ಸತ್ಯನಾರಾಯಣ.ಎ
ಡಾ||ಎ.ಸತ್ಯನಾರಾಯಣ
ಜನನ ಮತ್ತು ವಿದ್ಯಾಭ್ಯಾಸ ಕನಕಪುರದಲ್ಲಿ. ವಾಣಿಜ್ಯ ಸ್ನಾತಕೋತ್ತರ ಪದವಿ, ಪತ್ರಿಕೋದ್ಯಮದಲ್ಲಿ ಡಿಪ್ಲೊಮ ಮತ್ತು ಮಾರ್ಕೆಟಿಂಗ್ ಮ್ಯಾನೇಜ್ಮೆಂಟ್ನಲ್ಲಿ ಡಿಪ್ಲೊಮಗಳನ್ನು ಪಡೆದು ವಾಣಿಜ್ಯ ಉಪನ್ಯಾಸಕನಾಗಿ ವೃತ್ತಿ ಆರಂಭ. "ಕನ್ನಡ ಪ್ರಭ" ದಿಪತ್ರಿಕೆಯ ಕನಕಪುರದ ವರದಿಗಾರನಾಗಿ ಪ್ರವೃತ್ತಿ ಆರಂಭ. ಕನಕಪುರದ ‘ಕರ್ನಾಟಕ ಸಂಘ’ ಮತ್ತು ‘ಕನಕಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು; ಇವುಗಳ ಕಾರ್ಯದರ್ಶಿಯಾಗಿಯೂ ಸಾಹಿತ್ಯಸೇವೆ. ವೃತ್ತಿಯಿಂದ, ಕಳೆದ, ೧೯ ವರ್ಷಗಳಿಂದ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ‘ಸೆಕ್ಷನ್ ಆಫೀಸರ್’
‘ಕಂಪ್ಯೂಟರ್ ಅಪ್ಲಿಕೇಷನ್’ ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೊಮ ಪಡೆದು, ‘ಕನ್ನಡ ಕಂಪ್ಯೂಟರ್ ತಂತ್ರಜ್ಞಾನ ಕ್ಷೇತ್ರ’ದಲ್ಲಿ ಪ್ರಯೋಗಗಳ ಆರಂಭ. ೧೫ ವರ್ಷಗಳ ಕಾಲ ನಿರಂತರವಾಗಿ ಇದೇ ಪ್ರವೃತ್ತಿಯಲ್ಲಿ ತೊಡಗಿಸಿಕೊಂಡ ಕಾರಣ, ಕನ್ನಡ ಮತ್ತು ಕಂಪ್ಯೂಟರ್ ಕ್ಷೇತ್ರದಲ್ಲಿ ಪರಿಣಿತಿ. ಕಳೆದ ಎರಡು ವರ್ಷದ ಹಿಂದೆ, ‘ಕಂಪ್ಯೂಟರಿನಲ್ಲಿ ಕನ್ನಡದ ಸಮಗ್ರ ಬಳಕೆಯಲ್ಲಿನ ಸಮಸ್ಯೆಗಳು ಮತ್ತು ಪರಿಹಾರಗಳು-ಒಂದು ಅಧ್ಯಯನ’ ಪ್ರೌಢಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಿ.ಲಿಟ್. ಡಾಕ್ಟರೇಟ್ ಪದವಿ.
ಕನ್ನಡದಲ್ಲಿ ತಂತ್ರಜ್ಞಾನ ಪರಿಣಿತಿ ಇದ್ದಕಾರಣ ಕನ್ನಡ ಅಭಿವೃದ್ಧಿ ಪ್ರಾಧಿಕಾರದ "ಕನ್ನಡ ಕಂಪ್ಯೂಟರ್ ಪ್ರೊಗ್ರಾಮರ್" ಹುದ್ದೆಯಲ್ಲಿ ಪ್ರತಿನಿಯೋಜನೆ. ಜ್ಞಾನಪ್ರಸಾರದ ಆಸಕ್ತಿಯ ಕಾರಣ, ಪ್ರಸ್ತುತ, ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಡಿಪ್ಲೊಮಾ ವಿಷಯದ ಅಧ್ಯಯನ ಮಂಡಳಿಯ ಸದಸ್ಯ. ಕರ್ನಾಟಕ ಸರಕಾರದ ಸಚಿವಾಲಯ ತರಬೇತಿ ಕೇಂದ್ರದಲ್ಲಿ, ಜಿಲ್ಲಾ ತರಬೇತಿ ಕೇಂದ್ರಗಳಲ್ಲಿ ಅತಿಥಿ ಉಪನ್ಯಾಸಕ.
