ಸಾಹಿತಿಗಳ ಪರಿಚಯ


      ಪುಟ್ಟಕವಿ ಪುಟ್ಟಮಾದಯ್ಯ

ಜನನ : ಮಾರ್ಚ್ 0೨, ೧೯೮೧

ಹರಿಲಾಪುರ, ಪಿರಿಯಾಪಟ್ಟಣ ತಾಲ್ಲೂಕು, ಮೈಸೂರು ಜಿಲ್ಲೆ


ತಂದೆ : ದೇವಯ್ಯ ತಾಯಿ : ಕಾಳಮ್ಮ


ಕಾವ್ಯನಾಮ : ಪುಟ್ಟಕವಿ


ವೃತ್ತಿ  : ಉಪನ್ಯಾಸಕರು

           ಕವಿ, ಲೇಖಕರು 


ರಾಷ್ಟ್ರೀಯತೆ : ಭಾರತೀಯ


ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆ: ಮೈಸೂರು ವಿಶ್ವವಿದ್ಯಾನಿಲಯ


ಕಾಲ : 21ನೆಯ ಶತಮಾನ


ಪ್ರಕಾರ/ಶೈಲಿ : ಕವಿತೆ, ಕನ್ನಡಗಾದೆಗಳ ಮಹಾಸಂಕಲ,


ವಿಷಯ

ಪ್ರೇಮ, ದೇಶಪ್ರೇಮ, ಪ್ರಕೃತಿ, ಅಧ್ಯಾತ್ಮ, ವಿಚಾರ ಸಾಹಿತ್ಯ ಚಳುವಳಿ, ಸಮಾಜ ಪರಿವರ್ತನೆ ಚಳುವಳಿ ನವೋದಯ


ಬಾಳ ಸಂಗಾತಿ : ಭವಾನಿ


ಮಕ್ಕಳು: ಇಬ್ಬರು ಗಂಡು ಮಕ್ಕಳು

      ಮೋಕ್ಷಿತ್ ಪಿ. ಬಿ, ದೀಕ್ಷಿತ್ ಪಿ ಬಿ 


ಸಂಬಂಧಿಗಳು


ಪ್ರಭಾವಗಳು


ಪ್ರಭಾವಿತರು


ಸಹಿ


www.puttamadaiah.1981@gmail.Com

ಪುಟ್ಟಕವಿ ಪುಟ್ಟಮಾದಯ್ಯ ಎಂದು ಹೆಸರುವಾಸಿಯಾದ

ಶ್ರೀಯುತ ಪುಟ್ಟಮಾದಯ್ಯನವರು ಮೂಲತಃ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಹರಿಲಾಪುರ ಗ್ರಾಮದಲ್ಲಿ ಶ್ರೀಮತಿ ಕಾಳಮ್ಮ ಶ್ರೀ ದೇವಯ್ಯ ನವರ ಮಗನಾಗಿ 1981ರ ಮಾರ್ಚ್ 2ರಂದು ಜನಿಸಿದರು

ಇವರು ಪ್ರಸ್ತುತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪಿರಿಯಾಪಟ್ಟಣ ಇಲ್ಲಿ, ಕನ್ನಡ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕನ್ನಡ ಸಾಹಿತ್ಯ ಲೋಕದಲ್ಲಿ ಪುಟ್ಟಕವಿ ಪುಟ್ಟಮಾದಯ್ಯ ಎಂದು 'ಪುಟ್ಟಕವಿ'ತೆ ಎಂಬ ಹೆಸರಿನಿಂದ ಪ್ರಖ್ಯಾತರಾಗಿದ್ದಾರೆ ಸು. ಒಂದು ಸಾವಿರಕ್ಕೂ ಹೆಚ್ಚು ಕವಿತೆಗಳನ್ನು ರಚಿಸಿದ್ದು ಕನ್ನಡ ನಾಡಿನಾದ್ಯಂತ

ಹೆಸರುವಾಸಿಯಾಗಿದ್ದಾರೆ ಇವರ ಕವಿತೆಗಳು ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ವಾಟ್ಸಪ್ಪ್, ಇನ್ಸ್ಟಾಗ್ರಾಮ್ ಗಳಲ್ಲಿ ಹಾಗೂ ಕನ್ನಡ ನಾಡಿನಾದ್ಯಂತ ದಿನ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿವೆ.

ಇವರು ಹೆಚ್ಚಿನ ಓದುಗರ ಬಳಗವನ್ನು ಹೊಂದಿದ್ದು ತುಂಬಾ ಪ್ರಶಂಸೆಗೆ ಒಳಗಾಗಿದ್ದಾರೆ.

