ನನ್ನ ಪರಿಚಯ

ಬದಲಾಯಿಸಿ

ನನ್ನ ಹೆಸರು ಬಿ.ಎಸ್.ಸುಪ್ರೀಥ. ಸುಪ್ರೀಥ ಹೆಸರಿನ ಅರ್ಥ "ಎಲ್ಲರಿಗು ಪ್ರಿಯ" ಅಥವ "ಸಂತೋಷ". ಮೈಸೂರು ನಲ್ಲಿ ಇರುವ ಆದರ್ಶ ಆಸ್ಪತ್ರೆಯಲ್ಲಿ ೧೪ ನವೆಂಬರ್ ೨೦೦೨ ಕೆ ನಾನು ಜನಿಸಿದೆ. ನನ್ನ ತಂದೆಯವರ ಹೆಸರು ಬಿ.ಅರ್.ಶಿವಪ್ರಸಾದ್ , ಅಮ್ಮ ಎಸ್.ವೀಣಾ. ಅಪ್ಪ ಸರ್ಕಾರಿ ಕೆಲಸ ಮಾಡುತಿದ್ದಾರೆ, ಅಮ್ಮ ಗೃಹಿಣಿ. ನನಗೆ ಒಬ್ಬ ಅಕ್ಕ ಇದ್ದಾಳೆ, ಹೆಸರು ಬಿ.ಎಸ್.ಹರ್ಷಿತಾ. ಅವಳು ಪ್ರಸ್ತುತ ಓದು ಮುಗಿಸಿ ಮದುವೆ ಆಗಿದ್ದಾಳೆ. ನನ್ನ ಬಾಲ್ಯದ ಪೂರ್ಥಿ ದಿನಗಳು ಮೈಸುರಿನಲ್ಲೆ ಕಳೆದಿದೆ. ನನಗೆ ಅಜ್ಜಿ ಅಜ್ಜ ಜೊತೆ ಇರುವ ನೆನಪು ಹೆಚ್ಚು ಇಲ್ಲ. ಚಿಕ್ಕ ವಯಸಿನಿಂದಲು ಅಮ್ಮ ಮತ್ತು ಮನೆ ಇಂದ ಹೆಚ್ಚು ದೂರ ಇರಲಿಲ್ಲ. ಯೆಲ್ಲೇ ಹೋದರು ಅಕ್ಕ ಜೊತೆ ಹೊಗುವ ಅಭ್ಯಾಸವಾಗಿತ್ತು. ಅಕ್ಕ ಅಮ್ಮ ನನ್ನ ಜೊತೆ ಇಲ್ಲ ಎಂದರೆ ಮನೆ ಇಂದ ಆಚೆನು ಹೊಗುತಿರಲಿಲ್ಲ. ಅಪ್ಪ ಜೊತೆ ಇರುವುದು ಕೂಡ ಬೇರೆಯ ಸಂತೋಷ. ಇಡೀ ಕುಟುಂಬ ಜೊತೆಗೆ ಇರುವ ಸಂತೋಷ ನೆ ಬೇರೆ. ನನಗೆ ‌ಶಿವರಾತ್ರಿ ಹಬ್ಬ ಎಂದರೆ ಬಹಳ ಇಷ್ಟ. ರಾತ್ರಿ ಬೇಗನೇ ಮಲಗಿ, ಬೆಳಿಗ್ಗೆ ಅಮ್ಮ ಅಪ್ಪ ಜೊತೆ ಸೇರಿ ಮಾಡಿರುವ ರುಚಿ ರುಚಿಯಾದ ಅಡಿಗೆ ತಿನ್ನುವುದು ಯಾವತ್ತಿಗು ಮರಿಯೋಕೆ ಆಗುವುದಿಲ್ಲ. ನನ್ನ ಕುಟುಂಬದಲ್ಲಿ ನಾನೆ ಕೊನೆಯವಳು, ಆದ್ದರಿಂದ ನನನ್ನು ಬಹಳ ಪ್ರೀತಿಯಿಂದ ಬೆಳೆಸಿದ್ದಾರೆ. ಯೇನೆ ಕೇಳಿದರು ನನಗೆ ಪ್ರೀತಿ ಇಂದ ಕೊಡಿಸಿದ್ದರೆ. ಅಕ್ಕ ನಾನು ಜೊತೇಗೆ ಒಂದೇ ಸ್ಕೊಲು ಹಾಗು ಒಂದೇ ಕಾಲೆಜಿನಲ್ಲಿ ಓದು ಮುಗಿಸಿದ್ದೆವೆ. ಬಾಲ್ಯದಿಂದಲು ನಮ್ಮ ಒದನೆ ಹೆಚ್ಚು ಪ್ರೀತಿ, ಅಮ್ಮ ಅಪ್ಪ ಯಾವತ್ತಿಗೂ ಇಬ್ಬರನ್ನು ಒಂದೇ ರೀತಿಯಲ್ಲಿ ಬೆಳೆಸಿದ್ದಾರೆ. ಪ್ರತಿ ಒಂದು ಚಿಕ್ಕ ವಸ್ತುಗೆ ಹಿಡಿದು ನಮ್ಮ ಬಟ್ಟೆ ಕೂಡ ಒಂದೆ ರೀತಿಯಲ್ಲಿ ಕೊಡುಸುವರು. ಆಮ್ಮ ಮಾಡಿದ ಪ್ರತಿ ಒಂದು ಅಡಿಗೆ ಕೂಡ ನಮಿಬ್ಬರಿಗೂ ಬಹಳ ಇಷ್ಟ. ಶಾಲೆ ಮುಗಿದ ನಂತರ ಮನೇಗೆ ಬಂದಾಹಗ ಬರುತಿದ್ದ ಕುಶಿ ಹೊಲಿಸೋಕೆ ಆಹಗುವುದಿಲ.

