ಸಂಗೊಳ್ಳಿ ಸತ್ಯಾಗ್ರಹ

ಭಾರತೀಯ ಸ್ವಾತಂತ್ರ್ಯ ಚಳುವಳಿಯ ಪ್ರಮುಖ ಸತ್ಯಾಗ್ರಹ ಸಂಗೊಳ್ಳಿ ಸತ್ಯಾಗ್ರಹ

   1830 ರ ಸಂಗೊಳ್ಳಿ ಸತ್ಯಾಗ್ರಹವು ಬ್ರಿಟೀಷ್‌ ಭಾರತದ ಧಾರವಾಡ ಜಿಲ್ಲೆಯ ಸಂಪಗಾವ ತಾಲೂಕಿನ ರೈತರ ಹಿತಾಸಕ್ತಿಗಳ ರಕ್ಷಣೆಗೆ ನಡೆದ ಸ

ತ್ಯಾಗ್ರಹವಾಗಿದ್ದು, ಬ್ರಿಟೀಷ್‌ ಸರ್ಕಾರದ ಧೋರಣೆಗಳ ವಿರುದ್ಧ ಹಮ್ಮಿಕೊಂಡ ದೊಡ್ಡ ಚಳುವಳಿಯಾಗಿದೆ ಹಾಗೂ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಚರಿತ್ರೆಯಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿದೆ.

ಸಂಗೊಳ್ಳಿ ಸತ್ಯಾಗ್ರಹ Sangolli Rayann1830.jpg ಸಂಗೊಳ್ಳಿ ಸತ್ಯಾಗ್ರಹದ ಸಂದರ್ಭ ಸಂಗೊಳ್ಳಿ ರಾಯಣ್ಣ ಮತ್ತು ಸಂಗಡಿಗರು ದಿನಾಂಕ 13 ಜನೇವರಿ - 1838 ಸ್ಥಳ ಸಂಗೊಳ್ಳಿ ಸಂಪಗಾವಿ ತಾಲೂಕಿನ ಧಾರವಾಡ ಜಿಲ್ಲೆ, ಬ್ರಿಟೀಷ ಈಸ್ಟ್ ಇಂಡಿಯಾ Organised by ಸಂಗೊಳ್ಳಿ ರಾಯಣ್ಣ,ಚನ್ನಬಸಪ್ಪ ಮತ್ತು ಗಜವೀರ ಮತ್ತಿತರರು ನಾಯಕರು ಸಂಪಾದಿಸಿ ಸಂಗೊಳ್ಳಿ ರಾಯಣ್ಣ ಚಳುವಳಿಯ ನಾಯಕತ್ವವನ್ನು ವಹಿಸಿದ್ದರು ಹಾಗೂ ಅವರೊಂದಿಗೆ ಬಿಚ್ಚುಗತ್ತಿ ಚನ್ನಬಸಪ್ಪ ಪ್ರಮುಖ ನಾಯಕರಾಗಿದ್ದರು. ಉಳಿದಂತೆ ವಡ್ಡರ ಯಲ್ಲಣ್ಣ,ರಾನೋಜಿ ಕೊಂಡ ನೇಮಣ್ಣ ಅಪ್ಪೋಣಿ, ಕೆಂಚಮ್ಮ ಮತ್ತು ಭಂಡಾರಿ ಬಾಪು

ಹಿನ್ನೆಲ ಬರ, ಕ್ಷಾಮ ಮತ್ತು ಬೆಲೆ ಏರಿಕೆಗಳಿಂದ‌ ಸಂದರ್ಭದಲ್ಲಿ ಇನಾಂ ಕಾಯ್ದೆ ಜಾರಿಗೆ ತರಲಾಯಿತು ಇದರಿಂದ ಸಂಗೊಳ್ಳಿ ಸುತ್ತಮುತ್ತಲಿನ ರೈತರು ಆಗಾಗಲೇ ಬೆಳೆ ನಷ್ಟವನ್ನು ಅನುಭವಿಸುತ್ತಾ ಕಂಗಾಲಾಗಿದ್ದರು.ಕಾರಣ ಸಂಗೊಳ್ಳಿ ಮತ್ತು ಕಿತ್ತೂರು ನಾಡಿನ ರೈತರು ಇನಾಂ ಕಾಯ್ದೆ ಮತ್ತು ಕಂದಾಯ ಹೆಚ್ಚಳ ವಿರೋಧಿಸಿ ಹೋರಾಟ ಆರಂಭಿಸಿದ್ದರು,ಬ್ರಿಟೀಷ್‌ ಸರ್ಕಾರದ ಮೊರೆ ಹೋದರು.ಬಾಂಬೆ ಸರ್ಕಾರಕ್ಕೂ ಮನವರಿಕೆ ಮಾಡಿದರೂ ತೆರಿಗೆ ಪಾವತಿಸದಿದ್ದಲ್ಲಿ ರೈತರ ಆಸ್ತಿಗಳನ್ನು ಜಪ್ತಿ ಮಾಡುವುದಾಗಿ ಹಾಗೂ ಅವರನ್ನು ಬಂಧಿಸುವುದಾಗಿಯೂ ಸರ್ಕಾರ ಬೆದರಿಕೆ ಹಾಕಿತು.[೧]