'ಪುಟ್ಟಕವಿ'ತೆ

ಸಮಾನತೆ, ಸ್ವಾತಂತ್ರ್ಯ,ಭ್ರಾತೃತ್ವ, ಗಣರಾಜ್ಯ, ಸಮರ್ಥ ನಾಯಕತ್ವ, ವ್ಯಕ್ತಿಗೌರವ,ಶಿಕ್ಷಣ, ತಾಳ್ಮೆ,ಸಹಾನುಭೂತಿ, ಸಹಕಾರ ಮನೋಭಾವ ಇವುಗಳೇ ಪ್ರಜಾಪ್ರಭುತ್ವ. ಭಾರತೀಯ ಸಂವಿಧಾನ ನೀಡಿರುವ ಒಂದು ಪ್ರಬಲವಾದ ಅಸ್ತ್ರವೇ ಪ್ರಜಾಪ್ರಭುತ್ವ. ಪ್ರಜಾಪ್ರಭುತ್ವದಲ್ಲಿ ಮತದಾನ ಹಾಗೂ ಚುನಾವಣೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂಬ ಸತ್ಯವೇ ಪ್ರಜಾಪ್ರಭುತ್ವ. ಮತದಾನದ ಪಾವಿತ್ರ್ಯತೆ ಬಗ್ಗೆ ಜಾಗೃತಿ ಮೂಡಿಸಿ, ಮತದಾನದಿಂದ ಮಾತ್ರ ದೇಶದ ಬದಲಾವಣೆ ಸಾಧ್ಯ ಎಂಬುದನ್ನು ಅರಿಯುವ ಪದ್ದತಿಯೇ ಪ್ರಜಾಪ್ರಭುತ್ವ. ರಾಜಪ್ರಭುತ್ವವನ್ನು ಕೊನೆಗಾಣಿಸಿ ಬಿ.ಆರ್.ಅಂಬೇಡ್ಕರ್ ರವರು ದೊರಕಿಸಿಕೊಟ್ಟ ಸರ್ಕಾರ ಪದ್ಧತಿಯೇ ಪ್ರಜಾಪ್ರಭುತ್ವ.

__✍️ಪುಟ್ಟಕವಿ ಪುಟ್ಟಮಾದಯ್ಯ

'ಪುಟ್ಟಕವಿ'ತೆ

ಹೊತ್ತುಹೆತ್ತು ಸಾಕಿಸಲುಹಿ ತಿದ್ದಿತೀಡಿ ಸಂಸ್ಕಾರ ಕಲಿಸುವ ತಾಯಿತಂದೆಗಳೇ ನಮ್ಮಜೀವನದ ಮೊದಲ ಗುರುಗಳು! ಸಾಮಾಜಿಕ ಮೌಲ್ಯಗಳಾದ ಪ್ರಾಮಾಣಿಕತೆ, ದಯಾಪರತೆ, ಸಹಕಾರ, ಸೌಹಾರ್ದ, ಸೌಜನ್ಯ, ಕರ್ತವ್ಯ,ಸಚ್ಚಾರಿತ್ಯ,ನೈತಿಕತೆಗಳನ್ನು ವಿದ್ಯಾರ್ಥಿಗಳಲ್ಲಿ ನೆಲೆಗೊಳಿಸುವವರೇ ನಿಜವಾದ ಶಿಕ್ಷಕರುಗಳು! ಬದುಕು ಕಟ್ಟಿಕೊಳ್ಳವ ಜೀವನ ತತ್ವಸಂದೇಶಗಳನ್ನು ಮೈಗೂಡಿಸಿಕೊಳ್ಳಲು ಕಲಿಸಿದ ಮಹಾನ್ ಕಲಾವಿದರೇ ಶಿಕ್ಷಕರು! ಜೀವನದ ಭರವಸೆಯನ್ನು ಹೆಚ್ಚಿಸುವ, ಕಂಡ ಕನಸುಗಳನ್ನು ಸಾಕಾರಗೊಳಿಸುವ, ಕಲಿಕಾ ಆಸಕ್ತಿಯನ್ನು ಹುಟ್ಟುಹಾಕುವ, ದೇಶವನ್ನು ರಕ್ಷಿಸಿ, ಪ್ರಗತಿಶೀಲತೆಗೊಳಿಸುವ ಸೂತ್ರದಾರೇ ಶಿಕ್ಷಕರು! ಪ್ರತಿದಿನ ತಾನು ವಿದ್ಯಾರ್ಥಿಯಾಗಿ ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಗುರ್ತಿಸಿ ವ್ಯಕ್ತಿತ್ವ ವಿಕಸನಗೊಳಿಸಿ ಸೂಕ್ತ ಗುರಿತೋರಿ ಗುರಿಯೆಡೆಗೆ ಕೈ ಹಿಡಿದು ತಲುಪಿಸುವ ಮಾರ್ಗದರ್ಶಕರು! ಅಂಧಕಾರವನ್ನು ತೊಲಗಿಸಿ ಅಜ್ಞಾನದಿಂದ ಸುಜ್ಞಾನ ದೆಡೆಗೆ ತಲುಪಿಸುವ ನಿಜವಾದ ಸಮಾಜಸೇವಕರು! ಇಂತಹ ಪವಿತ್ರಕಾರ್ಯದಲ್ಲಿ ತೊಡಗಿರುವ ನನ್ನೆಲ್ಲಾ ಶಿಕ್ಷಕಮಿತ್ರರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು 🙏💐

