1810153rohanr
ಜನನ
ಬದಲಾಯಿಸಿನನ್ನ ಹೆಸರು : "ರೋಹನ್ ರ್", ಹುಟ್ಟಿದ ದಿನ :೦೭/೦೭/೨೦೦೦, ನನ್ನ ತಂದೆಯ ಹೆಸರು : ರವಿ ಮ್ , ತಾಯಿಯ ಹೆಸರು : ಗೌರಮ್ಮ , ನನಗೆ ಒಬ್ಬಳು ಅಕ್ಕ ಇದ್ದಾರೆ , ಅವರ ಹೆಸರು : ರಾಗಿಣಿ ರ್ . ಅವರು ೩ರನೇ ವರ್ಷದ ಬಿ ಕಂ ಪದವಿ ಪಡೆಯುತ್ತಿದರೆ . ನಾನು ಹುಟ್ಟಿದ, ಬೆಳೆದ ಸ್ಥಳ: ಜೆಪಿ ನಗರ ೮ನೇ ಅಂತ , ಬೆಂಗಳೂರು ದಕ್ಷಿಣ, ಬೆಂಗಳೂರು, ಕರ್ನಾಟಕ.
ವಿದ್ಯಬ್ಯಾಸ್ಯ
ಬದಲಾಯಿಸಿನಾನು ೧ದನೆ ತರಗತಿ ಯಿಂದ ಪಿಯು ವರೆಗೂ ಬನ್ನೇರುಘಟ್ಟ ರಸ್ತೆಯ "ಹೋಲಿ ಸ್ಪಿರಿಟ್ ಶಾಲೆ " ಯಲ್ಲಿ ಓದಿದೆ. ೨ ನೇ ತರಗತಿ ವರೆಗೂ ನಾನು ತುಂಬ ಗಲಾಟೆ ಮಾಡಿಕೊಂಡು ಎಲ್ಲರಿಗು ತೊಂದರೆ ಕೊಡುತಿದ್ದೆ . ಆದರೆ ೩ರನೇ ತರಗತಿ ಯಿಂದ ತುಂಬ ಸೈಲೆಂಟ್ ಹುಡುಗ ಆಗಿದ್ದೆ . ಯಾರ ಜೊತೆ ಹೆಚ್ಚು ಮಾತಾಡದೆ ಬರಿ ನಾನು ನನ್ನ ಓದು ಆಯಿತು ಅಂದುಕೊಂಡು ಇದ್ದೆ . ಯಾವುದೇ ಬೇರೆ ಕಾರ್ಯಕ್ರಮದಲ್ಲಿ ತೊಡಗಿಸಿ ಕೊಳ್ಳುತಿರಲ್ಲಿಲ . ಯಾವುದೇ ಸ್ಪರ್ಧೆ ಯಲ್ಲೂ ಆಸಕ್ತಿ ಇರಲ್ಲಿಲ . ನನ್ನ ಎಲ್ಲರು ತುಂಬ ಒಳ್ಳೆ ಹುಡುಗ ಎಂದು ಹೇಳುತಿದ್ದರು . ೬ರನೇ ತರಗತಿಯಲ್ಲಿ ಬ್ಯಾಂಡ್ ಗೆ ಸೇರಿಕೊಂಡೆ , ನಮ್ಮ ಶಾಲೆಯಲ್ಲಿ "ಐ ಸಿ ಸ್ ಇ" ಸಿಲಬಸ್ ಹೋದಿದೆ , ಇದರಿಂದ ಓದಿನಲ್ಲಿ ತುಂಬ ಕಷ್ಟ ವಾಯಿತು .