ಸದಸ್ಯ:ಶಿವರಾಮ್ ಕಾನ್ಸೇನ್/ನನ್ನ ಪ್ರಯೋಗಪುಟ೧
ಹೋಮಿ ದಾಡಿ ಮೋತಿವಾಲಾ
ಬದಲಾಯಿಸಿಜನನ :- ೧೮ ಜೂನ್ ೧೯೫೮
ಬದಲಾಯಿಸಿಹೋಮಿ ದಾಡಿ ಮೋತಿವಾಲಾ ವರು ದೋಣಿವಿಹಾರ ಪಂದ್ಯದ ಭಾರತೀಯ ಕ್ರೀಡಾಪಟು.
ಅವರು ೧೯೯೩ ರ ವರ್ಷದ ದೊಣಿವಿಹಾರ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನಕ್ಕಾಗಿ ಅರ್ಜುನ ಪ್ರಶಸ್ತಿಯನ್ನು ಪಡೆದರು.
೧೯೯೪-೯೫ ನೇ ಸಾಲಿನ ಸಮಗ್ರ ಕ್ರೀಡೆಯಲ್ಲಿನ ಅತ್ಯುತ್ತಮ ಪ್ರದರ್ಶನಕ್ಕಾಗಿ ಪಿ.ಕೆ. ಗಾರ್ಗ್ ಅವರೊಂದಿಗೆ ಜಂಟಿಯಾಗಿ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ಪಡೆದರು.
೨೦೦೨ ರಲ್ಲಿ ದೋಣಿವಿಹಾರದಲ್ಲಿ "ಶ್ರೇಷ್ಠ ತರಬೇತಿಗಾಗಿ ದ್ರೋಣಾಚಾರ್ಯ ಪ್ರಶಸ್ತಿಯನ್ನು ಪಡೆದರು.
ಅವರು ಗಾರ್ಗ್ ಜೊತೆಯಲ್ಲಿ ಕ್ರಮವಾಗಿ ೧೯೯೦ ರಲ್ಲಿ ಬೀಜಿಂಗ್ ನಲ್ಲಿ ನಡೆದ ಮತ್ತು ೧೯೯೪ ರಲ್ಲಿ ಹಿರೋಷಿಮಾದಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಎಂಟರ್‌ಪ್ರೈಸ್ ವರ್ಗದಲ್ಲಿ ಕಂಚಿನ ಪದಕವನ್ನು ಗೆದ್ದರು.
ಅವರುಗಳು ೧೯೯೩ ರಲ್ಲಿ ಅದೇ ಶ್ರೇಣಿಯಲ್ಲಿ ವಿಶ್ವ ಚಾಂಪಿಯನ್ ಆಗಿದ್ದರು.
ಮೋತಿವಾಲಾ ಅವರು ಭಾರತೀಯ ನೌಕಾಪಡೆಯಲ್ಲಿ ಕಮಾಂಡರ್ ಶ್ರೇಣಿಯ ಹುದ್ದೆಯನ್ನು ಹೊಂದಿದ್ದಾರೆ. ಆ ಕ್ಷೇತ್ರದಲ್ಲಿನ ಸಾಹಸಕ್ಕಾಗಿ ಅವರು ೧೯೮೩ ರಲ್ಲಿ ಶೌರ್ಯಚಕ್ರ ಪ್ರಶಸ್ತಿಯನ್ನು ಪಡೆದರು.