ನಮ್ಮೂರು ಗೌರಪುರ ಗೌರಪುರ


ನಮ್ಮೂರು ನಮ್ಮೂರಿಗೆ ಗೌರಪುರ ಎಂಬ ಹೆಸರು ಹೇಗೆ ಬಂತು ಎಂಬುದು ಖಚಿತವಾಗಿ ತಿಳಿದು ಬರುತ್ತಿಲ್ಲ. ಆದರೆ ಹಿಂದಿನಿಂದಲೂ ಒಬ್ಬರಿಂದ ಒಬ್ಬರ ಮೂಲಕ ಹರಿದುಬಂದ ಮಾತುಗಳು ಇದಕ್ಕೆ ಸಾಕ್ಷಿಯಾಗುತ್ತವೆ. ಬಹಳ ಹಿಂದೆ ಈ ಊರು ಆಸಂದಿ ನಾಡಿನ ಭಾಗವಾಗಿದ್ದಿತು ಎಂಟನೇ ಶತಮಾನದಲ್ಲಿ ವಿಜಯಾದಿತ್ಯನ ತಂದೆ ಶ್ರೀ ಪುರುಷ ಗಂಗನು ಆಳಿದನು. ಅವರ ವಂಶದವರ ಆಳ್ವಿಕೆ ಸುಮಾರು 12 ನೇ ಶತಮಾನದವರೆಗೂ ನಡೆದಿದೆ ಎಂದು ಶಾಸನಗಳು ಹೇಳುತ್ತವೆ. ಆನಂತರ ಈನಾಡು ಹೊಯ್ಸಳ ವಂಶದ ಆಡಳಿತಕ್ಕೆ ಬಂದಿತು. ಕೆಲವು ಶತಮಾನದವರೆಗೂ ಹೊಯ್ಸಳರು ಈ ನಾಡನ್ನು ಆಳಿದರು. ಇವರ ಕಾಲದಲ್ಲಿ ಈನಾಡು ಉನ್ನತ ಸ್ಥಿತಿಯಲ್ಲಿತ್ತು. ಅವರು ಶಿಲ್ಪಕಲೆಗೆ ಬಹಳ ಹೊತ್ತು ಕೊಟ್ಟಿದ್ದರು. ಇಂದು ಸಹ ಆಸಂದಿ ಊರಿನಲ್ಲಿ ಹಳೆಯ ಕಾಲದ ಗುಡಿಗೋಪುರಗಳು, ಹಿಂದಿನ ಕಥೆ ವ್ಯಥೆಯನ್ನು ಸಾರುತ್ತ ಮಳೆ, ಚಳಿ, ಬಿಸಿಲಿಗೆ ಸಾಕ್ಷಿಯಾಗಿ ನಿಂತಿರುವವು. ಇಲ್ಲಿ ಕಟ್ಟಿಸಿದ ಅಜ್ಜನ ಮಂದಿರಗಳು ಹಾಗೂ ಶಿವ ಮಂದಿರ ಚಂದ್ರೇಶ್ವರ ದೇವಸ್ಥಾನ ಮಾತ್ರ ಉಳಿದಿದೆ. ಈ ಊರಿನಲ್ಲಿ ಹಿಂದೆ ಇದ್ದ ಬಾರಿಕೆರೆ ಇಂದು ಪೂರ್ಣ ಹೂಳು ತುಂಬಿ ನೀರು ಇಲ್ಲದಂತಾಗಿದೆ . ಕೆರೆಯ ಅಂಗಳವನ್ನು ಹಿಂದೂ ಬೇಸಾಯಕ್ಕೆ ಬಳಸುತ್ತಿದ್ದಾರೆ ನಮ್ಮೂರಿನಲ್ಲಿ ಆಗ ಜನ ಸಂಪ್ರದಾಯಕ್ಕೆ ಸೇರಿದವರು ಇದ್ದರು. ಅವರು ಬಳೆ ಮಾರುವ ಕಾಯಕವನ್ನು ನಡೆಸುತ್ತಿದ್ದರು. ಕೃಷಿಯನ್ನು ಸಹ ಮಾಡುತ್ತಿದ್ದರು. ಈ ಊರಿನವರಿಗೆ ಆಸಂದಿ ನಾಡಿನ ರಾಜವಂಶದ ಹೆಣ್ಣು ಮಗಳನ್ನು ಮದುವೆ ಮಾಡಿ ಕೊಟ್ಟಿದ್ದರಂತೆ. ಅವಳ ಹೆಸರು ಗೌರಂಬಾ ಎಂದು. ಮಗಳಿಗೆ ಈ ಹಳ್ಳಿಯನ್ನು ಬಳುವಳಿಯಾಗಿ ಇತ್ತರಂತೆ. ಅಂದಿನಿಂದ ಈ ಊರಿಗೆ ಗೌರಪರ ಎಂದು ಹೆಸರು ಬಂದಿರುತ್ತದೆ . Abhishek@೧೯೯೬