ಅರ್ಚನ ಹೂಡೆ
Joined ೨೫ ಆಗಸ್ಟ್ ೨೦೧೪
ಅರ್ಚನ ಹೂಡೆ (ಜನನ: ನವೆಂಬರ್ ೨೨, ೧೯೯೬ ಮಂಗಳೂರು, ಕರ್ನಾಟಕ). ನಾನು ನನ್ನ ಪ್ರಾರ್ಥಮಿಕ ಶಾಲಾ ವಿದ್ಯಾಭ್ಯಾಸವನ್ನು ಬೆಸೆಂಟ್ ಆಂಗ್ಲಾ ಮಾಧ್ಯಮ ಶಾಲೆಯಲ್ಲಿ ಪೂರ್ತಿಗೊಳಿಸಿದ್ದೇನೆ, ಪದವೀಪೂರ್ವ ವಿದ್ಯಾಭ್ಯಾಸವನ್ನು ಸಂತ ಅಲೋಶಿಯಸ್ ಕಾಲೆಜಿನಲ್ಲಿ ಪೂರ್ತಿಗೊಳಿಸಿದ್ದೇನೆ, ಪ್ರಸ್ತುತ ನಾನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ನನ್ನ ಪದವಿ ಶಿಕ್ಷಣವನ್ನು ವ್ಯಾಸಂಗ ಮಾಡುತ್ತಿದ್ದೇನೆ. ಮುಂದೆ ಸೂಕ್ಷ್ಮಜೀವಿಶಾಸ್ತ್ರದಲ್ಲಿ ಸ್ನಾತಕೋತ್ತರ ಅಧ್ಯಯನವನ್ನು ಮಾಡ ಬಯಸುತ್ತೇನೆ. ನನ್ನ ಮಾತೃಭಾಷೆ ಕನ್ನಡ. ಚಿತ್ರ ಬಿಡಿಸುವುದು, ಕಥೆ ಪುಸ್ತಕ ಓದುವುದು, ಇವು ನನ್ನ ಹವ್ಯಾಸ. ಕುವೆಂಪು, ಶಿವರಾಮ ಕಾರಂತ್, ಪೂರ್ಣಚಂದ್ರ ತೇಜಸ್ವಿ, ಇವರು ನನ್ನ ನೆಚ್ಚಿನ ಕನ್ನಡ ಸಾಹಿತಿಗಳು. ನಾನು ಬಿಡುವಿನ ಸಮಯದಲ್ಲಿ ಸಿ.ಅಶ್ವತ್ ಅವರ ಗಾಯನವನ್ನು ಕೇಳುತ್ತೇನೆ, ಇವರ ಗಾಯನ ನನಗೆ ಬಹಳ ಇಷ್ಟ. ವಿಜ್ಞಾನ ವಿದ್ಯಾರ್ಥಿನಿಯಾದ ನಾನು ವಿಜ್ಞಾನ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಲು ಬಯಸುತ್ತೇನೆ.