     __✍️ಪುಟ್ಟಕವಿ ಪುಟ್ಟಮಾದಯ್ಯ


'ಪುಟ್ಟಕವಿ'ತೆ

ಕಷ್ಟ ಸಂಕಷ್ಟ

ಖಾಸಗಿ ಶಾಲಾಕಾಲೇಜು

ಶಿಕ್ಷಕರ ಜೀವನ ನಿರ್ವಹಣೆ

ಬಲು ಕಷ್ಟ ಕಷ್ಟ

ಒಂದು ಕಡೆ ಲಾಕ್ ಡೌನ್

ಮತ್ತೊಂದು ಕಡೆ ವರ್ಷದಿಂದ

ಶಾಲಾಕಾಲೇಜುಗಳು ಸೀಲ್ ಡೌನ್

ವೃತ್ತಿಯನ್ನೇ ನಂಬಿಕೊಂಡಿದ್ದ ಶಿಕ್ಷಕರ ಜೀವನ ಫುಲ್ ಡೌನ್

ಒಂದು ಕಡೆ ಕೊರೋನಾ ಕಾಟ

ಮತ್ತೊಂದು ಕಡೆ ನಿರುದ್ಯೋಗದ ಕಾಟ

ಉನ್ನತ ಶಿಕ್ಷಣ ಪಡೆದು ಪಾಠ ಮಾಡೋ ಚಟ

ಆದರೆ ಈಗ ಕಲಿಸುತ್ತಿದೆ ನಿಜವಾದ ಜೀವನ ಪಾಠ

ಒಂದು ಕಡೆ ರೋಗ

ಮತ್ತೊಂದು ಕಡೆ ನಿರುದ್ಯೋಗ

ಸಂಬಳವಿಲ್ಲದೆ ಇವರಿಗಿಲ್ಲ ಯೋಗ

ಬೇರೆ ಯಾವುದು ಸಿಗುತ್ತಿಲ್ಲ ಉದ್ಯೋಗ

ಉನ್ನತ ಶಿಕ್ಷಣ ಪಡೆದಿದ್ದೆ ಸಾಧನೆ

ಶಾಲಾಕಾಲೇಜುಗಳಿದ್ದರೆ ಮಾತ್ರ ಬೋಧನೆ

ಜೀವನ ಪೂರ್ತಿ ಬರಿ ವೇದನೆ

ಅದರಲ್ಲೂ ಈಗ ಶುರುವಾಗಿದೆ ನಿಜಜೀವನ ಬೇನೆ

ಕೇಳುವವರಿಲ್ಲ ಇವರ ಬವಣೆ

ಖಾಸಗಿ ಶಿಕ್ಷಣ ಸಂಸ್ಥೆಯವರಿಗಿಲ್ಲ ಕರುಣೆ

ಸರ್ಕಾರ ಕಿಂಚಿತ್ತೂ ನೀಡುತ್ತಿಲ್ಲ ರಕ್ಷಣೆ

ಈ ಗೋಳಾಟಕ್ಕೆ ಯಾರನ್ನು ಮಾಡುವುದು ಹೊಣೆ

ಹೀಗೆಯೇ ಆದರೆ ಹೇಗೆ ಇವರ ಜೀವನ ನಿರ್ವಹಣೆ

✍️ಪುಟ್ಟಕವಿ ಪುಟ್ಟಮಾದಯ್ಯ