ಗಿರೀಶ್.ಪಿ
Own photo
ಜನನ2000
ವಿಜಯನಗರ, ಬೆಂಗಳೂರು, ಭಾರತ.
ವಿದ್ಯಾಭ್ಯಾಸಬಿಕಾಂಮ್ ಕ್ರೈಸ್ಟ್ ಯುನಿವರ್ಸಿಟಿ.
ಪೋಷಕ(ರು)ಪ್ರಕಾಶ್, ಕಾತ್ಯಾಯಿನಿ.


ಜನನ:

೨೦೦೦ ಇತಿಹಾಸ ಹೊಂದಿರುವ,ಶ್ರೀಗಂಧದ ನಾಡು, ಕವಿಗಳ ಬೀಡು,ಶಿಲ್ಪಿಗಳ ತವರೂರು ಎಂದು ಕರೆಯಲ್ಪಡುವ ಕರ್ನಾಟಕ ರಾಜ್ಯದ ಹೆಮ್ಮೆಯ ಕನ್ನಡಿಗನಾಗಿ ದಿನಾಂಕ ೧೯/೦೭/೨೦೦೦ರಂದು ಶ್ರೀಮತಿ ಕಾತ್ಯಾಯಿನಿ ಮತ್ತು ಶ್ರೀ ಪ್ರಕಾಶ್ ಅವರ ದ್ವೀತಿಯ ಪುತ್ರನಾಗಿ ಜನಿಸಿದೆ. ನನ್ನ ಅಕ್ಕನ ಹೆಸರು ಪವಿತ್ರ.ನನ್ನ ತಾತನ ನೆನಪಿಗಾಗಿ ನನಗೆ ಗಿರೀಶ್ ಎಂದು ಹೆಸರಿಟ್ಟರು.

  ಶಿಕ್ಷಣ: 
ನನ್ನ ಶಿಕ್ಷಣ ಪ್ರಾರಂಭವಾಗಿದ್ದು ಅನ್ನಿ ಬೆಸೆಂಟ್ ಕಾನ್ವೆಂಟ್ ಅಲ್ಲಿ.ಅದೇ ಶಾಲೆಯಲ್ಲಿ ನಿರಂತರ ೧೨ ವರ್ಷದ ಕಾಲ ಶಿಕ್ಷಣವನ್ನು ಪಡೆದೆ.ಅಲ್ಲಿ ಶಿಕ್ಷಣವಲ್ಲದೆ ಕ್ರೀಡೆ,ಗೀತೆ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅನೇಕ ಬಹುಮಾನಗಳನ್ನು ಗಳಿಸಿದ್ದೇನೆ.ಆ ಶಾಲೆಯ ಶಿಕ್ಷಕರಿಗೆ  ನನ್ನ ಮೇಲೆ ಅಪಾರ ನಂಬಿಕೆ ಇದ್ದುದರಿಂದ ನನ್ನ ಮುಂದಿನ ದಾರಿ ರೂಪಿಸಿಕೊಳ್ಳಲು ನನಗೆ ಬೆನ್ನೇಲುವಾಗಿದ್ದರು.ಆ ಶಾಲೆಯಲ್ಲಿ ನಾನು ನನ್ನ ಪ್ರೀತಿಯ ಗೆಳೆಯರೊಂದಿಗೆ ಹೆಚ್ಚು ಸಮಯ ಕಳೆಯುತ್ತಿದ್ದೆ.೧೦ನೇಯ ತರಗತಿಗೆ ಹೋದಾಗ ಒಂದು ಕಡೆಯಿಂದ ಆನಂದ ಯಾಕೆಂದರೆ ಮುಂದೆ ಕಾಲೇಜ್ ಮೆಟ್ಟಿಲು ಅತ್ತುತೀವಿ ಎಂದು ಮತ್ತು ಮತ್ತೊಂದು ಕಡೆ ದುಃಖ ಶಿಕ್ಷಕರನ್ನು ಮತ್ತು ಸ್ನೇಹಿತರನ್ನು ತೊರೆದು ಕಾಲೇಜಿಗೆ ಹೋಗಬೇಕು.೧೦ನೇ ತರಗತಿಯಲ್ಲಿ ಶೇಕಡಾ ೮೨% ಅಂಕಗಳನ್ನು ತಗೆದುಕೊಂಡು ಉತೀರ್ಣನಾದೆ. 

