ನಮಸ್ತೆ,

ನಾನು ಆಶಾ ನಾಯಕ ಹುಬ್ಬಳ್ಳಿಯಿಂದ. ಹು‍ಟ್ಟಿದ್ದು ಕಾಸರಗೋಢು, ಕೇರಳದಲ್ಲಿ. ನಾನು ೫ ವರ್ಷದವಳ್ಳಿದ್ದಾಗ ಹುಬ್ಬಳ್ಳಿಗೆ ತರೆಳಿದ್ದೇವು.


ಹುಬ್ಬಳ್ಳಿಯ ಕೆ.ಎಲ್.ಇ ಸೊಸಾಯ್ಟಿ ಶಾಲೆಯಲ್ಲಿ ಕಲಿತು, ಮುಂದೆ ಒಳಾಂಗಣ ವಿನ್ಯಾಸದಲ್ಲಿ ಡಿಪ್ಲೋಮಾ ಪಡೆದು ಕೊಂಡಿದ್ದೇನೆ. ಕಲೆ, ಓದು, ಭರತ ನಾಟ್ಯ, ಅಡುಗೆ, ಸೋಷಿಯಲ್ ಮೀಡಿಯಾ, ಬ್ಲಾಗಿಂಗ್, ತೋಟಗಾರಿಕೆ ಇವೆಲ್ಲದರಲ್ಲಿ ನನಗೆ ಆಸಕ್ತಿ.


ಹುಬ್ಬಳ್ಳಿಯಲ್ಲಿ ವೈಬ್ರೆಂಟ್ ಇಂಡಿಯಾ ಎಂಬ ಚಟುವಟಿಕೆ ಕೇಂದ್ರವನ್ನು ಹೊಂದಿದ್ಧೇನೆ. ಇಲ್ಲಿ ಎಲ್ಲಾ ವಯಸ್ಸಿನವರಿಗೆ ಶಾಸ್ತ್ರೀಯ ಸಂಗೀತ, ನೃತ್ಯ, ಕರಕುಶಲ ತಯಾರಿಕೆ, ಗಣಕಯಂತ್ರ(ಕಂಪ್ಯೂಟರ್), ಆತ್ಮರಕ್ಷಣೆ, ಯೋಗ ಇತ್ಯಾದಿಗಳ ತರಬೇತಿಗಳನ್ನು ಕಲಿಸಲಾಗುತ್ತದೆ.


ಚಿಕ್ಕ ವಯಸ್ಸಿನಿಂದಲೇ ಸಮಾಜ ಸೇವೆಯಲ್ಲಿ ನನಗೆ ಆಸಕ್ತಿ. ನನ್ನ ಅತ್ತೆ ಸುಲೋಚನಾ ನಾಯಕ ರಾಷ್ಟ್ರ ಸೇವಿಕಾ ಸಮಿತಿಯ ಬಾಲ ಸೇವಿಕೆ. ಅವರ ಪ್ರೇರಣೆಯಿಂದಲೇ ನನಗೂ ಸಮಿತಿಯಲ್ಲಿ ಆಸಕ್ತಿ ಮೂಡಿತು. ಸೇವಿಕೆಯರ ನಿಸ್ವಾರ್ಥ ವಾತ್ಸಲ್ಯ, ಫ್ರೀತಿ, ಸೇವಾ ಮನೋಭಾವ, ಅನುಷಾಸನ, ದೇಶಾಭಿಮಾನ ನನಗೆ ಇನ್ನೂ ಸೆಳೆಯಿತು. ಈಗ ಸಮಿತಿಯಲ್ಲಿ ಕರ್ನಾಟಕ ಉತ್ತರ ಪ್ರಾಂತದ ಪ್ರಚಾರ ಪ್ರಮುಖಳಾಗಿ ನಾನು ಸೇವೆ ಸಲ್ಲಿಸುತ್ತಿದ್ದೇನೆ. ಇದರ ಮುಖಾಂತರವೇ ನನಗೆ ಸೋಷಿಯಲ್ ಮೀಡಿಯಾದಲ್ಲಿ ಹಚ್ಚು ಕಲಿಯುವ ಅವಕಾಶ ದೊರಕಿದೆ.