• ಹರಪ್ಪ

ಇಂದಿನ ಭಾರತ ಮತ್ತು ಪಾಕಿಸ್ತಾನಗಳ ನಡುವಣ ನೆಲದಲ್ಲಿ ಸುಮಾರು ಏಳರಿಂದ ಎಂಟು ಸಾವಿರ ಏಡುಗಳ ಮೊದಲು ಆರಂಬಗೊಂಡ ನಾಗರೀಕತೆ ಹರಪ್ಪ ನಾಗರೀಕತೆ.೧೯೨೧ ರಲ್ಲಿ ಜಾನ್ ಹರ್ಬರ್ಟ್ ಮಾರ್ಷಲ್ ಅವರ ಮುಂದಾಳತ್ವದ ಗುಂಪಿನಿಂದ ಮಂದಿಗೆ ತಿಳಿಯಿತು.ಇಲ್ಲಿನ ಮಂದಿಯ ನುಡಿ ಕನ್ನಡ/ದ್ರಾವಿಡ ನುಡಿ ಕುಟುಂಬಕ್ಕೆ ಸೇರಿದೆ.ಹರಪ್ಪ ನಾಗರೀಕತೆಯ ಮಂದಿ ಡ್ರಾವಿಡ ನುಡಿ ಆಡುಗರ ಹಿಂದಿನ ಮಂದಿ. ಹರಿಯಾಣ ನಾಡಿನ ರಾಕಿಗಡಿ ಪಟ್ಟಣ ಸಿಕ್ಕ ೪೫೦೦ ಏಡುಗಳ ಹಿಂದಿನ ಮೂಳೆಯ ಮೇಲೆ ನಡೆಸಿದ ಒರೆಗಳಿಂದ ಇವರು ಕನ್ನಡದ ಇರುಳರನ್ನು ಹೆಚ್ಚು ಹೋಲುತ್ತಾರೆ. ಹರಪ್ಪ ನಾಗರೀಕತೆ ಎರಡು ದಶಲಕ್ಷ ಚದರ ಕಿಲೋಮೀಟರ್ ಪ್ರದೇಶವನ್ನು ಒಳಗೊಂಡಿತ್ತು. ಹರಪ್ಪ ನಾಗರೀಕತೆಯಲ್ಲಿ ಕದನದಲ್ಲಿ ಬಳಸಬಹುದಾದ ಒಂದಾದರೂ ಆಯುದ ಸಿಕ್ಕಿಲ್ಲ.ಹರಪ್ಪದವರು ಕಸುಬುದಾರರು, ಆರಂಬಗಾರರು ಹಾಗು ಹರದು ಕೆಲಸದ ಮಂದಿ.ಉಪ್ಪನ್ನು ತಯಾರಿಸುತಿದ್ದರು,ಈ ನೆಲದಲ್ಲಿ ಚಿನ್ನದ ಒಡವೆಗಳು ಸಿಕ್ಕಿರುವುದರಿಂದ ಇವರು ಕನ್ನಡಿಗರು, ಆಗಿನ ಕಾಲಕ್ಕೆ ಚಿನ್ನ ತೆಗೆದು ಬಳಸುವ ಕಲೆ ಕನ್ನಡಿಗರ ಹತ್ತಿರ ಮಾತ್ರ ಇತ್ತು.ಇವರು ೬೦ ಸಾವಿರ ಏಡುಗಳ ಹಿಂದೆ ಆಪ್ರಿಕ ಬಿಟ್ಟು ಪಡುವಣ ಕರಾವಳಿಯ ದಾರಿಯಲ್ಲಿ ಭಾರತಕ್ಕೆ ಬಂದಂತಹ ಇರುಳಿಗರು, ಕೊರಗರಂತಹ ಕನ್ನಡ ಆದಿವಾಸಿಗಳು.ಇವರಲ್ಲಿ ತಂದೆಯನ್ನು ಕೊಂಡಾಡುವ ಲಿಂಗದ ಕೊಂಡಾಟವಿತ್ತು. ಲಿಂಗ ಎನ್ನುವ ಪದವೇ ಇವರ ಕೊಡುಗೆ.ಅಳ್ಳೆಯಿಂದ ನೂಲು ತೆಗೆಯುವುದನ್ನು ಮೊದಲಿಗೆ ಬಳಕೆ ತಂದವರು.