ನಂತರ ನನ್ನ ಪದವಿ ಪೂರ್ವ ಶಿಕ್ಷಣವನ್ನು ವಿಜಯನಗರ ಅಲ್ಲಿ ಇರುವ ದೀಕ್ಷಾ ಕಾಲೇಜಿನಲ್ಲಿ ಪ್ರಾರಂಭವಾಯ್ತು.ಮೊದಮೊದಲಿಗೆ ಹೊಂದ್ದಿಕೊಳಲ್ಲು ಸ್ವಲ್ಪ ಸಮಯವನ್ನು ತೆಗೆದುಕೊಂಡೆ.ಅಲ್ಲಿಯೂ ಕೂಡ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೆ.ಆ ಕಾಲೇಜಿನಲ್ಲಿ ಪಾಠದ ಜೊತೆಗೆ ಪ್ರಾಯೋಗಿಕ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡುತ್ತಿದ್ದರು.ಆ ಕಾಲೇಜಿನಲ್ಲಿ ನನ್ನ ಗೆಳೆಯನಾದ ಸತ್ಯನ ಜೊತೆ ಅನೇಕ ಅಂತರ್ಕಾಲೇಜ್ ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ಬಹುಮಾನಗಳನ್ನು ಪಡೆದುಕೊಂಡಿದೆ.ನನ್ನ ಉಪನ್ಯಾಸಕರು ಉತ್ತಮ ಬೆಂಬಲವನ್ನು ನೀಡುತ್ತಿದ್ದರು ಅವರ ಸಹಕಾರದಿಂದ ಶೇಕಡಾ ೯೨% ಅಂಕಗಳನ್ನು ಪದವಿ ಪೂರ್ವ ಕಾಲೇಜಿನಲ್ಲಿ ಗಳಿಸಿದೆ. ಉತ್ತಮ ಅಂಕಗಳನ್ನು ಗಳಿಸಿದ ಕಾರಣ ನನ್ನ ಉಪನ್ಯಾಸಕರು ಕ್ರೈಸ್ಟ್ ವಿಶ್ವವಿದ್ಯಾಲಯ ನಿನಗೆ ಸೂಕ್ತವಾದ ಕಾಲೇಜ್ ಎಂದು ಸಲಹೆ ನೀಡಿದರು .ಆ ವಿಶ್ವವಿದ್ಯಾಲಯದ ಬಗ್ಗೆ ನನಗೂ ಕೂಡ ಒಳ್ಳೆಯ ಅಭಿಪ್ರಾಯವಿತ್ತು ಆದಾ ಕಾರಣ ನಾನು ಆ ವಿಶ್ವವಿದ್ಯಾಲಯಕ್ಕೆ ಸೇರಿಕೊಂಡೆ.

ಜೂನ್ ೫ ರಂದು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ನನ್ನ ಪದವಿ ಶಿಕ್ಷಣ ಪ್ರಾರಂಭವಾಯ್ತು.ಆ ವಿಶ್ವವಿದ್ಯಾಲಯದ ಬಗ್ಗೆ ಹೇಳಲು ನನಗೆ ಹೆಮ್ಮೆಯಾಗುತ್ತದೆ .ಅಲ್ಲಿ ಎಲ್ಲಾ ದೇಶದ,ರಾಜ್ಯದ ವಿದ್ಯಾರ್ಥಿಗಳನ್ನು ಕಂಡು ನಾನು ಒಳ್ಳೆಯ ನಿರ್ಧಾರವನ್ನು ತಗೆದುಕೊಂಡೆ ಎಂದು ಭಾಸವಹಿತು. ನಾನು ಮೊದಲನೇ ಸೆಮಿಸ್ಟರ್ ನಲ್ಲಿ ವೇದಿಕೆಯನ್ನು ಏರುತ್ತೇನೆ ಎಂದು ಅಂದುಕೊಂಡಿರಲಿಲ್ಲ.ನನ್ನ ಕನ್ನಡ ಉಪನ್ಯಾಸಕಿ ಆದಾ ರತಿ ಮೇಡಂ ಅವಕಾಶ ಕಲ್ಪಿಸಿಕೊಟ್ಟರು.ಆದುದರಿಂದ ಭಾಷಾ ಉತ್ಸವ ಸ್ಪರ್ಧೆಯಲ್ಲಿ ಭಾಗವಹಿಸಿದೆ.ನನಗೆ ಮೊದಲಿನಿಂದಲೂ ಕನ್ನಡದ ಬಗ್ಗೆ ಒಲವು ಹೆಚ್ಚು ಇರುವುದರಿಂದ ಆ ಸ್ಪರ್ಧೆ ಅಲ್ಲಿ ವೀರಗಾಸೆ ನೃತ್ಯವನು ಮಾಡುವ ಮುಖಾಂತರ ನಮ್ಮ ಕರ್ನಾಟಕದ ಸಂಸ್ಕೃತಿಯನ್ನು ಮೊದಲ ಭಾರಿಗೆ ಆ ದೊಡ್ಡ ವಿಶ್ವವಿದ್ಯಲಯದಲ್ಲಿ ಪರಿಚಯ ಮಾಡಿಕೊಟ್ಟೆ.ಈಗೆ ನನ್ನ ಪದವಿ ಶಿಕ್ಷಣ ಮುಂದುವರೆಯುತ್ತಿದೆ.

ಗುರಿ:

ನನ್ನ ಗುರಿ ಏನೆಂದರೆ ಎಸ್.ಐ ಯಾಗಿ ಜನರಿಗೆ ಸೇವೆಯನ್ನು ನೀಡಬೇಕೆಂದು.