ನಾಗವರ್ಮ


              ಬಾಣಕವಿಯ ಸಂಸ್ಕೃತದ ಗದ್ಯಕೃತಿಯಾದ ಕಾದಂಬರಿಯನ್ನು ಕನ್ನಡಕ್ಕೆ ಚಂಪೂ ಸ್ವರೂಪದಲ್ಲಿ ಕರ್ಣಾಟಕ ಕಾದಂಬರಿ ಎಂಬ ಹೆಸರಿನಲ್ಲಿ ತಂದವನ್ನು ಮೊದಲನೆಯ ನಾಗವರ್ಮನೆಂಬ ಕವಿಯು. ಕವಿಚರಿತೆಗಾರರ ಅಭಿಪ್ರಾಯದಂತೆ ಈತನ ಕಾಲ ಸು.೯೯೦. ಛಂದೋಂಭುಧಿ ಎಂಬ ಹೆಸರಿನ ಒಂದು ಛಂದೋಗ್ರಂಥದ ಕರ್ತೃವೂ ಈತನೇ ಎಂಬುದು ಕವಿಚರಿತೆಗಾರರ ಅಭಿಪ್ರಾಯವಾಗಿದೆ. ಸಂಸ್ಕೃತದ ಗದ್ಯಕೃತಿಯನ್ನು ಚಂಪೂಕೃತಿಯಾಗಿ ಪರಿವರ್ತಿಸಿದ್ದು,ಪುರಾಣೇತಿಹಾಸಗಳ ಪ್ರಸಿದ್ದವಾದ ಕಥಾವಸ್ತುವನ್ನುಬಿಟ್ಟು ಕಾಲ್ಪಾನಿಕವಾದ ವಸ್ತುವಿನ ಕಥೆಯನ್ನು ರಮ್ಯವಾದ ಕಾವ್ಯವಾಗಿ ರಚಿಸಿರುವುದೂ, ಇಲ್ಲಿಯ ವಿಶೇಷ. ಕೃತಿಯ ಪ್ರಸ್ತುತ ಭಾಗವು ಮಹಾಶ್ವೇತೆ ಮುನಿಕುಮಾರನಾದ ಪುಂಡರೀಕನನ್ನು ಮೊದಲ ಸಲ ಕಂಡಾಗ, ಆಕೆಯೂ ಪುಂಡರೀಕನೂ ಪರಸ್ಪರರಲ್ಲಿ ಮೋಹಗೊಂಡುದುನ್ನೂ, ತತ್ಪರಿಣಾಮವಾಗಿ ನಡೆದ ಒಂದು ಸ್ವಾರಸ್ಯಕರ ಘಟನೆಯನ್ನೂ ಕುರಿತಿದೆ.