಲೂ ಭಾಗವಹಿಸುತ್ತಿದೆ . ಓಟದ ಸ್ಪರ್ಧೆಯ ಮೇಲೂ ಬಹಳ ಕುತೂಹಲವಿತ್ತು . ನಾನು 8ನೇ ತರಗತಿಯಲ್ಲಿದ್ದಾಗ ಚುನಾವಣೆಯಲ್ಲಿ ನಿಂತು ಗೆದ್ದಿದೆ . ಅದೇ ರೀತಿ ೯ನೇ ತರಗತಿಯಲ್ಲಿರುವಾಗ ನನ್ನ ತಂಡವಾದ " ಪಿಂಕ್ ಪ್ಯಾಂಥರ್ " ಗೆ ಉಪ ನಾಯಕವಾಗಿ ಚುನಾವಣೆಗೆ ನಿಂತು ಅದರಲ್ಲೂ ಗೆದ್ದಿದೆ . ಅದು ಮಾತ್ರವಲ್ಲದೆ ೧೦ನೇ ತರಗತಿಯಲ್ಲಿದಾಗ ಶಾಲೆಯ ನಾಯಕಿ ಪದವಿಗೆ ನಿಂತಿದೆ . ಚುನಾವಣೆಯಲ್ಲಿ ಹೆಚ್ಚಿನ ಮತಗಳಿಂದ ಗೆದ್ದೇ . ನನಗೆ ಬಹಳ ಸಂತೋಷವಾಯಿತು . ನನಗೆ ನನ್ನ ೧೦ನೇ ತರಗತಿಯೂ ಮರೆಯಲು ಆಗದ ಬಹಳ ನೆನಪುಗಳು ನೀಡಿದೆ . ಒಳ್ಳೆಯ ಶಿಕ್ಷಕರು ಹಾಗು ಗೆಳೆಯರು ದೊರಕಿದರು . ಒಟ್ಟಿಗೆ ಓದುತ್ತೆವೆ , ಆಟವಾಡುತ್ತೆವೆ . ಎಲ್ಲೇ ಹೋದರು ಒಗ್ಗಟಾಗಿರುತತ್ತಿದ್ದೇವು . ಶಾಲೆಯಲ್ಲಿದಾಗ ಬಹಳ ಒಳಾಂಗಣ ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆದ್ದಿದ್ದೇನೆ . ೧೦ನೇ ತರಗತಿಯಲ್ಲಿ ನಾನು ಒಳ್ಳೆಯ ಅಂಕಗಳನ್ನು ಪಡೆಯುತ್ತೆನೆಂದು ನನ್ನ ಪೋಷಕರು , ಗೆಳೆಯರು ಹಾಗೂ ಶಿಕ್ಷಕರು ನಂಬಿದ್ದರು . ಅದೇ ರೀತಿ ನಾನು ಶೇಕಡ ೯೪ ನಲ್ಲಿ ೧೦ನೇ ತರಗತಿಯನ್ನು ಮುಗಿಸಿದೆ . ನನ್ನ ಆಸೆಯಂತೆ ನನ್ನ ಫೋಟೋವೂ ಬ್ಯಾನರ್ನಲ್ಲಿ ಬಂದಿತು .