ನಾನು ಹೆಚ್ಚು ಆಡುತ್ತಿದ್ದ ಸ್ಪೋರ್ಟ್ಸ್ ವೆಂದರೆ ವಾಲಿಬಾಲ್, ನಾನು ಮತ್ತು ನಮ್ಮ ಗೆಳೆಯರು ಖುಷಿಯಿಂದ ಆಡಿಕೊಂಡು ಮರದ ಕೆಳಗಡೆ ಕುಳಿತುಕೊಂಡು, ಆಟದ ಮೈದಾನ ಹತ್ತಿರ ಒಂದು ಸೇಬುಕಾಯಿ ಮರವಿತ್ತು ಅದನ್ನು ನಾವು ಕಿತ್ತುಕೊಂಡು ತಿಂದು ಕಿತ್ತು ತಿಂದು ಆಡುತ್ತಿದ್ದೆವು. ನಾನು ಹೋಲಿ ಸ್ಪಿರಿಟ್ ಶಾಲೆಯಲ್ಲಿ ಸುಮಾರು ಹದಿನೈದು ವರ್ಷಗಳ ಕಾಲ ಓದಿದ್ದೇ. ಮತ್ತು ಎಂಟನೇ ತರಗತಿಯಿಂದ ಐಸಿಎಸ್ಸಿ ಸಿಲೆಬಸ್ ಓದಿದ್ದರಿಂದ ನನಗೆ ತುಂಬಾ ಕಷ್ಟವಾಯಿತು. ಆದರೂ ೧೦ನೇ ತರಗತಿ ವರೆಗೂ ಕಷ್ಟ ಪಟ್ಟು ಶ್ರಮಪಟ್ಟು ಆಸಕ್ತಿಯಿಂದ ಓದಿದೆ . ಆಗ ಬ್ಯಾಂಡ್ ಲೀಡರ್ ಕೂಡ ಆಗಿದೆ . ಸುಮಾರು ಸ್ಪರ್ಧೆ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡೆ . ಕೊನೆಗೂ ೧೦ನೇ ತರಗತಿ ಪಾಸ್ ಆಗಿ ಒಳ್ಳೆ ಅಂಕ ಸಿಕ್ಕಿತು .ಮತ್ತು ನಮ್ಮ ಅಪ್ಪ ಅಮ್ಮ ತುಂಬಾ ನನ್ನನ್ನು ಓದಿನಲ್ಲಿ ಪ್ರೋತ್ಸಾಹಿಸುತ್ತಿದ್ದರು. ನನ್ನನ್ನು ಎಷ್ಟು ಬೇಕಾದರೂ ಓದಿಸಲು ಅವರು ಸದಾ ಸಿದ್ಧ. ಹಾಗೆಯೇ ನಾನು ಕಷ್ಟ ಪಟ್ಟು ಓದುತ್ತಿದ್ದೇನೆ. ನಂತರ ಅದೇ ಕಾಲೇಜಿನಲ್ಲಿ ಪಿಯು ಓದಿದೆ . ಹತ್ತನೇ ತರಗತಿ ಮುಗಿದ ಮೇಲೆ ಪಿಯು ನನ್ನ ಲೈಫ್ನಲ್ಲಿ ಟರ್ನಿಂಗ್ ಪಾಯಿಂಟ್. ಹಾಗಾಗಿ ಪಿಯುಸಿ ನಲ್ಲಿ ಕಾಲೀಜಿಗೆ ಮೊದಲು ಬಂದು ೯೫% ಅಂಕಗಳು ಪಡೆದುಕೊಂಡೇ . ಕಾಲೇಜಿಗೆ ಮೊದಲು ಬಂದಿದು ನನಗೆ ನನ್ನ ತಂದೆ ತಾಯಿಗೆ ತುಂಬ ತುಂಬ ಖುಷಿಯಾಯಿತು . ಕಾಲೇಜಿನಿಂದ ಪ್ರಶಸ್ತಿ ಕೂಡ ಬಂದಿತು . ನನಗೆ ಒಳ್ಳೆಯ ಗೆಳೆಯ ಪ್ರೀತಿಯ ಗೆಳೆಯ "ರಂಜಿತ್" ಸಿಕ್ಕಿದ . ಕಾಲೇಜಿನಲ್ಲಿ ಒಳ್ಳೆಯ ವಿದ್ಯಾರ್ಥಿ ಎಂಬ ಬಿರುದು ಕೂಡ ಪಡೆದುಕೊಂಡ ಎಲ್ಲರ ಜೊತೆ ಮಾತಾಡಿಕೊಂಡು ಗಲಾಟೆ ಮಾಡಿಕೊಂಡು ಜಗಳ ಮಾಡಿಕೊಂಡು ಖುಷಿಯಾಗಿ ಇದ್ದೆ . ರಜೆಯಲ್ಲಿ ಮನೆಯಲ್ಲಿ ಸಮಯ ಕಳೆಯುವುದು ತುಂಬ ಕಷ್ಟ . ಆನಂತರ ನನ್ನ ಮುಂದಿನ ಓದಿನ ಬಗ್ಗೆ ತಲೆ ಕೆಡಿಸಿಕೊಂಡೆ , ತುಂಬ ವಿಚಾರ ಮಾಡಿ ಹಲವಾರು ಕಾಲೇಜಿನ ಬಗ್ಗೆ ತಿಳಿದು ಕೊಂಡೆ . ಆಗ "ಕ್ರೈಸ್ಟ್" ಕಾಲೇಜಿನ ಬಗ್ಗೆ ತಿಳಿದುಕೊಂಡು ಅಲ್ಲಿನ ಅವಕಾಶಗಳನ್ನು ತಿಳಿದು ಅಲ್ಲಿಗೆ ಸೇರಿಕೊಂಡೆ . ಇವಾಗ ಈ ಕ್ರೈಸ್ಟ್ ಕಾಲೇಜಿನಲ್ಲಿ ೧ದನೆ ವರ್ಷದ ಬಿಕಾಂ ಪದವಿ ಪಡೆಯುತಿದ್ದೇನೆ .
ಆಸಕ್ತಿಯ ಶೇತ್ರ
ಬದಲಾಯಿಸಿಟಿವಿ ನೋಡುವಾಗ ಯಾವಾಗಲು ನನ್ನ ಅಕ್ಕನ ಜೊತೆ ಜಗಳಮಾಡುತೀನಿ . ಹಾಗಾಗಿ ಮನೆಯಲ್ಲಿ ಸಮಯ ಕಳೆಯುವುದು ಕಷ್ಟವಾಗಿ ಕಲೆಯಲ್ಲಿ ಆಸಕ್ತಿಯಿತ್ತು . ಹಾಗಾಗಿ ವಿವಿಧ ಚಿತ್ರಗಳನ್ನು ಬಿಡುಸುತಿದ್ದೆ . ಚಿತ್ರಗಳನ್ನು ಬಿಡಿಸಿ ಮನೆಯಲ್ಲಿ ಗೋಡೆಯಮೇಲೆ ಪ್ರದರ್ಶಿಸುವಾಗ ಮನೆಗೆ ಬಂದವರು ಅದನ್ನು ನೋಡಿ ಖುಷಿಪಡುತ್ತಾ ನನಗೆ ಹೊಗಳುತ್ತಿದ್ದರು. ೬ರನೇ ತರಗತಿಯಲ್ಲಿ ಬ್ಯಾಂಡ್ ಗೆ ಸೇರಿಕೊಂಡೆ. ನಾನು ಹೆಚ್ಚು ಆಡುತ್ತಿದ್ದ ಸ್ಪೋರ್ಟ್ಸ್ ವೆಂದರೆ ವಾಲಿಬಾಲ್. ಗಿಡ ನೆಡುವುದೆಂದರೆ ನನಗೆ ಇಷ್ಟ.
ನನ್ನ ವೀಕ್ನೆಸ್ಸ್ಗಳು :- ನಾನು ತುಂಬ ಬೇಗ ಕೋಪ ಮಾಡಿಕೊಳ್ಳುತೇನೆ , ತಾಳ್ಮೆ ತುಂಬ ಕಮ್ಮಿ ನನ್ನಲ್ಲಿ, ಎಲ್ಲರ ಮೇಲೆ ಚಿಕ್ಕ ಚಿಕ್ಕ ವಿಷಯಕ್ಕೆ ಕೋಪ ಮಾಡಿಕೊಂಡು ಅಮ್ಮನ ಮೇಲೆ ರೇಗುತೇನೆ. ಮತ್ತು ನಾನು ಸಣ್ಣ ಸಣ್ಣ ವಿಷಯಕ್ಕೂ ಬೇಗ ಮೂಡ್ ಆಫ್ ಆಗುತ್ತೇನೆ.