ಹೋರಾಟದ ಗತಿ ಸಂಪಾದಿಸಿ ಸರ್ಕಾರದ ಹೊಸ ಭೂ ಕಂದಾಯ ನಿಯಮದಂತೆ ಈಗಿರುವ ಕಂದಾಯವನ್ನು ಹೆಚ್ಚು ಮಾಡಿದ್ದಲ್ಲದೆ ತೆರಿಗೆ ರಹಿತ ಇನಾಂ ಭೂಮಿಗಳಿಗೆ ತೆರಿಗೆ ವಿಧಿಸುವ ಮೂಲಕ ರೈತರ ಮೇಲೆ ದಬ್ಬಾಳಿಕೆ ನಡೆಸಿತು.ಕಿತ್ತೂರು ನಾಡಿನ ರೈತರ ಕಂದಾಯ ಅಧಿಕವಾಗಿದ್ದು.ಸಂಗೊಳ್ಳಿ ರೈತರು ಪ್ರತಿಭಟಿಸುವ ಪೂರ್ವದಲ್ಲಿ ಕಂದಾಯ ವಿನಾಯಿತಿ ಕೋರಿ ಹಲವಾರು ಅರ್ಜಿಗಳನ್ನು ಮುಂಬೈ ಸರ್ಕಾರಕ್ಕೆ ಬರೆದರೂ ಯಾವುದೇ ಫಲ ಸಿಗಲಿಲ್ಲ. ಕ್ರಮೇಣ ಅವರು ಅವರ ಸಹಚರರು ಮತ್ತು ರೈತರೊಡನೆ ಸಮಾಲೋಚಿಸಿ ಸತ್ಯಾಗ್ರಹಕ್ಕೆ ಆಗ್ರಹಿಸಿದರು. ಗ್ರಾಮಾಂತರ ಪ್ರದೇಶಗಳಲ್ಲಿ ಸಂಚರಿಸಿ, ಚಳುವಳಿಯನ್ನು ಇನ್ನಷ್ಟು ವಿಸ್ತರಿಸಿದರು.[೩] ಸಂಗೊಳ್ಳಿ ರಾಯಣ್ಣನ ಯಾವುದೇ ಬೆದರಿಕೆಗೊಳಪಡದೆ ನಯಾಪೈಸೆಯನ್ನೂ ತೆರಿಗೆಯಾಗಿ ಪಾವತಿಸದಂತೆ ರೈತರಲ್ಲಿ ಮನವಿ ಮಾಡಿಕೊಂಡರು.ಸಂಗೊಳ್ಳಿ ರೈತರಿಂದ ಬ್ರಿಟೀಷ್‌ ಬೊಕ್ಕಸಕ್ಕೆ ಒಂದು ನಾಣ್ಯವೂ ಸಂದಾಯವಾಗಲಿಲ್ಲ.

ಪರಿಣಾಮಗಳು ಚಳುವಳಿ ವಿಸ್ತರಿಸುತ್ತಿದ್ದಂತೆ ಸರ್ಕಾರವು ಸಂಗೊಳ್ಳಿ ಹಾಗೂ ಸುತ್ತಮುತ್ತಲಿನ ರೈತರು ಜಮೀನುಗಳಿನ್ನು ಮುಟ್ಟುಗೋಲು ಹಾಕಿಕೊಳ್ಳಲು ಮುಂದಾಯಿತು.ಇದರಿಂದ ಕಿತ್ತೂರು ನಾಡಿನ ಶೇತಸನದಿಗಳು ಮತ್ತು ಸಾಮಾನ್ಯ ರೈತರು ಮಹಿಳೆಯರು ಹಿಂಸಾತ್ಮಕ ಹೋರಾಟಕ್ಕೆ ಮುಂದಾದರು ಈ ಹೋರಾಟ ಭಯಂಕರವಾದ ರಕ್ತಪಾತಕ್ಕೆ ಕಾರಣವಾಯಿತು ಸರ್ಕಾರಿ ಕಚೇರಿಗಳಿಗೆ ಬೆಂಕಿ ಸೇನಾ ಠಾಣೆಗಳು ಮೇಲೆ ದಾಳಿ ಅಸಹಕಾರ ಚಳವಳಿ ಕಾನೂನು ಭಂಗ ಚಳವಳಿ ಮುಂತಾದ ಹೋರಾಟಗಳಿಗೆ ಮುನ್ನುಡಿ ಬರೆಯಿತು ಸಂಗೊಳ್ಳಿ ಸತ್ಯಾಗ್ರಹ ಮುಂದೆ ಭಾರತ ಸ್ವಾತಂತ್ರ್ಯ ಸಂಗ್ರಾಮದ ಚರಿತ್ರೆಯಲ್ಲಿ ಮಹತ್ವದ ಮೈಲುಗಲ್ಲಿಗೆ ನಾಂದಿ ಹಾಡಿದೆ