ಜಿ.ಎಲ್.ಸೋಮಣ್ಣ
ಟಿ.ಎಸ್.ಸುಬ್ಬಣ್ಣ.
ಸ್ಥಳ - ತಗಡೂರು, ನಂಜನಗೂಡು ತಾಲ್ಲೂಕು, ಮೈಸೂರು ಜಿಲ್ಲೆ, ಕರ್ನಾಟಕ ರಾಜ್ಯ.
ಸ್ವಾತಂತ್ರ್ಯಯೋಧರು
ಗಾಂಧೀಜಿಯವರ ಸಾಬರಮತಿ ಆಶ್ರಮದಲ್ಲಿದ್ದು ಅನುಭವ ಪಡೆದವರು.
ಅವಿವಾಹಿತರು.
ದೇಶ ಸ್ವತಂತ್ರ್ಯಪಡೆದ ನಂತರ ಮೈಸೂರಿಗೆ ಹಿಂತಿರುಗಿ ದೀನ ದಲಿತರ, ಬಡವರ,ಅಸಹಾಯಕರ ಉದ್ದಾರಕ್ಕಾಗಿ
ಕೆಲಸ ಮಾಡಲು ಪ್ರಾರಂಭಿಸಿದರು.
ಇವರು ತಗಡೂರಿನವರೇ ಆದ ಮತ್ತೊಬ್ಬ ಸ್ವಾತಂತ್ರ್ಯ ಹೋರಾಟಗಾರಾದ ಶ್ರೀ ತಗಡೂರು ರಾಮಚಂದ್ರರಾವ್ ರವರ ಸಮಕಾಲಿನರು.
ಶ್ರೀ ಟಿ.ಎಸ್.ಸುಬ್ಬಣ್ಣ ನವರು ಶ್ರೀ ಜಯಚಾಮರಾಜ ಒಡೆಯರ್ ರವರ ಸಹಕಾರ ಹಾಗು ಹಳೇ ಮೈಸೂರು ಜಿಲ್ಲೆಯ ಸುತ್ತಲಿನ ಜನರ ಸಹಕಾರ ಪಡೆದು ಚಾಮುಂಡಿಬೆಟ್ಟ ದಲ್ಲಿ ಅನಾಥ ,ಬಡ, ದೀನದಲಿತ ಹಣ್ಣು ಮಕ್ಕಳಿಗಾಗಿ ಉಚಿತ ಹಾಸ್ಟೆಲ್ ಹಾಗು ಪ್ರೌಢಶಾಲೆ ಹಾಗೆಯೇ ವಿದ್ಯರಣ್ಯಪುರಂನಲ್ಲಿ ಅನಾಥ,ಬಡ,ದೀನದಲಿತ ಗಂಡು ಮಕ್ಕಳಿಗಾಗಿ ಹಾಸ್ಟಲ್ ಹಾಗು ಪ್ರೌಢಶಾಲೆ ತೆರೆದರು.
ಇಷ್ಟೇಅಲ್ಲದೆ ಚಾಮರಾಜನಗರ,ಟಿ.ನರಸೀಪುರ,ನಂಜನಗೂಡು,ಹೆಗ್ಗಡದೇವನ ಕೋಟೆ, ಮುಂತಾದ ತಾಲ್ಲೂಕಿನ ಗ್ರಾಮಾಂತರ ಪ್ರದೇಶದ ಮಕ್ಕಳಿಗಾಗಿ 13ಕ್ಕೂ ಹೆಚ್ಚು ಪ್ರೌಢಶಾಲೆಗಳನ್ನು ತೆರೆದು ಶಿಕ್ಷಣ ಸೇವೆಗಾಗಿ ತಮ್ಮ ಜೀವನ ಸವೆಸಿದರು.