ಶಿಕ್ಷಣ

ಬದಲಾಯಿಸಿ

ನನ್ನ ಪ್ರಾಥಮಿಕ ಶಿಕ್ಷಣ ಮೈಸೂರಿನ “ಕ್ರೈಸ್ಟ್ ಪಬ್ಲಿಕ್ ಸ್ಕೂಲ್" ನಲ್ಲಿ ಆಗಿ ನಂತರ ಪ್ರೌಡ ಶಿಕ್ಷಣ ಮೈಸೂರಿನ “ಶೇಷಾದ್ರಿಪುರಂ ಕಾಲೇಜ್"ರಲ್ಲಿ ಇ.ಸಿ.ಬಿ.ಏ ಮುಗಿಸಿ ಪ್ರಸ್ತುತ ಬೆಂಗಳೂರಿನ “ಕ್ರೈಸ್ಟ್ ವಿಶ್ವವಿದ್ಯಾನಿಲಯದಲ್ಲಿ” ಬಿಕಾಮ್ ಕೋರ್ಸ್ ವನ್ನು ಅನುಸರಿಸುತಿದ್ದೇನೆ. ಇಲ್ಲಿ ಪ್ರಸ್ತುತ ವಿಶ್ವ ವಿದ್ಯಾಲಯದಲ್ಲಿ ಇರುವ ವಿದ್ಯಾರ್ಥಿ ನಿಲಯದಲ್ಲಿ ವಾಸವಾಗಿದ್ದೇನೆ. ನನಗೆ ಚಿಕ್ಕ ವಯಸ್ಸಿನಿಂದ ಡ್ರಾಯಿಂಗ್, ಪೈಂಟಿಂಗ್ ಎಂದರೆ ಬಹಳ ಆಸಕ್ತಿ ಇದೆ. ಸ್ಕೂಲಿನಲ್ಲಿ ಇದ್ದಾಗ ಕರಾಟೆ ಎಂಬುವ ದೈಹಿಕ ಶಿಕ್ಷಣ ಪಡೆದು ಕೊಂಡೆ. ನಂತರ ಸಂಗೀತದಲ್ಲಿ ಆಸಕ್ತಿ ಮೂಡಿ ಹಾಡುವುದು ನನಗೆ ಉತ್ಸಾಹ ನೀಡಿದೆ. ಚಿಕ್ಕ ವಯಸ್ಸಿನಲ್ಲಿ ನೃತ್ಯ ವನ್ನು ಕೂಡ ಅಭ್ಯಾಸವಾಗಿ ಕಲಿತಿರುವೆ. ಹತ್ತನೇ ತರಗತಿಯಲ್ಲಿ ಒಂದು ನಾಟಕದಲ್ಲಿ ಭಾಗವಾಗಿದ್ದೆ. ಆಟ ಆಡುವುದಕ್ಕೆ ಬಂದರೆ ನನಗೆ ಬ್ಯಾಡ್ಮಿಂಟನ್ ಆಡುವುದಕ್ಕೆ ಬಹಳ ಇಷ್ಟ. ಮನೆಯೊಳಗೆ ಆಡುವ ಆಟ ಎಂದರೆ ಕ್ಯಾರಾಂ. ಎಲ್ಲರೂ ಸೇರಿ ಆಡುವ ಸಂತೋಷವೇ ಬೇರೆ. ಪ್ರಸ್ತುಥ ನಾನು ವಿಶ್ವವಿದ್ಯಾನಿಲಯದ ಕಬಡ್ಡಿ ತಂದಡಕ್ಕೆ ಸೇರಿಕೊಂಡೆ. ಇವತ್ತಿಗು ದಿನಾಲು ಬೆಳಿಗ್ಗೆ ವ್ಯಯಾಮ ಮಡಿ ಆಡುವುದು ಅಭ್ಯಾಸ ಮಾಡುತ್ತೇವೆ. ಹಾಗು ಡಿಸೆಂಬ್ರ್ ಅಲ್ಲಿ ನಮ್ಮ ತಂಡ ಚೆನೈಗೆ ಸೌತ್ ಜ಼ೊನ್ ಸ್ಪರ್ದೆ ಗೆ ಭಾಗಿ ಆಗಲು ಹೊಗಿದ್ದೀವಿ.

