ಸದಸ್ಯ:ಪೂರ್ಣಿಮಾ ಶೆಟ್ಟಿಗಾರ್/ನನ್ನ ಪ್ರಯೋಗಪುಟ೫

ತರುಣ್ ಚಂದ್ರ
Born (1983-04-27) ೨೭ ಏಪ್ರಿಲ್ ೧೯೮೩ (ವಯಸ್ಸು ೪೧)
Nationalityಭಾರತೀಯ
Occupationನಟ
Years active೨೦೦೩–ಪ್ರಸ್ತುತ

ತರುಣ್ ಚಂದ್ರ (ಜನನ ೨೭ ಏಪ್ರಿಲ್ ೧೯೮೩) []ಕನ್ನಡ ಚಲನಚಿತ್ರೋದ್ಯಮದಲ್ಲಿ ನೆಲೆಗೊಂಡಿರುವ ಭಾರತೀಯ ನಟ. ಅವರು ಬಹುತಾರಾಂಗಣದ ಖುಷಿ (೨೦೦೩) ಚಿತ್ರದ ಮೂಲಕ ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದರು ಮತ್ತು ನಂತರ ಅವರು ಗೆಳೆಯ (೨೦೦೭), ಲವ್ ಗುರು (೨೦೦೯) ಮತ್ತು ಗಾನ ಬಜಾನಾ (೨೦೧೦)ದಂತಹ ಹಲವಾರು ಚಿತ್ರಗಳಲ್ಲಿ ನಟಿಸಿದ್ದರು.

ಆರಂಭಿಕ ಜೀವನ ಮತ್ತು ವೃತ್ತಿಜೀವನ

ಬದಲಾಯಿಸಿ

ತರುಣ್ ರವರು ಹುಟ್ಟಿದ್ದು ಬೆಂಗಳೂರಿನಲ್ಲಿ. ಅವರು ಬೆಂಗಳೂರಿನ ಎಮ್ ಇ ಎಸ್ ಕಾಲೇಜಿನಲ್ಲಿ ವಾಣಿಜ್ಯ ಪದವಿಯನ್ನು ಪಡೆದರು.[]ಅವರು ಚಲನಚಿತ್ರಗಳಿಗೆ ಪ್ರವೇಶಿಸುವ ಮೊದಲು ಕಿಶೋರ್ ನಮಿತ್ ಕಪೂರ್ ಆಕ್ಟಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ಮೂರು ತಿಂಗಳ ನಟನಾ ಕೋರ್ಸ್‌ನ್ನು ಮಾಡಿದ್ದರು. ಅವರು ಮೊದಲು ೨೦೦೩ರಲ್ಲಿ ಬಿಡುಗಡೆಯಾದ ಖುಷಿ ಚಿತ್ರದಲ್ಲಿ ನಾಯಕ ನಟರಲ್ಲಿ ಒಬ್ಬರಾಗಿ ಕಾಣಿಸಿಕೊಂಡರು. ಅವರು ಎರಡು ವರ್ಷಗಳ ವಿಳಂಬದ ನಂತರ ೨೦೦೬ರಲ್ಲಿ ಬಿಡುಗಡೆಯಾದ ವಲ್ಲಿದರಿ ವಯಸು ಪದಹರೆ ಎಂಬ ತೆಲುಗು ಚಲನಚಿತ್ರದಲ್ಲಿ ನಟಿಸಿದ್ದರು.[] 'ಗೆಳೆಯ' ಚಿತ್ರದ ಯಶಸ್ವಿ ಓಟದ ನಂತರ, ಪರಿಚಯ ಚಿತ್ರಕ್ಕಾಗಿ ಮತ್ತು ನಿರ್ದೇಶಕ ಪ್ರಶಾಂತ್ ಅವರ ಲವ್ ಗುರು ಚಿತ್ರಕ್ಕಾಗಿ ಅವರನ್ನು ಸಂಪರ್ಕಿಸಿದರು, ಇದು ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಜ್ಯ ಪ್ರಶಸ್ತಿಯನ್ನು ಗೆದ್ದುಕೊಂಡಿತು.[]ಅವರ ಕೊನೆಯ ಚಿತ್ರವು ಕನ್ನಡ ಚಲನಚಿತ್ರ ಗೋವಾದಲ್ಲಿ ಬಂದಿತು. ನವೆಂಬರ್ ೨೦೨೧ರಲ್ಲಿ, ಅವರು ಆನಂದ್ ಮಿಶ್ರಾ ನಿರ್ದೇಶಿಸಿದ ಅಧಿಸಾಮಾನ್ಯ ರೋಮಾಂಚಕ ಚಿತ್ರ ಟ್ರಿನ್ ಟ್ರಿನ್‌ಗೆ ಸಹಿ ಹಾಕಿದ್ದರು ಮತ್ತು ಅವರು ಈ ಚಿತ್ರದಲ್ಲಿ ದಿಗಂತ್ ಜೊತೆಗೆ ನಟಿಸಲಿದ್ದರು.[]