ಮಾಹಿತಿ ಮತ್ತು ಕಂಪ್ಯೂಟರ್ ತಂತ್ರಜ್ಞಾನ ಕ್ಷೇತ್ರದ ವಿವಿಧ ವಿಷಯಗಳಲ್ಲಿ ಕನ್ನಡದಲ್ಲಿ ತಾಂತ್ರಿಕ ಬರವಣಿಗೆ, ಅನುವಾದ, ಉಪನ್ಯಾಸ, ತರಬೇತಿಗಳನ್ನು ನಡೆಸಿರುವ ಅನುಭವ. ಶಾಲಾವಿದ್ಯಾರ್ಥಿಗಳಿಗಾಗಿದ್ದ, ಸರಕಾರದ ‘ಮಾಹಿತಿ ಸಿಂಧು’ ಕಂಪ್ಯೂಟರ್ ಶಿಕ್ಷಣದ ಪಠ್ಯಪುಸ್ತಕಗಳ ಕನ್ನಡಾನುವಾದ. ‘ಕನ್ನಡ ಗಣಕ ಪರಿಷತ್ತಿನ’ ಸ್ಥಾಪಕ ಕಾರ್ಯದರ್ಶಿಯಾಗಿ "ನುಡಿ" ಕನ್ನಡ ತಂತ್ರಾಂಶ (ಸಾಫ್ಟ್ವೇರ್) ಸಿದ್ಧಪಡಿಸಿ ಉಚಿತವಾಗಿ ನೀಡುವ ಯೋಜನೆಯು ಸಾಕಾರಗೊಳ್ಳುವಲ್ಲಿ ಮಹತ್ವದ ಪಾತ್ರ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಾಲಾ ಮಕ್ಕಳು ಕಂಪ್ಯೂಟರ್ ಪ್ರೋಗ್ರಾಮಿಂಗ್ ಕಲಿಯಲು ಇರುವ "ಲೋಗೋ" ಎಂಬ ತಂತ್ರಾಂಶದ ಕನ್ನಡೀಕರಣ ಯೋಜನೆಯಲ್ಲಿ ತಾಂತ್ರಿಕ ಅನುವಾದ ಮತ್ತು ಇತರ ಕೆಲಸಗಳಲ್ಲಿ ಮಹತ್ವದ ಪಾತ್ರ. ಈ "ಕನ್ನಡ ಲೋಗೋ ಸಾಫ್ಟ್ವೇರ್" ಭಾರತೀಯ ಭಾಷೆಗಳಲ್ಲಿಯೇ ಪ್ರಪ್ರಥಮ ಮತ್ತು ಅದ್ವಿತೀಯ. ಅದಕ್ಕಾಗಿ ಯೋಜನೆಗೆ ರಾಷ್ಟ್ರಮಟ್ಟದ "ಮಂಥನ್" ಪ್ರಶಸ್ತಿ ದೊರೆತಿದೆ. ಕನ್ನಡ ಮತ್ತು ಕಂಪ್ಯೂಟರ್ ವಿಷಯದ ಕುರಿತಾಗಿ ಹಲವಾರು ವಿಚಾರಸಂಕಿರಣಗಳಲ್ಲಿ ಪ್ರಬಂಧಗಳ ಮಂಡನೆ, ಪತ್ರಿಕೆಗಳಲ್ಲಿ ಲೇಖನಗಳ ಪ್ರಕಟಣೆ ಮತ್ತು ತಂತ್ರಾಂಶ ಬಳಕೆದಾರರಿಗಾಗಿ ಕನ್ನಡದಲ್ಲಿ ಕೈಪಿಡಿಗಳ ರಚನೆ.
ಆಧ್ಯಾತ್ಮಿಕದಲ್ಲಿಯೂ ಆಸಕ್ತಿ. ಕರ್ನಾಟಕ ಪಿರಮಿಡ್ ಧ್ಯಾನ ಪ್ರಚಾರ ಟ್ರಸ್ಟ್ನ ಟ್ರಸ್ಟೀ ಆಗಿ ಸಕ್ರಿಯ ಸೇವೆ. ಟ್ರಸ್ಟ್ ಪ್ರಕಟಿಸುವ "ಧ್ಯಾನ ಕಸ್ತೂರಿ" ಹೆಸರಿನ ಹೊಸಯುಗದ ಆಧ್ಯಾತ್ಮಿಕ ಮಾಸಪತ್ರಿಕೆಯ ಸಂಪಾದಕ. ಉಚಿತ ಧ್ಯಾನ ತರಗತಿಗಳನ್ನು ನಡೆಸಿ, ಧ್ಯಾನ ಪ್ರಚಾರದಲ್ಲಿ ಭಾಗಿ.
ಸಂಪರ್ಕ ವಿವರಗಳು: ಹೆಸರು : ಡಾ.ಎ.ಸತ್ಯನಾರಾಯಣ, ದೂರವಾಣಿ : ೯೪೪೮೮೮೩೮೭೨ ಇ-ಮೇಯ್ಲ್ : sathyaasn@gmail.com