ಸದಸ್ಯ:ವೆಂಕಟೇಶ ತರೀಕೆರೆ/sandbox
ಸಾವಯವ ರಸಾಯನಶಾಸ್ತ್ರದಲ್ಲಿ ಹೈಡ್ರೋಕಾರ್ಬನ್ ಎಂದರೆ ಕೇವಲ ಹೈಡ್ರೋಜನ್ ಮತ್ತು ಕಾರ್ಬನ್‍ಗಳನ್ನು ಒಳಗೊಂಡ ಒಂದು ಸಂಯುಕ್ತ ವಸ್ತು[೧]. ಆಲ್‍ಕೇನ್, ಆಲ್‍ಕೀನ್, ಆಲ್‍ಕೈನ್ ಮತ್ತು ಆರೋಮಾಟಿಕ್ ವಿಧಧ ಸಂಯುಕ್ತಗಳು ಈ ಗುಂಪಿಗೆ ಸೇರುತ್ತವೆ. ಇವುಗಳು ಭೂಮಿಯಲ್ಲಿ ಪ್ರಮುಖವಾಗಿ ಕಚ್ಚಾತೈಲದ ರೂಪದಲ್ಲಿ ದೊರಕುತ್ತವೆ. ಕಾರ್ಬನ್ನಿಗಿರುವ ಕ್ಯಾಟಿನೇಷನ್ ಎಂಬ ವಿಶೇಷ ಗುಣದಿಂದಾಗಿ ಅನಿಯಮಿತ ಸಂಖ್ಯೆಯ ಹೈಡ್ರೋಕಾರ್ಬನ್‍ಗಳು ನೈಸರ್ಗಿಕವಾಗಿ ಹಾಗು ಕೃತಕವಾಗಿ ತಯಾರಿಸಲು ಸಾಧ್ಯವಾಗಿದೆ.
ಹೈಡ್ರೋಕಾರ್ಬನ್ ವಿಧಗಳು
ಬದಲಾಯಿಸಿ- ಸ್ಯಾಚುರೇಟಡ್ ಹೈಡ್ರೋಕಾರ್ಬನ್‍ಗಳು (ಆಲ್‍ಕೇನ್‌ಗಳು) ಅತ್ಯಂತ ಸರಳ ಹೈಡ್ರೋಕಾರ್ಬನ್‍ಗಳಾಗಿದ್ದು, ಇವುಗಳಲ್ಲಿ ಕಾರ್ಬನ್‍ಗಳ ನಡುವೆ ಕೇವಲ ಒಂದು ಬಾಂಡ್ ಇರುತ್ತದೆ. ಇವುಗಳ ಸಾಮಾನ್ಯ ಸೂತ್ರ CnH2n+2 ಆಗಿರುತ್ತದೆ[೨]. ಪೆಟ್ರೋಲಿಯಂ ಇಂಧನಗಳಲ್ಲಿ ಪ್ರಮುಖವಾಗಿ ಕಾಣಸಿಗುವ ಆಲ್‍ಕೇನ್‌ಗಳು ಶಕ್ತಿಯ ಪ್ರಮುಖ ಆಕರಗಳಾಗಿವೆ. ಇವುಗಳು ರಚನೆಯಲ್ಲಿ ನೇರ ಅಥವಾ ಟಿಸಿಲಾದ ಕಾರ್ಬನ್ ಸರಪಳಿಯನ್ನು ಹೊಂದಿರುತ್ತವೆ.
- ಅನ್‍ಸ್ಯಾಚುರೇಟಡ್ ಹೈಡ್ರೋಕಾರ್ಬನ್‍ಗಳಲ್ಲಿ ಕಾರ್ಬನ್‍ಗಳ ನಡುವೆ ಎರಡು ಅಥವಾ ಮೂರು ಬಾಂಡ್‍ಗಳಿರುತ್ತವೆ. ಎರಡು ಬಾಂಡ್‍ಗಳನ್ನು ಹೊಂದಿರುವ ಹೈಡ್ರೋಕಾರ್ಬನ್‍ಗಳನ್ನು ಆಲ್‍ಕೀನ್ಗಳೆಂದೂ, ಮೂರು ಬಾಂಡ್‍ಗಳನ್ನು ಹೊಂದಿರುವ ಹೈಡ್ರೋಕಾರ್ಬನ್‍ಗಳನ್ನು ಆಲ್‍ಕೈನ್‍ಗಳೆಂದೂ ಕರೆಯಲಾಗುತ್ತದೆ. ಆಲ್‍ಕೀನ್‍ಗಳ ಸಾಮಾನ್ಯ ಸೂತ್ರ CnH2n [೩] ಆದರೆ, ಆಲ್‍ಕೈನ್‍ಗಳ ಸಾಮಾನ್ಯ ಸೂತ್ರ CnH2n-2 [೪] ಆಗಿದೆ.
- ಸೈಕ್ಲೋಆಲ್‍ಕೇನ್‌ಗಳಲ್ಲಿ ಹೈಡ್ರೋಜನ್‍ಗಳಿಗೆ ಬಾಂಡ್ ಆಗಿರುವ ಕಾರ್ಬನ್ನಿನ ಒಂದಾದರೂ ಚಕ್ರವಿರಬೇಕು.
- ಆರೋಮಾಟಿಕ್ ಹೈಡ್ರೋಕಾರ್ಬನ್‍ಗಳಲ್ಲಿ ಒಂದಾದರೂ ಆರೋಮಾಟಿಕ್ ಚಕ್ರವಿರಬೇಕು.
ಸಾಮಾನ್ಯ ಹೈಡ್ರೋಕಾರ್ಬನ್‍ಗಳು
ಬದಲಾಯಿಸಿಶಿರೋಲೇಖ | ಶಿರೋಲೇಖ | ಶಿರೋಲೇಖ | ಶಿರೋಲೇಖ |
---|---|---|---|
ಕಾರ್ಬನ್‍ಗಳ ಸಂಖ್ಯೆ | ಆಲ್‍ಕೇನ್ | ಆಲ್‍ಕೀನ್ | ಆಲ್‍ಕೈನ್‍ಗಳು |
೧ | ಮೀಥೇನ್ | - | - |
೨ | ಈಥೇನ್ | ಈಥೀನ್ | ಈಥೈನ್ |
೩ | ಪ್ರೋಪೇನ್ | ಪ್ರೋಪೀನ್ | ಪ್ರೊಪೈನ್ |
೪ | ಬ್ಯೂಟೇನ್ | ಬ್ಯೂಟೀನ್ | ಬ್ಯೂಟೈನ್ |
೫ | ಪೆಂಟೇನ್ | ಪೆಂಟೀನ್ | ಪೆಂಟೈನ್ |
೬ | ಹೆಕ್ಸೇನ್ | ಹೆಕ್ಸೀನ್ | ಹೆಕ್ಸೈನ್ |
೭ | ಹೆಪ್ಟೇನ್ | ಹೆಪ್ಟೀನ್ | ಹೆಪ್ಟೈನ್ |
೮ | ಆಕ್ಟೇನ್ | ಆಕ್ಟೀನ್ | ಆಕ್ಟೈನ್ |