ಪರಿಚಯ:

ಕಾಫೀ ಪ್ರಪಂಚದಲ್ಲಿ ಆರನೆಯ ಅತಿ ಹೆಚ್ಚು ರಫ್ತು ಮಾಡುವ ವಸ್ತುವಾಗಿತ್ತು .ಕಾಫೀಯನ್ನು ತನ್ನದೆಯಾದ ಹೆಸರಿನ ಗಿಡದ ಬೀಜಗಳನ್ನು ಹುರಿದು ತಯಾರಿಸುವ ಒಂದು ಪೇಯಯಾಗಿದೆ.ನೀರು ಹಾಗು ಚಹಾದೊಂದಿಗೆ ಇದು ಪ್ರಪಂಚದ ಅತ್ಯಂತ ಜನಪ್ರಿಯ ಪೇಯಗಳೊಂದಾಗಿದೆ.

ಇತಿಹಾಸ:

ಕಾಫೀಯ ಚರಿತ್ರೆ ಒಂಬತ್ತನೇ (೯)ನೇ ಶತಮಾನದಲ್ಲಿ ಪ್ರಾರಂಭವಗುತ್ತದೆ.ಇತಿಯೋಪಿಯದಲ್ಲಿ ಮೊದಲು ಬಳಕೆಗೆ ಬಂದ ಕಾಫೀ ಈಜಿಪ್ಟ್ ಮತ್ತು ಯೂರೋಪ್ ಗಳ ಮುಖಾಂತರ ಪ್ರಪಂಚದ ಬೇರೆ ಬೇರೆ ಭಾಗದಲ್ಲಿ ಹಬ್ಬಿತು. "ಕಾಫಿ" ಎಂಬ ಪದ ಇತಿಯೋಪಿಯದ "ಕಾಫ" ಎಂಬ ಪ್ರದೇಶದ ಹೆಸರಿನಿಂದ ಉತ್ಪನ್ನವಾದದ್ದು ಎಂದು ನಂಬಲಾಗಿದೆ. ಕಾಫಿ 15 ನೇ ಶತಮಾನದಲ್ಲಿ ಪರ್ಷಿಯಾ, ಈಜಿಪ್ಟ್, ಉತ್ತರ ಆಫ್ರಿಕ ಮತ್ತು ತಾರ್ಕಿ ಗಳನ್ನು ತಲುಪಿತು. 1475 ರಲ್ಲಿ ಈಸ್ತಾನ್ ಬುಲ್ ನಗರದಲ್ಲಿ ಮೊದಲ "ಕಾಫಿ ಹೋಟಲು" ಆರಂಭವಾಯಿತು.17 ನೇ ಶತಮಾದ ವೇಳೆಗೆ ಯೂರೋಪಿನಲ್ಲಿ ಜನಪ್ರಿಯವಾದ ಕಾಫಿಯನ್ನು ಮೊದಲ ಬಾರಿಗೆ ಡಚ್ ವ್ಯಾಪಾರಿಗಳು ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಲಾರಂಭಿಸಿದರು. ಇಂಗ್ಲೆಂಡಿನ ಕಾಫಿ ಮನೆಗಳು ಜನಪ್ರಿಯ ವ್ಯಾಪಾರ ಕೇಂದ್ರಗಳೂ ಆದವು.

ಕಾಫಿಯ ಪ್ರಭೇದಗಳು:

ಕಾಫಿ ಗಿಡಗಳಲ್ಲಿ ಎರಡು ಮುಖ್ಯ ಪ್ರಭೇದಗಳಿವೆ: ಕಾಫೀಯ ಅರಾಬಿಕ ಮತ್ತು ಕಾಫೀಯ ರೋಬಸ್ಟ. ಅರಾಬಿಕ ತಳಿ ಇತಿಯೋಪಿಯದಲ್ಲಿ ಉಗಮಗೊಂಡಿದ್ದಾರೆ, ರೋಬಸ್ಟ ತಳಿ ಇಂದಿನ ಉಗಾಂಡ ದೇಶದಲ್ಲಿ ಉಗಮಗೊಂಡದ್ದು.ರೋಬಸ್ಟ ತಳಿಯ ಕಾಫಿ ಬೀಜಗಳು ಹೆಚ್ಚು ಕೆಫೀನ್ ಅಂಶವನ್ನು ಹೊಂದಿದ್ದು ಇನ್ನೂ ಹೆಚ್ಚು ಕಹಿಯಾಗಿರುತ್ತವೆ. ಆದರೆ ಇವುಗಳನ್ನು ಹುರಿದಾಗ ಬರುವ ಸ್ವಲ್ಪ ಸುತ್ತ ವಾಸನೆಯಿಂದಾಗಿ ಅರಾಬಿಕ ತಳಿಯ ಕಾಫಿ ಹೆಚ್ಚು ಜನಪ್ರಿಯವಾಗಿದೆ.

ಸಂಸ್ಕರಣೆ ಮತ್ತು ಸಿದ್ಧತೆ:

ಕಾಫಿ ಗಿಡದ ಬೀಜಗಳಿಂದ ಕಾಫಿಯನ್ನು ತಯಾರಿಸುವ ಮೊದಲು ಬೀಜಗಳನ್ನು ಸಾಕಷ್ಟು ಸಂಸ್ಕರಿಸಬೇಕಾಗುತ್ತದೆ. ಕಾಫಿ ಹಣ್ಣುಗಳನ್ನು ಕೀಳುವುದು, ಬೀಜಗಳ ಬೇರ್ಪಡಿಸುವಿಕೆ, ಮತ್ತು ಒಣಗಿಸುವಿಕೆ ಈ ಸಂಸ್ಕರಣದ ಮೊದಲ ಹಂತಗಳು.ಇದರ ನಂತರ ಕಾಫಿ ಬೀಜಗಳನ್ನು ಹುರಿಯಲಾಗುತ್ತದೆ. ಕಾಫಿ ಬೀಜಗಳನ್ನು ಹುರಿಯುವುದಕ್ಕೆ ವಿವಿಧ ವಿಧಾನಗಳಿದ್ದು, ಹುರಿಯುವ ವಿಧಾನ ನಂತರ ತಯಾರಿಸಲಾಗುವ ಕಾಫಿಯ ರುಚಿಯ ಮೇಲೆ ಪ್ರಮುಖ ಪರಿಣಾಮ ಬೀರುತ್ತದೆ. ಹುರಿಯುವಿಕೆಯಿಂದ ಬೀಜದಲ್ಲಿನ ಕೊಬ್ಬಿನ ಅಂಶ ಕರಗಿ, ಸುಗಂಧಿತ ಎಣ್ಣೆಗಳ ಉತ್ಪತ್ತಿ ನಡೆಯುತ್ತದೆ. ಹಾಗೆಯೇ ಕಾಫಿಗೆ ವಿಶಿಷ್ಟವಾದ ಕೆಲವು ಆಮ್ಲಗಳು ಹುಟ್ಟಿ, ಕಾಫೀಯ ವಿಶಿಷ್ಟ ರುಚಿ ಹಾಗೂ ವಾಸನೆ ಜನಿಸುತ್ತದೆ.

