ವಿಲಿಯಮ್ ರೊವಾನ್ ಹ್ಯಾಮಿಲ್ಟನ್

ಸರ್ ವಿಲಿಯಮ್ ರೊವಾನ್ ಹ್ಯಾಮಿಲ್ಟನ್ ಇವರು ಜಗದ್ವಿಖ್ಯಾತ ಗಣಿತಜ್ಞ, ಭೌತಶಾಸ್ತ್ರಜ್ಞ ಹಾಗು ಖಗೋಳ ವಿಜ್ಞಾನಿ. ಇವರು ಆಗಸ್ತು 4 1805ರಲ್ಲಿ ಡಬ್ಲಿನ್ ಐರ್ಲಾಂಡ್ ನಲ್ಲಿ ಜನಿಸಿದರು. ಸಾರಾ ಹುಟ್ಟನ್ ಮತ್ತು ಆರ್ಚಿಬಾಲ್ಡ್ ಹ್ಯಾಮಿಲ್ಟನ್ ಅವರ ಒಂಬತ್ತು ಮಕ್ಕಳಲ್ಲಿ ನಾಲ್ಕನೆಯವರು ಈ ಮಹಾವಿಜ್ಞಾನಿ. ಇವರು ಬಾಲ್ಯದಲ್ಲಿ ಭಾಷೆ, ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿದ್ದರು. ಇವರಿಗೆ ಕೇವಲ ಯುರೋಪಿಯನ್ ಭಾಷೆ ಮಾತ್ರವಲ್ಲ ಹೊರತಾಗಿ ಪರ್ಶಿಯನ್, ಅರಬ್ಬೀ, ಹಿಂದುಸ್ಥಾನೀ, ಸಂಸ್ಕೃತ, ಮರಾಠೀ, ಮಲಯಾಳಂ ಹೀಗೆ ಹಲವಾರು ಭಾಷೆ ಬಲ್ಲವರಾಗಿದ್ದರು. ಇವರು ತಮ್ಮ 18ನೇ ವಯಸ್ಸಿನಲ್ಲಿ ಗಣಿತ ಅಧ್ಯಯನ ಮಾಡಲು ಡಬ್ಲಿನ್ ನ ಟ್ರಿನಿಟಿ ಕಾಲೇಜು ಸೇರಿಕೊಂಡರು. ಗಣಿತಾಧ್ಯಾನದ ಜೊತೆಯಲ್ಲಿ ಭೌತಶಾಸ್ತ್ರವನ್ನು ಕಲಿಯಲು ಆರಂಭಿಸಿದರು. 1827ರಲ್ಲಿ ಇವರು ಆದೇ ಸಂಸ್ಥೆಯಲ್ಲಿ ಖಗೋಳ ಉಪನ್ಯಾಸಖರಾಗಿ ಸೇರಿಕೊಂಡರು. ಇವರು ಭೌತಶಾಸ್ತ್ರದಲ್ಲಿ ಮಾಡಿದ ಅಪಾರ ಸಂಶೋಧನೆಗೆ 1835ರಲ್ಲಿ ರಾಯಲ್ ಮೆಡೆಲ್ಸ್ ಎಂಬ ಪುರಸ್ಕಾರವನ್ನು ಪಡೆದರು. ಇವರ ಪತ್ನಿ ಹೆಲೆನ್ ಬೈಲಿ ಇವರಿಗೆ ಏಳು ಮಕ್ಕಳಿದ್ದರು. 'ಹ್ಯಾಮಿಲ್ಟನ್ಸ್ ಪ್ರಿನ್ಸಿಪಲ್', 'ಹ್ಯಾಮಿಲ್ಟೋನಿಯನ್ಸ್', 'ಹ್ಯಾಮಿಲ್ಟೋನಿಯನ್ ಮೆಕ್ಯಾನಿಕ್ಸ್', 'ಕ್ವಾಟರ್ಸಿಯನ್ಸ್', 'ಹ್ಯಾಮಿಲ್ಟನ್-ಜಾಕೊಬಿಕ್ ಸಮೀಕರಣ', 'ನಬ್ಲಾ ಚಿಹ್ನೆ' ಮುಂತಾದವುಗಳಿಗೆ ಇವರು ಪ್ರಸಿದ್ಧಿಯನ್ನು ಪಡೆದಿದ್ದಾರೆ. ಕ್ಲಾಸಿಕಲ್ ಮೆಕ್ಯಾನಿಕ್ಸ್, ಆಪ್ಟಿಕ್ಸ್, ಬೀಜಗಣಿತದಲ್ಲಿ ಅಪಾರ ಸಂಶೋಧನೆ ನಡೆಸಿ ಗಣಿತದಲ್ಲಿ ಹೊಸ ಪರಿಕಲ್ಪನೆಯನ್ನು, ತಂತ್ರಗಳನ್ನು ಅನ್ವೇಷಿಸಿದ್ದಾರೆ ಇವರನ್ನು 'ಕ್ವಾಟರ್ಸಿಯನ್ಸ್'ನ ಜನಕ(ಸಂಶೋಧಕ) ಎಂದು ಗುರುತಿಸಲಾಗುತ್ತದೆ. ಇವರು 2 ಸಪ್ಟೆಂಬರ್ 1865ರಂದು ತಮ್ಮ ಜನ್ಮಸ್ಥಳವಾದ ಡಬ್ಲಿನ್, ಐಯರ್ಲಾಂಡಿನಲ್ಲಿ ಮರಣಹೊಂದಿದರು. ಇವರ ಸ್ಮರಣಾರ್ಥವಾಗಿ 'ಹ್ಯಾಮಿಲ್ಟನ್ ಇನ್ಸ್ಟಿಟ್ಯೂಟ್ ಆಫ್ ಅಪ್ಲೈಡ್ ಮ್ಯಾತಮಾತಿಕ್ಸ್ ಆಂಡ್ ರೀಸರ್ಚ್' ಎಂಬ ವಿದ್ಯಾಸಂಸ್ಥೆಯು ಐಯರ್ಲಾಂಡಿನ ಮೇನೂತ್ನಲ್ಲಿ ಸ್ಥಾಪಿಸಲಾಗಿದೆ.