ಮಚ್ಚೇಂದ್ರ ಪಿ.ಅಣಕಲ್. : ಇವರು ಬೀದರ ಜಿಲ್ಲೆಯ ಪ್ರಮುಖ ಕತೆಗಾರರಲ್ಲಿ ಒಬ್ಬರಾಗಿದ್ದಾರೆ. ಸದ್ಯ ಯಾದಗಿರಿ ಜಿಲ್ಲೆಯ ಮಾವಿನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದು.ಇವರು ಬಾಲ್ಯದಿಂದಲೂ ಕತೆ ಕವನ ಲಲಿತ ಪ್ರಬಂಧ ಲೇಖನಗಳನ್ನು ಬರೆಯುತ್ತಿದ್ದಾರೆ.

2010 ರಲ್ಲಿ ಅಮೆರಿಕಾದಲ್ಲಿ ನಡೆದ 6ನೇ ಅಕ್ಕ ವಿಶ್ವ ಕನ್ನಡ ಕಥಾ ಸ್ಪರ್ಧೆಯಲ್ಲಿ ಇವರ 'ಡಾಂಬಾರು ದಂಧೆ' ಕತೆ ಆಯ್ಕೆಯಾಗಿ 'ದೀಪಾತೊರಿದೆಡೆಗೆ'ಎಂಬ ಬಹುಮಾನಿತ ಕಥಾಸಂಕಲನದಲ್ಲಿ ಪ್ರಕಟವಾಗಿದೆ.


2002 ರಲ್ಲಿ ಇವರ 'ಲಾಟರಿ'. ಕತೆ ಸಂಯುಕ್ತ ಕರ್ನಾಟಕ ಸಾಪ್ತಾಹಿಕ ಸೌರಭದ ತಿಂಗಳ ಕಥಾ ಸ್ಪರ್ಧೆಯಲ್ಲಿ ಆಯ್ಕೆಯಾಗಿ ಪ್ರಕಟವಾಗಿದೆ. 

2012 ರಲ್ಲಿ ಬೆಳಗಾವಿಯಲ್ಲಿ ನಡೆದ 4ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಇವರ 'ಮೊದಲ ಗಿರಾಕಿ' ಕಥಾ ಸಂಕಲನಕ್ಕೆ ಉತ್ತಮ ಕಥಾ ಪುಸ್ತಕ ಪ್ರಶಸ್ತಿಯು ಲಭಿಸಿದೆ.


2007 ರಲ್ಲಿ ಪತ್ರಕರ್ತ/ಸಾಹಿತಿ ಮಾಣಿಕ್ ಭುರೆಯವರ ಪ್ರಾಯೋಜಕತ್ವದಲ್ಲಿ ಸ್ಥಾಪಿತವಾದ 'ರಾಜ್ಯ ಮಟ್ಟದ ಉರಿಲಿಂಗ ಪೆದ್ದಿ ಪ್ರಶಸ್ತಿಯು ಬಸವಕಲ್ಯಾಣ ತಾಲೂಕಿನ ಬೇಲೂರಿನ ಉರಿಲಿಂಗ ಪೆದ್ದಿ ಮಠದ ಪೀಠಾಧಿಪತಿಗಳಾದ ಪೂಜ್ಯ.ಶ್ರೀ.ಪಂಚಾಕ್ಷರಿ ಮಹಾಸ್ವಾಮಿಗಳು ಇವರಿಗೆ ಮೊದಲನೆಯ 'ಉರಿಲಿಂಗ ಪೆದ್ದಿ ಪ್ರಶಸ್ತಿಯು ನೀಡಿ ಗೌರವಿಸಿದ್ದಾರೆ.


2020 ರ ಆಗಸ್ಟ್ ತಿಂಗಳಲ್ಲಿ 'ಬುಕ್ ಬ್ರಹ್ಮ' ಜಾಲತಾಣದವರು ಏರ್ಪಡಿಸಿದ ರಾಜ್ಯ ಮಟ್ಟದ 'ಜನ ಮೆಚ್ಚಿದ ಪ್ರಬಂಧ- ಲೇಖನ ಸ್ಪರ್ಧೆಯಲ್ಲಿ ಇವರ 'ಗೌರ್ಮೇಂಟ್ ಸರ್ವೇಂಟನ ಹೆಂಡ್ತಿ'ಎಂಬ ಲಲಿತ ಪ್ರಬಂಧಕ್ಕೆ ದ್ವಿತೀಯ ಬಹುಮಾನ ಲಭಿಸಿದೆ.

