ಸಿಂಗಲ್ ಪ್ರಾಸದ ಸಿಂಪಲ್ ಸಾಹಿತ್ಯಗಾರ ಎಂದೆ ಪ್ರಖ್ಯಾತ ಪಡೆದಿರುವ ಇವರು ಕಲ್ಯಾಣ ಕರ್ನಾಟಕದ ಮೂಲದವರಾಗಿರುತ್ತಾರೆ. ಹನುಮಂತರಾಯ ಪಾಟೀಲ್(H.K.PATIL) ಇವರು ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಉಸ್ಕಿಹಾಳ ಎಂಬ ಗ್ರಾಮದಲ್ಲಿ 12/06/1998 ರಲ್ಲಿ ಕನಕರಾಯ ಪಾಟೀಲ್,ರೇಣುಕಮ್ಮ ನವರ 2ನೇ ಮಗನಾಗಿ ಜನಿಸಿದರು. ಇವರು ತಮ್ಮ ಬಾಲ್ಯ ಶಿಕ್ಷಣವನ್ನು ತಮ್ಮ ಊರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಯಲ್ಲಿ ಮುಗಿಸಿದರು, ನಂತರದಲ್ಲಿ 6,7ನೇ ತರಗತಿಯನ್ನು ಪಕ್ಕದೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾರಲದಿನ್ನಿ ಯಲ್ಲಿ ಮುಗಿಸುತ್ತಾರೆ, ಹಾಗೂ ತಮ್ಮ ಪ್ರೌಢ ಶಾಲಾ ಶಿಕ್ಷಣವನ್ನು ಸಹ ಅದೇ ಮಾರಲದಿನ್ನಿ ಪ್ರೌಢ ಶಾಲೆ ಯಲ್ಲಿ ಮುಗಿಸುತ್ತಾರೆ. ಇವರು ಲಿಂಗಸಗೂರಿನಲ್ಲಿ ತಮ್ಮ ಪಿಯುಸಿ ಯನ್ನು VCBES ವಳಬಳ್ಳಾರಿ ಚನ್ನಬಸವೇಶ್ವರ ಶಿಕ್ಷಣ ಸಂಸ್ಥೆ ಯಲ್ಲಿ ಮುಗಿಸುತ್ತಾರೆ. ನಂತರದಲ್ಲಿ ತಮ್ಮ ಪದವಿ ಯನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜು ಲಿಂಗಸುಗೂರು ನಲ್ಲಿ ಆಂಗ್ಲ (English) ವಿಷಯದಲ್ಲಿ ಬಿ.ಎ.ಪದವಿಯನ್ನು ಪಡೆದು ಕೊಂಡಿರುತ್ತಾರೆ. ಹಾಗೆಯೇ BEd ಶಿಕ್ಷಣ ವನ್ನು ಹಾಸನದಲ್ಲಿ ಪಡೆದುಕೊಂಡು, ಇವರು ಪ್ರಸ್ತುತ ಜನನಿ ಶಾಲೆಯಲ್ಲಿ ಇಂಗ್ಲೀಷ್ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಇವರು ತಮ್ಮ ಶಿಕ್ಷಣ ದೊಂದಿಗೆ ಕವನ ಕವಿತೆಗಳಿಗೆ ಹೆಚ್ಚು ಹೊತ್ತು ಕೊಡುತ್ತಿದ್ದರು ಇವರು ಸಣ್ಣ ಸಣ್ಣ ಸಾಲುಗಳನ್ನು ಗೀಚುತ್ತ 1000 ಕ್ಕಿಂತ ಹೆಚ್ಚು ಕವಿತೆಗಳನ್ನು ಬರೆದಿದ್ದಾರೆ, ಅದರಲ್ಲಿ 450 ಪ್ರೇಮ ಕವಿತೆಗಳು ಹಾಗೂ 250 ಜನ್ಮ ದಿನದ ಕವಿತೆಗಳು ಮೂಡಿಬಂದಿವೆ ಆದ್ದರಿಂದ ಇವರನ್ನ "ಪ್ರೇಮ ಕವಿ" ಎಂದು ಕೂಡ ಕರೆಯುತ್ತಾರೆ.ಇವರು 4 ಹಾಡುಗಳಿಗೆ ಸಾಹಿತ್ಯವನ್ನು ಬರೆದಿದ್ದಾರೆ. ಮೊದಲಿಗೆ ಯರ್ರಾಬಿರ್ರಿ ಚಿತ್ರದ ನಟ ರೂರಲ್ ಸ್ಟಾರ್ ಅಂಜನ್ ರವರಿಗೆ, 2ನೇ ಸಾಹಿತ್ಯ ಶ್ರೀ ಪ್ರತಾಪ್ ಗೌಡ ಪಾಟೀಲ್ ಮಾಜಿ ಶಾಸಕರು ವಿಧಾನಸಭಾ ಕ್ಷೇತ್ರ ಮಸ್ಕಿ ಇವರಿಗೆ ಅಭಿಮಾನವನ್ನು ಸಾಹಿತ್ಯವನ್ನು ಬರೆದು ಹಾಡಿನ ಮೂಲಕ ವ್ಯಕ್ತ ಪಡಿಸಿದ್ದಾರೆ. 3ನೇ ಗೀತೆಯನ್ನು ಕನ್ನಡ ರಾಜ್ಯೋತ್ಸವ ದ ಕುರಿತು ಬರೆದಿದ್ದಾರೆ. ಹೀಗೆ ಹಲವಾರು ಗೀತೆಗಳಿಗೆ ಸಾಹಿತ್ಯ ವನ್ನು ಬರೆದಿದ್ದಾರೆ. ಇವರು ಬರೆದಿರುವ ಕೆಲವು ಸಾಹಿತ್ಯಕ್ಕೆ "Romantic poet" ಎಂಬ ಬಿರುದು ಕೂಡ ಇವರಿಗಿದೆ. ಓದುಗಾರರಿಂದ ಇವರ ಕವನಗಳಿಗೆ ತುಂಬಾ ಪ್ರತಿಕ್ರಿಯೆಗಳು ದೊರಕುತ್ತಿವೆ. ಇವರ ಕವನಗಳು ಓದಲು ಇಂಪಾಗಿರುತ್ತವೆ. ಮನಸ್ಸಿಗೆ ಮುದವನ್ನು ನೀಡುತ್ತವೆ. ಇವರ ಸಾಹಿತ್ಯದ ಪಯಣ ಮುಗಿಲೆತ್ತರಕ್ಕೆ ಹೋಗುತಿದೆ......