ಆಸಕ್ತಿಯ ಕ್ಷೇತ್ರ

ಬದಲಾಯಿಸಿ

ನನಗೆ ಬಿ.ಕಾಮ್ ಓದುವುದರ ಕಿನ ಹೆಚ್ಚು ಕಾನೂನು ಬಗ್ಗೆ ಓದಲು ಬಹಳ ಆಸಕ್ತಿ ಈಗಲು ಇದೆ. ಪ್ಯೆಂಟಿಂಗ್, ಡ್ರಾಯಿಂಹ್, ಸಂಗೀತ, ನೃತ್ಯ ಯೆಲ್ಲವೂ ಆಸಕ್ತಿ ತೊರಿಸಿ ಕಲೆತುಕೊಂಡೆ. ಅಪ್ಪ ಹೇಳಿದರು ಅಂಥ ಕರಾಟೆ ಕಲಿತೆ, ಕರಾಟೆ ಗೆ ಸೇರಿದ ನಂತರ ಬಹಳ ಸ್ಪರ್ದೆಗಳಲ್ಲಿ ಭಗವಹಿಸಿದ್ದೆನೆ. ಕಬಡ್ದಿ ತಂಡಕ್ಕೆ ನನ್ನ ಆಸಕ್ತಿಯಿಂದ ಸೇರಿದೆ. ಕ್ರೀಡೆಯನ್ನು ಬಿಟ್ಟು ಬೇರೆ ಕಡೆ ನೊಡಿದರೆ ನನಗೆ ಸಿನಿಮ ನೊಡುವುದಕ್ಕೆ ಬಹಳ ಆಸಕ್ತಿ ಇದೆ. ಫೋನಿನಲ್ಲಿ ವಿದ ವಿದವಾದ ಆಟ ಆದಡಲು ಆಸಕ್ತಿ ಇದೆ. ಹಾಗು ನನಗೆ ಫೊಟೋ ಎಡಿಟಿಂಗ್ ಮತ್ತು ವೀಡಿಯೋ ಎಡಿಟಿಂಗ್ ಮಡುವುದು ತಿಳಿದಿದೆ, ಜೊತೆಗೆ ಬಹಳ ಆಸಕ್ತಿ. ಅದರ ಜೊತೆ ಫೋಟೊಗ್ರಾಫಿ ಎಂದರೆ ಬಹಳ ಇಷ್ಟ. ಚಿಕ್ಕ ವಯಸಿನಿಂದಲು ನನಗೆ ಬೇರೆ ಬೇರೆಯಾದ ಜಾಗ ನೋಡಲು ಬಹಳ ಆಸೆ. ಇವತ್ತಿನ ವರೆಗು ನಾನು ತಮಿಳು ನಾಡು, ಕೇರಳ, ಹಾಗು ಮುಂಬೈ ರಾಜ್ಯಕ್ಕೆ ಹೊಗಿದ್ದೇನೆ. ನಾನು ೧೦ನೇ ತರಗತಿಯಲ್ಲಿ ಇದ್ದಾಗ ಸ್ಕೊಲಿನವರು ನಮನ್ನು ಮುಂಬೈಗೆ ಕರೆದುಕೊಂಡು ಹೊಗಿದ್ದರು. ಅಲ್ಲಿ ಜನ ಸಂಕ್ಯ ಯಷ್ಟು ಹೆಚ್ಚು ಅಷ್ಟೇ ಅಲ್ಲಿ ನ ಪರಿಸರ ಮಾಲಿನ್ಯವಾಗಿದೆ. ಅಲ್ಲಿ ಮದ್ಯ ರಾತ್ರಿಯಾದರು ಅಲ್ಲಿನ ಜನ ಓಡಾಡುತ್ತನೇ ಇರುತ್ತರೆ. ೧೧ನೇ ತರಗತಿಯಲ್ಲಿ ಇದ್ದಾಗ ಸ್ಕೂಲಿನವರು ನಮಗೆ ತಮಿಳು ನಾಡುಗೆ ಕರೆದುಕೊಂಡು ಹೋಗಿದ್ದರು. ತಮಿಳು ನಾಡು ನಗರ ಪ್ರದೇಷದಲ್ಲಿ ಬಹಳ ಸ್ವಛವಾಗಿ ಪರಿಸರವನ್ನು ನೋಡಿಕೊನ್ದಡಿದ್ದಾರೆ. ೧೨ನೇ ತರಗತಿಯಲ್ಲಿ ಇದ್ದಾಗ ನಮನ್ನು ಕೇರಳಗೆ ಭೇಟಿ ಮಾಡಿದೆವು. ಅಲ್ಲಿ ಸಮುದ್ರ ನೋಡಲು ಬಹಳ ಚಂದ. ಅಲ್ಲಿಯ ವಾತಾವರಣ ಬಹಳ ಶೆಕೆಯ ತಾಪಮಾನವಿರುತ್ತೆ. ಯಷ್ಟೇ ಓಡಾಡಿದರೂ ನಮ್ಮ ಕರ್ನಾಟಕದಲ್ಲಿ ಇರುವ ಮೈಸೂರಿಗೆ ಯಾವ ರೀತಿಯಲ್ಲೂ ಹೋಲಿಕೆ ಇಲ್ಲ. ಮನೆಗೆ ಸೇರಿದರೆ ಮತ್ತೆ ಆಛೆ ಹೋಗುವ ಮನಸು ಬರುವುದಿಲ್ಲ. ಈಗ ಪ್ರಸ್ತುತ ನನು ಓದುವುದಕ್ಕೆ ಬೆಂಗಲೂರಿನಲ್ಲಿ ಇದ್ದರೂ ಮನೆ ಕುಟುಂಬದ ಬಗ್ಗೆ ಯೋಚನೆ ಮಾಡದೇ ಇರುವ ದಿನವೇ ಇಲ್ಲ.

ಧನ್ಯವಾದಗಳು

ಬದಲಾಯಿಸಿ