ಜನನ: ೪ ಏಪ್ರಿಲ್ ೧೯೯೭ ಜನ್ಮ ಸ್ಥಳ :ಚಿಕ್ಕಮಗಳೂರು ತಂದೆ: ಶ್ರೀನಾಥ ಇಂದಾವರ. ತಾಯಿ :ಮಯೂರ ಇಂದಾವರ ಸಹೋದರರು :ಅರ್ಜುನ ಇಂದಾವರ ಹಾಗೂ ಆಶಿಕ್ ಇಂದಾವರ

ವಿದ್ಯಾಭ್ಯಾಸ : ನಾನು ನನ್ನ ಅಂಗನವಾಡಿಯನ್ನು ನಮ್ಮ ಹಳ್ಳಿಯಾದ ಇಂದಾವರದಲ್ಲೇ ಮಾಡಿದೆ. ಅದಾದನಂತರ ಮುಂದಿನ ಶಿಕ್ಷಣಕ್ಕೆ ಎಂದು ಚಿಕ್ಕಮಗಳೂರಿನ ಸಾಯಿ-ಏಂಜಲ್ಸ ಶಾಲೆಗೆ ಸೇರಿದೆ.

ಬಾಲ್ಯದ ಸಾಧನೆಗಳು: ಎರಡನೆಯ ತರಗತಿಯಲ್ಲಿ ಬಾಲ ಪ್ರತಿಭಾವಂತ ವಿದ್ಯಾರ್ಥಿ ಎಂದು ಬಿರುದು ಪಡೆದೆ.ಅಲ್ಲದೆ ಏಳನೆಯ ತರಗತಿಯಲ್ಲಿ ನಮ್ಮ ಶಾಲೆಯ ಫುಟ್ಬಾಲ್ ಆಟಕ್ಕೆ ಆಯ್ಕೆ ಆದೆ. ನಂತರ ಹತ್ತನೆಯ ತರಗತಿಯಲ್ಲಿ ಫುಟ್ಬಾಲ್ ಆಟದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ ಆದೆ. ಒಟ್ಟು ೯೦% ಪಡೆದು ನನ್ನ ಶಾಲಾ ಜೀವನ ಮುಗಿಸಿದೆ.

ಕಾಲೇಜು ಜೀವನ: ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪಿ.ಯು.ಸಿ ಗೆ ಸೇರಿದೆ. ಕಾಲೇಜಿನಲ್ಲಿ ಹಾಗೂ ವಿದ್ಯಾರ್ಥಿ ನಿಲಯದಲ್ಲಿ ನಡೆಯುವ ಹಲವಾರು ಫುಟ್ಬಾಲ್ ಹಾಗೂ ಕ್ರಿಕೆಟ್ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದೇನೆ. ಪಿ.ಯು.ಸಿ ಯಲ್ಲಿ ೮೩% ಪಡೆದೆ. ನಂತರ ಡಿಗ್ರಿ ಮಾಡಲು ಅದೇ ಕಾಲೇಜಿಗೆ ಸೇರಿದೆ. ಇತ್ತೀಚೆಗೆ ನಡೆದ ಫುಟ್ಬಾಲ್ ಆಟದಲ್ಲಿ ನನ್ನ ತರಗತಿಯವರೊಂದಿಗೆ ಮೊದಲ ಸ್ಥಾನ ಪಡೆದೆ.