ಯಾಶಿಕ ತಿಮ್ಮಯ್ಯ
ಹೆಸರು : ಯಾಶಿಕ ತಿಮ್ಮಯ್ಯ
ಜನನ : 24 ಆಗಸ್ಟ್ 1996
ಜನ್ಮ ಸ್ಥಳ : ಮಡಿಕೇರಿ
ತಂದೆ : ತಿಮ್ಮಯ್ಯ ಪಿ. ಎಂ
ತಾಯಿ : ಕುಸುಮ ಪಿ. ಟಿ
ನಾನು ನನ್ನ ಹತ್ತನೇ ತರಗತಿಯ ತನಕವಿರುವ ವಿದ್ಯಾಭ್ಯಾಸವನ್ನು ಮಡಿಕೇರಿ ತಾಲ್ಲೂಕಿನಲ್ಲಿರುವ ಸಂತ ಜೋಸೆಫ್ ಪ್ರೌಢಶಾಲೆಯಲ್ಲಿ ಮುಗಿಸಿದೆ. ನಾನು ಏಳನೇ ತರಗತಿ ಹಾಗೂ ಹತ್ತನೇ ತರಗತಿಯಲ್ಲಿ ಶಾಲಾ ನಾಯಕಿಯಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದೇನೆ. ನಾನು ಶಾಲೆಯಲ್ಲಿ ಹಲವು ಸೆಮಿನಾರಗಳಲ್ಲಿ ಭಾಗವಹಿಸಿದ್ದೇನೆ. ನಾನು 78% ಪಡೆದು ಹತ್ತನೇ ತರಗತಿಯಲ್ಲಿ ಉತ್ತೀರ್ಣಳಾದೆ. ಅದರ ನಂತರ ನಾನು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿಗೆ ಪ್ರಥಮ ಪಿಯುಸಿಗೆ ಸೇರಿದೆ. ನಾನು 89.45% ಪಡೆದು ನನ್ನ ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣಳಾದೆ. ಅದರ ನಂತರ ನಾನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪ್ರಥಮ ಬಿ.ಕಾಂಮ್ ಮಾಡಲು ಸೇರಿದೆ.
ನನಗೆ ಓದುವ ಹವ್ಯಾಸ ಇದೆ. ನನಗೆ ಡ್ಯಾನ್ ಬ್ರೌನ್ ಮತ್ತು ಅಮಿಶ್ ರವರ ಪುಸ್ತಕಗಳು ಪ್ರಿಯಕರ. ನಾನು ಹೊಲಿವುಡ್ ಸಿನಿಮಾಗಳನ್ನು ಇಷ್ಟ ಪಡುತ್ತೇನೆ. ನನಗೆ ಕೊರಿಯಾ ದೇಶದ ಬಗ್ಗೆ ಕಲಿಯಲು ಆಸಕ್ತಿ ಇದೆ.