ಹುರಿದ ಕಾಫಿ ಬೀಜಗಳನ್ನು ಪುಡಿ ಮಾಡುವ ಮೂಲಕ "ಕಾಫೀಪುಡಿ"ಯನ್ನು ತಯಾರಿಸಲಾಗುತ್ತದೆ. ಪುಡಿ ಮಾಡುವ ವಿಧಾನ ನಂತರ ಕಾಫಿ ಪೇಯದ ತಯಾರಿಕೆಯ ಮೇಲೆ ಪರಿಣಾಮ ಬೀರುತ್ತದೆ. ಸ್ವಲ್ಪ ಒರಟಾಗಿ ಪುಡಿ ಮಾಡಿದ ಕಾಫಿ ಬೀಜಗಳು ಫಿಲ್ಟರ್ ಕಾಫಿ ಯ ತಯಾರಿಕೆಗೆ ಒಗ್ಗುತ್ತವೆ. "ಕ್ಷಣಸಿದ್ಧ" ಕಾಫಿ ಪುಡಿಗೆ ಇನ್ನೂ ಸೂಕ್ಷ್ಮವಾಗಿ ಪುಡಿ ಮಾಡಲಾಗುತ್ತದೆ.

ಆರೋಗ್ಯದ ಮೇಲೆ ಪರಿಣಾಮಗಳು:

ಕಾಫಿ ಕುಡಿಯುವಿಕೆಯಿಂದ ಮಾನವರ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮಗಳು ಆಗುತ್ತವೆ ಎಂಬುದರ ಬಗ್ಗೆ ಅನೇಕ ಅಧ್ಯಯನಗಳು ನಡೆದಿವೆ. ಮುಖ್ಯವಾಗಿ, ಸಿಹಿಮೂತ್ರ ರೋಗ, ಹೃದಯದ ತೊಂದರೆಗಳು, ಕ್ಯಾನ್ಸರ್ ಮೊದಲಾದವುಗಳಿಗೆ ಕಾಫಿ ಪಾನದ ಜೊತೆಗೆ ಸಂಬಂಧಗಳಿವೆಯೇ ಎಂಬುದರ ಬಗ್ಗೆ ಅಧ್ಯಯನಗಳು ನಡೆದಿವೆ. ಆದರೆ ವಿವಿಧ ಅಧ್ಯಯನಗಳ ಫಲಿತಾಂಶಗಳು ತದ್ವಿರುದ್ಧವಾಗಿ ಬಂದು ಸ್ಪಷ್ಟ ವೈದ್ಯಕೀಯ ತೀರ್ಮಾನಗಳು ಇಲ್ಲಿಯವರೆಗೂ ಹೊರಹೊಮ್ಮಿಲ್ಲ.

ಸಾಮಾಜಿಕ ಸ್ಥಾನ :

ಅನೇಕ ಸಂಸ್ಕೃತಿಗಳಲ್ಲಿ ಕಾಫಿಗೆ ಪ್ರಮುಖವಾದ ಸಾಮಾಜಿಕ ಪ್ರಾಮುಖ್ಯತೆ ಉಂಟು. ದಕ್ಷಿಣ ಭರತ ದಲ್ಲಿ ಮನೆಗೆ ಬಂದವರಿಗೆ ಕಾಫಿ ಕೊಡುವುದು ಸರ್ವೇ ಸಾಮಾನ್ಯ. ಕಾಫಿಯ ಚರಿತ್ರೆಯ ಕೆಲ ಘಟ್ಟಗಳಲ್ಲಿ ಅದನ್ನು ಸಾಮಾಜಿಕವಾಗಿ ನಿಷೇಧಿಸಿದ್ದೂ ಉಂಟು. ೧೬ನೆ ಶತಮಾನದಲ್ಲಿ ಮೆಕ್ಕಾ ಮೊದಲಾದ ಕಡೆಗಳಲ್ಲಿ ಇದನ್ನು "ಉತ್ತೇಜನಕಾರಿ" ವಸ್ತು ಎಂದು ನಿಷೇಧಿಸಿದ್ದರೆ, ೧೭ ನೆ ಶತಮಾನದ ಇಂಗ್ಲೆಂಡಿನಲ್ಲಿ ಇದನ್ನು "ರಾಜಕೀಯವಾಗಿ ವಿದ್ರೋಹಕಾರಿ" ಜನರು ಉಪಯೋಗಿಸುವ ಪೇಯ ಎಂದು ನಿಷೇಧಿಸಲಾಗಿತ್ತು.