ಚಾಂದ್ ಬಾಷ ಅರಸೀಕೆರೆ ಕಾವೇರಿ
ಚಾಂದ್ ಬಾಷ ಆದ ನಾನು ಹಾಸನ ಜಿಲ್ಲೆ ಅರಸೀಕೆರೆಯಲ್ಲಿ ದಿನಾಂಕ೨೯/೧೦/೧೯೬೨ ರಂದು ಮೊಹಮದ್ ಖಲಂದರ್ ಸಾಬ್ ಮತ್ತು ಬೀಭಿಜಾನ್ ದಂಪತಿಗಳಿಗೆ ಜನಿಸಿದೆನು. ನನ್ನ ಪ್ರಾಥಮಿಕ ಹಂತದಿಂದ ಹನ್ನೇರಡನೇ ತರಗತಿಯವರೆಗೆ ಅರಸೀಕೆರೆ ಸರ್ಕಾರಿ ಶಾಲೆಯಲ್ಲಿ, ನಂತರ ನನ್ನ ಬಿ.ಕಾಂ., ಪದವಿಯನ್ನು ಅರಸೀಕೆರೆಯ ಹೊಯ್ಸಳೇಶ್ವರ ಕಾಲೇಜಿನಲ್ಲಿ ಆಯಿತು. ನನ್ನ ಸ್ನಾತಕೋತ್ತರ ಎಂ.ಕಾಂ., ಪದವಿ ಮೈಸೂರು ವಿಶ್ವವಿದ್ಯನಿಲಯದಲ್ಲಿ, ಹಾಗೆ ಇಗ್ನೊದಿಂದ ಎಂ.ಬಿ.ಎ. ಪದವಿ ಪಡೆದೆನು. ಹಾಗೆ ಕಾವೇರಿ ಗ್ರಾಮೀಣ ಬ್ಯಾಂಕ್(ಈಗ ಕರ್ನಾಟಕ ಗ್ರಾಮೀಣ ಬ್ಯಾಂಕ್) ಸೇವೆಗೆ ೧೯೮೩ರಲ್ಲಿ ಸೇರಿ ೨೦೨೦ರ ಸೆಪ್ಟಂಬರ್ ರಂದು ನಿವೃತ್ತಿಯಾದೆನು. ನಾನು ಇದುವರೆವಿಗೂ ಮೂರು ಕವನ ಸಂಕಲನವನ್ನು ಪ್ರಕಟಣೆ ಮಾಡಿದ್ದೇನೆ ಹಾಗೆ ಒಂದು ಧ್ವನಿ ಸಾಂದ್ರಿಕೆ ಬಿಡುಗಡೆ ಮಾಡಿರುತ್ತೇನೆ. ನಾನು ಒಬ್ಬ ಕನ್ನಡ ಪ್ರೇಮಿ, ರಂಗಭೂಮೆ ನಟ, ಜನಪದ ಹಾಗು ಭರತ ನಾಟ್ಯ ಸೃತ್ಯಪಟು. ಕಿರುತೆರೆಯ ಅಣ್ಣ ಬಸವಣ್ಣ ಧಾರವಾಹಿಯಲ್ಲಿ ಅಭಿನಯ. ಕನ್ನಡ ಕಾರ್ಯಕ್ರಮದ ನಿರೂಪಕ. ಡಿ.ಡಿ.ಚಂದನದ ೨೦೧೯ರ ಸೆಪ್ಟಂಬರ್ ತಿಂಗಳಲ್ಲಿ 'ಶುಭೋದಯ' ಕಾರ್ಯಕ್ರಮದಲ್ಲಿ ಮೊಹರಂ ಬಗ್ಗೆ ನೇರಾ ಪ್ರಸಾರದಲ್ಲಿ ಭಾಗವಹಿಸಿದ್ದೇನೆ. ನನ್ನ ಮಡದಿ ಫಿರ್ದೋಸ್ ಬಾನು ಹಾಗು ನನ್ನ ಎರಡು ಮುದ್ದಾದ ಮಕ್ಕಳಲ್ಲಿ ಫರ್ಹೀನ್ (ಸೋನು) ದೊಡ್ದವಳು ಹಾಗು ಫಹೀಮಾ (ಮಿನ್ನು) ಚಿಕ್ಕವಳು. ಹಾಗೆ ನನ್ನ ಅಳಿಯನ ಹೆಸರು ಸೈಯದ್ ಶುಐಬ್. ನಾನು ಕನ್ನಡ ವಿಕಿಪೀಡಿಯಾಕ್ಕೆ ಪ್ರೇರಣೆ ಗುರುಗಳಾದ ಡಾ.ಪವನಜರವರಗಿಗೆ ನಾನು ತುಂಬು ಅಭಾರಿ.