ಕಾಲೇಜು: ನಂತರ ಬಾಲ್ದ್ವಿನ್ಸ್ ಗರ್ಲ್ಸ್ ಕಾಲೇಜು ನನ್ನ ಪಿಯುಸಿಯನ್ನು ಮುಗಿಸಿದೆ . ನನಗೆ ಆ ಕಾಲೇಜಿಗೆ ಸೇರಲು ಸ್ವಲ್ಪವೂ ಇಷ್ಟವಿರಲಿಲ್ಲ . ನನಗೆ ಕ್ರೈಸ್ಟ್ ಕಾಲೇಜ ಸೇರಬೇಕೆಂದು ತುಂಬಾ ಆಸೆಯಿತ್ತು . ಆದರೆ ಕೆಲವು ಪರಿಸ್ಥಿತಿಗಳಿಂದ ಬಾಲ್ದ್ವಿನ್ಸ್ ಕಾಲೇಜಿಗೆ ಸೇರಬೇಕಾಗಿತ್ತು . ಆ ಪರಿಸರಕ್ಕೆ ಹೊಂದುಕೊಳ್ಳಲು ನನಗೆ ತುಂಬಾ ದಿನವಾಯಿತು . ಸ್ವಲ್ಪ ದಿನ ಕಳೆದ ನಂತರ ಒಳ್ಳೆಯ ಗೆಳೆಯರು ದೊರಕಿದರು . ನಾನು ೧೦ನೇ ತರಗತಿಗಿಂತ ಹೆಚ್ಚು ಶೇಕಡದ್ಧಲ್ಲೇ ದ್ವಿತೀಯ ಪಿಯುಸಿ ಮುಗಿಸುವೆನೆಂದು ಮನೆಯಲ್ಲಿ ಸವಾಲು ಹಾಕಿದೆ . ಅದೇ ರೀತಿ ೧೦ನೇ ತರಗತಿಗಿಂತ ಒಂದು ಶೇಕಡ ಹೆಚ್ಚು ಪಡೆದೆ . ಒಂದೇ ಶೇಕಡ ಹೆಚ್ಚಾಗಿದ್ದರು ನನಗೆ ಅದು ಬಹಳ ಸಂತೋಷವಾಯಿತು . ಪೋಷಕರು ಬಹಳ ಕುಷಿಯಾದರು . ಇದೆಲ್ಲವಾದ ನಂತರ ನನ್ನ ಆಸೆಯಂತೆ ನನ್ನ ತಾಯಿ ನನ್ನನು ಕ್ರೈಸ್ಟ್ ಕಾಲೇಜಿಗೆ ಸೇರಿಸಿದರು . ನನಗೆ ಬಹಳ ಕುಷಿಯಾಯಿತು . ಆದರೆ ಕಾಲೇಜಿನ ಮೊದಲ ದಿನಗಳು ಬಹಳ ಒಂಟಿಯಾಗಿದ್ದೆ . ಸ್ವಲ್ಪ ದಿನ ಕಳೆದ ನಂತರ ಅಲ್ಲಿನ ಪರಿಸರಕ್ಕೆ ಹೊಂದಿಕೊಂಡೆ ಹಾಗೂ ಒಳ್ಳೆಯ ಗೆಳೆಯರು ಕೂಡ ದೊರಕಿದರು . ಆದರೂ ಕಾಲೇಜಿನ ಸಮಯಕ್ಕೆ ಹೊಂದಿಕೊಳ್ಳಲು ಕಷ್ಟವಾಯಿತು . ಮೊದಲನೆಯ ಸೆಮೆಸ್ಟರ್ ಸ್ವಲ್ಪ ಭಯದಿಂದಲೇ ಮುಗಿಯಿತು . ಆದರೆ ಇವಾಗ ಎರಡನೆಯ ಸೆಮೆಸ್ಟರ್ ತುಂಬಾ ಚೆನ್ನಾಗಿ ಹಾಗೂ ತುಂಬಾ ಕುಷಿಯಾಗಿ ನಡೆಯುತ್ತಿದೆ ನನಗೆ ಬ್ಯಾಂಕಿಂಗ್ ಪರೀಕ್ಷೆ ಬರೆದು ಅದರಲ್ಲಿ ಒಳ್ಳೆಯ ಅಂಕಗಳನ್ನು ಪಡೆದು ಬ್ಯಾಂಕಿನಲ್ಲಿ ಒಂದು ಒಳ್ಳೆಯ ಕೆಲಸ ಮಾಡಬೇಕೆಂದು ತುಂಬಾ ಆಸೆ . ನಾನು ಚೆನ್ನಾಗಿ ಓದಿ ನನ್ನ ಗುರಿಯನ್ನು ಸಾಧಿಸುವೆನೆಂಬ ನಂಬಿಕೆ ಇದೆ.