ಚಿತ್ರಕಥೆ

ಬದಲಾಯಿಸಿ
ವರ್ಷ ಚಲನಚಿತ್ರ ಪಾತ್ರ ಟಿಪ್ಪಣಿ
೨೦೦೩ ಖುಷಿ ಅಜಯ್
೨೦೦೬ ವಲ್ಲಿದರಿ ವಯಸು ಪದಹರೆ ವಂಶೀ ತೆಲಗು ಚಲನಚಿತ್ರ
೨೦೦೭ ಗೆಳೆಯ ವಿಶ್ವ
ಈ ಬಂಧನ ಕಪಿಲ್
೨೦೦೮ ಹನಿ ಹನಿ ರಾಹುಲ್
೨೦೦೯ ಲವ್ ಗುರು ಪ್ರಥಮ್
ಪರಿಚಯ ಜಯಂತ್
ಸೀನ ಸೀನ
೨೦೧೦ ಗಾನ ಬಜಾನ ಕ್ರಿಶ್
೨೦೧೧ ನಾನಲ್ಲ ಸಿದ್ದಾರ್ಥ []
ಅಚ್ಚು ಮೆಚ್ಚು ವಿಜಯ್
೨೦೧೨ ಅದ್ದೂರಿ ತರುಣ್ ಅತಿಥಿ ಆಗಮನ
ಒಂದು ಕ್ಷಣದಲ್ಲಿ ಶ್ಯಾಮ
ಸ್ನೇಹಿತರು
೨೦೧೩ ಪದೇ ಪದೇ ಸನ್ನಿ
೨೦೧೪ ಘರ್ಷಣೆ ತಾನೇ ವಿಶೇಷ ಪಾತ್ರ
೨೦೧೫ ಗೋವ ರಾಮ್ ರಾಜ್

ಉಲ್ಲೇಖಗಳು

ಬದಲಾಯಿಸಿ
  1. "Sandalwood Movie Actor Tarun Chandra Biography, News, Photos, Videos". nettv4u (in ಇಂಗ್ಲಿಷ್). Retrieved 30 November 2021.
  2. "The young, new faces of Kannada cinema!". The Times of India. 17 March 2003.
  3. "Love story with a twist". The Hindu. 29 June 2006.
  4. "Gaana Bajaana has a wonderful tech team: Taarun Chandrra". Archived from the original on 16 August 2011. Retrieved 19 October 2011.
  5. Sharadhaa, A. (30 November 2021). "Diganth, Tarun Chandra to star in Anand Mishra's upcoming paranormal thriller". Cinema Express (in ಇಂಗ್ಲಿಷ್). Retrieved 30 November 2021.
  6. "Tarun Chandra takes the action route". The Times of India. 16 January 2017.