ಉಮೇಶ್ ಬಾಬು ಮಠದ್ ಪರಿಚಸ್ಥರ ಬಳಗದಲ್ಲಿ ಉಬಾಮ ಎಂದೇ ಹೆಸರು ವಾಸಿ ಇವರು ಕೆ.ಎಂ. ಬಸಯ್ಯಸ್ವಾಮಿ ಏಕಾಂತಮ್ಮ ಇವರ ದ್ವಿತೀಯ ಪುತ್ರರಾಗಿ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಪೂಜಾರಹಳ್ಳಿ ಗ್ರಾಮಪಂಚಾಯ್ತಿಯ ವ್ಯಾಪ್ತಿಗೆ ಸೇರುವ ಟಿ ಕಲ್ಲಹಳ್ಳಿ ಕುಗ್ರಾಮದಲ್ಲಿ ಜನಿಸಿ ಎಂಎ.ಬಿ.ಈಡಿ.ಪಿಜಿಡಿಟಿಟಿಸಿಟಿ. ಪಿಜಿಡಿಎಐಎಂ.ಬಿ.ಲಿಬ್.ಐ.ಸಿ. ಪದವಿಗಳನ್ನು ಮುಡಿಗೇರಿಸಿಕೊಂಡು ಹನ್ನೊಂದು ವರ್ಷಗಳ ಕಾಲ ಸಮಾಜಮುಖಿಯಾಗಿ ಚಿತ್ರದುರ್ಗ ನಗರದಲ್ಲಿ ಕಾಯಕಗೈದವರು. ಸದ್ಯ ಬೀದರ್ ಜಿಲ್ಲೆಯ ನ್ಯಾಯಾಲಯದಲ್ಲಿ ನೌಕರಿ ಮಾಡುತ್ತಿರುವ ಉಬಾಮರವರು ಉದಯೋನ್ಮುಖ ಬಹರಗಾರರ ಸಾಲಿಗೆ ಸೇರುವ ಯುವ ಬರಹಗಾರರು.

ಸಾಹಿತ್ಯ ಕೃಷಿ ಹತ್ತಾರು ವರ್ಷಗಳಿಂದ ಕಥೆ,ಕವನ,ಚುಟುಕು,ಲೇಖನ,ಪ್ರವಾಸಕಥನಗಳನ್ನು ಬರೆಯುತ್ತಾ ಬಂದರಾದರೂ ಬಿಡುಗಡೆಗೊಳಿಸಿದ್ದು ತೀರಾ ಕಡಿಮೆಯಾದರೂ ಅದು ಇತ್ತೀಚಿನ ದಿನಗಳಲ್ಲಿ.

  • ವಸುಧೆಯೂಳಗಿನ ಆರ್ಭಟ*, ಅರ್ಥಗರ್ಭಿತ ವಿಚಾರಗಳನ್ನೂಳಗೊಂಡ ಇವರ ಮೊದಲ ಕೃತಿಗೆ ಕನ್ನಡ ಪುಸ್ತಕ ಪ್ರಾಧಿಕಾರದ ಸಹಾಯಧನವನ್ನು ಪಡೆದ ಕೃತಿಯಾಗಿದೆ.

ವಿವಿಧ ಪತ್ರಿಕೆಗಳಿಗೆ ಲೇಖನ, ಅಂಕಣ ಬರಹಗಳು ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿವೆ ಅವುಗಳಲ್ಲಿ ಆಯ್ದ ಅಂಕಣ ಬರಹಗಳನ್ನೂಗ್ಗೂಡಿಸಿ *ಬೇವರ್ಸಿ ಬದುಕಿನ ಬರಹಗಳು* ಎನ್ನವ ಕೃತಿ ಹೊರ ತಂದಿದ್ದಾರೆ.


*ಸೋತ ಮನಸ್ಸಿಗೆ ಸಮಾಧಾನ*ಎನ್ನುವ ಕಥಾಪುಸ್ತಕ ಹೆಸರಿಗೆ ತಕ್ಕಂತೆ ಇದೆ ಎನ್ನವುದು ಹೆಮ್ಮಯ ವಿಚಾರ.


ಇವರ ಇನ್ನೊಂದು ಕೃತಿ ಚುಕಟಕು ಸಂಕಲನ ಅಚ್ಚಿನಲ್ಲಿದೆ.

ಕಾವ್ಯನಾಮ:ಉಬಾಮ

ಪ್ರಶಸ್ತಿಗಳು

ಜಿಲ್ಲಾ ಯುವ ಪ್ರಶಸ್ತಿ ಬಸವಜ್ಯೋತಿ ಸುವರ್ಣ ಕರ್ನಾಟಕ ಸೇವಾ ಪ್ರಶಸ್ತಿ ಸಾಮಾಜಿಕ ರತ್ನ ಕರುನಾಡ ಕನ್ನಡಿಗ ಕನ್ನಡದ ಕುವರ ಹೀಗೆ ಹತ್ತು ಹಲವು ಪ್ರಶಸ್ತಿಗಳು ಇವರನ್ನು ಹರೆಸಿ ಬಂದಿವೆ.

ಉಬಾಮರವರ ಸರಳ ಸಜ್ಜನಿಕೆಯ ಹಾಗು ಎಲ್ಲರೊಳಗೆ ಬೆರೆಯುವ ಸ್ನೇಹ ಜೀವಿ.

ಮಾಹಿತಿ:ಜಿ.ಡಿ.ಮಧು. ಚಿತ್ರದುರ್ಗ