ಧನುಷ್ 7550
ನನ್ನ ಹೆಸರು ಧನುಷ್. ನನ್ನ ತಂದೆಯ ಹೆಸರು ತಾರನಾಥ್. ನನ್ನ ತಾಯಿಯ ಹೆಸರು ಸುಜಾತ. ನಾನು 23 ಅಕ್ಟೋಬರ್ 1996ರಂದು ಮಂಗಳೂರಿನಲ್ಲಿ ಜನಿಸಿರುತ್ತೇನೆ. ನಾನು ನನ್ನ ಶಾಲೆಯನ್ನು ಮಿಲಾಗ್ರಿಸ್ ನಲ್ಲಿ ಪೂರ್ಣಗೊಳಿಸಿದ್ದೇನೆ. ನನ್ನ ಕಾಲೇಜು ವಿದ್ಯಾಭ್ಯಾಸ ಕೆನರಾ ಪದವಿ ಪೂರ್ವ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದೇನೆ. ನಾನು ಈಗ ಸಂತ ಅಲೋಶಿಯಸ್ ಕಾಲೇಜಿನಲ್ಲಿ ದ್ವಿತೀಯ ಬಿ.ಎಸ್ಸಿ ಕಲಿಯುತ್ತಿದ್ದೇನೆ. ನನಗೆ ಎಲೆಕ್ಟ್ರಾನಿಕ್ಸ್ ಎಂದರೆ ಬಹಳ ಇಷ್ಟ. ನಾನು ಮುಂದೆ ಎಲೆಕ್ಟ್ರಾನಿಕ್ಸ್ ವಿಭಾಗದ ಪ್ರಾಧ್ಯಾಪಕನಾಗಬೇಕೆಂದು ಅಂದುಕೊಂಡಿದ್ದೇನೆ. ನನಗೆ ಪ್ರಾಜೆಕ್ಟ್ ಮಾಡುವುದು, ಕ್ರಿಕೆಟ್ ಆಡುವುದು, ಫ್ರೆಂಡ್ಸ್ ಜೊತೆ ಇರುವುದು, ಎಲೆಕ್ಟ್ರಾನಿಕ್ಸ್ ಗೆ ಸಂಭಂದಿಸಿದ ವಿಷಯಗಳನ್ನು ಓದುವುದು ಬಹಳ ಇಷ್ಟ. ನನಗೆ ಬೇರೆ ಬೇರೆ ಊರುಗಳಿಗೆ ತಿರುಗಾಡಲು ಹೋಗುವುದು ಬಹಳ ಇಷ್ಟ. ನನಗೆ ಮೊಬೈಲ್ ಸಾಫ್ಟ್ ವೇರ್, ಆಂಡ್ರಾಯ್ಡ್ ಡೆವೆಲಪ್ಮ್ಂಟ್ ಮುಂತಾದ ವಿಷಯಗಳಲ್ಲಿ ತುಂಬಾ ಆಸಕ್ತಿ ಇದೆ. ನನಗೆ ಸಾಕುಪ್ರಾಣಿಗಳು ಎಂದರೆ ತುಂಬಾ ಇಷ್ಟ. ಅದರಲ್ಲೂ ನಾಯಿಗಳು ಎಂದರೆ ಬಹಳ ಇಷ್ಟ. ನನಗೆ ಎಲೆಕ್ಟ್ರಾನಿಕ್ಸ್ ಸಂಶೋಧನೆಯ ಜೊತೆಗೆ ವೈಲ್ಡ್ ಲೈಫ್ ಸಂಶೋಧನೆಯಲ್ಲಿಯೂ ಆಸಕ್ತಿ ಇದೆ.