ಎಂ.ಎ.ಎಂ.ಎಡ್.ಪತ್ರಿಕೋದ್ಯಮ ಸ್ನಾತಕೋತ್ತರ ಪದವೀಧರರಾದ ಇವರು 2010 ರಿಂದ 2015 ರ ವರೆಗೆ ಸಂಯುಕ್ತ ಕರ್ನಾಟಕ ದಿನ ಪತ್ರಿಕೆಯ ಮುಡಬಿ ವರದಿಗಾರರಾಗಿ ಸೇವೆ ಸಲ್ಲಿಸಿ 15 ವರ್ಷ ಪೋಟೋಗ್ರಾಫರಾಗಿ ಕಾರ್ಯ ನಿರ್ವಹಿಸಿದ್ದಾರೆ.
 ಉತ್ತಮ ಯುವ ದಲಿತ,ಬಂಡಾಯ ಬರಹಗಾರರ ಹೊಸ ತಲೆಮಾರಿನ ಲೇಖಕರಲ್ಲಿ ಒಬ್ಬರಾಗಿದ್ದಾರೆ.
 ಇವರ ಕತೆ,ಕವನ, ಲೇಖನ,ನಾಟಕ,ಲಲಿತ ಪ್ರಬಂಧ ಮೊದಲಾದ ಬರಹಗಳು ನಾಡಿನ ಪ್ರಮುಖ ಪತ್ರಿಕೆಗಳಾದ ಸಂಯುಕ್ತ ಕರ್ನಾಟಕ, ಕರ್ಮವೀರ, ಉದಯವಾಣಿ, ತರಂಗ, ತುಷಾರ, ಜನಪದ,  ಮೊದಲಾದ ಸ್ಥಳೀಯ ಪತ್ರಿಕೆಗಳಲ್ಲಿ ಹಾಗೂ ಆಕಾಶವಾಣಿ, ದೂರದರ್ಶನಗಳಲ್ಲಿಯೂ ಪ್ರಕಟ,ಪ್ರಸಾರವಾಗಿವೆ. 

ಕಲಬುರಗಿ ಆಕಾಶವಾಣಿಯಿಂದ ಇವರ ಕೆಲ ಕತೆಗಳು ನಾಟಕ, ರೂಪಕಗಳಾಗಿ ಪ್ರಸಾರವಾಗಿವೆ.

ಸದ್ಯ ಬೆಳಗಾವಿಯ 'ಹಸಿರು ಕ್ರಾಂತಿ' ದಿನ ಪತ್ರಿಕೆಯಲ್ಲಿ ಇವರು ಬರೆದ 'ಬೀದರ ಜಿಲ್ಲೆಯ ಸಾಹಿತಿಗಳ ಪರಿಚಯ' ಅಂಕಣ ಬರಹವಾಗಿ ಪ್ರಕಟವಾಗುತ್ತಿದೆ.


ಕೃತಿಗಳು :

1 ಬದುಕುತ್ತೇನೆ ಕತ್ತಲೆ ಮೊಟ್ಟೆಯೊಡೆದು

  (ಕವನ ಸಂಕಲನ)- 2000

2 ಜ್ಞಾನ ಸೂರ್ಯ (ಸಂಪಾದನೆ) -2000

3 ಲಾಟರಿ (ಕಥಾ ಸಂಕಲನ) -2009

4 ಮೊದಲ ಗಿರಾಕಿ (ಕಥಾ ಸಂಕಲನ)- 2011

5 ಜನಪದ ವೈದ್ಯರ ಕೈಪಿಡಿ (ಸಂಪಾದನೆ)- 2012

6 ಹಗಲುಗಳ್ಳರು (ಕಥಾ ಸಂಕಲನ)- 2019

7. ಬೀದರ ಜಿಲ್ಲಾ ಸಾಹಿತಿಗಳ ಪರಿಚಯ- 2021

   ಇವು ಇವರ ಪ್ರಕಟಿತ ಕೃತಿಗಳಾಗಿವೆ.


ಗೌರ್ಮೇಂಟ ಸರ್ವೇಂಟನ ಹೆಂಡ್ತಿ (ಲಲಿತ ಪ್ರಬಂಧ)
ಇವಾ ನಮ್ಮವನಾಗಲಿಲ್ಲ. (ಕವನ ಸಂಕಲನ)
ಬೀದರ ಜಿಲ್ಲೆಯ ಬಹುಮಾನಿತ ಕತೆಗಳು (ಸಂಪಾದನೆ)

ಇವು ಸದ್ಯ ಮುದ್ರಣದ ಹಂತದಲ್ಲಿವೆ.